ಹ್ಯುಂಡೈ ಸ್ಯಾಂಟ್ರೋ ಗುದ್ದಿದ ರಭಸಕ್ಕೆ ಪಲ್ಟಿ ಹೊಡೆದ ಫೋರ್ಡ್ ಎಂಡೀವರ್

ಎಸ್‍ಯುವಿ ಕಾರುಗಳಲ್ಲಿ ಸಂಚಾರ ಎಷ್ಟು ಮನರಂಜನೆ ನೀಡುತ್ತದೆಯೊ ಕೆಲವೊಮ್ಮೆ ಅದು ಅಷ್ಟೆ ಅಪಾಯಕಾರಿ ಅಂತಾನೂ ಹೇಳ್ಬೋದು. ರಸ್ತೆಗಳಲ್ಲಿ ಕೇವಲ ಈ ವಾಹನಗಳೇ ಅಲ್ಲ ಗಮನವಿಟ್ಟು ವಾಹನ ಚಾಲನೆ ಮಾಡದೆ ಇದ್ದಲ್ಲಿ ಅಪಘಾತಗಳು ಸಂಭವಿಸುವುದು ಖಚಿತ. ಇದಕ್ಕೆ ಹಲವಾರು ನಿದರ್ಶನಗಳನ್ನು ನಾವು ಹಲವಾರು ಬಾರಿ ಕಂಡಿದ್ದೇವೆ. ಮತ್ತು ನಮದೂ ಸಹ ಅಂತಹ ಅನಾಹುತಗಳಾಗಿದ್ದು, ಅವುಗಳಿಂದ ಪಾರಾಗಿರುತ್ತೇವೆ.

ಹ್ಯುಂಡೈ ಸ್ಯಾಂಟ್ರೋ ಗುದ್ದಿದ ರಭಸಕ್ಕೆ ಪಲ್ಟಿ ಹೊಡೆದ ಫೋರ್ಡ್ ಎಂಡೀವರ್

ಎಸ್‍ಯುವಿ ಕಾರುಗಳು ಸಧ್ಯಕ್ಕೆ ದೇಶಿಯ ಮಾರುಕಟ್ಟೆಯಲ್ಲಿ ಕಾರುಗಳಿಗೆ ಬೇಡಿಕೆಯು ಹೆಚ್ಚುತ್ತಿದ್ದು, ಕುಟುಂಬದ ಹೊರಸಂಚಾರಕ್ಕೆ ಹೋಗಲು ಎಂಪಿವಿ ಕಾರಿಗಿಂತಲೂ ಅಧಿಕ ಆಸನಗಳುಳ್ಳ ಎಸ್‍ಯುವಿ ಕಾರುಗಳನ್ನೆ ಗ್ರಾಹಕರು ಖರೀದಿ ಮಾಡುತ್ತಿದ್ದಾರೆ. ಖರೀದಿ ಮಾಡುವ ಮೊದಲು ಅವುಗಳ ಉತ್ಪಾದನೆಯ ಗುಣಮಟ್ಟ ಹಾಗು ಎಷ್ಟು ಬಗೆಯ ಸುರಕ್ಷಾ ಸಾಧನಗಳಿವೆ ಎಂಬುದನ್ನು ಸಹ ನಾವು ಅರಿಯಬೇಕು. ಏಕೆಂದರೆ ಮೇಲೆ ಹೇಳಿರುವ ಹಾಗೆ ಇದರಲ್ಲಿ ಹಲವಾರು ಮಂದಿ ಸಂಚರಿಸುವ ಕಾರಣ ಉತ್ತಮ ಗುಣಮಟ್ಟದ ಎಸ್‍ಯುವಿ ಕಾರನ್ನೆ ನಾವು ಆಯ್ಕೆ ಮಾಡಿಕೊಳ್ಳಬೇಕು.

