ಟಾಟಾ ಹ್ಯಾರಿಯರ್‍ನಲ್ಲಿ ಕಾಣಿಸಿಕೊಂಡ ದಂಗಲ್ ಬೆಡಗಿ
ದಂಗಲ್ ಖ್ಯಾತಿಯ ನಟಿ ಫಾತಿಮಾ ಸನಾ ಶೇಖ್ ಅವರು ಹೊಸ ಟಾಟಾ ಹ್ಯಾರಿಯರ್ ಎಸ್‍ಯುವಿಯನ್ನು ಖರೀದಿಸಿದ್ದಾರೆ. ಈ ನಟಿ ಟಾಟಾ ಹ್ಯಾರಿಯರ್‍ನ ಫೇಸ್ ಪ್ರಮೋಟರ್ ಮತ್ತು ಈ ಎಸ್‍ಯುವಿಗಾಗಿ ಅನೇಕ ವೆಬ್-ಜಾಹಿರಾತುಗಳಲ್ಲಿ ನಟಿಸಿದ್ದಾರೆ.

ಟಾಟಾ ಹ್ಯಾರಿಯರ್‍ನ ಡಾರ್ಕ್ ಎಡಿಷನ್ ಅನ್ನು ಪ್ರಮೋಟ್ ಕೂಡ ಮಾಡುತ್ತಿದ್ದಾರೆ. ಟಾಟಾ ಮೋಟಾರ್ಸ್ ತನ್ನ ಸಾಮಾಜಿಕ ಜಾಲತಾಣದ ಪೇಜ್‍ನಲ್ಲಿ ಫಾತಿಮಾ ಸನಾ ಶೇಖ್ ಅವರು ಹ್ಯಾರಿಯರ್‍ನ ಡಾರ್ಕ್ ಎಡಿಷನ್ ಎಸ್‍ಯುವಿಯನ್ನು ರೈಡ್ ಮಾಡುವ ವೀಡಿಯೋವನ್ನು ಶೇರ್ ಮಾಡಿದೆ.

ಫಾತಿಮಾ ಸನಾ ಶೇಖ್ ಅವರು ದಂಗಲ್ ಚಿತ್ರದ ಮೂಲಕ ಎಲ್ಲರ ಮನ ಗೆದ್ದ ನಟಿ. ಈ ಯುವ ನಟಿ ಕೆಲವು ತಿಂಗಳ ಹಿಂದೆ ಟಾಟಾ ಟಿವಿಸಿಯಲ್ಲಿ ತಿರುಗಾಡುತ್ತಿದ್ದರು. ಆದರೇ ಇತ್ತೀಚಿಗೆ ಅವರು ಟಾಟಾ ಹ್ಯಾರಿಯರ್ ಕಾರಿನಲ್ಲಿ ಓಡಾಡುತ್ತಿದ್ದಾರೆ.

ಹ್ಯಾರಿಯರ್ ಟಾಟಾ ಸಂಸ್ಥೆಯ ಅತ್ಯಾಧುನಿಕ ಕಾರುಗಳಲ್ಲಿ ಒಂದಾಗಿದೆ. ಆದರೇ ಸನಾ ಅವರು ಕಾರನ್ನು ಖರೀದಿಸಿದ್ದಾರೂ ಅಥವಾ ಕಂಪನಿಯ ರಾಯಭಾರಿ ಆಗಿರುವುದಕ್ಕೆ ಉಡುಗೊರೆಯಾಗಿ ನೀಡಲಾಗಿದಿಯಾ ಎಂಬುವುದರ ಕುರಿತು ನಿಖರವಾದ ಮಾಹಿತಿ ಲಭ್ಯವಾಗಿಲ್ಲ.

ಸಾಮಾನ್ಯ ಹ್ಯಾರಿಯರ್ ಆವೃತ್ತಿಗಿಂತಲೂ ವಿಶೇಷ ಬಣ್ಣದ ಆಯ್ಕೆ ಹೊಂದಿರುವ ಡಾರ್ಕ್ ಎಡಿಷನ್ ಹ್ಯಾರಿಯರ್ ಎಸ್‍ಯುವಿಯ ಬೆಲೆಯು ದೆಹಲಿ ಎಕ್ಸ್‌ಶೋರೂಂ ದರದಂತೆ ರೂ.16.86 ಲಕ್ಷಗಳಾಗಿದೆ. ಡಾರ್ಕ್ ಎಡಿಷನ್ ಹ್ಯಾರಿಯರ್ ಮಾದರಿಯು ಸಂಪೂರ್ಣವಾಗಿ ಕಪ್ಪು ಬಣ್ಣವನ್ನು ಹೊಂದಿದೆ.

