ಬಹಿರಂಗಗೊಂಡ ಫೋರ್ಡ್ ಇಕೋಸ್ಪೋರ್ಟ್ ಥಂಡರ್ ಎಡಿಷನ್

ಕೆಲವು ವರ್ಷಗಳ ಹಿಂದೆ ಬಿಡುಗಡೆಗೊಂಡ ಫೋರ್ಡ್ ಇಕೋಸ್ಪೋರ್ಟ್ ವಾಹನವು ಸಬ್ 4 ಮೀಟರ್ ಎಸ್‍‍ಯು‍‍ವಿ ಸೆಗ್‍‍ಮೆಂಟಿನಲ್ಲಿ ಬಹು ಜನಪ್ರಿಯವಾಗಿತ್ತು. ಈ ಸೆಗ್‍‍ಮೆಂಟಿನಲ್ಲಿದ್ದ ಉತ್ತಮವಾದ ವಾಹನವಾಗಿದ್ದರೂ ಹೊಸದಾಗಿ ಬಿಡುಗಡೆಯಾಗಿರುವ ಮಹೀಂದ್ರಾದ ಎಕ್ಸ್ ಯುವಿ300 ಮತ್ತು ಹ್ಯುಂಡೈ ವೆನ್ಯೂ ವಾಹನಗಳತ್ತ ಜನರು ಹೆಚ್ಚು ಆಕರ್ಷಿತರಾಗುತ್ತಿದ್ದಾರೆ.

ಬಹಿರಂಗಗೊಂಡ ಫೋರ್ಡ್ ಇಕೋಸ್ಪೋರ್ಟ್ ಥಂಡರ್ ಎಡಿಷನ್

ಈ ವಾಹನವು ಸಬ್ 4 ಮೀಟರ್ ಎಸ್‍‍ಯು‍‍ವಿ ಸೆಗ್‍‍ಮೆಂಟಿನಲ್ಲಿ, ಮೊದಲ ಸ್ಥಾನದಲ್ಲಿತ್ತು, ಈಗ ಟಾಪ್ 3 ನೇ ಸ್ಥಾನಕ್ಕಿಂತ ಕೆಳಗಿಳಿದಿದೆ. ಗ್ರಾಹಕರನ್ನು ಮತ್ತೆ ತನ್ನತ್ತ ಸೆಳೆಯಲು ಫೋರ್ಡ್ ಕಂಪನಿಯು ಇಕೋಸ್ಪೋರ್ಟ್‍‍ನ ವಿಶೇಷ ಆವೃತ್ತಿಯನ್ನು ಅಭಿವೃದ್ಧಿ ಪಡಿಸುತ್ತಿದ್ದು, ಹೊಸ ಆವೃತ್ತಿಗೆ ಥಂಡರ್ ಎಡಿಷನ್ ಎಂದು ಹೆಸರಿಡಲಾಗಿದೆ. ಯೂಟ್ಯೂಬ್ ಚಾನೆಲ್‍‍ನಲ್ಲಿ ಹೊಸ ವಾಹನದ ಕೆಲ ಚಿತ್ರಗಳನ್ನು ಬಿಡುಗಡೆಗೊಳಿಸಲಾಗಿದೆ.

ಚಿತ್ರದಲ್ಲಿ ಕಾಣುವಂತೆ ಈ ವಾಹನದ ಹೊರಭಾಗದಲ್ಲಿ ಅನೇಕ ಬದಲಾವಣೆಗಳನ್ನು ಮಾಡಲಾಗಿದ್ದು, ಮೊದಲಿಗಿಂತ ಹೆಚ್ಚು ಆಕರ್ಷಕವಾಗಿ ಕಾಣುವಂತೆ ತಯಾರಿಸಲಾಗಿದೆ. ಹೆಡ್‍‍ಲ್ಯಾಂಪ್ ಮತ್ತು ಗ್ರಿಲ್ ಗಳ ಸುತ್ತಲೂ ಕಪ್ಪು ಬಣ್ಣವಿದ್ದು, ಬಂಪರ್ ಹೊಸ ವಿನ್ಯಾಸವನ್ನು ಹೊಂದಿದೆ.

