ಎಕ್ಸೈಡ್ ಮೊದಲ ಎಲೆಕ್ಟ್ರಿಕ್ ಆಟೋ ರಿಕ್ಷಾ ನಿಯೋ ಅನಾವರಣ

ಭಾರತದ ಜನಪ್ರಿಯ ಬ್ಯಾಟರಿ ಉತ್ಪಾದನಾ ಸಂಸ್ಥೆಯಾದ ಎಕ್ಸೈಡ್ ಇಂಡಸ್ಟ್ರೀಸ್ ಸಂಸ್ಥೆಯು ತನ್ನ ಮೊದಲ ಎಲೆಕ್ಟ್ರಿಕ್ ಆಟೋ ರಿಕ್ಷಾ ಆವೃತ್ತಿಯನ್ನು ಅನಾವರಣಗೊಳಿಸಿದ್ದು, ಹಲವು ವಿಶೇಷತೆಗಳೊಂದಿಗೆ ಅಭಿವೃದ್ದಿ ಹೊಂದಿರುವ ಹೊಸ ವಾಹನವು ಮುಂದಿನ ಕೆಲವೇ ದಿನಗಳಲ್ಲಿ ಅಧಿಕೃತವಾಗಿ ಮಾರಾಟಕ್ಕೆ ಲಭ್ಯವಾಗಲಿದೆ.

ಎಕ್ಸೈಡ್ ಮೊದಲ ಎಲೆಕ್ಟ್ರಿಕ್ ಆಟೋ ರಿಕ್ಷಾ ನಿಯೋ ಅನಾವರಣ

ಎಕ್ಸೈಡ್ ಸಂಸ್ಥೆಯು ಹೊಸ ಆಟೋ ರಿಕ್ಷಾ ಮಾದರಿಗೆ ನಿಯೋ ಎಲೆಕ್ಟ್ರಿಕ್ ಇ-ರಿಕ್ಷಾ ಎಂದು ಹೆಸರಿಸಿದ್ದು, ಅತ್ಯುತ್ತಮ ಬ್ಯಾಟರಿ ಸೌಲಭ್ಯದೊಂದಿಗೆ ಹೊಸ ವಾಹನವು ಇಂಧನ ಆಧರಿತ ಆಟೋ ರಿಕ್ಷಾ ಮಾದರಿಗಳಿಗೆ ಭರ್ಜರಿ ಪೈಪೋಟಿ ನೀಡಲಿದೆ. ಹೊಸ ಎಲೆಕ್ಟ್ರಿಕ್ ರಿಕ್ಷಾ ಬೆಲೆ ಇಳಿಕೆ ಮಹತ್ವದ ಕ್ರಮಕೈಗೊಂಡಿರುವ ಎಕ್ಸೈಡ್ ಸಂಸ್ಥೆಯು ಗರಿಷ್ಠ ಪ್ರಮಾಣದಲ್ಲಿ ಸ್ಥಳೀಯವಾಗಿ ಅಭಿವೃದ್ದಿಪಡಿಸಲಾದ ಬೀಡಿಭಾಗಗಳನ್ನು ಬಳಕೆ ಮಾಡಿದ್ದು, ಇತರೆ ಎಲೆಕ್ಟ್ರಿಕ್ ಆಟೋ ರಿಕ್ಷಾಗಳಿಂತಲೂ ಹೆಚ್ಚು ಪ್ರೀಮಿಯಂ ಫೀಚರ್ಸ್ ಪಡೆದುಕೊಳ್ಳಲಿದೆ.

ಎಕ್ಸೈಡ್ ಮೊದಲ ಎಲೆಕ್ಟ್ರಿಕ್ ಆಟೋ ರಿಕ್ಷಾ ನಿಯೋ ಅನಾವರಣ

ಸದ್ಯ ಮಾರುಕಟ್ಟೆಯಲ್ಲಿ ಬಹುತೇಕ ಆಟೋ ಉತ್ಪಾದನಾ ಸಂಸ್ಥೆಗಳು ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆಗಾಗಿ ಶೇ.95ರಷ್ಟು ಬಿಡಿಭಾಗಗಳನ್ನು ಚೀನಿ ಮತ್ತು ತೈವಾನ್ ಮಾರುಕಟ್ಟೆ ಮೇಲೆ ಅವಲಂಭಿತವಾಗಿದ್ದು, ಎಕ್ಲೈಡ್ ಸಂಸ್ಥೆಯು ಮಾತ್ರ ಆಮದು ಬಿಡಿಭಾಗಗಳನ್ನು ತಗ್ಗಿಸಿ ಸ್ಥಳೀಯ ಬಿಡಿಭಾಗಗಳನ್ನೇ ಹೆಚ್ಚು ಬಳಕೆ ಮಾಡುವ ಪ್ರಯತ್ನಕ್ಕೆ ಕೈಹಾಕಿದೆ.

