ವಾಹನ ಸವಾರರಿಗೆ ರಾಜ್ಯ ಸರ್ಕಾರದಿಂದ ಬಿಗ್ ಶಾಕ್..!
ಕಳೆದ ವರ್ಷ ದೇಶದ ಹಲವಾರು ಪ್ರಮುಖ ನಗರಗಳಲ್ಲಿನ ಇಂಧನ ಬೆಲೆಯಲ್ಲಿ ಹತ್ತಾಟ್ಟನೆಯಾಗಿ ಏರಿಕೆಯಾದ ಕಾರಣ ಜನ ಸಾಮಾನ್ಯರು ಕಷ್ಟ ಅನುಭವಿಸುವ ಸಂದರ್ಭ ಎದುರಾಯಿತು. ಆದರೆ ಸೆಪ್ಟೆಂಬರ್ ತಿಂಗಳಿನಲ್ಲಿ ರಾಜ್ಯ ಸರ್ಕಾರವು ಇಂಧನ ಬೆಲೆಯಲ್ಲಿನ ತೆರಿಗೆಯನ್ನು ಕಡಿಮೆ ಮಾಡಲಾಗಿದ್ದು, ಇದೀಗ ಮತ್ತೆ ತೆರಿಗೆಯನ್ನು ಏರಿಕೆ ಮಾಡಲಾಗಿದೆ.

ಕರ್ನಾಟಕದಲ್ಲಿನ ಸಮ್ಮಿಶ್ರ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ಇಂಧನಗಳ ಮೇಲೆ ರಾಜ್ಯ ತೆರಿಗೆಯನ್ನು ಶೇಕಡ 2ರಷ್ಟು ಹೆಚ್ಚಿಸಿದೆ. ಈ ಇಂಧನ ಬೆಲೆಯ ಏರಿಕೆಯು ಜನವರಿ 1, 2019 ರಿಂದ ಜಾರಿಯಾಗಿರುವುದಾಗಿ ಸರ್ಕಾರವು ಅಧಿಕೃತವಾಗಿ ನೀಡಿದ ಹೇಳಿಕೆಯಲ್ಲಿ ತಿಳಿಸಲಾಗಿದೆ. ಇದರಿಂದ ತೈಲ ಬೆಲೆಯ ನಿರಂತರ ಇಳಿಕೆಯ ಖುಷಿಯಲ್ಲಿದ್ದ ವಾಹನ ಸವಾರರಿಗೆ ರಾಜ್ಯ ಸರ್ಕಾರ ಆಘಾತ ನೀಡಿದೆ.

ನವೆಂಬರ್ ತಿಂಗಳಿನಲ್ಲಿ ಅಂತರ್ಜಾತೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಯು ಇಳಿಮುಖವಾಗುತ್ತಿದ್ದಂತೆ, ಇಲ್ಲಿನ ಸಮ್ಮಿಶ್ರ ಸರ್ಕಾರವು ಒಂದು ಲೀಟರ್ ಪೆಟ್ರೋಲ್‍ನ ಮೇಲೆ ಶೇಕಡ 2 ರಿಂದ 3.25ಕ್ಕೆ ಮತ್ತು ಡೀಸೆಲ್ ಮೇಲೆ ಶೇಕಡ 3.27ರಷ್ಟು ಹೆಚ್ಚಳ ಮಾಡಲಾಗಿದೆ.

ಸೆಪ್ಟೆಂಬರ್ ತಿಂಗಳಿನಿಂದ ಶೇ 28.75 ರಷ್ಟಿದ್ದ ಪೆಟ್ರೋಲ್ ಮೇಲಿನ ತೆರಿಗೆ ಶೇ 32ಕ್ಕೆ ಏರಿಕೆಯಾಗಿದೆ. ಡೀಸೆಲ್ ಮೇಲಿನ ತೆರಿಗೆ ಶೇ 17.73ರಿಂದ ಶೇ 21ಕ್ಕೆ ಹೆಚ್ಚಳವಾಗಿದೆ. ಇದರಿಂದ ರಾಜ್ಯದಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್‌ಗೆ 70.84ಕ್ಕೆ ತಲುಪಿದ್ದು, ಡೀಸೆಲ್ ಬೆಲೆ ಪ್ರತಿ ಲೀಟರ್‌ಗೆ 64.66 ರೂ. ಇದೆ.

ಪೆಟ್ರೋಲ್ ಬೆಲೆ 80 ರೂ. ದಾಟಿದ್ದ ಸಂದರ್ಭದಲ್ಲಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರು ತೈಲ ಮಾರಾಟದ ತೆರಿಗೆಯನ್ನು 2 ರೂ.ನಷ್ಟು ಇಳಿಸಿದ್ದರು. ಇದರಿಂದ ರಾಜ್ಯದ ಬೊಕ್ಕಸಕ್ಕೆ ನಷ್ಟ ಉಂಟಾಗಿತ್ತು.

2018ರ ಜುಲೈನಲ್ಲಿ ಅಧಿಕಾರಕ್ಕೆ ಬಂದ ಎರಡು ತಿಂಗಳ ಬಳಿಕ ರಾಜ್ಯ ಬಜೆಟ್ ಮಂಡನೆ ಮಾಡಿದ್ದ ಕುಮಾರಸ್ವಾಮಿ, ಪೆಟ್ರೋಲ್ ಹಾಗೂ ಡೀಸೆಲ್ ತೆರಿಗೆಯನ್ನು ಶೇ 2ರಷ್ಟು ಹೆಚ್ಚಿಸಿದ್ದರು. ಪೆಟ್ರೋಲ್ ಮೇಲಿನ ತೆರಿಗೆ ಶೇ 30 ರಿಂದ ಶೇ 32ಕ್ಕೆ ಹಾಗೂ ಡೀಸೆಲ್ ತೆರಿಗೆ ಶೇ 19ರಿಂದ ಶೇ 21ಕ್ಕೆ ಏರಿಕೆಯಾಗಿತ್ತು.

ಇವ್ವೆಲ್ಲರ ನಡುವೆ ಕೇಂದ್ರ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಕಡಿಮೆ ಮಾಡುವ ಕಾರ್ಯದಲ್ಲಿರುವಾಗ ಕುಮಾರಸ್ವಾಮಿಯವರ ಸರ್ಕಾರವು ಪ್ರತೀ ಲೀಟರ್‍ಗೆ ರೂ. 1.60ರಷ್ಟು ತೆರಿಗೆಯನ್ನು ಹೆಚ್ಚಿಸಿದೆ ಮತ್ತು ಅಧಿಕಾರಕ್ಕೆ ಬಂದ ಈ ಆರು ತಿಂಗಳಿನಲ್ಲಿ ಈ ಸರ್ಕಾರವು ಕನ್ನಡ ಜನತೆಗೆ ಮಾಡಿದ ಒಳ್ಳೆಯ ವಿಷಯ ಏನಾದರು ಇದೆಯಾ ಎಂದು ಬಿಜೆಪಿ ಪಾರ್ಟಿಯ ಎಂಎಲ್ಎ ಒಬ್ಬರು ತಮ್ಮ ಟ್ವೀಟ್‍ನಲ್ಲಿ ಹೇಳಿಕೊಂದಿದ್ದು, ಬಾರಿ ವಿವಾದಕ್ಕೆ ಕಾರಣವಾಗಿದೆ.


Click it and Unblock the Notifications








