ಶೀಘ್ರವೇ ಬ್ಯಾನ್ ಆಗಲಿವೆ 150ಸಿಸಿಗಿಂತಲೂ ಕಡಿಮೆ ಸಾಮರ್ಥ್ಯದ ವಾಹನಗಳು

ದೇಶದಲ್ಲಿ ಹೆಚ್ಚುತ್ತಿರುವ ಮಾಲಿನ್ಯವನ್ನು ತಡೆಗಟ್ಟಲು ಕೇಂದ್ರ ಸರ್ಕಾರವು 10 ವರ್ಷಕ್ಕಿಂತಲೂ ಮೇಲ್ಪಟ್ಟ ಪೆಟ್ರೋಲ್ ಮತ್ತು 15 ವರ್ಷಕ್ಕಿಂತಲೂ ಮೇಲ್ಪಟ್ಟ ಡೀಸೆಲ್ ವಾಹನಗಳನ್ನು ಬ್ಯಾನ್ ಮಾಡುವ ನಿರ್ಧಾರವನ್ನು ತೆಗೆದುಕೊಂಡಿದ್ದು, ಜೊತೆಗೆ ಬಿಎಸ್6 ಎಂಜಿನ್ ಆಧಾರಿತ ವಾಹನಗಳನ್ನು ಇನ್ಮುಂದೆ ತಯಾರಿ ಮಾಡಬೇಕು ಎಂಬ ಆದೇಶವನ್ನು ಎಲ್ಲಾ ವಾಹನ ತಯಾರಕ ಸಂಸ್ಥೆಗಳಿಗೆ ಸೂಚನೆ ನೀಡಲಾಗಿದೆ.

ಶೀಘ್ರವೇ ಬ್ಯಾನ್ ಆಗಲಿವೆ 150ಸಿಸಿಗಿಂತಲೂ ಕಡಿಮೆ ಸಾಮರ್ಥ್ಯದ ವಾಹನಗಳು

ಬಿಎಸ್-6 ಜಾರಿಗೆ ತರುತ್ತಿರುವ ಬೆನ್ನಲ್ಲೇ ಕೇಂದ್ರ ಸರ್ಕಾರವು ಮತ್ತೊಂದು ಹೊಸ ರೂಲ್ಸ್ ಅನ್ನು ತರಲಾಗುತ್ತಿದ್ದು, ಈ ರೂಲ್ಸ್ ಬಂದಲ್ಲಿ ಸದ್ಯ ಮಾರಾಟವಾಗುತ್ತಿರುವ 150ಸಿಸಿಗಿಂತಲೂ ಕಡಿಮೆ ಸಾಮರ್ಥ್ಯವಿರುವ ವಾಹನಗಳು ಮಾರುಕಟ್ಟೆಯಿಂದ ದೂರ ಸರಿಯಲಿವೆ. ಹೌದು, ದೇಶದಲ್ಲಿ ಹೆಚ್ಚುತ್ತಿರುವ ಇಂಧನ ಆಧಾರಿತ ವಾಹನಗಳಿಂದ ಉಂಟಾಗುತ್ತಿರುವ ಮಾಲಿನ್ಯವನ್ನು ತಡೆಗಟ್ಟಲು ಎಲೆಕ್ಟ್ರಿಕ್ ವಾಹನಗಳನ್ನು ಕಡ್ಡಾಯವಾಗಿ ಬಳಸಲೇಬೇಕು ಎಂಬ ಉದ್ದೇಶದಿಂದ ಶೀಘ್ರವೇ 150ಸಿಸಿ ಗಿಂತಲೂ ಕಡಿಮೆ ಸಾಮರ್ಥ್ಯದ ವಾಹನಗಳ ಮಾರಾಟವನ್ನು ಸ್ಥಗಿತಗೊಳಿಸಲು ಚಿಂತನೆ ನಡೆಸಲಾಗುತ್ತಿದೆ.