ಹ್ಯುಂಡೈ ಸ್ಯಾಂಟ್ರೋ ಗುದ್ದಿದ ರಭಸಕ್ಕೆ ಪಲ್ಟಿ ಹೊಡೆದ ಫೋರ್ಡ್ ಎಂಡೀವರ್

ನಾವು ನಿಮಗಿಂದು ಈ ಲೇಖನದಲ್ಲಿ ಸಾಧಾರಣ ಹ್ಯಾಚ್‍ಬ್ಯಾಕ್ ಕಾರು ಗುದ್ದಿದ ರಭಸಕ್ಕೆ ಒಂದು ಐಷಾರಾಮಿ ಎಸ್‍ಯುವಿ ಕಾರಿನ ಪರಿಸ್ಥಿತಿ ಏನಾಗಿರಬಹುದು ಎಂಬ ಮಾಹಿತಿ ನೀಡಲಿದ್ದೇವೆ. ಇದು ಅಚ್ಚರಿಯಾದ ವಿಷಯವೇ ಆದರೂ, ಈ ಎರಡೂ ವಾಹನಗಳು ತಮ್ಮ ಸೆಗ್ಮೆಂಟ್‍ನಲ್ಲಿ ಉತ್ತಮವಾದ ಪ್ರದರ್ಷನವನ್ನು ನೀಡುತ್ತವೆ. ಸಿಸಿಟಿವಿಗಳು ಇದೀಗ ಎಲ್ಲೆಲ್ಲು ಅಳವಡಿಸಿರುವ ಕಾರಣದಿಂದ ರಸ್ತೆಗಳಲ್ಲಿ ಆಗುತ್ತಿರುವ ವಿಷಯಗಳನ್ನು ನಾವು ಅರಿಯಬಹುದಾಗಿದೆ.

ಹ್ಯುಂಡೈ ಸ್ಯಾಂಟ್ರೋ ಗುದ್ದಿದ ರಭಸಕ್ಕೆ ಪಲ್ಟಿ ಹೊಡೆದ ಫೋರ್ಡ್ ಎಂಡೀವರ್

ಅಂಗಡಿಗಳು ಅಥವಾ ದೊಡ್ಡ ದೊಡ್ಡ ಮನೆಗಳ ಹೊರಭಾಗದಲ್ಲಿ ಅಳವಡಿಸುತ್ತಿರುವ ಸಿಸಿಟಿವಿಗಳ ಸಹಾಯದಿಂದ ಆಗುತ್ತಿರುವ ಅಪಘಾತಗಳ ಬಗ್ಗೆ ನಮಗೆ ಮಾಹಿತಿಗಳು ತಿಳಿದು ಬರುತ್ತಿವೆ. ವಿಚಾರ ಏನಪ್ಪಾ ಅಂದರೆ ರಸ್ತೆ ಯೂಟರ್ನ್‍ ತೆಗೆದುಕೊಳ್ಳಲು ಅಥವಾ ಮಾರ್ಗ ಬದಲಿಸಲು ಟರ್ನ್ ತೆಗೆದುಕೊಳ್ಳಲಿದ್ದ ಫೋರ್ಡ್ ಎಂಡೀವರ್ ಕಾರನ್ನು ಅತಿ ವೇಗದಲ್ಲಿ ಬರುತ್ತಿದ್ದ ಹಿಂದಿನ ತಲೆಮಾರಿನ ಹ್ಯುಂಡೈ ಸ್ಯಾಂಟ್ರೋ ಗುದ್ದಿದೆ.

ಹ್ಯುಂಡೈ ಸ್ಯಾಂಟ್ರೋ ಗುದ್ದಿದ ರಭಸಕ್ಕೆ ಪಲ್ಟಿ ಹೊಡೆದ ಫೋರ್ಡ್ ಎಂಡೀವರ್

ಹಿಂದಿನ ತಲೆಮಾರಿನ ಹ್ಯುಂಡೈ ಸ್ಯಾಂಟ್ರೋ ಹ್ಯಾಚ್‍ಬ್ಯಾಕ್ ಕಾರು ವೇಗದಲ್ಲಿ ಬಂದ ಕಾರಣ ಬ್ರೇಕ್ ಹಾಕಿದರೂ ಸಹ ನಿಯಂತ್ರಣ ತಪ್ಪಿ ಟರ್ನ್ ಮಾಡಿಕೊಳ್ಳುತ್ತಿದ್ದ ಫೋರ್ಡ್ ಎಂಡೀವರ್ ಎಸ್‍ಯುವಿ ಕಾರಿಗೆ ಗುದ್ದಿದ್ದು, ಸ್ಯಾಂಟ್ರೋ ಗುದ್ದಿದ ರಭಸಕ್ಕೆ ಫೋರ್ಡ್ ಎಂಡೀವರ್ ಕಾರು ಪಲ್ಟಿ ಹೊಡೆದಿರುವ ದೃಷ್ಯವನ್ನು ನೀವು ವಿಡಿಯೋನಲ್ಲಿ ಕಾಣಬಹುದಾಗಿದೆ.

