ಅಪಘಾತಕ್ಕೀಡಾದ 80 ಲಕ್ಷ ಬೆಲೆಬಾಳುವ ಐಷಾರಾಮಿ ಕಾರು

ಮುಂಗಾರು ಶುರುವಾಯಿತು ದೇಶದಲ್ಲಿರುವ ಹಲವಾರು ಪ್ರಾಂತ್ಯದಲ್ಲಿ ಭಾರೀ ಮಳೆ ಸುರಿಯುತ್ತಿದೆ. ಇಂತಹ ವೇಳೆ ವಾಹನ ಚಾಲನೆಯು ಬಹಳ ಕಷ್ಟ. ಸ್ವಲ್ಪ ನಿಯಂತ್ರಣ ತಪ್ಪಿದರೂ ಸಹ ಅಪಾಘಾತವಾಗುವ ಸಾಧ್ಯತೆಗಳು ಬಹಳಷ್ಟಿದೆ. ಇಂತಹ ಘಟನೆಯು ಅಸ್ಸಾಮ್ ಹತ್ತಿರ ನಡೆದಿದ್ದು, ಸಧ್ಯ ಅಪಾಘಾತದಲ್ಲಿ ಪ್ರಯಾಣಿಕರಿಗೆ ಯಾವುದೇ ಹಾನಿಯಾಗಿಲ್ಲವೆಂದು ತಿಳಿದು ಬಂದಿದೆ.

ಅಪಘಾತಕ್ಕೀಡಾದ 80 ಲಕ್ಷ ಬೆಲೆಬಾಳುವ ಐಷಾರಾಮಿ ಕಾರು

ಫೋರ್ಡ್ ಮಸ್ಟಾಂಗ್ ಇದು ಸಧ್ಯ ಮಾರುಕಟ್ಟೆಯಲ್ಲಿ ದೊರೆಯುತ್ತಿರುವ ಐಷಾರಾಮಿ ಸ್ಪೋರ್ಟ್ ಕಾರುಗಳಲ್ಲಿ ಒಂದು. ಈ ಕಾರು ರೂ. 80 ಲಕ್ಷದ ಆನ್ ರೋಡ್ ಬೆಲೆಯನ್ನು ಪಡೆದುಕೊಂಡಿದ್ದು, ಅಸ್ಸಾಮ್‍‍ನಲ್ಲಿ ಖರೀದಿಸಲಾದ ಮೊದಲ ಕಾರು ಅಪಾಘಾತಕ್ಕೀಡಾಗಿದೆ. ಹೊಸ ಫೋರ್ಡ್ ಮಸ್ಟಾಂಗ್ ಕಾರಿನ ಮಾಲೀಕನು ಅಸ್ಸಾಮ್‍ನ ಸುತ್ತಮುತ್ತಲೂ ಫೋರ್ಡ್ ಡೀಲರ್‍‍ಗಳು ಇಲ್ಲವಾದ ಕಾರಣ ಇದನ್ನು ಉತ್ತರ ಪ್ರದೇಶದ ನೋಯ್ಡಾನಲ್ಲಿರುವ ಗೌಥಮ್ ಬುಧ್ ಎಂಬ ಡೀಲರ್‍‍ನ ಬಳಿ ಖರೀದಿ ಮಾಡಿದ್ದರು.

ಅಪಘಾತಕ್ಕೀಡಾದ 80 ಲಕ್ಷ ಬೆಲೆಬಾಳುವ ಐಷಾರಾಮಿ ಕಾರು

ಅಪಘಾತಕ್ಕೀಡಾದ ಫೋರ್ಡ್ ಮಸ್ಟಾಂಗ್ ಕುರಿತಾಗಿ ಗುವಾಹಟಿಗೆ ಸಂಬಂದಿಸಿದ ಮಾಧ್ಯಮದವರು ಈ ಕಾರಿನ ದೃಶ್ಯವನ್ನು ಒಂದು ತಿಂಗಳ ಹಿಂದೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು. ಈ ಕಾರು ಎಷ್ಟರ ಮಟ್ಟಿಗೆ ಫೇಮಸ್ ಆಗಿತ್ತು ಎಂದರೆ ಸ್ಥಳದಲ್ಲಿದ್ದ ಈ ಕಾರಿನ ಅಭಿಮಾನಿಗಳೆಲ್ಲರು ಈ ಕಾರನ್ನು ಗುರುತಿಸುವ ಫೋಟೊಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಲು ಆರಂಭಿಸಿದರು.