ಶೀಘ್ರವೇ ಬ್ಯಾನ್ ಆಗಲಿವೆ 150ಸಿಸಿಗಿಂತಲೂ ಕಡಿಮೆ ಸಾಮರ್ಥ್ಯದ ವಾಹನಗಳು

ಈ ಹೊಸ ನಿಯಮವು ಜಾರಿಗೊಳ್ಳಲು ಇನ್ನು ಸುಮಾರು 6 ವರ್ಷಗಳ ಕಾಲಾವಕಾಶವಿದ್ದು, 2023ರಿಂದಲೇ ದೇಶದಲ್ಲಿ ಕೇವಲ ಎಲೆಕ್ಟ್ರಿಕ್ ಆಟೋ ರಿಕ್ಷಾಗಳು ಮತ್ತು 2025ರಿಂದ 150ಸಿಸಿ ಗಿಂತಲು ಕಡಿಮೆ ಸಾಮರ್ಥ್ಯದ ಸ್ಕೂಟರ್ ಮತ್ತು ಬೈಕ್‍ಗಳ ಸ್ಥಾನದಲ್ಲಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳು ಕಡ್ಡಾಯವಾಗಲಿವೆ.

ಶೀಘ್ರವೇ ಬ್ಯಾನ್ ಆಗಲಿವೆ 150ಸಿಸಿಗಿಂತಲೂ ಕಡಿಮೆ ಸಾಮರ್ಥ್ಯದ ವಾಹನಗಳು

ಹೊಸ ನಿಯಮಾವಳಿಗಳು ಹೇಳುವ ಹಾಗೆ ನೀಡಲಾದ ಗಡುವಿನೊಳಗೆ ಯಾವ ವಾಹನಗಳು ಮಾರಾಟವಾಗುತ್ತಿರುತ್ತದೆಯೊ ಅವುಗಳನ್ನು ಹಾಗೆಯೇ ಇರಿಲಿ, ಗಡುವಿನ ನಂತರ ಯಾವ ವಾಹನಗಳು ಮಾರಾಟವಾಗುತ್ತದೆಯೊ ಅವುಗಳನ್ನು ಸ್ಥಗಿತಗೊಳಿಸಲಾಗುತ್ತದೆ. ಒಟ್ಟಿನಲ್ಲಿ ಈ ಮಹತ್ವದ ನಿರ್ಧಾರವು ಜಾರಿಗೆ ಬಂದಲ್ಲಿ ದೇಶಿಯ ಆಟೋಮೊಬೈಲ್ ಕ್ಷೇತ್ರದಲ್ಲಿ ಭಾರೀ ಬದಲಾವಣೆಯಾಗಲಿದೆ.

ಶೀಘ್ರವೇ ಬ್ಯಾನ್ ಆಗಲಿವೆ 150ಸಿಸಿಗಿಂತಲೂ ಕಡಿಮೆ ಸಾಮರ್ಥ್ಯದ ವಾಹನಗಳು

ಹೊಸ ಯೋಜನೆಯ ಹಿಂದಿನ ಕಾರಣ.?

ವರ್ಷಕ್ಕೆ ಸುಮಾರು 2 ಕೋಟಿಗೂ ಅಧಿಕವಾಗಿ ದ್ವಿಚಕ್ರ ಮತ್ತು ಆಟೋ ರಿಕ್ಷಾಗಳು ಮಾರಾಟವಾಗುತ್ತಿರುವ ಕಾರಣ ಅವುಗಳಿಂದಾಗಿ ಉಂಟಾಗುತ್ತಿರುವ ವಾಯು ಮಾಲಿನ್ಯವನ್ನು ಕಡಿಮೆ ಮಾಡಲು ಇರುವ ಏಕೈಕ ಮಾರ್ಗ ಎಂದರೆ ಅದು ಎಲೆಕ್ಟ್ರಿಕ್ ವಾಹನಗಳಾನ್ನು ಬಳಸುವುದು. ಇದರಿಂದ ಬಹುತೇಕವಾಗಿ ರಸ್ತೆಗಳ ಮೇಲೆ ಕೇವಲ ಎಲೆಕ್ಟ್ರಿಕ್ ವಾಹನಗಳೇ ಸಂಚರಿಸಬೇಕೆಂಬುದು ಇದರ ಹಿಂದಿನ ಕಾರಣ.

