ಪಾರ್ಟಿ ಮಾಡಕ್ಕೆ ಗೋವಾನಲ್ಲಿ ಹಣ ಸಾಕಾಗಿಲ್ಲಾಂದ್ರೆ ಹೀಗೆ ಮಾಡಿ ಹಣ ಸಂಪಾದಿಸಿ...
ಸ್ನೇಹಿತರೊಂದಿಗೆ ಗೋವಾಗೆ ಹೋಗಲು ಪ್ಲಾನ್ ಇದೆಯಾ.? ಹಾಗೆ ಹೋಗಿಯೂ ನೀವು ಎಂಜಾಯ್ ಮಾಡಲು ಅಲ್ಲಿ ನಿಮ್ಮ ಖರ್ಚಿಗೆ ದುಡ್ಡು ಸಾಕಾಗಿಲ್ಲಂದ್ರೆ ನಿಮ್ಮ ಮೊಬೈಲ್‍ನಿಂದ ಈ ಕೆಲಸ ಮಾಡಿ ಹಣ ಸಂಪಾದಿಸಿ. ಆ ಕೆಲಸ ಏನು ಮತ್ತು ಇದರಿಂದ ಹೇಗೆ ಹಣ ಸಂಪಾದನೆ ಮಾಡಬಹುದು ಎಂದು ತಿಳಿಯಲು ಮುಂದಕ್ಕೆ ಓದಿರಿ..

ದೇಶದಲ್ಲಿ ಟ್ರಾಫಿಕ್ ನಿಯಮಗಳನ್ನು ಪಾಲಿಸದೆ ಆಗುತ್ತಿರುವ ರಸ್ತೆ ಅಪಘಾತಗಳ ಸಂಖ್ಯೆ ಅಧಿಕವಾಗುತ್ತಿದೆ. ಈ ಕುರಿತಾಗಿ ಹಲವಾರು ಪ್ರಮುಖ ನಗರಗಳಲ್ಲಿನ ಪೊಲೀಸರು ಹಲವಾರು ಜಾಗೃತಿ ಪ್ರಚಾರಗಳನ್ನು ನಡೆಸಿತ್ತಿದೆ. ಹಾಗೆಯೆ ಹಲವಾರು ಕಡೆ ತಾವು ಇರಲು ಸಾಧ್ಯವಿಲ್ಲವೆಂದು ಟ್ರಾಫಿಕ್ ನಿಯಮಗಳನ್ನು ಬ್ರೇಕ್ ಮಾಡಿದವರನ್ನು ಸೆರೆಹಿಡಿಯಲ್ಲು ಸಿಗ್ನಲ್‍ಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಇನ್ಸ್ಟಾಲ್ ಮಾಡಲಾಗಿರುತ್ತದೆ.

ಅವುಗಳನ್ನು ಮೀರಿ ಟ್ರಾಫಿಕ್ ನಿಯಮಗಳನ್ನು ಬ್ರೇಕ್ ಮಾಡಿದರೆ ಅಂತವರ ವಾಹನದ ವಿವರಗಳನ್ನು ಸೆರೆಹಿಡಿದು ಪೊಲೀಸರಿಗೆ ಕಳುಹಿಸಲು ಪ್ರಮುಖ ನಗರಗಳ ಪೊಲೀಸರು ಆಪ್ ಸೇವೆಗಳನ್ನು ಸಹ ಪ್ರಾರಂಭಿಸಿದ್ದಾರೆ. ಈ ನಿಟ್ಟಿನಲ್ಲಿ ಗೋವಾ ಪೊಲೀಸರು ಸಹ ಇಂತಹ ಆಪ್ ಒಂದನ್ನು ಶುರು ಮಾಡಿದ್ದು, ಇದರಲ್ಲಿ ಟ್ರಾಫಿಕ್ ನಿಯಮಗಳನ್ನು ಉಲ್ಲಂಘಿಸಿದವರ ವಿವರಗಳನ್ನು ಅಪ್ಲೋಡ್ ಮಾದಿದರೆ ಹಣ ಗಳಿಸುವ ಸೇವೆಯನ್ನು ಸಹ ಪ್ರಾರಂಭಿಸಲಾಗಿದೆ.