ಎಕ್ಸೈಡ್ ಮೊದಲ ಎಲೆಕ್ಟ್ರಿಕ್ ಆಟೋ ರಿಕ್ಷಾ ನಿಯೋ ಅನಾವರಣ

ಹೀಗಾಗಿ ತನ್ನ ಮೊದಲ ನಿಯೋ ಎಲೆಕ್ಟ್ರಿಕ್ ಆಟೋ ರಿಕ್ಷಾದಲ್ಲಿ ಶೇ.20 ರಷ್ಟು ಸ್ಥಳೀಯ ಬಿಡಿಭಾಗಗಳನ್ನು ಬಳಕೆ ಮಾಡಿರುವ ಎಕ್ಸೈಡ್ ಸಂಸ್ಥೆಯು ಮುಂಬರುವ ದಿನಗಳಲ್ಲಿ ಶೇ.40 ರಷ್ಟು ಬಿಡಿಭಾಗಗಳನ್ನು ಸ್ಥಳೀಯವಾಗಿಯೇ ಖರೀದಿಸಿ ಅಭಿವೃದ್ದಿಪಡಿಸುವ ಗುರಿಹೊಂದಿದೆ.

ಎಕ್ಸೈಡ್ ಮೊದಲ ಎಲೆಕ್ಟ್ರಿಕ್ ಆಟೋ ರಿಕ್ಷಾ ನಿಯೋ ಅನಾವರಣ

ಎಕ್ಸೈಡ್ ಸಂಸ್ಥೆಯು ಸದ್ಯಕ್ಕೆ ನಿಯೋ ಎಲೆಕ್ಟ್ರಿಕ್ ಆಟೋ ರಿಕ್ಷಾ ಮಾದರಿಯನ್ನು ಅನಾವರಣಗೊಳಿಸಿದ್ದು, ಹೊಸ ವಾಹನದ ಬ್ಯಾಟರಿ ವೈಶಿಷ್ಟ್ಯತೆ ಮತ್ತು ಬೆಲೆ ಕುರಿತಾಗಿ ಯಾವುದೇ ಅಧಿಕೃತ ಮಾಹಿತಿ ಹಂಚಿಕೊಂಡಿವಾದರೂ ಸ್ಪರ್ಧಾತ್ಮಕ ಬೆಲೆಗಳಲ್ಲಿ ಅತ್ಯುತ್ತಮ ಮೈಲೇಜ್ ರೇಂಜ್ ಒದಗಿಸುವ ಭರವಸೆ ನೀಡಿದೆ. ಹೊಸ ಎಲೆಕ್ಟ್ರಿಕ್ ಆಟೋ ರಿಕ್ಷಾದಲ್ಲಿ ಲೀಥಿಯಂ ಅಯಾನ್ ಬ್ಯಾಟರಿ ಒದಗಿಸಲಾಗಿದ್ದು, ಗ್ರಾಹಕರ ಬೇಡಿಕೆಗಿಂತಲೂ ಹೆಚ್ಚಿನ ಮಟ್ಟದ ತಾಂತ್ರಿಕ ಅಂಶಗಳು ಈ ವಾಹನದಲ್ಲಿವೆ.

ಎಕ್ಸೈಡ್ ಮೊದಲ ಎಲೆಕ್ಟ್ರಿಕ್ ಆಟೋ ರಿಕ್ಷಾ ನಿಯೋ ಅನಾವರಣ

ನಿಯೋ ಎಲೆಕ್ಟ್ರಿಕ್ ಆಟೋ ರಿಕ್ಷಾದಲ್ಲಿ ಎಲ್‌ಸಿಡಿ ಡಿಸ್‌ಪ್ಲೇ, ಎಲ್‌ಸಿಡಿ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ರಿಯರ್ ವ್ಯೂವ್ ಕ್ಯಾಮೆರಾ, ಎಫ್ಎಂ ರೆಡಿಯೋ ಟ್ರಾನ್ಸ್‌ಮೀಟರ್, ಯುಎಸ್‌ಬಿ ಸ್ಲಾಟ್, ತುಕ್ಕುನಿರೋಧಕ ಹೈ ಗ್ರೇಡ್ ಸ್ಟೀಲ್ ಹಾರ್ಡ್ ಟಾಪ್ ಮತ್ತು ಗುಣಮಟ್ಟದ ಪ್ಲ್ಯಾಸ್ಟಿಕ್ ಕ್ಲ್ಯಾಡಿಂಗ್ ಬಳಕೆ ಮಾಡಲಾಗಿದೆ.