ಈ ಕಾರಿನಲ್ಲಿ ಹೊಸ 17-ಇಂಚಿನ ಬ್ಲ್ಯಾಕ್ ಅಲಾಯ್ ವೀಲ್ಹ್, ಡಾರ್ಕ್ ಬ್ಯಾಡ್ಜ್ ಅನ್ನು ಅಳವಡಿಸಲಾಗಿದೆ. ಇದನ್ನು ಹೊರತುಪಡಿಸಿ ಇತರ ಬದಲಾವಣೆಗಳನ್ನು ಮಾಡಲಾಗಿಲ್ಲ. ಡಾರ್ಕ್ ಎಡಿಷನ್ ಎಸ್‍ಯುವಿನಲ್ಲಿ ಡ್ಯುಯಲ್ ಟೋನ್ ಸನ್‌ರೂಫ್, ಆ್ಯಪಲ್ ಕಾರ್ ಪ್ಲೇನಂತಹ ಫೀಚರ್ಸ್‍ಗಳಿವೆ.

ಇದರೊಂದಿಗೆ ಟಚ್ ಸ್ಕ್ರೀನ್ ಇನ್ಪೋಟೇನ್‍ಮೆಂಟ್ ಸಿಸ್ಟಂ ಜೊತೆಗೆ ಆಂಡ್ರಾಯಿಡ್ ಆಟೋವನ್ನು ಅಳವಡಿಸಲಾಗಿದೆ. ಟಾಟಾ ಹ್ಯಾರಿಯರ್ ಕಾರುಗಳನ್ನು ಸದ್ಯ ಮಾರುಕಟ್ಟೆಯಲ್ಲಿ ಎಕ್ಸ್ಇ, ಎಕ್ಸ್ಎಂ, ಎಕ್ಸ್‌ಟಿ ಮತ್ತು ಎಕ್ಸ್‌ಜೆಡ್ ಎಂಬ ನಾಲ್ಕು ವೇರಿಯೆಂಟ್‌ಗಳಲ್ಲಿ ಮಾರಾಟ ಮಾಡಲಾಗುತ್ತಿದೆ.

ಹ್ಯಾರಿಯರ್ ಎಸ್‌ಯುವಿನಲ್ಲಿ 2 ಲೀಟರ್ 4 ಸಿಲಿಂಡರ್ ಕ್ರೆಯೊಟೆಕ್ ಡೀಸೆಲ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 140 ಬಿಹೆಚ್‍ಪಿ ಪವರ್ ಮತ್ತು 350 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್‍ನೊಂದಿಗೆ 6 ಸ್ಪೀಡ್ ಮ್ಯಾನುವಲ್ ಗೇರ್‍ಬಾಕ್ಸ್ ಅನ್ನು ಅಳವಡಿಸಲಾಗಿದೆ.
MOST READ: ಬೈಕ್ ಚಲಾಯಿಸಿದ್ದು ಮಗ, ದಂಡ ಬಿದ್ದಿದ್ದು ಅಪ್ಪನಿಗೆ..!
ಹ್ಯಾರಿಯರ್ ಎಸ್‌ಯುವಿಯಲ್ಲಿ ಸುರಕ್ಷತೆಗಾಗಿ ಆರು ಏರ್‍ಬ್ಯಾಗ್‍ಗಳು, ಐಎಸ್ಒ ಚೈಲ್ಡ್ ಸೀಟ್ ಮೌಂಟ್ಸ್, ಹಿಲ್-ಹೋಲ್ಡ್, ಹಿಲ್ ಡಿಸ್ಸೆಂಟ್ ರೋಲ್-ಓವರ್, ಕಾರ್ನರಿಂಗ್ ಸ್ಟ್ಯಾಬಿಲಿಟಿ ಕಂಟ್ರೋಲ್ ಟ್ರಾಕ್ಷನ್, ಕಂಟ್ರೋಲ್ ಹೈಡ್ರಾಲಿಕ್ ಬ್ರೇಕ್ ಅಸಿಸ್ಟ್ ಗಳನ್ನು ಅಳವಡಿಸಲಾಗಿದೆ.
MOST READ: ಬೈಕ್ ಸವಾರನ ಪ್ರಾಣ ಉಳಿಸಿದ ಆಪಲ್ ವಾಚ್..!

ಟಾಟಾ ಮೋಟಾರ್ಸ್ ಶೀಘ್ರದಲ್ಲೇ ಬಿಎಸ್-6 ಎಂಜಿನ್ ಹೊಂದಿರುವ ಹೊಸ ಟಾಟಾ ಹ್ಯಾರಿಯರ್ ಅನ್ನು ಬಿಡುಗಡೆಗೊಳಿಸಲಿದೆ. ಹೊಸ ಟಾಟಾ ಹ್ಯಾರಿಯರ್ 6 ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಗೇರ್‍ಬಾಕ್ಸ್ ಆಯ್ಕೆಯನ್ನು ಹೊಂದಿರಲಿದೆ. ಹೊಸ ಟಾಟಾ ಹ್ಯಾರಿಯರ್ ಬೆಲೆಯು ಮಾರುಕಟ್ಟೆಯಲ್ಲಿರುವ ಹ್ಯಾರಿಯರ್ ಎಸ್‍ಯುವಿಗಿಂತ ಹೆಚ್ಚಿರಲಿದೆ.


Click it and Unblock the Notifications