ಹೌದು, ಗೋವಾ ಸರ್ಕಾರವು ಆಗುತ್ತಿರುವ ಅಪಘಾತಗಳನ್ನು ತಡೆಗಟ್ಟಲು ಈ ನಿಯಮವನ್ನು ಶುರುಮಾಡಿದ್ದು, ಟ್ರಾಫಿಕ್ ಸೆಂಟಿನಲ್ ಸ್ಕೀಮ್ ಒಂದನ್ನು ಪ್ರಾರಂಭಿಸಿದ್ದಾರೆ. ಈ ಸೇವೆಯ ಮುಖಾಂತರ ಟ್ರಾಫಿಕ್ ನಿಯಮಗಳ ಉಲ್ಲಂಘನೆ ಮಾಡಿದವರ ಬಗ್ಗೆ ಅಪ್ಲೋಡ್ ಮಾಡಿದ್ದಲ್ಲಿ ನೀವು ಪಾಯಿಂಟ್ಸ್ ಅನ್ನು ಗೆಲ್ಲಬಹುದಾಗಿದೆ.

ಹೊಸ ಸ್ಕೀಮ್‍ನ ಪ್ರಕಾರ, ಸೆರೆಹಿಡಿಯಲಾದ ಟ್ರಾಫಿಕ್ ನಿಯಮ ಉಲ್ಲಂಘನೆಯ ಕುರಿತಾದ ಫೋಟೊ ಅಥವಾ ವಿಡಿಯೋವನ್ನು ವಾಟ್ಸ್ಆಪ್ ನಂಬರ್ - 7875756110ಗೆ ಅಥವಾ [email protected] ಅಥವಾ ಗೋವಾ ಟ್ರಾಫಿಕ್ ಪೊಲೀಸರ ಫೇಸ್‍ಬುಕ್ ಖಾತೆಯಲ್ಲಿ ಪೋಸ್ಟ್ ಮಾಡಬಹುದಾಗಿದೆ.

ಸೆರೆಹಿಡಿಯಲಾದ ಫೋಟೊ ಅಥವಾ/ವಿಡಿಯೋನಲ್ಲಿ ವಾಹನದ ನೋದಣಿ ಸಂಖ್ಯೆ, ಸಮಯ, ದಿನಾಂಕ ಮತ್ತು ಯಾವ ರೀತಿಯ ಉಲ್ಲಂಘನೆ ಎಂದು ಖಚಿತ ಮಾಡಬೇಕಾಗಿರುತ್ತದೆ. ರಿಜಿಸ್ಟರ್ ಆದ ಸದಸ್ಯರು ಯುನಿಕ್ ರೆಫರೆನ್ಸ್ (ಅನನ್ಯವಾದ ಉಲ್ಲೇಖನೆಯ)ಐಡಿಯನ್ನು ಸ್ವೀಕರಿಸುತ್ತಾರೆ ಮತ್ತು ಅವರ ಮಾಹಿತನ್ನು ಬಹಿರಂಗಪಡಿಸುವುದಿಲ್ಲ.

ಯಾವ ಉಲ್ಲಂಘನೆಗೆ ಎಷ್ಟು ಪಾಯಿಂಟ್ಸ್.?
ಸಂಚಾರ ಹರಿವಿನ ವಿರುದ್ಧ ಚಾಲನೆ - 10 ಪಾಯಿಂಟ್ಸ್
ಫುಟ್‍ಪಾಥ್ ಮೇಲೆ ಪಾರ್ಕಿಂಗ್/ ಜಿಬ್ರಾ ಕ್ರಾಸಿಂಗ್ - 3 ಪಾಯಿಂಟ್ಸ್
ಟ್ರಿಪಲ್ ರೈಡಿಂಗ್ - 10 ಪಾಯಿಂಟ್ಸ್
ತಪ್ಪಾದ ನಂಬರ್ ಪ್ಲೇಟ್ - 3 ಪಾಯಿಂಟ್ಸ್
ಸೀಲ್ಟ್ ಬೆಲ್ಟ್ ರಹಿತ ವಾಹನ ಚಾಲನೆ - 7 ಪಾಯಿಂಟ್ಸ್
ಹೆಲ್ಮೆಟ್ ರಹಿತ ವಾಹನ ಚಾಲನೆ - 7 ಪಾಯಿಂಟ್ಸ್
ಟಿಂಡೆಡ್ ಗ್ಲಾಸ್ ಬಳಕೆ - 3 ಪಾಯಿಂಟ್ಸ್
ವಿ.ಸೂ - ಪಟ್ಟಿಯಲ್ಲಿರುವ ಉಲ್ಲಂಘನೆಗಳ ಕುರಿತಾದ ವಿವರವನ್ನು ಫೋಟೊಗಳ ಮೂಲಕ ರವಾನಿಸಬೇಕಾಗಿರುತ್ತದೆ.
MOST READ: ಹೊಸ ಕಾಯ್ದೆ ಶುರು - ಟ್ಯಾಕ್ಸಿ ಚಾಲಕರಿಗೆ ಪೊಲೀಸರಿಂದ ನೋಟಿಸ್..!

