ಹೈ ಪವರ್ ಹೆಡ್‌ಲೈಟ್ ಅಳವಡಿಸಿದ್ರೆ ಆರ್‌ಸಿ ಮತ್ತು ಲೈಸೆನ್ಸ್ ರದ್ದಾಗುವುದು ಗ್ಯಾರಂಟಿ..!

ವಾಹನಗಳನ್ನು ಮಾಡಿಫೈ ಮಾಡುವದು ವಾಹನ ಸವಾರರಿಗೆ ಅನುಕೂಲಕತೆಗಳಿದ್ದರೂ ಅವುಗಳಿಂದ ಇತರರಿಗೆ ಹೆಚ್ಚಿನ ತೊಂದರೆ ತಪ್ಪಿದ್ದಲ್ಲ. ಅದರಲ್ಲೂ ಹೈಪವರ್ ಹೆಡ್‌ಲ್ಯಾಂಪ್ ಅಳವಡಿಸಿಕೊಳ್ಳವ ವಾಹನಗಳಿಂದ ನೂರಾರು ಜನ ಪ್ರಾಣಕಳೆದುಕೊಳ್ಳುವಂತಾಗಿದ್ದು, ಹೈ ಬೀಮ್ ಅಳವಡಿಸಿಕೊಳ್ಳುವ ವಾಹನ ಮಾಲೀಕರಿಗೆ ಕೇರಳ ಪೊಲೀಸರು ಶಾಕಿಂಗ್ ಸುದ್ದಿ ನೀಡಿದ್ದಾರೆ.

ಹೈ ಪವರ್ ಹೆಡ್‌ಲೈಟ್ ಅಳವಡಿಸಿದ್ರೆ ಆರ್‌ಸಿ ಮತ್ತು ಲೈಸೆನ್ಸ್ ರದ್ದಾಗುವುದು ಗ್ಯಾರಂಟಿ..!

ಇತ್ತೀಚೆಗೆ ಬಹುತೇಕ ವಾಹನ ಮಾಲೀಕರು ಹೊಸ ಬೈಕ್, ಕಾರುಗಳನ್ನು ಖರೀದಿಸಿದ ನಂತರ ಅದರ ಅಂದವನ್ನು ಹೆಚ್ಚಿಸಲು ಹೆಚ್ಚುವರಿ ಹಣ ತೆತ್ತು ಮಾಡಿಫೈ ಮಾಡಿಸುತ್ತಾರೆ. ಹೀಗೆ ಮಾಡಿಫೈ ಮಾಡಿಸುವಾಗ ಕಾರುಗಳಿಗೆ ಅತಿಹೆಚ್ಚು ಬೆಳಕು ಹರಿಸುವ ಹೈ ಬೀಮ್‌ಗಳನ್ನು ಅಳವಡಿಸುತ್ತಿರುವುದು ಇತರೆ ವಾಹನ ಸವಾರರಿಗೆ ಸಾಕಷ್ಟು ತೊಂದರೆಯಾಗುತ್ತಿದೆ.

ಹೈ ಪವರ್ ಹೆಡ್‌ಲೈಟ್ ಅಳವಡಿಸಿದ್ರೆ ಆರ್‌ಸಿ ಮತ್ತು ಲೈಸೆನ್ಸ್ ರದ್ದಾಗುವುದು ಗ್ಯಾರಂಟಿ..!

ಹೈ ಬೀಮ್ ಲೈಟ್‌ಗಳಿಂದಾಗಿ ಸಿಂಗಲ್ ರೋಡ್‌ಗಳಲ್ಲಿ ಮತ್ತು ಘಾಟಿ ಪ್ರದೇಶಗಳಲ್ಲಿ ಸಾಕಷ್ಟು ಅಪಘಾತ ಪ್ರಕರಣಗಳು ನಡೆಯುತ್ತಿದ್ದು, ಇದಕ್ಕೆ ಕಡಿವಾಣ ಹಾಕಲು ಮುಂದಾಗಿರುವ ಕೇರಳ ಪೊಲೀಸರು ನಿಯಮ ಮೀರುವ ವಾಹನ ಸವಾರರ ಆರ್‌ಸಿ ಮತ್ತು ಲೈಸೆನ್ಸ್ ರದ್ದುಗೊಳಿಸುತ್ತಿದ್ದಾರೆ.

