ಮಹಿಳೆಯರಿಗೆ ಉಚಿತ ಪ್ರಯಾಣ ನೀಡಲಿದೆ ದೆಹಲಿ ಸರ್ಕಾರ

ಮಹಿಳೆಯರು ಪುರುಷರಿಗೆ ಸಮಾನವಾಗಿ ಅಥವಾ ಪುರುಷರಿಗಿಂತ ಹೆಚ್ಚಿನ ಸಾಧನೆ ಮಾಡುತ್ತಿದ್ದರೆ. ಆದರೆ ಪುರುಷರ ಪ್ರಧಾನ ಸಮಾಜದಲ್ಲಿ ಮಹಿಳೆಯರನ್ನು ಕಡೆಗಣಿಸಲಾಗುತ್ತಿದೆ ಎಂಬ ಕೂಗು ಬಲವಾಗಿದೆ. ಮಹಿಳೆಯರು ಎಲ್ಲವನ್ನೂ ಹಿಮ್ಮೆಟ್ಟಿ ಮುನ್ನಡೆಯುತ್ತಿದ್ದಾರೆ.

ಮಹಿಳೆಯರಿಗೆ ಉಚಿತ ಪ್ರಯಾಣ ನೀಡಲಿದೆ ದೆಹಲಿ ಸರ್ಕಾರ

ಆಧುನಿಕ ಯುಗದಲ್ಲಿ ಮಹಿಳೆಯರ ಪಾತ್ರವು ವೇಗವಾಗಿ ಬೆಳೆಯುತ್ತಿದೆ. ಮಹಿಳೆಯರ ಸಾಧನೆಯನ್ನು ಮೆಚ್ಚದ ಯಾವುದೇ ದೇಶ ಜಗತ್ತಿನಲ್ಲಿ ಇಲ್ಲ ಎಂದು ಹೇಳಬಹುದು. ಪ್ರತಿ ಸರ್ಕಾರವು ಮಹಿಳೆಯರಿಗೆ ಹಲವಾರು ಯೋಜನೆಗಳನ್ನು ನೀಡುತ್ತಲೇ ಇರುತ್ತದೆ.

ಮಹಿಳೆಯರಿಗೆ ಉಚಿತ ಪ್ರಯಾಣ ನೀಡಲಿದೆ ದೆಹಲಿ ಸರ್ಕಾರ

ಸ್ತ್ರೀಯರು ಪುರುಷರಿಗಿಂತ ಹೆಚ್ಚು ಆತ್ಮವಿಶ್ವಾಸ ಉಳ್ಳವರು ಎಂದು ಹೇಳಬಹುದು. ಈಗ ದೆಹಲಿ ಸರ್ಕಾರವು ಸಹ ಮಹಿಳೆಯರಿಗೆ ಹಲವು ಯೋಜನೆಗಳನ್ನು ನೀಡುವುದಕ್ಕೆ ಮುಂದಾಗಿದೆ. ಇನ್ನೂ ಮುಂದೆ ದೆಹಲಿಯ ಸಾರಿಗೆ ಬಸ್ಸುಗಳಲ್ಲಿ ಓಡಾಡುವ ಮಹಿಳೆಯರು ಟಿಕೆಟ್ ಖರೀದಿಸುವುದು ಬೇಕಾಗಿಲ್ಲ.

ಮಹಿಳೆಯರಿಗೆ ಉಚಿತ ಪ್ರಯಾಣ ನೀಡಲಿದೆ ದೆಹಲಿ ಸರ್ಕಾರ

ಹೌದು. ಅಕ್ಟೋಬರ್ 29ರಿಂದ ಡಿಟಿಸಿ ಹಾಗೂ ಕ್ಲಸ್ಟರ್ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ನೀಡುವ ಹೊಸ ಯೋಜನೆಗೆ ದೆಹಲಿಯ ಸಚಿವ ಸಂಪುಟವು ಅನುಮೋದನೆ ನೀಡಿದೆ. ಈ ಕುರಿತು ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಯೋಣ.