ಅಪಘಾತಕ್ಕೀಡಾದ 80 ಲಕ್ಷ ಬೆಲೆಬಾಳುವ ಐಷಾರಾಮಿ ಕಾರು

ದುರಾದೃಷ್ಠವಶಾತ್ ವಾರದ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡಿದ ಅಸ್ಸಾಮ್‍ನ ಮೊದಲ ಫೋರ್ಡ್ ಮಸ್ಟಾಂಗ್ ಐಷಾರಾಮಿ ಸ್ಪೋರ್ಟ್ ಕಾರು ಮೇಘಾಲಾಯದ ಸಮೀಪದಲ್ಲಿ ಅಪಘಾತಕ್ಕೀಡಾಗಿದೆ. ಆ ಹೊಸ ಫೋರ್ಡ್ ಮಸ್ಟಾಂಗ್ ಕಾರು ಇನ್ನು ಟೆಂಪ್ರವರಿ ನೋಂದಣಿ ಸಂಖ್ಯೆ ಫಲಕವನ್ನು ಹೊಂದಿತ್ತು.

ಅಪಘಾತಕ್ಕೀಡಾದ 80 ಲಕ್ಷ ಬೆಲೆಬಾಳುವ ಐಷಾರಾಮಿ ಕಾರು

ಶಿಲ್ಲಂಗ್‍‍ನಿಂದ ಕೊಂಚ ದೂರದಲ್ಲಿ ಈ ಅಪಘಾತವು ಸಂಭವಿಸಿದ್ದು, ಟ್ರಾಕ್ಷನ್ ನಿಯಂತ್ರಣ ತಪ್ಪಿದ ಕಾರಣ ಅಪಘಾತ ಸಂಭವಿಸಿದೆ ಎನ್ನಲಾಗಿದ್ದು, ಕಾರಿನಲ್ಲಿದ್ದ ಪ್ರಯಾಣಿಕರು ಸುರಕ್ಷತವಾಗಿ ಹೊರಬಿದ್ದಿದ್ದಾರೆ. ನಂತರ ಕಾರನ್ನು ಟೋವಿಂಗ್ ಸಹಾಯದಿಂದ ಸರಿಸಲಾದ ಚಿತ್ರಗಳನ್ನು ಶಿಲಾಂಗ್ ಗ್ಯಾಗ್ ಎಂಬ ಫೇಸ್‍ಬುಕ್ ಪೇಜ್‍‍ರವರು ಪೋಸ್ಟ್ ಮಾಡಿದ್ದಾರೆ.

ಅಪಘಾತಕ್ಕೀಡಾದ 80 ಲಕ್ಷ ಬೆಲೆಬಾಳುವ ಐಷಾರಾಮಿ ಕಾರು

ಹೋಂಡಾ ಸಿಟಿ ಮತ್ತು ಮಾರುತಿ ಸುಜುಕಿ ಸಿಯಾಜ್‌ಗೆ ಟಕ್ಕರ್ ನೀಡುತ್ತಿರುವ ಟೊಯೊಟಾ ಯಾರಿಸ್ ಖರೀದಿಗೆ ಈಗಲೇ ಟೆಸ್ಟ್ ಡ್ರೈವ್ ಮಾಡಿ..!

