ಇನ್ಮುಂದೆ ಸಿಕ್ಕ ಸಿಕ್ಕಂತೆ ಹಾರ್ನ್ ಮಾಡೋ ಹಾಗಿಲ್ಲ..!

ಭಾರತ ಸರ್ಕಾರವು ನಮ್ಮ ರಸ್ತೆಗಳನ್ನು ಸುರಕ್ಷಿತವಾಗಿರಿಸಲು ಹಾಗೂ ಮಾಲಿನ್ಯವನ್ನು ಕಡಿಮೆಗೊಳಿಸಲು ಅನೇಕ ಕ್ರಮಗಳನ್ನು ಕೈಗೊಂಡಿದೆ. ವಿಪರೀತವಾದ ಶಬ್ದ ಮಾಲಿನ್ಯವು ನಮ್ಮ ದೇಶದಲ್ಲಿರುವ ನಗರಗಳ ಹಾಗೂ ಹೈವೇಗಳ ಪ್ರಮುಖ ಸಮಸ್ಯೆಗಳಲ್ಲಿ ಒಂದು. ನಮ್ಮ ದೇಶದಲ್ಲಿ ಶಬ್ದದ ಮಿತಿಯನ್ನು, ಪ್ರಪಂಚದಲ್ಲಿಯೇ ಹೆಚ್ಚು ಎನ್ನಬಹುದಾದ 93 ಡಿಬಿಯಿಂದ 112 ಡಿಬಿಯವರೆಗೆ ನಿಗದಿಗೊಳಿಸಲಾಗಿದ್ದರೂ, ಶಬ್ದ ಮಾಲಿನ್ಯವು ಮಿತಿ ಮೀರಿದೆ.

ಇನ್ಮುಂದೆ ಸಿಕ್ಕ ಸಿಕ್ಕಂತೆ ಹಾರ್ನ್ ಮಾಡೋ ಆಗಿಲ್ಲ..!

ಈ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತವಾಗಿರುವ ಕೇಂದ್ರ ಸರ್ಕಾರವು ಗರಿಷ್ಟ ಮಿತಿಯನ್ನು 10%ನಷ್ಟು ಕಡಿಮೆಗೊಳಿಸಲು ಮುಂದಾಗಿದೆ. ರಸ್ತೆ, ಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯದ ಜಂಟಿ ಕಾರ್ಯದರ್ಶಿ ಅಭಯ್ ದಾಮ್ಲೆರವರು ಮಾತನಾಡಿ, ಶಬ್ದದ ಮಿತಿಯನ್ನು ಕನಿಷ್ಟ 88 ಡಿಬಿಗೆ ಹಾಗೂ ಗರಿಷ್ಠ ಮಿತಿಯನ್ನು 100 ಡಿಬಿಗೆ ನಿಗದಿಪಡಿಸಲು ಸರ್ಕಾರ ಚಿಂತಿಸುತ್ತಿದೆ. ಆದರೆ ಸಚಿವಾಲಯವು ಮಾತ್ರವೇ ಈ ನಿರ್ಧಾರವನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ.

ಇನ್ಮುಂದೆ ಸಿಕ್ಕ ಸಿಕ್ಕಂತೆ ಹಾರ್ನ್ ಮಾಡೋ ಆಗಿಲ್ಲ..!

ಆದ್ದರಿಂದ ಸಚಿವಾಲಯವು ಈಗಾಗಲೇ ವಾಹನ ತಯಾರಕರು ಹಾಗೂ ಸಿಯಾಮ್‌ನೊಂದಿಗೆ ಹಲವಾರು ಸುತ್ತಿನ ಚರ್ಚೆಗಳನ್ನು ನಡೆಸಿದೆ. ಎಲ್ಲವನ್ನೂ ಬದಲಾಯಿಸಬೇಕಾಗಿರುವುದರಿಂದ ಇನ್ನೂ ಅಂತಿಮ ನಿರ್ಧಾರವನ್ನು ತೆಗೆದುಕೊಂಡಿಲ್ಲ. ಮುಂದಿನ ಸಭೆಯಲ್ಲಿ ಅವರು ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಿದ್ದಾರೆ. ಶಬ್ದ ಮಾಲಿನ್ಯದಿಂದಾಗಿ ಕಿವಿಗಳು ಹಾಳಾಗಿ ಕಿವುಡುತನಕ್ಕೆ ಕಾರಣವಾಗುತ್ತಿದೆ. ಆದ ಕಾರಣ ಶಬ್ದದ ಗರಿಷ್ಠ ಮಿತಿಯನ್ನು ತಗ್ಗಿಸಲು ಸರ್ಕಾರ ಈ ನಿರ್ಧಾರವನ್ನು ತೆಗೆದುಕೊಂಡಿದೆ ಎಂದು ಹೇಳಿದರು.

ಇನ್ಮುಂದೆ ಸಿಕ್ಕ ಸಿಕ್ಕಂತೆ ಹಾರ್ನ್ ಮಾಡೋ ಆಗಿಲ್ಲ..!