ಹೈ ಪವರ್ ಹೆಡ್‌ಲೈಟ್ ಅಳವಡಿಸಿದ್ರೆ ಆರ್‌ಸಿ ಮತ್ತು ಲೈಸೆನ್ಸ್ ರದ್ದಾಗುವುದು ಗ್ಯಾರಂಟಿ..!

ಜನವರಿ 31ರ ಒಳಗಾಗಿಯೇ ಹೈ ಬೀಮ್ ಲೈಟ್‌ಗಳನ್ನು ಸ್ವಯಂ ಪ್ರೇರಣೆಯಿಂದ ತೆರವುಗೊಳಿಸುವಂತೆ ಆದೇಶಿಸಲಾಗಿದ್ದು, ತದನಂತರ ಸಿಕ್ಕಿಬಿಳುವ ವಾಹನ ಮಾಲೀಕರ ವಾಹನ ನೋಂದಣಿ ಮತ್ತು ಚಾಲನಾ ಪರವಾನಿಗೆ ಪತ್ರವನ್ನು ರದ್ದು ಮಾಡಲಾಗುವುದು ಎಂದಿದ್ದಾರೆ.

ಹೈ ಪವರ್ ಹೆಡ್‌ಲೈಟ್ ಅಳವಡಿಸಿದ್ರೆ ಆರ್‌ಸಿ ಮತ್ತು ಲೈಸೆನ್ಸ್ ರದ್ದಾಗುವುದು ಗ್ಯಾರಂಟಿ..!

ಹೈ ಬೀಮ್ ಅಳವಡಿಕೆಯಿಂದಾಗಿ ಇತರೆ ವಾಹನ ಚಾಲಕರಿಗೆ ಸಾಕಷ್ಟು ತೊಂದರೆಗಳಾಗುತ್ತಿದ್ದು, ಅತಿಯಾದ ಬೆಳಕಿನ ಪ್ರಭಾವದಿಂದ ಅದೆಷ್ಟೋ ವಾಹನ ಚಾಲಕರು ನಿಯಂತ್ರಣ ಕಳೆದುಕೊಂಡ ಪರಿಣಾಮ ಅಪಘಾತಗಳಲ್ಲಿ ಪ್ರಾಣ ಬಿಟ್ಟಿದ್ದಾರೆ.

ಹೈ ಪವರ್ ಹೆಡ್‌ಲೈಟ್ ಅಳವಡಿಸಿದ್ರೆ ಆರ್‌ಸಿ ಮತ್ತು ಲೈಸೆನ್ಸ್ ರದ್ದಾಗುವುದು ಗ್ಯಾರಂಟಿ..!

ಅದರಲ್ಲೂ ಕೇರಳದಲ್ಲಿ ಅತಿಯಾಗಿ ಮಾಡಿಫೈ ವಾಹನಗಳಿದ್ದೂ ಘಾಟಿ ಪ್ರದೇಶಗಳಲ್ಲಿ ಹೆಚ್ಚಿನ ಮಟ್ಟದ ಅಪಘಾತಗಳು ಸಂಭವಿಸುತ್ತಿವೆ. ಇದು ಕಳೆದ ಐದು ವರ್ಷಗಳಿಂದ ಈಚೆಗೆ ಹೆಚ್ಚಿನ ಮಟ್ಟದಲ್ಲಿ ಅಪಘಾತ ಸಂಭವಿಸಿದ್ದು, ಅಂತಿಮವಾಗಿ ಇದಕ್ಕೆ ನೀಷೇಧ ಹೇರಲಾಗಿದೆ.

ಹೈ ಪವರ್ ಹೆಡ್‌ಲೈಟ್ ಅಳವಡಿಸಿದ್ರೆ ಆರ್‌ಸಿ ಮತ್ತು ಲೈಸೆನ್ಸ್ ರದ್ದಾಗುವುದು ಗ್ಯಾರಂಟಿ..!

ಇನ್ನು ಕೇರಳದಲ್ಲಿ ಈ ಹಿಂದೆಯೇ ಹೈ ಬೀಮ್ ಹೆಡ್‌ಲ್ಯಾಂಪ್‌ಗಳನ್ನು ಬ್ಯಾನ್ ಮಾಡಲು ಸಿದ್ದತೆ ನಡೆಸಿದ್ದಾರೂ ಬೆಳಕಿನ ಪ್ರಕಾಶಮಾನವನ್ನು ಅಳೆಯುವ ಸೂಕ್ತ ಸಾಧನಗಳ ಕೊರತೆ ಹಿನ್ನೆಲೆ ಬ್ಯಾನ್ ನಿರ್ಧಾರದಿಂದ ಹಿಂದೆ ಸರಿಯಲಾಗಿತ್ತು.