ಬಹಿರಂಗಗೊಂಡ ಫೋರ್ಡ್ ಇಕೋಸ್ಪೋರ್ಟ್ ಥಂಡರ್ ಎಡಿಷನ್

ರೂಫ್ ರೇಲ್, ವಿಂಗ್ ಮಿರರ್ ಮತ್ತು ಬಿ ಪಿಲ್ಲರ್‍‍ಗಳೂ ಸಹ ಕಪ್ಪು ಬಣ್ಣವನ್ನು ಹೊಂದಿವೆ. ಬಾನೆಟ್ ನ ಮೇಲೆ ಕಪ್ಪು ಬಣ್ಣದ ಸ್ಟಿಕ್ಕರ್ ಅಳವಡಿಸಲಾಗಿದೆ. ರೂಫ್ ಮೇಲೆಯೂ ಕಪ್ಪು ಬಣ್ಣವಿದೆ. ವಾಹನದ ಪಕ್ಕದಲ್ಲಿಯೂ ಸಹ ಕಪ್ಪು ಬಣ್ಣದ ಸ್ಟಿಕ್ಕರ್‍‍ಗಳಿದ್ದು, ಕ್ಲಾಡಿಂಗ್ ಕಪ್ಪು ಬಣ್ಣವನ್ನು ಹೊಂದಿದ್ದು, ಕೆಳ ಭಾಗದಿಂದ ಬಂಪರ್‍‍ಗಳನ್ನು ಹಾಗೂ ವಾಹನದ ಪಕ್ಕ ಸುತ್ತುವರೆದಿದೆ.

ಬಹಿರಂಗಗೊಂಡ ಫೋರ್ಡ್ ಇಕೋಸ್ಪೋರ್ಟ್ ಥಂಡರ್ ಎಡಿಷನ್

ಹೊಸ ಥಂಡರ್ ಎಡಿಷನ್ ಇಕೋಸ್ಪೋರ್ಟಿನಲ್ಲಿರುವ ಅಲಾಯ್ ವ್ಹೀಲ್‍‍ಗಳು ಕಪ್ಪು ಬಣ್ಣವನ್ನು ಹೊಂದಿವೆ. ಹಿಂಭಾಗದಲ್ಲಿ ಮುದ್ರಿಸಲಾಗಿರುವ ಥಂಡರ್ ಸ್ಟಿಕ್ಕರ್ ಅನ್ನು ಅಂಟಿಸಲಾಗಿದೆ. ಈಗಿರುವ ಇಕೋಸ್ಪೋರ್ಟ್ ಮಾದರಿಗಳಿಗಿಂತ ಹೆಚ್ಚು ಹುರುಪನ್ನು ಹೊಂದಿದೆ. ಇಂಟಿರಿಯರ್‍‍ನಲ್ಲಿ ಹೆಚ್ಚಿನ ಬದಲಾವಣೆಗಳಾಗಿಲ್ಲ. ಆದರೆ ಅಪ್‍‍ಹೋಲ್‍‍ಸ್ಟರಿ ಮತ್ತು ಡ್ಯಾಶ್‍‍ಬೋರ್ಡ್‍‍ಗಳ ಮೇಲೆ ಥಂಡರ್ ಬ್ರಾಂಡ್ ಎಂದು ನಮೂದಿಸಲಾಗುವುದು. ಉಪಕರಣಗಳಲ್ಲಿ ಹಾಗೂ ಫೀಚರ್‍‍ಗಳಲ್ಲಿ ಯಾವುದೇ ಬದಲಾವಣೆಗಳಾಗುವ ಸಾಧ್ಯತೆಗಳಿಲ್ಲ.

ಬಹಿರಂಗಗೊಂಡ ಫೋರ್ಡ್ ಇಕೋಸ್ಪೋರ್ಟ್ ಥಂಡರ್ ಎಡಿಷನ್

ಹೊಸ ಆವೃತ್ತಿಯ ಥಂಡರ್ ಎಡಿಷನ್ ವಾಹನವು, ಈಗಿರುವ ಟಿಟಾನಿಯಂ ಮಾದರಿಯನ್ನೆ ಹೋಲುವಂತಿದ್ದು, ಅದರಲ್ಲಿರುವ 1.5 ಲೀಟರಿನ ಟಿ‍‍ಡಿ‍‍ಸಿ‍ಐ 4 ಸಿಲಿಂಡರ್ ಇನ್‍‍ಲೈನ್ ಡಿ‍ಒ‍‍ಹೆಚ್‍‍ಸಿ ಡೀಸೆಲ್ ಎಂಜಿನ್ ಹೊಂದಿರಲಿದೆ. ಈ ಎಂಜಿನ್ 99 ಬಿ‍‍ಹೆಚ್‍‍ಪಿ ಪವರ್ ಅನ್ನು 3,750 ಆರ್‍‍ಪಿ‍ಎಂ ನಲ್ಲಿ ಮತ್ತು 205 ಎನ್‍ಎಂ ಟಾರ್ಕ್ ಅನ್ನು 1,750 ಆರ್‍‍ಪಿ‍ಎಂ ನಲ್ಲಿ ಬಿಡುಗಡೆಗೊಳಿಸಲಿದೆ. ಇದರಲ್ಲಿ 5 ಸ್ಪೀಡಿನ ಮ್ಯಾನುಯಲ್ ಟ್ರಾನ್ಸ್ ಮಿಷನ್ ಅಳವಡಿಸಲಾಗಿದ್ದು, ಪ್ರತಿ ಲೀಟರಿಗೆ 23 ಕಿ.ಮೀ ಮೈಲೇಜ್ ನೀಡಲಿದೆ.