ಫೋರ್ಡ್ ಮಸ್ಟಾಂಗ್ ಒಂದು ಸ್ಪೋರ್ಟ್ ಕಾರ ಆದುದರಿಂದ ಬಹು ಜಾಗರೂಕತೆಯಿಂದ ಇದನ್ನು ಡ್ರೈವಿಂಗ್ ಮಾಡಬೇಕಾಗುತ್ತದೆ ಅದರಲ್ಲಿಯು ಮಳೆ ಮತ್ತು ಘಾಟಿ ರಸ್ತೆಯಲ್ಲಿ ಅತೀ ವೇಗದಲ್ಲಿ ಇಂತಹ ಕಾರುಗಳನ್ನು ಚಾಲವಣೆ ಮಾಡುವುದು ಅಷ್ಟು ಉತ್ತಮವಲ್ಲ. ಏಕೆಂದರೆ ಸ್ವಲ್ಪಾ ನಿಯಂತ್ರಣ ತಪ್ಪಿದರೂ ಸಹ ಕಾರಿನಲ್ಲಿರುವ ಎಲ್ಲರಿಗೂ ಅಪಾಯ ತಪ್ಪಿದ್ದಲ್ಲ.

ಅಪಘಾತಕ್ಕೀಡಾದ 80 ಲಕ್ಷ ಬೆಲೆಬಾಳುವ ಐಷಾರಾಮಿ ಕಾರು

ಮಳೆಗಾಲದಲ್ಲಿ ಘಾಟ್ ರಸ್ತೆಯಲ್ಲಿ ಸುರಕ್ಷಿತ ಚಾಲನೆಗಾಗಿ ಅಮೂಲ್ಯ ಟಿಪ್ಸ್..

01. ನಿಧಾನವೇ ಪ್ರಧಾನ

ಇದು ಕೇವಲ ಘಾಟಿ ರಸ್ತೆಗೆ ಮಾತ್ರ ಸೀಮಿತವಲ್ಲ. ನೀವು ಎಲ್ಲೇ ಚಾಲನೆ ಮಾಡುವುದಿದ್ದರೂ ಮುಂಭಾಗದಲ್ಲಿನ ರಸ್ತೆ ಸ್ಪಷ್ಟವಾಗಿ ಗೋಚರಿಸದ ಹೊರತಾಗಿ ವೇಗವನ್ನು ಹೆಚ್ಚಿಸುವ ಗೋಜಿಗೆ ಹೋಗಬಾರದು. ಮಳೆಗಾಲದಂತೂ ಅಮಿತ ವೇಗದಲ್ಲಿ ಸಂಚರಿಸಿದರೆ ಅಪಾಯ ಕಟ್ಟಿಟ್ಟ ಬುತ್ತಿ. ಇನ್ನೊಂದೆಡೆ ಒದ್ದೆಯಾದ ರಸ್ತೆ ಸ್ಕಿಡ್ ಆಗುವ ಸಾಧ್ಯತೆ ಜಾಸ್ತಿಯಾಗಿರುತ್ತದೆ. ಇವೆಲ್ಲದರಿಂದಾಗಿ ವಾಹನಗಳ ನಡುವೆ ಅಂತರ ಕಾಪಾಡಿಕೊಳ್ಳಬೇಕಾಗಿರುವುದು ಅತಿ ಅಗತ್ಯ.

ಅಪಘಾತಕ್ಕೀಡಾದ 80 ಲಕ್ಷ ಬೆಲೆಬಾಳುವ ಐಷಾರಾಮಿ ಕಾರು

02. ಚಕ್ರಗಳನ್ನು ಪರೀಶೀಲಿಸಿ

ಮಳೆಗಾಲ ಆರಂಭವಾಗುವುದಕ್ಕಿಂತಲೂ ಮೊದಲು ಕಾರನ್ನು ಕೂಲಂಕುಷವಾಗಿ ಪರೀಕ್ಷೆಗೆ ಒಳಪಡಿಸಬೇಕಾಗಿರುವುದು ಅತಿ ಅಗತ್ಯ. ಅದರಲ್ಲೂ ನಿಮ್ಮ ಕಾರನ್ನು ರಸ್ತೆಗೆ ನೇರವಾಗಿ ಸಂಪರ್ಕಿಸುವ ಚಕ್ರಗಳ ಸುರಕ್ಷತೆ ಅತಿ ಮುಖ್ಯವಾಗಿರುತ್ತದೆ.