ಮಹಿಳೆಯರಿಗೆ ಉಚಿತ ಪ್ರಯಾಣ ನೀಡಲಿದೆ ದೆಹಲಿ ಸರ್ಕಾರ

ಈ ಬಗ್ಗೆ ದೆಹಲಿಯ ಸಾರಿಗೆ ಸಚಿವ ಕೈಲಾಶ್ ಗೆಹ್ಲೋಟ್ ಸ್ಪಷ್ಟೀಕರಣ ನೀಡಿದ್ದಾರೆ. ದೆಹಲಿಯ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‍‍ರವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ನೀಡುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿದೆ.

ಮಹಿಳೆಯರಿಗೆ ಉಚಿತ ಪ್ರಯಾಣ ನೀಡಲಿದೆ ದೆಹಲಿ ಸರ್ಕಾರ

ಈ ನಿರ್ಧಾರದಿಂದಾಗಿ ಮಹಿಳೆಯರು ರಾಷ್ಟ್ರ ರಾಜಧಾನಿಯಲ್ಲಿ ಬೈಯ್ಯಾ ದೂಜ್‍‍ನಿಂದ ಉಚಿತ ಪ್ರಯಾಣ ಮಾಡಬಹುದಾಗಿದೆ. ಮಾಧ್ಯಮಗಳ ಜೊತೆಗೆ ಮಾತನಾಡಿದ ಗೆಹ್ಲೋಟ್‍‍ರವರು, ಉಚಿತ ಪ್ರಯಾಣದ ಪಾಸುಗಳನ್ನು ಮಹಿಳೆಯರು ಡಿಟಿಸಿ ಹಾಗೂ ಕ್ಲಸ್ಟರ್ ಬಸ್ಸುಗಳ ಕಂಡಕ್ಟರ್‍‍ಗಳಿಂದ ಪಡೆಯಬಹುದು ಎಂದು ತಿಳಿಸಿದರು.

ಮಹಿಳೆಯರಿಗೆ ಉಚಿತ ಪ್ರಯಾಣ ನೀಡಲಿದೆ ದೆಹಲಿ ಸರ್ಕಾರ

ಉಚಿತ ಪ್ರಯಾಣವನ್ನು ಬಯಸದ ಮಹಿಳೆಯರು ಟಿಕೆಟ್ ಪಡೆದು ಪ್ರಯಾಣಿಸಬಹುದಾಗಿದೆ. ದೆಹಲಿ ವಿಧಾನಸಭೆಯು ಕಳೆದ ಸೋಮವಾರ ಹೆಚ್ಚುವರಿಯಾಗಿ ರೂ.479 ಕೋಟಿಗಳನ್ನು ಸಾರಿಗೆ ಇಲಾಖೆಗೆ ಅನುದಾನಕ್ಕಾಗಿ ಬಿಡುಗಡೆಗೊಳಿಸಿದೆ. ಇದರಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕಾಗಿ ನೀಡುವ ಸಬ್ಸಿಡಿ ಹಣವು ಸೇರಿದೆ.

MOST READ: ಜೆ‍‍ಸಿ‍‍ಬಿ ಯಂತ್ರವು ಹಳದಿ ಬಣ್ಣದಲ್ಲೇ ಏಕಿರುತ್ತೆ?