ಶೀಘ್ರವೇ ಬ್ಯಾನ್ ಆಗಲಿವೆ 150ಸಿಸಿಗಿಂತಲೂ ಕಡಿಮೆ ಸಾಮರ್ಥ್ಯದ ವಾಹನಗಳು

ಶಾಲಾ ವಾಹನ ಮತ್ತು ಸಿಟಿ ಬಸ್‍ಗಳ ಮೇಲೆಯು ಬೀರಲಿದೆ ಪ್ರಭಾವ

ಹೌದು, ನೀತಿ ಆಯೋಗದ ಸಿಇಒ ಅಮಿತಾಬ್ ಕಾಂತ್ ನೇತೃತ್ವದಲ್ಲಿ ನಡೆದ ಅಂತರ್-ಮಂತ್ರಿಮಂಡಲದ ಸ್ಟೀರಿಂಗ್ ಸಮಿತಿಯು ಡೆಲಿವರಿ ವಾಹನಗಳು, ಶಾಲಾ ವಾಹನಗಳು ಮತ್ತು ನಗರದಲ್ಲಿ ಸಂಚರಿಸುವ ಬಸ್‌ಗಳ ಮೇಲೆಯೂ ಸಹ ಈ ಗಡುವನ್ನು ಸ್ಥಾಪಿಸಲು ಸಾಧ್ಯವಿದ್ದು, ಈ ನಿರ್ಧಾರವು ಆಟೋಮೊಬೈಲ್ ಉದ್ಯಮದಲ್ಲಿ ಅಸಮಾಧಾನ ವಾತಾವರಣವನ್ನು ಉಂಟು ಮಾಡಬಹುದಾಗಿದೆ.

ಶೀಘ್ರವೇ ಬ್ಯಾನ್ ಆಗಲಿವೆ 150ಸಿಸಿಗಿಂತಲೂ ಕಡಿಮೆ ಸಾಮರ್ಥ್ಯದ ವಾಹನಗಳು

ಸಮಿತಿಯು ಎಲೆಕ್ಟ್ರಿಕ್ ಆಟೋ ರಿಕ್ಷಾಗಳ ಖರೀದಿಯ ಮೇಲೆ ಸುಮಾರು ರೂ. 20,000 ಕಿಲೋ ವ್ಯಾಟ್ ಸಬ್ಸಿಡಿಯನ್ನು ನೀಡಲಿದ್ದು, ಆಟೋ ಚಾಲಕರಿಗೆ ಹಣ ಹೂಡಿಕೆಯ ಭಾರವನ್ನು ಕಡಿಮೆ ಮಾಡಲಿದೆ. ಹಾಗೆಯೇ ಇವುಗಳ ಜೊತೆಗೆ ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳಿಗೆ ಕಠಿಣವಾದ ಇಂಧನ ದಕ್ಷತೆಯ ನಿಯಮಗಳನ್ನು ಶಿಫಾರಸು ಮಾಡುವ ಮೂಲಕ ಸರ್ಕಾರವು ವಿದ್ಯುತ್ ವಿಭಾಗಕ್ಕೆ ಆರ್ಥಿಕ ಮತ್ತು ರಿಯಾಯಿತಿಯನ್ನು ನೀಡಲಿದೆ.

ಶೀಘ್ರವೇ ಬ್ಯಾನ್ ಆಗಲಿವೆ 150ಸಿಸಿಗಿಂತಲೂ ಕಡಿಮೆ ಸಾಮರ್ಥ್ಯದ ವಾಹನಗಳು

2030 ರ ಹೊತ್ತಿಗೆ ಎಲ್ಲಾ ಹೊಸ ಕಾರುಗಳು ಮತ್ತು ಯುಟಿಲಿಟಿ ವಾಹನಗಳನ್ನು ವಿದ್ಯುಜ್ಜನಕಗೊಳಿಸಲು 2017 ರಲ್ಲಿ ಪ್ರಧಾನಿ ಮೋದಿ ಸರಕಾರ ಮಹತ್ವಾಕಾಂಕ್ಷೆಯ ಗುರಿಯನ್ನು ಹೊಂದಿದ್ದರು. ಆದರೆ ಆಟೋಮೊಬೈಲ್ ಉದ್ಯಮದಿಂದ ಪ್ರತಿರೋಧವನ್ನು ನೀಡಿದ ಕಾರಣ ಇದೀಗ ಮತೊಮ್ಮೆ ಯೋಜನೆಯನ್ನು ಮರಳಿ ತರಲು ಒತ್ತಾಯಿಸಲಾಗುತ್ತಿದೆ. ಐದು ವರ್ಷಗಳಲ್ಲಿ ವಿದ್ಯುತ್ ವಾಹನಗಳ ಮಾರಾಟಗಳಲ್ಲಿ ಶೇ.15 ಪ್ರತಿ ಶತದಷ್ಟು ಮಾಡಲು ಸರಕಾರ ನಿರೀಕ್ಷಿಸಿದೆ.