ಹ್ಯುಂಡೈ ಸ್ಯಾಂಟ್ರೋ ಗುದ್ದಿದ ರಭಸಕ್ಕೆ ಪಲ್ಟಿ ಹೊಡೆದ ಫೋರ್ಡ್ ಎಂಡೀವರ್

ಸಿಸಿಟಿವಿಯಲ್ಲಿ ಸೆರೆಯಾದ ಈ ವಿಡಿಯೋ ಒಂದು ಪಾರ್ಕಿಂಗ್ ಯಾರ್ಡ್‍ನದಾಗಿದ್ದು, ಸ್ಯಾಂಟ್ರೋ ಎಂಡೀವರ್ ಕಾರಿಗೆ ಗುದ್ದಿದ ನಂತರ ಎಂಡೀವರ್ ಕಾರಿನ ರಿಯರ್ ಟೈರ್ ಗ್ರಿಪ್ ಸೆಳೆದಿದ್ದು, ಸಸ್ಪೆನ್ಷನ್ ಸಂಪೂರ್ಣವಾಗಿ ಕಂಪ್ರೆಸ್ ಮಾಡಲಾಗಿದೆ. ಗುದ್ದಿದ ಸ್ಯಾಂಟ್ರೋ ಕಾರಿಗೂ ಕೂಡಾ ಮುಂಭಾಗವು ಡ್ಯಾಮೇಜ್ ಆಗಿದ್ದು, ಅದು ಕೂಡಾ ಇನ್ನೇನು ತನ್ನ ಮುಂಭಾಗದಲ್ಲಿದ್ದ ಮಾರುತಿ ಸುಜುಕಿ ಡಿಜೈರ್ ಕಾರನ್ನು ಗುದ್ದುತ್ತಿತ್ತು.

ಅದೃಷ್ಟವಶಾತ್ ಎರಡೂ ಕಾರಿನಲ್ಲಿದ್ದ ಪ್ರಯಾಣಿಕರಿಗೆ ದೊಡ್ಡ ಪ್ರಮಾಣದಲ್ಲಿ ಗಾಯಗಳಾಗಲಿಲ್ಲ ಎಂದು ಹೆಳಲಾಗಿದ್ದು, ಎರಡೂ ಕಾರುಗಳ ಉತ್ತಮ ಗುಣಮಟ್ಟವೇ ಇದಕ್ಕೆ ಕಾರಣವಾಗಿದೆ. ಫೋರ್ಡ್ ಎಂಡೀವರ್ ಮಾರುಕಟ್ಟೆಯಲ್ಲಿ ಟೊಯೊಟಾ ಫಾರ್ಚ್ಯೂನಾರ್ ಕಾರುಗಳಿಗೆ ಪೈಪೋಟಿ ನೀಡಿತ್ತಿದ್ದು, ಇನ್ನು ಹೊಸ ತಲೆಮಾರಿನ ಹ್ಯುಂಡೈ ಸ್ಯಾಂಟ್ರೋ ಕಾರು ಮಾರುತಿ ಸುಜುಕಿ ವ್ಯಾಗನ್ ಆರ್ ಕಾರುಗಳಿಗೆ ಪೈಪೋಟಿ ನೀಡುತ್ತಿದೆ.

ಹ್ಯುಂಡೈ ಸ್ಯಾಂಟ್ರೋ ಗುದ್ದಿದ ರಭಸಕ್ಕೆ ಪಲ್ಟಿ ಹೊಡೆದ ಫೋರ್ಡ್ ಎಂಡೀವರ್

ಈ ಘಟನೆಯ ಬಗ್ಗೆ ನಾವೆಲ್ಲರೂ ತಿಳಿಯಬೇಕಾದ ವಿಷಯವೇನೆಂದರೆ ರಸ್ತೆಯಲ್ಲಿ ವಾಹನ ಸಂಚಾರ ಮಾಡುವಾಗಿ ಗಮನವಿಟ್ತು ಮಾಡಬೇಕು. ಇಲ್ಲವಾದಲ್ಲಿ ಯಾರೊಬ್ಬ ಚಾಲಕನು ನಿಯಂತ್ರಣ ತಪ್ಪಿದರೆ ತಮಗೂ ಮತ್ತು ರಸ್ತೆಯಲ್ಲಿ ಸಂಚರಿಸುತ್ತಿರುವ ಇನ್ನಿತರೆ ವಾಹನಗಳಿಗೂ ಅಪಾಯ ತಪ್ಪಿದ್ದಲ್ಲ. ರಸ್ತೆಯಲ್ಲಿ ತಿರುವುಗಳನ್ನು ತೆಗೆದುಕೊಳ್ಳುವಾಗ ಅಕ್ಕಪಕ್ಕ ಗಮನಿಸಿ ಮತ್ತು ಅತೀ ವೇಗದಲ್ಲಿ ಡ್ರೈವಿಂಗ್ ಮಾಡಬೇಡಿ ಮತ್ತು ನೀವು ಬೇರೆಯವರ ವಾಹನದಲ್ಲಿ ಸಂಚಾರ ಮಾಡುವಾದ ಚಾಲಕನಿಗೂ ಸಹ ತಿಳಿಸಿ.