ಎಕ್ಸೈಡ್ ಮೊದಲ ಎಲೆಕ್ಟ್ರಿಕ್ ಆಟೋ ರಿಕ್ಷಾ ನಿಯೋ ಅನಾವರಣ

ಜೊತೆಗೆ ಹೊಸ ನಿಯೋ ಎಲೆಕ್ಟ್ರಿಕ್ ಆಟೋ ರಿಕ್ಷಾ ಖರೀದಿಗೆ ಹಲವಾರು ಅನುಕೂಲಕರ ಹಣಕಾಸು ಸೌಲಭ್ಯಗಳನ್ನು ಸಹ ಒದಗಿಸಲಿರುವ ಎಕ್ಸೈಡ್ ಸಂಸ್ಥೆಯು ಅತಿ ಕಡಿಮೆ ಬಡ್ಡಿದರದಲ್ಲಿ ಸಾಲಗಳನ್ನು ನೀಡಲಿದೆ. ಜೊತೆಗೆ ಹೊಸ ವಾಹನದ ಮೇಲೆ ಗರಿಷ್ಠ ಪ್ರಮಾಣದ ವಾರಂಟಿ ಸೌಲಭ್ಯಗಳನ್ನು ಸಹ ನೀಡಲಿದ್ದು, ಮುಂದಿನ ಕೆಲವೇ ದಿನಗಳಲ್ಲಿ ಅಧಿಕೃತವಾಗಿ ಖರೀದಿಗೆ ಲಭ್ಯವಿರಲಿದೆ ಎಂದಿದೆ.

MOST READ: ಮುಂದಿನ ಒಂದು ವರ್ಷದೊಳಗೆ ಏಳು ಹೊಸ ಕಾರು ಬಿಡುಗಡೆ ಮಾಡಲಿದೆ ಮಹೀಂದ್ರಾ

ಎಕ್ಸೈಡ್ ಮೊದಲ ಎಲೆಕ್ಟ್ರಿಕ್ ಆಟೋ ರಿಕ್ಷಾ ನಿಯೋ ಅನಾವರಣ

ಎಕ್ಸೈಡ್ ಸಂಸ್ಥೆಯು ಮೊದಲ ಹಂತವಾಗಿ ಹೊಸ ನಿಯೋ ಎಲೆಕ್ಟ್ರಿಕ್ ಆಟೋ ರಿಕ್ಷಾ ಮಾದರಿಯನ್ನು ಪಶ್ಚಿಮ ಬಂಗಾಳ, ಉತ್ತರ ಪ್ರದೇಶ ಮತ್ತುಈಶಾನ್ಯ ರಾಜ್ಯಗಳಲ್ಲಿ ಮಾತ್ರವೇ ಮಾರಾಟಕ್ಕೆ ಚಾಲನೆ ನೀಡುತ್ತಿದ್ದು, ಉತ್ಪಾದನೆ ಹೆಚ್ಚಳ ನಂತರ ದೇಶದ ವಿವಿಧ ನಗರಗಳಲ್ಲಿ ಮಾರಾಟ ಮಾಡುವ ಯೋಜನೆಯಲ್ಲಿದೆ.

MOST READ: ಬಜಾಜ್ ಬಹುನೀರಿಕ್ಷಿತ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಅನಾವರಣ

ಎಕ್ಸೈಡ್ ಮೊದಲ ಎಲೆಕ್ಟ್ರಿಕ್ ಆಟೋ ರಿಕ್ಷಾ ನಿಯೋ ಅನಾವರಣ

ಪಶ್ಚಿಮ ಬಂಗಾಳದಲ್ಲಿ ಎಕ್ಸೈಡ್ ಸಂಸ್ಥೆಯು ವಾರ್ಷಿಕವಾಗಿ 15 ಸಾವಿರ ಎಲೆಕ್ಟ್ರಿಕ್ ಆಟೋ ರಿಕ್ಷಾ ಉತ್ಪಾದನಾ ಘಟಕವನ್ನು ತೆರಿದಿದ್ದು, ಮುಂಬರುವ ಕೆಲವು ದಿನಗಳ ನಂತರವಷ್ಟೇ ಹೊಸ ನಿಯೋ ಎಲೆಕ್ಟ್ರಿಕ್ ಆಟೋ ರಿಕ್ಷಾವನ್ನು ದೇಶಾದ್ಯಂತ ಮಾರಾಟ ಮಾಡಲಿದೆ.

Article Published On: Friday, October 18, 2019, 14:44 [IST]
English summary
Exide Neo Electric Rickshaw Unveiled In India. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+