MOST READ: ಫಾರ್ಮುಲಾ ಒನ್ ದಂತಕಥೆ ನಿಕಿ ಲೌಡಾ ಇನ್ನು ನೆನಪು ಮಾತ್ರ

ಬಹಿರಂಗಗೊಂಡ ಫೋರ್ಡ್ ಇಕೋಸ್ಪೋರ್ಟ್ ಥಂಡರ್ ಎಡಿಷನ್

ಹೊಸ ಫೋರ್ಡ್ ಇಕೋ ಸ್ಪೋರ್ಟ್ ಥಂಡರ್ ಎಡಿಷನ್ ವಾಹನದ ಬೆಲೆಯು ಭಾರತದಲ್ಲಿನ ಎಕ್ಸ್ ಶೋರೂಂ ದರದಂತೆ ರೂ.11.5 ಲಕ್ಷಗಳಾಗಿರಲಿದ್ದು, ಬೆಲೆಯು ಈಗಿರುವ ಟಿಟಾನಿಯಂ ಮಾದರಿಗಿಂತ ತುಸು ಹೆಚ್ಚಿರಲಿದೆ. ಇನ್ನು ಇಕೋಸ್ಪೋರ್ಟಿನ ಭವಿಷ್ಯದ ಬಗ್ಗೆ ಹೇಳುವುದಾದರೆ, ಫೋರ್ಡ್ ಕಂಪನಿಯು ಈಗಿರುವ ಇಕೋಸ್ಪೋರ್ಟಿನ ಬದಲಿಗೆ ಹೊಸ ವಾಹನವನ್ನು ಅಭಿವೃದ್ಧಿಪಡಿಸುತ್ತಿದ್ದು, ಹೊಸ ವಾಹನವು ಯೂರೋ ನಲ್ಲಿರುವ ಫೋರ್ಡ್ ಫಿಯೆಸ್ತಾ ಪ್ಲಾಟ್‍‍ಫಾರಂ ಮೇಲೆ ಆಧಾರಿತವಾಗಿದೆ. ಆದರೆ ಬಿಡುಗಡೆಯಾಗುವವರೆಗೆ ಯಾವುದು ಖಚಿತವಾಗಿಲ್ಲ. ಭಾರತದಲ್ಲಿ ಈ ವಾಹನವು 2020ರ ನಂತರ ಬಿಡುಗಡೆಯಾಗುವ ಸಾಧ್ಯತೆಗಳಿವೆ.

ಬಹಿರಂಗಗೊಂಡ ಫೋರ್ಡ್ ಇಕೋಸ್ಪೋರ್ಟ್ ಥಂಡರ್ ಎಡಿಷನ್

ಹೊಸ ಇಕೋ ಸ್ಪೋರ್ಟ್ ಥಂಡರ್ ಎಡಿಷನ್ ಆವೃತ್ತಿಯು ಮುಂದಿನ ತಿಂಗಳು ಬಿಡುಗಡೆಯಾಗುವ ನಿರೀಕ್ಷೆಯಿದೆ. ಹ್ಯುಂಡೈ ಕಂಪನಿಯ ವೆನ್ಯೂ ವಾಹನದ ಬೆಲೆಯು ಸ್ಪರ್ಧಾತ್ಮಕ ದರಗಳಲ್ಲಿರುವ ಕಾರಣ ಇಕೋಸ್ಪೋರ್ಟ್ ವಾಹನದ ಬೆಲೆಯು ಎಷ್ಟಿರಲಿದೆ ಎಂಬುದರ ಬಗ್ಗೆ ಕುತೂಹಲವಿದೆ.

More from DriveSpark

Article Published On: Wednesday, May 22, 2019, 12:47 [IST]
English summary
Ford Ecosport Thunder Edition spied: India launch to happen soon - Read in kannada
Read more on ಫೋರ್ಡ್ ford
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+