ಹ್ಯುಂಡೈ ಸ್ಯಾಂಟ್ರೋ ಗುದ್ದಿದ ರಭಸಕ್ಕೆ ಪಲ್ಟಿ ಹೊಡೆದ ಫೋರ್ಡ್ ಎಂಡೀವರ್

ಹ್ಯುಂಡೈ ಸ್ಯಾಂಟ್ರೋ ಸೇಫ್ಟಿ ಫೀಚರ್ಸ್

ಆರಂಭಿಕ ಮಾದರಿಯಾದ ಹ್ಯುಂಡೈ ಡಿಲೈಟ್ ಆವೃತ್ತಿಯು ಈ ಬಾರಿ ಎಸಿ ಸೌಲಭ್ಯವನ್ನು ಪಡೆದುಕೊಂಡಿರುವುದಲ್ಲದೇ ಬಾಡಿ ಕಲರ್ ಫ್ರಂಟ್ ಬಂಪರ್, ಡ್ಯುಯಲ್ ಟೋನ್ ರಿಯರ್ ಬಂಪರ್ ಮತ್ತು ಮುಂಭಾಗದಲ್ಲಿ ಪವರ್ ವಿಂಡೋ ಸೌಲಭ್ಯವನ್ನು ಪಡೆದಿದೆ. ಹಾಗೆಯೇ ಮ್ಯಾಗ್ನಾ ಪೆಟ್ರೋಲ್ ಮತ್ತು ಸಿಎನ್‌ಜಿ ಆವೃತ್ತಿಯಲ್ಲಿ ಫ್ರಂಟ್ ಡೋರ್ ಸ್ಪೀಕರ್ಸ್ ವೈಶಿಷ್ಟ್ಯತೆಯ ಹೊಸ ಮ್ಯೂಸಿಕ್ ಸಿಸ್ಟಂ ಜೋಡಣೆ ಮಾಡಲಾಗಿದ್ದು, ಸ್ಟೀರಿಂಗ್ ಮೌಂಟೆಡ್ ಕಂಟ್ರೋಲ್ ಸೌಲಭ್ಯವನ್ನು ಜೋಡಣೆ ಮಾಡಲಾಗಿದೆ. ಇದರಲ್ಲಿ ಸ್ಪೋರ್ಟ್ಜ್ ಪ್ಲಸ್ ಮಾದರಿ ಕೂಡಾ ಸಹ ಪ್ರಯಾಣಿಕರ ವಿಭಾಗದ ಏರ್‌ಬ್ಯಾಗ್, ರಿಯಲ್ ವ್ಯೂ ಕ್ಯಾಮೆರಾ ಮತ್ತು ಸೀಟ್ ಬೆಲ್ಟ್ ರಿಮೆಂಡರ್ ಸೌಲಭ್ಯ ಪಡೆದಿದೆ.

ಹ್ಯುಂಡೈ ಸ್ಯಾಂಟ್ರೋ ಗುದ್ದಿದ ರಭಸಕ್ಕೆ ಪಲ್ಟಿ ಹೊಡೆದ ಫೋರ್ಡ್ ಎಂಡೀವರ್

ಫೋರ್ಡ್ ಎಂಡೀವರ್ ಸೇಫ್ಟಿ ಫೀಚರ್ಸ್

ಇನ್ನು ಫೋರ್ಡ್ ಎಂಡೀವರ್ ಕಾರಿನಲ್ಲಿ ಪ್ರಯಾಣಿಕರ ಸುರಕ್ಷತೆಯ ಅನುಸಾರ ಎಬಿಎಸ್, ಇಬಿಡಿ, ಚಾಲಕ ಮತ್ತು ಮುಂಭಾಗದ ಪ್ಯಾಸೆಂಜರ್‍‍ಗೆ ಡ್ಯುಯಲ್ ಏರ್‍‍ಬ್ಯಾಗ್ಸ್. ಎಂಜಿನ್ ಇಮ್ಮೊಬಿಲೈಜರ್, ರಿಮೋಟ್ ಕೀಲೆಸ್ ಎಂಟ್ರಿ, ಕೊಲಾಪ್ಸಿಬಲ್ ಸ್ಟೀರಿಂಗ್ ಕಾಲಮ್ನ್, ಸೆಂಟ್ರಲ್ ಲಾಕಿಂಗ್, ಬ್ರೇಕ್ ಅಸಿಸ್ಟ್ ಮತ್ತು ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ ಎಂಬ ಸುರಕ್ಷಾ ಸಾಧನಗಳನ್ನು ನೀಡಲಾಗಿದೆ.

More from DriveSpark

Article Published On: Monday, June 24, 2019, 17:25 [IST]
English summary
Ford Endeavour SUV Rolled Over In An Accident With Hyundai Santro Hatchback. Read In Kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+