ಅಪಘಾತಕ್ಕೀಡಾದ 80 ಲಕ್ಷ ಬೆಲೆಬಾಳುವ ಐಷಾರಾಮಿ ಕಾರು

03. ವೈಪರ್

ವಾಹನಗಳ ಗಾಜಿನ (ವಿಂಡ್ ಸ್ಕ್ರೀನ್) ಮೇಲಿರುವ ನೀರನ್ನು ಒರೆಸುವ ಸಲಕರಣೆಯಾಗಿರುವ ವೈಪರ್ ಗಳು ಸರಿಯಾಗಿ ಕೆಲಸ ಮಾಡುತ್ತಿದೆಯೇ ಎಂಬುದನ್ನು ಖಾತ್ರಿಪಡಿಸಿಕೊಳ್ಳಿರಿ.

ಅಪಘಾತಕ್ಕೀಡಾದ 80 ಲಕ್ಷ ಬೆಲೆಬಾಳುವ ಐಷಾರಾಮಿ ಕಾರು

04. ಹೆಡ್‍ಲೈಟ್ ಗಳ ಬಳಕೆ

ಜೋರಾಗಿ ಮಳೆ ಸುರಿಯುತ್ತಿದ್ದು, ಹಗಲು ವೇಳೆಯಲ್ಲೂ ಕತ್ತಲು ಆವರಿಸಿದ್ದರೆ ಹೆಡ್ ಲೈಟ್ ಬಳಕೆ ಮಾಡಲು ಮರೆಯದಿರಿ. ಇದರಿಂದಾಗಿ ಮುಂಭಾಗದಿಂದ ಬರುವ ವಾಹನಗಳಿಗೂ ನಿಮ್ಮ ಸಾನಿಧ್ಯದ ಬಗ್ಗೆ ಅರಿವಾಗಲಿದೆ. ಹೆಡ್ ಲೈಟ್ ಪರಿಣಾಮಕಾರಿಯಲ್ಲದಿದ್ದಲ್ಲಿ ಬೇಗನೇ ಬದಲಾಯಿಸುವುದು ಉತ್ತಮ.

ಅಪಘಾತಕ್ಕೀಡಾದ 80 ಲಕ್ಷ ಬೆಲೆಬಾಳುವ ಐಷಾರಾಮಿ ಕಾರು

05. ಗೇರ್ ಬದಲಾವಣೆ

ಸಾಮಾನ್ಯವಾಗಿ ಘಾಟಿ ಪ್ರದೇಶದಲ್ಲಿ ಚಾಲನೆ ಮಾಡುವಾಗ ಸರಿಯಾದ ಗೇರ್ ಬಳಕೆ ಬಗ್ಗೆ ಸ್ಪಷ್ಟ ಜ್ಞಾನ ಹೊಂದಿರಬೇಕಾಗುತ್ತದೆ. ಘಾಟಿ ಪ್ರದೇಶದ ಇಳಿಜಾರಿನಿಂದ ಕೂಡಿರುವ ರಸ್ತೆಯಲ್ಲಿ ಯಾವತ್ತೂ ಸಾಮಾನ್ಯಕ್ಕಿಂತ ಒಂದು ಗೇರ್ ಹೆಚ್ಚಿದ್ದರೆ ಒಳಿತು. ಯಾಕೆಂದರೆ ಇದು ಬ್ರೇಕ್ ಒತ್ತುವ ಪ್ರಯಾಸವನ್ನು ಕಡಿಮೆ ಮಾಡುತ್ತದೆ. ಇಳಿಜಾರಿನಲ್ಲಿ ಯಾವುದೇ ಕಾರಣಕ್ಕೂ ಗಾಡಿ ನ್ಯೂಟ್ರಲ್ ನಲ್ಲಿ ಚಲಾಯಿಸಬೇಡಿರಿ. ಇದರಿಂದಾಗಿ ಬ್ರೇಕ್ ಫೇಲ್ ಅಪಾಯವನ್ನು ಆಹ್ವಾನಿಸಿದಂತಾಗುತ್ತದೆ.