ಶೀಘ್ರವೇ ಬ್ಯಾನ್ ಆಗಲಿವೆ 150ಸಿಸಿಗಿಂತಲೂ ಕಡಿಮೆ ಸಾಮರ್ಥ್ಯದ ವಾಹನಗಳು

ಆಟೋಮೊಬೈಲ್ ಉದ್ಯಮದ ಮೇಲೆ ಅಧಿಕವಾಗಲಿದೆ ಒತ್ತಡ..!

ಪೆಟ್ರೋಲ್ ಆಧಾರಿತ ದ್ವಿಚಕ್ರ ವಾಹನಗಳ ಮೇಲಿನ ನಿಷೇಧವು ದ್ವಿಚಕ್ರ ವಾಹನಗಳ ತಯಾರಕರ ಮೇಲೆ ಹೆಚ್ಚು ಬಂಡವಾಳ ಮತ್ತು ಹೆಚ್ಚಿನ ಮಟ್ಟದಲ್ಲಿನ ಹೂಡಿಕೆ ಮಾಡಲು ತಳ್ಳುತ್ತದೆ. ಎಲೆಕ್ಟ್ರಿಕ್ ವಾಹನಗಳ ಮಾರಾಟವು ಅಧಿಕವಾಗಲು ಸರ್ಕಾರವು ಎಲೆಕ್ಟ್ರಿಕ್ ಸ್ಕೂಟರ್ ಮತ್ತು ಎಲೆಕ್ಟ್ರಿಕ್ ಬೈಕ್‍ಗಳ ಖರೀದಿಯ ಮೇಲೆ ಅಧಿಕವಾದ ಸಬ್ಸಿಡಿಯನ್ನು ನೀಡಲು ಯೋಜನೆ ಮಾಡಲಾಗಿದೆ.

ಶೀಘ್ರವೇ ಬ್ಯಾನ್ ಆಗಲಿವೆ 150ಸಿಸಿಗಿಂತಲೂ ಕಡಿಮೆ ಸಾಮರ್ಥ್ಯದ ವಾಹನಗಳು

ಹಾಗೆಯೇ ವಿದ್ಯುತ್ ವಾಹನ ಖರೀದಿದಾರರಿಗೆ ಸಬ್ಸಿಡಿಯನ್ನು ನೀಡುವ ಸಲುವಾಗಿ ಪೆಟ್ರೋಲ್ ಸ್ಕೂಟರ್ ಮತ್ತು ಮೋಟಾರು ಸೈಕಲ್ನ ಖರೀದಿದಾರರಿಗೆ ಹೆಚ್ಚುವರಿ ತೆರಿಗೆ ವಿಧಿಸಲಾಗುತ್ತದೆ. ಒಟ್ಟಿನಲ್ಲಿ ಶೀಘ್ರವೇ ಜಾರಿಯಾಗುವ ಈ ನಿಯಮಾವಳಿಯು ಪರಿಸರ ಪ್ರೆಮಿಗಳಿಗೆ ಸಂತಸ ತಂದರೂ ಸಹ, ಮಧ್ಯಮ ವರ್ಗದ ಗ್ರಾಹಕರಿಗೆ ಮತ್ತು ವಾಹನ ತಯಾರಕ ಸಂಸ್ಥೆಗಳ ಮೇಳೆ ಒತ್ತಡ ಜಾಸ್ತಿಯಾಗಲಿದೆ ಎಂದು ಹೇಳಬಹುದು.

Source: Times Of India

More from DriveSpark

Article Published On: Friday, May 24, 2019, 12:16 [IST]
English summary
Government May Ban Scooters And Motorcycles Under 150cc From 2025. Read In Kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+