ಟೋಪಿ ಹಾಕಲು ಮುಂದಾದ ಡೀಲರ್‍‍ಗೆ ಸರಿಯಾದ ಬುದ್ದಿ ಕಲಿಸಿದ ಕಾರು ಮಾಲೀಕ

ಹಣ ಇದ್ದವರಿಗೆ ಕಾರು ಕೊಳ್ಳುವುದು ಸುಲಭದ ವಿಚಾರ. ಆದ್ರೆ ಮಧ್ಯವರ್ಗದವರಿಗೆ ಕಾರು ಖರೀದಿಸುವಾಗ ಆಗುವ ಹಣಕಾಸಿನ ಅಡಚಣೆ ಅಷ್ಟಿಷ್ಟಲ್ಲ. ಸರಿ, ಹೇಗೋ ಮಾಡಿ ಹಣ ಹೊಂದಿಸಿ ತಮ್ಮ ಕನಸಿನ ಕಾರು ಖರೀದಿ ಮಾಡಿದ್ರು ಅದಕ್ಕೂ ನೆಮ್ಮದಿ ಇಲ್ಲ. ಯಾಕೆಂದ್ರೆ ಡೀಲರ್ಸ್‌ಗಳ ಮೋಸದ ವ್ಯಾಪರವು ಕಾರು ಖರೀದಿಸುವುದೇ ತಪ್ಪು ಎನ್ನುವಂತೆ ಮಾಡಿ ಬಿಡುತ್ತೆ. ಇಲ್ಲೂ ಕೂಡಾ ನಡೆದಿದ್ದು ಅದೇ.

ಟೋಪಿ ಹಾಕಲು ಮುಂದಾದ ಡೀಲರ್‍‍ಗೆ ಸರಿಯಾದ ಬುದ್ದಿ ಕಲಿಸಿದ ಕಾರು ಮಾಲೀಕ

ಹೊಸ ಕಾರು ಖರೀದಿಸುವಾಗ ಇನ್ಮುಂದೆ ನೀವು ಹತ್ತು ಬಾರಿ ಯೋಚಿಸಿ ವ್ಯವಹಾರ ಮಾಡುವುದು ಒಳಿತು. ಇಲ್ಲವಾದ್ರೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಹೊಸ ಕಾರು ಖರೀದಿ ಮಾಡಿ ಸಂಕಷ್ಟಕ್ಕೆ ಸಿಲುಕುವುದರಲ್ಲಿ ಯಾವುದೇ ಅನುಮಾನವಿಲ್ಲ. ಇದನ್ನೆಲ್ಲಾ ಯಾಕೆ ಹೇಳ್ತಾ ಇದೀವಿ ಅಂದ್ರೆ, ಮಧುರೈ‍‍ನ ಕಪ್ಪಲೂರ್‍‍ನಲ್ಲಿರುವ ಬೆಸ್ಟ್ ಮೋಟಾರ್ಸ್‍‍ರವರು ತಮ್ಮ ಗ್ರಾಹಕನಿಗೆ ಹಳೆಯ ಕಾರನ್ನು ಸೇಲ್ ಮಾಡಿರುವುದು ಬೆಳಕಿಗೆ ಬಂದಿದೆ.

ರೂ.3.40 ಲಕ್ಷ ನೀಡಿ ಹೊಸ ಕಾರು ಖರೀದಿ ಮಾಡಿದ ಮಾಲೀಕರು ಆಗಷ್ಟೆ ಖರೀದಿ ಮಾಡಿದ ಕಾರು ಕೆಲ ತಿಂಗಳಿನ ನಂತರ ತೊಂದರೆ ಕೊಡಲು ಶುರು ಮಾಡಿದ್ದು, ಹೀಗಾಗಿ ಮತ್ತೆ ಅವರು ಕಾರು ಕೊಂಡ ಡೀಲರ್ಸ್ ಬಳಿಗೆ ಹೋಗಿ ದೂರು ನೀಡುವ ಮುನ್ನ ಸರ್ವೀಸ್ ಸೆಂಟರ್‌ಗೆ ಹೋಗಿ ಪರಿಶೀಲಿಸಲಾಯಿತು. ಆಗ ಮಾಲೀಕರಿಗೆ ಶಾಕ್ ಆದ ವಿಚಾರ ಏನಂದ್ರೆ ಅವರು ಖರೀದಿಸಿದ್ದ ಹೊಸ ಕಾರು ತುಂಬಾ ಹಳೆಯದು.

ಈ ವಿಚಾರ ಅರಿತ ಮಾಲೀಕರು ಡೀಲರ್ ಬಳಿಗೆ ಹೋಗಿ ಕೇಳಿದಾಗ ಇದು ನಮ್ಮ ತಪ್ಪಲ್ಲ, ನೀವು ವಾಹನ ಖರೀದಿ ಮಾಡುವ ಮುನ್ನ ಗಮನಿಸಬೇಕಾಗಿತ್ತು ಅಂತ. ಶ್ರೀಮತಿ ಸುಧಾರವರು ಡೀಲರ್‍‍ಗಳಿಗೆ ಬುದ್ಧಿಕಲಿಸುವ ಸಲುವಾಗಿ ಗ್ರಾಹಕ ನ್ಯಾಯಾಲಯದ ಮೊರೆ ಹೋಗಿದ್ದು, ತನಿಖೆ ನಡೆಸಿದ ನಂತರ ಇದೀಗ ಗ್ರಾಹಕ ನ್ಯಾಯಾಲಯವು ಡೀಲರ್‍‍ಗಳು ಸುಧಾರವರಿಗೆ ರೂ. 3.40 ಲಕ್ಷದ ದೂರುದಾರ ಮತ್ತು ದೋಷಯುಕ್ತ ಕಾರು ಖರೀದಿದಾರರಿಗೆ ಉಂಟಾದ ಮಾನಸಿಕ ಸಂಕಟಕ್ಕೆ ರೂ .55,000 ಮೊತ್ತವನ್ನು ನೀಡಬೇಕಾಗಿ ಆದೇಶಿಸಿದೆ.

Source: RushLane

More from DriveSpark

Article Published On: Tuesday, February 12, 2019, 17:59 [IST]
English summary
Dealer To Pay Rs.3.5 Lacs The Buyer For Selling Old Car As New Car. Read In Kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+