ಹೊಸ ಸುರಕ್ಷಾ ಫೀಚರ್ ಅಳವಡಿಸಿದ ಗೂಗಲ್ ಮ್ಯಾಪ್

ಮುಂದಿನ ದಿನಗಳಲ್ಲಿ, ನೀವು ಉಬರ್ ಅಥವಾ ಒಲಾದಲ್ಲಿ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಒಡಾಡುವುದಾದರೆ, ಗೂಗಲ್ ಮ್ಯಾಪ್ ಅನ್ನು ಜೊತೆಯಲ್ಲಿಟ್ಟುಕೊಂಡಿರುವುದು ಉತ್ತಮ. ಚಾಲಕನು ನೀವು ತಲುಪಬೇಕಾದ ಸ್ಥಳವನ್ನು ಬಿಟ್ಟು ಬೇರೆ ಸ್ಠಳವನ್ನು ತಲುಪಿ 500 ಮೀಟರ್‍‍ಗಳಷ್ಟು ಮುಂದೆ ಹೋದಾಗ, ನಿಮ್ಮ ಬಳಿಯಿರುವ ಆಂಡ್ರಾಯಿಡ್ ಫೋನ್ ನಿಮಗೆ ಈ ಬಗ್ಗೆ ಸಂದೇಶವನ್ನು ರವಾನಿಸುತ್ತದೆ.

ಹೊಸ ಸುರಕ್ಷಾ ಫೀಚರ್ ಅಳವಡಿಸಿದ ಗೂಗಲ್ ಮ್ಯಾಪ್

ಅಪಾಯ ಕಂಡು ಬಂದಲ್ಲಿ ಕ್ಯಾಬ್ ಸೇವೆಯನ್ನು ನೀಡುತ್ತಿರುವವರಿಗೆ, ಸ್ನೇಹಿತರಿಗೆ, ಕುಟುಂಬಕ್ಕೆ ಹಾಗೂ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಬಹುದು. ಸ್ಟೇ ಸೇಫರ್ ಎಂಬ ಹೆಸರಿನ ಈ ಫೀಚರ್ ಅನ್ನು ಭಾರತದಲ್ಲಿ ಮೊದಲ ಬಾರಿಗೆ, ಕಳೆದ ಬುಧವಾರ ಬಿಡುಗಡೆಗೊಳಿಸಲಾಯಿತು. ಈ ಫೀಚರ್‍‍ನಿಂದಾಗಿ ಆಂಡ್ರಾಯಿಡ್ ಮೊಬೈಲ್ ಹೊಂದಿರುವ ಗ್ರಾಹಕರು ಟ್ಯಾಕ್ಸಿ ಅಥವಾ ಆಟೋ ರಿಕ್ಷಾದಲ್ಲಿ ಚಲಿಸುವಾಗ ಚಾಲಕನು ನಿಗದಿತ ಸ್ಥಳಕ್ಕಿಂತ 500 ಮೀಟರ್ ದೂರ ತಲುಪಿದ ತಕ್ಷಣವೇ ಗ್ರಾಹಕರಿಗೆ ಸೂಚನೆ ನೀಡುತ್ತದೆ.

ಹೊಸ ಸುರಕ್ಷಾ ಫೀಚರ್ ಅಳವಡಿಸಿದ ಗೂಗಲ್ ಮ್ಯಾಪ್

ಈ ಫೀಚರ್‍‍ನಿಂದಾಗಿ ಬಳಕೆದಾರರು ತಾವು ತಲುಪಬೇಕಾದ ಸ್ಥಳದಿಂದ ಎಷ್ಟು ದೂರದಲ್ಲಿದ್ದಾರೆ ಎಂಬುದನ್ನು ತಿಳಿಯಲಿದ್ದಾರೆ. ಗೂಗಲ್ ಮ್ಯಾಪ್‍‍ನ ಪ್ರಾಡಕ್ಟ್ ಮ್ಯಾನೇಜರ್‍‍ರವರಾದ ಅಮಂಡಾ ಬಿಷಪ್, ಭಾರತದಾದ್ಯಂತ ನಾವು ನಡೆಸಿದ ಸಂಶೋಧನೆಯಲ್ಲಿ ನಾವು ಕಂಡುಕೊಂಡಿದೇನೆಂದರೆ, ಸುರಕ್ಷತೆಯ ದೃಷ್ಟಿಯಿಂದಾಗಿ ಬಹಳಷ್ಟು ಜನರು ಓಡಾಡುವುದನ್ನು ಕಡಿಮೆಗೊಳಿಸಿದ್ದಾರೆ. ಈ ಸಮಸ್ಯೆಯನ್ನು ದೂರಗೊಳಿಸಲು ನಾವು ಮೊದಲ ಬಾರಿಗೆ ಭಾರತದಲ್ಲಿ ಈ ಫೀಚರ್ ಅನ್ನು ಬಿಡುಗಡೆಗೊಳಿಸಿದ್ದೇವೆ ಎಂದು ತಿಳಿಸಿದರು.