ಅಪಘಾತಕ್ಕೀಡಾದ 80 ಲಕ್ಷ ಬೆಲೆಬಾಳುವ ಐಷಾರಾಮಿ ಕಾರು

06. ತಿರುವುಗಳಲ್ಲಿ ಗೇರ್ ಕಡಿಮೆ ಮಾಡಿ

ಕಡಿದಾದ ತಿರುವುಗಳಲ್ಲಿ ಗೇರ್ ಕಡಿಮೆ ಮಾಡುವುದು (ಮೂರರಿಂದ ಎರಡಕ್ಕೆ) ಅತಿ ಮುಖ್ಯ. ಇದರಿಂದ ಗಾಡಿ ಸಮತೋಲನ ಕಾಪಾಡಿಕೊಳ್ಳಲು ನೆರವಾಗಲಿದೆ. ತಿರುವುಗಳಲ್ಲಿ ವೇಗವಾಗಿ ಬರುವ ಕಾರುಗಳು ಲೇನ್ ತಪ್ಪಿ ಬರುವುದನ್ನು ನೀವು ಗಮನಿಸಿರಬಹುದು. ಇದರಿಂದ ಇಂತಹ ಪರಿಸ್ಥಿತಿಯನ್ನು ತಪ್ಪಿಸಬಹುದು.

ಅಪಘಾತಕ್ಕೀಡಾದ 80 ಲಕ್ಷ ಬೆಲೆಬಾಳುವ ಐಷಾರಾಮಿ ಕಾರು

07. ಹಾರ್ನ್ ಬಳಕೆ

ಕಡಿದಾದ 'ಕುರುಡು' ತಿರುವುಗಳಲ್ಲಿ ಹಾರ್ನ್ ಬಳಕೆಯನ್ನು ಕಡ್ಡಾಯವಾಗಿ ಪಾಲಿಸಿ. ಹಾಗೊಂದು ವೇಳೆ ಮುಂಭಾಗದಲ್ಲಿ ಬರುವ ವಾಹನಗಳು ಹಾರ್ನ್ ಹಾಕಿದರೆ ನೀವು ಕೂಡಾ ಅದಕ್ಕೆ ಪ್ರತ್ಯುತ್ತರವಾಗಿ ಹಾರ್ನ್ ಮೂಲಕವೇ ನಿಮ್ಮ ಸಾನಿಧ್ಯವನ್ನು ವ್ಯಕ್ತಪಡಿಸಿರಿ.

ಅಪಘಾತಕ್ಕೀಡಾದ 80 ಲಕ್ಷ ಬೆಲೆಬಾಳುವ ಐಷಾರಾಮಿ ಕಾರು

08. ಲೇನ್ ಪಾಲಿಸಿ

ಘಾಟ್ ರಸ್ತೆಯಲ್ಲಿ ಸಂಚರಿಸುವ ಪ್ರತಿಯೊಂದು ವಾಹನಗಳೂ ಪಾಲಿಸಬೇಕಾದ ಅತಿ ಮಹತ್ವದ ನಿಯಮ ಇದಾಗಿದ್ದು, ಲೇನ್ ಸಂಚಾರವನ್ನು ತಪ್ಪದೇ ಪಾಲಿಸಿರಿ. ಸಾಮಾನ್ಯವಾಗಿ ಕೆಳಗಡೆಯಿಂದ ಮೇಲ್ಗಡೆ ಹತ್ತುವ ಘನ ವಾಹನಗಳು ನಿಧಾನವಾಗಿ ಸಂಚರಿಸುವುದರಿಂದ ವೇಗವಾಗಿ ಇಳಿಮುಖವಾಗಿ ಬರುವ ವಾಹನಗಳು ಮಾರ್ಯಾದೆ ನೀಡುವುದನ್ನು ಕಲಿತುಕೊಳ್ಳಬೇಕು.