ಸರ್ಕಾರವು ಟ್ರಕ್‌ ಹಾಗೂ ಬಸ್‌ಗಳಲ್ಲಿ ಬಳಸುತ್ತಿದ್ದ ಹೆಚ್ಚು ಶಬ್ದ ಉಂಟುಮಾಡುತ್ತಿದ್ದ ಪ್ರೆಷರ್ ಹಾರ್ನ್ ಹಾಗೂ ಮಲ್ಟಿ ಟೋನ್ ಹಾರ್ನ್‍‍ಗಳನ್ನು ಈಗಾಗಲೇ ನಿಷೇಧಿಸಿದೆ. ನಿಯಮಗಳನ್ನು ಸರಿಯಾಗಿ ಪಾಲಿಸದ ಕಾರಣ, ನಿಷೇಧಿಸಲಾಗಿರುವ ಹಾರ್ನ್‍‍ಗಳು ಸೆಕೆಂಡ್ ಹ್ಯಾಂಡ್ ಮಾರುಕಟ್ಟೆಗಳಲ್ಲಿ ಸುಲಭವಾಗಿ ಸಿಗುತ್ತಿವೆ. ಸಚಿವಾಲಯವು ಈ ಹಾರ್ನ್‍‍ಗಳ ಉತ್ಪಾದನೆಯನ್ನು ನಿಲ್ಲಿಸುವ ಯೋಜನೆಯನ್ನು ಸಹ ಹಾಕಿಕೊಂಡಿದೆ.

ಇನ್ಮುಂದೆ ಸಿಕ್ಕ ಸಿಕ್ಕಂತೆ ಹಾರ್ನ್ ಮಾಡೋ ಆಗಿಲ್ಲ..!

ಹೋಂಡಾ ಸಿಟಿ ಮತ್ತು ಮಾರುತಿ ಸುಜುಕಿ ಸಿಯಾಜ್‌ಗೆ ಟಕ್ಕರ್ ನೀಡುತ್ತಿರುವ ಟೊಯೊಟಾ ಯಾರಿಸ್ ಖರೀದಿಗೆ ಈಗಲೇ ಟೆಸ್ಟ್ ಡ್ರೈವ್ ಮಾಡಿ..!

ಐಷಾರಾಮಿ ವಾಹನ ತಯಾರಕ ಕಂಪನಿಯ ಉನ್ನತ ಅಧಿಕಾರಿಯೊಬ್ಬರು ಮಾತನಾಡಿ, ಯುರೋಪ್ ಹಾಗೂ ಅಮೇರಿಕಾಕ್ಕೆ ಹೋಲಿಸಿದರೆ ಭಾರತೀಯ ವಾಹನಗಳಲ್ಲಿ ವಿಶೇಷ ರೀತಿಯ ಹಾರ್ನ್‍‍ಗಳನ್ನು ಬಳಸಲಾಗುತ್ತಿದೆ ಎಂದು ಹೇಳಿದರು. ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಹಾಗೂ ಹಲವು ಹೈಕೋರ್ಟ್‌ಗಳು ಹೆಚ್ಚು ಶಬ್ದವನ್ನುಂಟು ಮಾಡುವ ಹಾರ್ನ್‍‍ಗಳ ಬಗ್ಗೆ ಟೀಕಿಸಿದ್ದು, ಇವುಗಳ ಬಳಕೆಯನ್ನು ನಿಷೇಧಿಸುವಂತೆ ಸೂಚಿಸಿವೆ. ಆದರೆ ಸರ್ಕಾರವು ಈ ಬಗ್ಗೆ ಸ್ಪಷ್ಟ ನಿರ್ಧಾರ ಕೈಗೊಂಡಿಲ್ಲ.

ಇನ್ಮುಂದೆ ಸಿಕ್ಕ ಸಿಕ್ಕಂತೆ ಹಾರ್ನ್ ಮಾಡೋ ಆಗಿಲ್ಲ..!

ಅತಿ ಶೀಘ್ರದಲ್ಲಿ ಸರ್ಕಾರದ ಹೊಸ ನಿಯಮಗಳ ಬಗ್ಗೆ ನಿರೀಕ್ಷಿಸಬಹುದು. ಕೇಂದ್ರ ಮೋಟಾರು ವಾಹನ ನಿಯಮಗಳನ್ನು ಸಹ ಹೊಸ ನಿಯಮಗಳಿಗೆ ಅನುಗುಣವಾಗಿ ಬದಲಾಯಿಸಲಾಗುವುದು. ನಗರ ಪ್ರದೇಶದ ವ್ಯಾಪ್ತಿಯಲ್ಲಿ ಅಥವಾ ಇತರ ಸ್ಥಳಗಳಲ್ಲಿ ಹಾರ್ನ್‍‍ಗಳನ್ನು ಬಳಸಿದರೆ ಶಬ್ದ ಮಾಲಿನ್ಯ ಉಂಟು ಮಾಡಿದ ಕಾರಣಕ್ಕೆ ದಂಡವನ್ನು ವಿಧಿಸಬಹುದು. ಈ ರೀತಿಯ ಕ್ರಮಗಳಿಂದಾಗಿ ಶಬ್ದ ಮಾಲಿನ್ಯವನ್ನು ಕಡಿಮೆ ಮಾಡಬಹುದಾಗಿದೆ. ನಗರ ಪ್ರದೇಶದ ವ್ಯಾಪ್ತಿಯಲ್ಲಿ ಅಥವಾ ಹೆದ್ದಾರಿಗಳಲ್ಲಿ ಸಿಕ್ಕ ಸಿಕ್ಕಂತೆ ಹಾರ್ನ್‍‍ಗಳನ್ನು ಬಳಸದಂತೆ ನಾವೂ ಸಹ ಮನವಿ ಮಾಡಿಕೊಳ್ಳುತ್ತೇವೆ.

Article Published On: Monday, July 22, 2019, 16:28 [IST]
English summary
Government Plans to Reduce Noise Level In India - Read in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+