ಹೈ ಪವರ್ ಹೆಡ್‌ಲೈಟ್ ಅಳವಡಿಸಿದ್ರೆ ಆರ್‌ಸಿ ಮತ್ತು ಲೈಸೆನ್ಸ್ ರದ್ದಾಗುವುದು ಗ್ಯಾರಂಟಿ..!

ಆದ್ರೆ ಕಳೆದ ಡಿಸೆಂಬರ್‌ನಲ್ಲಿ ಈ ಸಂಬಂಧ ಬೆಳಕಿನ ಪ್ರಕರತೆಯನ್ನು ಅಳೆಯುವ ಲೈಟ್ ಮೀಟರ್ ಪರಿಚಯಿಸಲಾಗಿದ್ದು, ಇದು ವಾಹನಗಳ ಹೆಡ್‌ಲ್ಯಾಂಪ್‌ನಿಂದ ಹೊರಸೂಸುವ ಬೆಳಕಿನ ಸಾಮರ್ಥ್ಯ ಎಷ್ಟಿದೆ ಎನ್ನುವ ನಿಖರ ಮಾಹಿತಿ ನೀಡುವಲ್ಲಿ ಸಹಾಯ ಮಾಡುತ್ತೆ.

ಹೈ ಪವರ್ ಹೆಡ್‌ಲೈಟ್ ಅಳವಡಿಸಿದ್ರೆ ಆರ್‌ಸಿ ಮತ್ತು ಲೈಸೆನ್ಸ್ ರದ್ದಾಗುವುದು ಗ್ಯಾರಂಟಿ..!

ಆಗ ಪೊಲೀಸರು ನಿರ್ದಿಷ್ಟ ಪ್ರಮಾಣದ ಬೆಳಕಿಗಿಂತ ಹೆಚ್ಚು ಇದ್ದಲ್ಲಿ ಅಂತಹ ವಾಹನ ಮಾಲೀಕರ ವಿರುದ್ಧ ಸೂಕ್ತ ಜರಗಿಸುವುದಲ್ಲದೇ ಸ್ಪಾಟ್ ಮೇಲೆಯೇ ಅಂತಹ ಹೆಡ್‌ಲ್ಯಾಂಪ್‌ಗಳನ್ನು ವಶಕ್ಕೆ ಪಡೆದುಕೊಳ್ಳಲು ಕೇರಳ ಪೊಲೀಸರು ನಿರ್ಧರಿಸಿದ್ದಾರೆ.

MOST READ: ಟ್ರಾಫಿಕ್ ನಿಯಮ ಉಲ್ಲಂಘಿಸುವ ವಾಹನ ಚಾಲಕರಿಗೆ ಜೈಲು ಶಿಕ್ಷೆ ಪಕ್ಕಾ..!

ಹೈ ಪವರ್ ಹೆಡ್‌ಲೈಟ್ ಅಳವಡಿಸಿದ್ರೆ ಆರ್‌ಸಿ ಮತ್ತು ಲೈಸೆನ್ಸ್ ರದ್ದಾಗುವುದು ಗ್ಯಾರಂಟಿ..!

ಲೈಟ್ ಮೀಟರ್ ಮಾಡಿಫೈ ಮಾಡಲಾದ ಹೆಡ್‍‍ಲೈಟ್‍‍ಗಳಿಂದ ಬರುವ ಪ್ರಕಾಶಮಾನತೆಯನ್ನು ಕಂಡು ಹಿಡಿಯಲು ಪೊಲೀಸರಿಗೆ ಸಹಾಯಕವಾಗಿದ್ದು, ಲಕ್ಸ್ ಮೀಟರ್‍‍ಗಳನ್ನು ಈಗಾಗಲೇ ಮಾಡಿಫೈ ಹಾವಳಿ ಜಾಸ್ತಿ ಇರುವ ಪ್ರಮುಖ 14 ಜಿಲ್ಲೆಯಲ್ಲಿನ ಪೊಲೀಸರಿಗೆ ನೀಡಲಾಗಿದೆ.

ಹೈ ಪವರ್ ಹೆಡ್‌ಲೈಟ್ ಅಳವಡಿಸಿದ್ರೆ ಆರ್‌ಸಿ ಮತ್ತು ಲೈಸೆನ್ಸ್ ರದ್ದಾಗುವುದು ಗ್ಯಾರಂಟಿ..!