ಅಪಘಾತಕ್ಕೀಡಾದ 80 ಲಕ್ಷ ಬೆಲೆಬಾಳುವ ಐಷಾರಾಮಿ ಕಾರು

09. ಮೊಬೈಲ್ ಬಳಕೆ ಬೇಡ

ಯಾವುದೇ ಕಾರಣಕ್ಕೂ ಘಾಟಿ ರಸ್ತೆಯಲ್ಲಿ ಸಂಚರಿಸುವಾಗ ಮೊಬೈಲ್ ಫೋನ್ ಬಳಕೆ ಮಾಡಬಾರದು. ಹಾಗೆಯೇ ಕಾರಿನೊಳಗೆ ಸ್ಟೀರಿಯೋಗಳನ್ನು ಗಟ್ಟಿಯಾಗಿ ಪ್ಲೇ ಮಾಡಬಾರದು. ಯಾಕೆಂದರೆ ನಿಮ್ಮ ಮನರಂಜನೆಯು ಜೀವನದ ಕೊನೆಯ ಮೋಜು ಆಗುವ ಭೀತಿಯೂ ಇದೆ.

ಅಪಘಾತಕ್ಕೀಡಾದ 80 ಲಕ್ಷ ಬೆಲೆಬಾಳುವ ಐಷಾರಾಮಿ ಕಾರು

10. ಓವರ್ ಟೇಕಿಂಗ್ ಬೇಡ, ತಾಳ್ಮೆಯಿರಲಿ

ಸಾಮಾನ್ಯ ಹೆದ್ದಾರಿಗಿಂತಲೂ ವಿಭಿನ್ನವಾಗಿ ಕಡಿದಾದ ತಿರುವುಗಳನ್ನು ಹೊಂದಿರುವ ಘಾಟಿ ರಸ್ತೆಗಳಲ್ಲಿ ಓವರ್ ಟೇಕಿಂಗ್ ಅವಕಾಶ ತೀರಾ ಕಡಿಮೆಯಾಗಿರುತ್ತದೆ. ಹಾಗಾಗಿ ವಾಹನಗಳ ನಡುವೆ ಸರಿಯಾದ ಅಂತರ ಪಾಲಿಸಿ ಮುನ್ನುಗ್ಗಿರಿ.

ಅಪಘಾತಕ್ಕೀಡಾದ 80 ಲಕ್ಷ ಬೆಲೆಬಾಳುವ ಐಷಾರಾಮಿ ಕಾರು

11. ಕೆಸರಿನ ರಸ್ತೆ, ಗುಂಡಿ

ರಸ್ತೆಯಲ್ಲಿರುವ ಗುಂಡಿಗಳಲ್ಲಿ ನೀರು ತುಂಬಿಕೊಂಡಿರುವ ಸಾಧ್ಯತೆಯಿರುವುದರಿಂದ ಅಪಾಯವನ್ನು ಆಹ್ವಾನಿಸುವ ಮೊದಲು ಸ್ವಲ್ಪ ಎಚ್ಚರಿಕೆಯಿಂದ ಮುಂದುವರಿದರೆ ಒಳಿತು.

ಅಪಘಾತಕ್ಕೀಡಾದ 80 ಲಕ್ಷ ಬೆಲೆಬಾಳುವ ಐಷಾರಾಮಿ ಕಾರು

12. ನಿಲುಗಡೆ

ಇನ್ನು ಕಾರನ್ನು ಅಗತ್ಯ ಬಂದ್ದಲ್ಲಿ ಮಾತ್ರ ನಿಲ್ಲಿಸಿರಿ. ಇದಕ್ಕಾಗಿ ಎರಡು ಕಡೆಗಳಿಂದ ಗೋಚರಿಸುವಂತಹ ಪ್ರದೇಶವನ್ನೇ ಆಯ್ಕೆ ಮಾಡಿ. ಈ ಸಂದರ್ಭದಲ್ಲಿ ಹಜಾರ್ಡ್ (ಅಪಾಯ) ಬೆಳಕು ಆನ್ ಮಾಡಿಡಲು ಮರೆಯದಿರಿ.

More from DriveSpark

Article Published On: Wednesday, July 17, 2019, 12:00 [IST]
English summary
Ford Mustang Crash In Assam Days After Delivery. Read In Kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+