ಎಲೆಕ್ಟ್ರಿಕ್ ವಾಹನ ನೀತಿಗೆ ಜೈ ಎಂದ ದೆಹಲಿ ಸರ್ಕಾರ

ಆಮ್ ಆದ್ಮಿ ನೇತೃತ್ವದ ದೆಹಲಿ ಸರ್ಕಾರವು 2019ರ ಎಲೆಕ್ಟ್ರಿಕ್ ವಾಹನ ನೀತಿಗೆ ಅನುಮೋದನೆ ನೀಡಿದೆ. ಎಲ್ಲಾ ರೀತಿಯ ಎಲೆಕ್ಟ್ರಿಕ್ ದ್ವಿ ಚಕ್ರ ವಾಹನ, ಕಮರ್ಶಿಯಲ್ ವಾಹನ ಹಾಗೂ ಸಾರಿಗೆ ವಾಹನಗಳಿಗೆ ಈ ನೀತಿಯಡಿಯಲ್ಲಿ ಉತ್ತೇಜನ ನೀಡಲಾಗುವುದು.

ಎಲೆಕ್ಟ್ರಿಕ್ ವಾಹನ ನೀತಿಗೆ ಜೈ ಎಂದ ದೆಹಲಿ ಸರ್ಕಾರ

ದೆಹಲಿಯಲ್ಲಿ ವಿಪರೀತವಾಗಿ ಏರಿಕೆಯಾಗುತ್ತಿರುವ ವಾಯು ಮಾಲಿನ್ಯದ ಹಿನ್ನೆಲೆಯಲ್ಲಿ ದೆಹಲಿ ಸರ್ಕಾರವು ಎಲೆಕ್ಟ್ರಿಕ್ ವಾಹನ ನೀತಿಗೆ ಅನುಮೋದನೆ ನೀಡಿದೆ. ಈ ನಿಯಮದಡಿಯಲ್ಲಿ ಎಲೆಕ್ಟ್ರಿಕ್ ವಾಹನಗಳ ಖರೀದಿಯ ಮೇಲೆ ಸಬ್ಸಿಡಿ ನೀಡಲಾಗುವುದು.

ಎಲೆಕ್ಟ್ರಿಕ್ ವಾಹನ ನೀತಿಗೆ ಜೈ ಎಂದ ದೆಹಲಿ ಸರ್ಕಾರ

ಹೊಸ ಎಲೆಕ್ಟ್ರಿಕ್ ನೀತಿಯ ಬಗ್ಗೆ ಮಾತನಾಡಿದ ದೆಹಲಿಯ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‍‍ರವರು, ವಾಯು ಮಾಲಿನ್ಯವು ದೆಹಲಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಇದಕ್ಕೆ ಮುಖ್ಯ ಕಾರಣ ಪೆಟ್ರೋಲ್ ಹಾಗೂ ಡೀಸೆಲ್ ವಾಹನಗಳು. ಈ ನೀತಿಯ ಮೊದಲ ಕರಡನ್ನು 2018ರ ನವೆಂಬರ್‍‍ನಲ್ಲಿ ರಚಿಸಲಾಗಿತ್ತು ಎಂದು ಹೇಳಿದರು.

ಎಲೆಕ್ಟ್ರಿಕ್ ವಾಹನ ನೀತಿಗೆ ಜೈ ಎಂದ ದೆಹಲಿ ಸರ್ಕಾರ

ದೆಹಲಿಯಲ್ಲಿ 2024ರ ವೇಳೆಗೆ 25%ನಷ್ಟು ಎಲೆಕ್ಟ್ರಿಕ್ ವಾಹನಗಳನ್ನು ರಸ್ತೆಗಿಳಿಸುವುದು ನಮ್ಮ ಗುರಿಯಾಗಿದೆ. ಈ ನೀತಿಯ ಮುಖ್ಯ ಉದ್ದೇಶವೆಂದರೆ ವಾಯು ಮಾಲಿನ್ಯವನ್ನು ಕಡಿಮೆಗೊಳಿಸುವುದು. ಇದರ ಜೊತೆಗೆ ಉದ್ಯೋಗವು ಸಹ ಹೆಚ್ಚಾಗಲಿದೆ ಎಂದು ಕೇಜ್ರಿವಾಲ್‍‍ರವರು ಹೇಳಿದರು.

ಎಲೆಕ್ಟ್ರಿಕ್ ವಾಹನ ನೀತಿಗೆ ಜೈ ಎಂದ ದೆಹಲಿ ಸರ್ಕಾರ

ವಾಯು ಮಾಲಿನ್ಯವನ್ನು ಕಡಿಮೆಗೊಳಿಸಲು ಕೇಂದ್ರ ಸರ್ಕಾರವು ಮಾತ್ರವಲ್ಲದೇ ಹಲವು ರಾಜ್ಯ ಸರ್ಕಾರಗಳೂ ಸಹ ಕ್ರಮಗಳನ್ನು ಕೈಗೊಳ್ಳುತ್ತಿವೆ. ಇವುಗಳಲ್ಲಿ ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಉತ್ತೇಜಿಸುವುದು ಸಹ ಸೇರಿದೆ.