ಈ ನಿಟ್ಟಿನಲ್ಲಿ ಪೊಲೀಸರು ತಮಗೆ ಅನುಮಾನ ಬಂದ ವಾಹನವನ್ನು ನಿಲ್ಲಿಸಿ ಹೆಡ್‍‍ಲೈಟ್‍‍ನ ಪ್ರಕಾಶಮಾನವನ್ನು ಸುಲಭವಾಗಿ ಪತ್ತೆ ಹಚ್ಚಬಹುದಾಗಿದ್ದು, ನಿಗದಿತ ಮಟ್ಟಕ್ಕಿಂತ ಹೆಚ್ಚಿನ ಪ್ರಕಾಶಮಾನ ಹೊರಸೂಸಿದಲ್ಲಿ ಅಂತವರಿಗೆ ದಂಡ ಜೊತೆಗೆ ಆರ್‌ಸಿ ಮತ್ತು ಲೈನೆಸ್ಸ್ ಕೂಡಾ ರದ್ದು ಮಾಡಲಾಗುತ್ತೆ.

MOST READ: ವರ್ಷದ ಹಿಂದೆ ರೂ. 5 ಸಾವಿರಕ್ಕೂ ಗತಿ ಇಲ್ಲ ಎಂದಿದ್ದ ಈ ನಟ ಇವತ್ತು 4 ಕೋಟಿ ಮೌಲ್ಯದ ಬೆಂಟ್ಲಿ ಕಾರಿನ ಒಡೆಯ

ಹೈ ಪವರ್ ಹೆಡ್‌ಲೈಟ್ ಅಳವಡಿಸಿದ್ರೆ ಆರ್‌ಸಿ ಮತ್ತು ಲೈಸೆನ್ಸ್ ರದ್ದಾಗುವುದು ಗ್ಯಾರಂಟಿ..!

ಇನ್ನು ಮಾಡಿಫೈಡ್ ಹೆಡ್‍‍ಲ್ಯಾಂಪ್ ಮತ್ತು ಬಲ್ಸ್ ಗಳನ್ನು ವಾಹನಗಳಲ್ಲಿ ಅಳವಡಿಸಿಕೊಳ್ಳುವುದನ್ನು ಸಂಚಾರಿ ನಿಯಮದ ವಿರುದ್ಧವಾಗಿದ್ದು, ಆದರೂ ಸಹ ಹಲವಾರು ಎಸ್‍‍ಯುವಿ ಕಾರುಗಳಲ್ಲಿ ಕಾನೂನು ಬಾಹಿರ ಮಾಡಿಫೈ ವಿನ್ಯಾಸಗಳು ಸಾಮಾನ್ಯವಾಗುತ್ತಿವೆ. ಅದರಲ್ಲೂ ಎಸ್‍‍ಯುವಿ ಕಾರುಗಳ ರೂಫ್‍‍ಟಾಪ್‍ನ ಮೇಲೆ ಹೈ ಬೀಮ್ ಹೆಡ್‌ಲ್ಯಾಂಪ್‌ಗಳನ್ನು ಅಳವಡಿಸಿಕೊಳ್ಳುವುದು ಟ್ರೆಂಡ್ ಆಗುತ್ತಿದೆ.

ಹೈ ಪವರ್ ಹೆಡ್‌ಲೈಟ್ ಅಳವಡಿಸಿದ್ರೆ ಆರ್‌ಸಿ ಮತ್ತು ಲೈಸೆನ್ಸ್ ರದ್ದಾಗುವುದು ಗ್ಯಾರಂಟಿ..!

ಹೀಗಾಗಿ ಕೇರಳ ಸರ್ಕಾರವು ತೆಗೆದುಕೊಂಡ ಈ ನಿರ್ಧಾರದಂತೆ ದೇಶದಲ್ಲಿನ ಇನ್ನಿತರೆ ರಾಜ್ಯ ಸರ್ಕಾರಗಳು ಸೂಕ್ತ ಕ್ರಮ ಕೈಗೊಂಡರೆ ರಾತ್ರಿ ಹೊತ್ತಿನಲ್ಲಿ ಆಗುವ ಅದೆಷ್ಟೋ ಅಪಘಾತಗಳನ್ನು ಕಡಿಮೆ ಮಾಡಬಹುದು.

Most Read Articles

Kannada
English summary
Motor Vehicle Department Kerala will soon start a crackdown on vehicles fitted with aftermarket High-Intensity Discharge lamps. Read in Kannada.
Story first published: Saturday, February 2, 2019, 19:51 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more