ಹೊಸ ಸುರಕ್ಷಾ ಫೀಚರ್ ಅಳವಡಿಸಿದ ಗೂಗಲ್ ಮ್ಯಾಪ್

ತಮ್ಮ ಆಂಡ್ರಾಯಿಡ್ ಮೊಬೈಲ್‍‍‍ನಲ್ಲಿ ಈ ಸೇವೆಯನ್ನು ಆಕ್ಟಿವೇಟ್‍‍ಗೊಳಿಸಲು, ಗ್ರಾಹಕರು ತಲುಪ ಬೇಕಾದ ಸ್ಥಳವನ್ನು ಹುಡುಕಿದ ನಂತರ ಹಾಗೂ ಸೂಚನೆಗಳನ್ನು ಪಾಲಿಸಿ ನಂತರ ಸ್ಟೇ ಸೇಫರ್ ಹಾಗೂ ಗೆಟ್ ಆಫ್-ರೂಟ್ ಅಲರ್ಟ್ ಆಯ್ಕೆಗಳನ್ನು ಆರಿಸಿಕೊಳ್ಳಬೇಕಾಗುತ್ತದೆ. ಈ ಫೀಚರ್ ಅನ್ನು ಭಾರತದಲ್ಲಿ ಯಶಸ್ವಿಯಾಗಿ ಪರೀಕ್ಷಿಸಲಾಗಿದೆ. ಕುಟುಂಬ ಹಾಗೂ ಸ್ನೇಹಿತರೊಂದಿಗೆ ಲೈವ್ ಟ್ರಿಪ್ ಹಂಚಿಕೊಳ್ಳಬಹುದಾಗಿದೆ. ಗೂಗಲ್ ಇತ್ತೀಚೆಗಷ್ಟೇ ಸ್ಪೀಡೋಮೀಟರ್ ಹಾಗೂ ರಾಡಾರ್ ಲೊಕೆಶನ್ ಸಪೊರ್ಟ್ ಸೇರಿದಂತೆ ಹಲವಾರು ಫೀಚರ್‍‍ಗಳನ್ನು ಅಪ್‍‍ಡೇಟ್ ಮಾಡಿದೆ.

ಕಂಪನಿಯು ಮೂರು ಹೊಸ ಸಾರ್ವಜನಿಕ ಸಾರಿಗೆ ಫೀಚರ್‍‍ಗಳನ್ನು ಸಹ ಬಿಡುಗಡೆಗೊಳಿಸಿದೆ. ಇದು ಭಾರತದ 10 ದೊಡ್ಡ ನಗರಗಳಲ್ಲಿ ಗೂಗಲ್ ನಕ್ಷೆ ಬಳಕೆದಾರರಿಗೆ ಬಸ್ ಪ್ರಯಾಣದ ಸಮಯವನ್ನು ನೋಡಲು, ಲೈವ್ ರೈಲು ಸ್ಥಿತಿಗಳನ್ನು ಪಡೆಯಲು, ಸಂಬಂಧಪಟ್ಟವರಿಂದ ಪ್ರಯಾಣದ ಸಲಹೆಯನ್ನು ಪಡೆಯಲು ಅವಕಾಶ ಮಾಡಿಕೊಡುತ್ತದೆ. ಅದರ ಜೊತೆಗೆ ಈಗ ಆಟೋ ರಿಕ್ಷಾ ಹಾಗೂ ಟ್ಯಾಕ್ಸಿಗೆ ಸಂಬಂಧಪಟ್ಟ ಸೇವೆಗಳನ್ನು ಒದಗಿಸುತ್ತಿದೆ.

ಹೊಸ ಸುರಕ್ಷಾ ಫೀಚರ್ ಅಳವಡಿಸಿದ ಗೂಗಲ್ ಮ್ಯಾಪ್

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಹೊಸದಾಗಿ ಒಂದು ನಗರಕ್ಕೆ ಬರುವವರಿಗಾಗಿ ಹಾಗೂ ಒಂದು ನಗರದಲ್ಲಿನ ಕೆಲವು ಪ್ರದೇಶಗಳನ್ನು ಮಾತ್ರ ಹೆಚ್ಚು ತಿಳಿದಿರುವವರಿಗೆ ಈ ಫೀಚರ್‍‍ನಿಂದ ಹೆಚ್ಚು ಅನುಕೂಲವಾಗಲಿದೆ. ಗೂಗಲ್‌ನ ಹೊಸ ಸುರಕ್ಷತಾ ಫೀಚರ್‍‍ನಿಂದಾಗಿ ಜನರು ಅಪರಿಚಿತ ಸ್ಥಳದಲ್ಲಿ ಜಾಗರೂಕತೆಯಿಂದ ಇರಲು ಸಾಧ್ಯವಾಗಲಿದೆ. ಜನರು ತಾವು ಬೆಳೆದ ನಗರದಲ್ಲಿಯೇ ವಾಸಿಸುತ್ತಿದ್ದ ಹಾಗೂ ಹಗಲು ಹೊತ್ತಿನಲ್ಲಿ ಮಾತ್ರ ಕೆಲಸ ಮಾಡುತ್ತಿದ್ದ ದಿನಗಳು ಮುಗಿದು ಹೋಗಿವೆ. ಬಹುತೇಕ ಎಂಎನ್‌ಸಿಗಳಲ್ಲಿ ಹಗಲು ರಾತ್ರಿಯೆನ್ನದೇ ಕೆಲಸ ಮಾಡಬೇಕಿದ್ದು, ಜನರು ಸಂಚಾರಕ್ಕಾಗಿ ಆಟೋ, ಟ್ಯಾಕ್ಸಿಗಳನ್ನು ಬಳಸುತ್ತಾರೆ. ಈ ಫೀಚರ್‍‍ನಿಂದಾಗಿ ಖಂಡಿತವಾಗಿಯೂ ಅವರಿಗೆ ಹೆಚ್ಚು ಅನುಕೂಲವಾಗಲಿದೆ. ಗೂಗಲ್‍‍ನ ಕಾರ್ಯವು ನಿಜಕ್ಕೂ ಶ್ಲಾಘನೀಯವಾಗಿದೆ.

Most Read Articles

Kannada
English summary
Google Adds New Safety Feature To Maps — Keep Calm And Stay Safer - Read in kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X