ಎಲೆಕ್ಟ್ರಿಕ್ ವಾಹನ ನೀತಿಗೆ ಜೈ ಎಂದ ದೆಹಲಿ ಸರ್ಕಾರ

ಕೆಲವು ದಿನಗಳ ಹಿಂದಷ್ಟೇ ಉತ್ತರ ಪ್ರದೇಶ ಸರ್ಕಾರವು ಅಲ್ಲಿನ ಏಳು ನಗರಗಳಲ್ಲಿ ಎಲೆಕ್ಟ್ರಿಕ್ ಬಸ್‍‍ಗಳನ್ನು ಓಡಿಸುವ ಯೋಜನೆಗೆ ಅನುಮೋದನೆ ನೀಡಿದೆ.

ಎಲೆಕ್ಟ್ರಿಕ್ ವಾಹನ ನೀತಿಗೆ ಜೈ ಎಂದ ದೆಹಲಿ ಸರ್ಕಾರ

ಎಲೆಕ್ಟ್ರಿಕ್ ವಾಹನಗಳ ಬಗ್ಗೆ ಮಾತನಾಡಿದ ಅರವಿಂದ್ ಕೇಜ್ರಿವಾಲ್‍‍ರವರು, ಸದ್ಯಕ್ಕೆ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಪ್ರಮಾಣವು 0.2% ಆಗಿದ್ದರೆ, ಯಾವುದೇ ಎಲೆಕ್ಟ್ರಿಕ್ ತ್ರಿಚಕ್ರ ವಾಹನಗಳು ಬಳಕೆಯಲ್ಲಿಲ್ಲ. ಮುಂದಿನ 5 ವರ್ಷಗಳಲ್ಲಿ 35,000 ಎಲೆಕ್ಟ್ರಿಕ್ ವಾಹನಗಳು ಹಾಗೂ 250 ಚಾರ್ಜಿಂಗ್ ಸ್ಟೇಷನ್‍‍ಗಳನ್ನು ಅಳವಡಿಸಲಿದ್ದೇವೆ ಎಂದು ಹೇಳಿದರು.

ಎಲೆಕ್ಟ್ರಿಕ್ ವಾಹನ ನೀತಿಗೆ ಜೈ ಎಂದ ದೆಹಲಿ ಸರ್ಕಾರ

ಇದರ ಜೊತೆಗೆ ದೆಹಲಿ ಸರ್ಕಾರವು ಮನೆ ಹಾಗೂ ಕಚೇರಿಗಳಿಗಾಗಿ ಚಾರ್ಜಿಂಗ್ ಪಾಯಿಂಟ್‍‍ಗಳನ್ನು ಖರೀದಿಸುವವರಿಗೆ 100% ಸಬ್ಸಿಡಿಯನ್ನು ನೀಡುವುದಾಗಿ ತಿಳಿಸಿದೆ. ಈ ಆಫರ್ ಚಾರ್ಜಿಂಗ್ ಪಾಯಿಂಟ್‍‍ಗಳನ್ನು ಖರೀದಿಸುವವರಿಗೆ ಅನ್ವಯಿಸಲಿದೆ.

ಎಲೆಕ್ಟ್ರಿಕ್ ವಾಹನ ನೀತಿಗೆ ಜೈ ಎಂದ ದೆಹಲಿ ಸರ್ಕಾರ

ದ್ವಿ ಚಕ್ರ ವಾಹನಗಳ ಚಾರ್ಜಿಂಗ್‍‍ಗೆ ಬಳಸುವ 2 ಕಿ.ವ್ಯಾ ಬ್ಯಾಟರಿಗಳ ಬೆಲೆಯು ರೂ.10,000ಗಳಾಗಲಿದೆ. ದೆಹಲಿಯ ವಾಯು ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಕಾರ ಸಬ್ಸಿಡಿಯ ನಂತರ ಈ ಬ್ಯಾಟರಿಯ ಬೆಲೆ ರೂ.5,500ಗಳಾಗಲಿದೆ.

ಎಲೆಕ್ಟ್ರಿಕ್ ವಾಹನ ನೀತಿಗೆ ಜೈ ಎಂದ ದೆಹಲಿ ಸರ್ಕಾರ

ಇದರಿಂದಾಗಿ ದೆಹಲಿ ಸರ್ಕಾರವು ಎಲೆಕ್ಟ್ರಿಕ್ ದ್ವಿ ಚಕ್ರ, ತ್ರಿ ಚಕ್ರ ವಾಹನ ಹಾಗೂ ನಾಲ್ಕು ಚಕ್ರದ ವಾಹನಗಳ ಬಳಕೆಯನ್ನು ಉತ್ತೇಜಿಸಲು ಸೂಕ್ತ ಕ್ರಮಗಳನ್ನು ಕೈಗೊಂಡಿರುವುದನ್ನು ಕಾಣಬಹುದು.

ಎಲೆಕ್ಟ್ರಿಕ್ ವಾಹನ ನೀತಿಗೆ ಜೈ ಎಂದ ದೆಹಲಿ ಸರ್ಕಾರ

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಮಾಲಿನ್ಯ ನಿಯಂತ್ರಿಸಲು ಹಾಗೂ ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಉತ್ತೇಜಿಸಲು ದೆಹಲಿ ಸರ್ಕಾರವು ಕೈಗೊಂಡಿರುವ ಕ್ರಮದಿಂದಾಗಿ ಮುಂಬರುವ ದಿನಗಳಲ್ಲಿ ಇನ್ನೂ ಹಲವು ಸರ್ಕಾರಗಳು ಇದೇ ಹಾದಿಯನ್ನು ಹಿಡಿಯುವ ಸಾಧ್ಯತೆಗಳಿವೆ.

Most Read Articles

Kannada
English summary
Delhi Govt approves Electric vehicle policy - Read in Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X