ರೆಡ್ ಲೈಟ್ ಜಂಪ್- 10 ಪಾಯಿಂಟ್ಸ್
ಡೇಂಜರಸ್ ಡ್ರೈವಿಂಗ್ - 10 ಪಾಯಿಂಟ್ಸ್
ವಾಹನ ಚಾಲನೆ ವೇಳೆ ಮೊಬೈಲ್ ಬಳಕೆ - 10 ಪಾಯಿಂಟ್ಸ್
ವಿ.ಸೂ - ಪಟ್ಟಿಯಲ್ಲಿರುವ ಉಲ್ಲಂಘನೆಗಳ ಕುರಿತಾದ ವಿವರವನ್ನು ವಿಡಿಯೋ ಮೂಲಕ ರವಾನಿಸಬೇಕಾಗಿರುತ್ತದೆ.

ವಿವರಗಳನ್ನು ಕಳುಹಿಸಿದರೆ ಲಾಭವೇನು.?
ಗೋವಾ ಟ್ರಾಫಿಕ್ ಸೆಂಟಿನಲ್ ಆಪ್ ಮುಖಾಂತರ ನೀವು ಮೇಲೆ ನೀಡಿರುವ ಪಟ್ಟಿಗಳನ್ನು ಸೆರೆಹಿಡಿದು ರವಾನಿಸಿದರೆ, ಪ್ರತೀ 100 ಪಾಯಿಂಟ್ಸ್ ಗೆ ಆಪ್ ಬಳಕೆದಾರರು (ರವಾನಿಸಿದವರು) ರೂ.1000ವನ್ನು ಪಡೆಯಬಹುದಾಗಿದೆ.

ಇದರಲ್ಲಿ ಮತ್ತೊಂದು ವಿಶೇಷವೇನೆಂದರೆ 100 ಪಾಯಿಂಟ್ಸ್ ಗೆ ನೀವು ಪಡೆದ ಹಣವು ನೇರವಾಗಿ ನಿಮ್ಮ ನೀವು ಆಪ್ ಬಳಕೆದಾರರಾಗಿ ರಿಜಿಸ್ಟರ್ ಮಾಡಿಕೊಳ್ಳುವ ಸಮಯದಲ್ಲಿ ನೀವು ಯಾಮ ಬ್ಯಾಂಕ್ ಖಾತೆಯನ್ನು ನೀಡಿರುತ್ತೀರೊ ಆ ಖಾತೆಗೆ ಜಮ ಆಗುತ್ತದೆ.
MOST READ: ಟ್ರಾಫಿಕ್ ಪೊಲೀಸರಿಂದ ತಪ್ಪಿಸಿಕೊಳ್ಳಲು ಈ ಸ್ಕೂಟರ್ ಮಾಲೀಕ ಮಾಡಿದ್ದೇನು ಗೊತ್ತಾ?

ಗೋವಾ ನಗರದ ಪೊಲೀಸರು ಶುರು ಮಾಡಿದ ಈ ಸ್ಕೀಮ್ ಅನ್ನು ನಮ್ಮ ರಾಜ್ಯದಲ್ಲಿಯೂ ಸಹ ಪ್ರಾರಂಭಿಸಿದರೆ, ಟ್ರಾಫಿಕ್ ನಿಮಯ ಉಲ್ಲಂಘಿತ ಪ್ರಕರಣಗಳು ಕಡಿಮಾಯುತ್ತದೆ ಮತ್ತು ಅಪಘಾತಗಳು ಕೂಡಾ ಕಡಿಮೆಯಾಗುತ್ತದೆ ಎಂಬುದು ನಮ್ಮ ಭಾವನೆ. ಹಾಗಾದರೆ ಈ ಸ್ಕೀಮ್‍ನ ಬಗೆಗಿನ ನಿಮ್ಮ ಅಭಿಪ್ರಾಯವನ್ನು ಕೆಳಗೆ ನೀಡಿರುವ ಕಮೆಂಟ್ ಬಾಕ್ಸ್ನಲ್ಲಿ ಹಂಚಿಕೊಳ್ಳಿ.


Click it and Unblock the Notifications