ಮಹಿಳೆಯರಿಗೆ ಉಚಿತ ಪ್ರಯಾಣ ನೀಡಲಿದೆ ದೆಹಲಿ ಸರ್ಕಾರ

ಸಾರಿಗೆ ಇಲಾಖೆಗೆ ಹೆಚ್ಚುವರಿಯಾಗಿ ಬಿಡುಗಡೆಯಾದ ಅನುದಾನಕ್ಕೆ ಹಣಕಾಸು ಸಚಿವ ಮನೀಶ್ ಸಿಸೊಡಿಯಾರವರು ಅನುಮೋದನೆ ನೀಡಿದ್ದಾರೆ. ಇದರಲ್ಲಿ ಮಹಿಳೆಯರ ಉಚಿತ ಪ್ರಯಾಣಕ್ಕಾಗಿ ಮೀಸಲಿಟ್ಟಿರುವ ರೂ.140 ಕೋಟಿ ಹಣವೂ ಸೇರಿದೆ.

MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಮಹಿಳೆಯರಿಗೆ ಉಚಿತ ಪ್ರಯಾಣ ನೀಡಲಿದೆ ದೆಹಲಿ ಸರ್ಕಾರ

ಪ್ರಸ್ತಾವನೆಯಲ್ಲಿ ಸೂಚಿಸಿರುವಂತೆ ರೂ.90 ಕೋಟಿಗಳನ್ನು ಡಿಟಿಸಿ ಬಸ್ಸುಗಳಿಗೆ, ಹಾಗೂ ರೂ.50 ಕೋಟಿ ಹಣವನ್ನು ಕ್ಲಸ್ಟರ್ ಬಸ್ಸುಗಳಿಗಾಗಿ ಮೀಸಲಿಡಲಾಗಿದೆ. ಕಳೆದ ಜೂನ್ 3ರಂದು ಮಾತನಾಡಿದ್ದ ಅರವಿಂದ್ ಕೇಜ್ರಿವಾಲ್‍‍ರವರು ತಮ್ಮ ಸರ್ಕಾರವು ಮಹಿಳೆಯರಿಗಾಗಿ ದೆಹಲಿಯ ಮೆಟ್ರೋ ಹಾಗೂ ಡಿಟಿಸಿ ಬಸ್ಸುಗಳಲ್ಲಿ ಉಚಿತ ಸಾರಿಗೆ ವ್ಯವಸ್ಥೆಯನ್ನು ನೀಡುವುದಾಗಿ ತಿಳಿಸಿದ್ದರು.

MOST READ: ಪೊಲೀಸ್ ಸ್ಟಿಕ್ಕರ್ ಅಂಟಿಸಿಕೊಂಡು ಸಿಕ್ಕಿಬಿದ್ದ ಐನಾತಿ..!

ಮಹಿಳೆಯರಿಗೆ ಉಚಿತ ಪ್ರಯಾಣ ನೀಡಲಿದೆ ದೆಹಲಿ ಸರ್ಕಾರ

ಈ ಉಚಿತ ಸಾರಿಗೆ ವ್ಯವಸ್ಥೆಯನ್ನು ನೀಡುವುದಕ್ಕಾಗಿ ಪ್ರತ್ಯೇಕ ಅನುದಾನವನ್ನು ಸಹ ನೀಡಲಾಗುವುದೆಂದು ದೆಹಲಿಯ ಮುಖ್ಯಮಂತ್ರಿಗಳು ತಿಳಿಸಿದ್ದರು. ಅಂದ ಹಾಗೇ ಉಚಿತ ಸಾರಿಗೆ ವ್ಯವಸ್ಥೆಯನ್ನು ನೀಡುವ ಯೋಜನೆಯು ಇನ್ನೂ ಆರಂಭವಾಗಿಲ್ಲ. ಇದಕ್ಕೆ ಸಂಬಂಧಪಟ್ಟ ತಾಂತ್ರಿಕ ಅಡಚಣೆಗಳನ್ನು ನಿವಾರಿಸಿದ ನಂತರ ಈ ಯೋಜನೆಯನ್ನು ಆರಂಭಿಸುವುದಾಗಿ ತಿಳಿದು ಬಂದಿದೆ.

Most Read Articles

Kannada
English summary
Delhi government to provide free bus travel for women - Read in kannada
Story first published: Saturday, August 31, 2019, 14:23 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X