ದಿನಂಪ್ರತಿ ಲಿಫ್ಟ್ ಕೇಳುತ್ತಿದ್ದವನಿಗೆ ಅವನ ಸ್ನೇಹಿತರ ಗುಂಪು ಮಾಡಿದ್ದೇನು ಗೊತ್ತಾ?

ಮನೆಯಲ್ಲಿ ಒಂದೇ ವಾಹನವಿದ್ದರೆ, ನನ್ನನ್ನ ಅಲ್ಲಿಗೆ ಡ್ರಾಪ್ ಮಾಡು ಇಲ್ಲಿಗೆ ಬಂದು ಪಿಕಪ್ ಮಾಡು ಎಂದು ಹೇಳಿಸಿಕೊಂಡಿರುವ ಅನುಭವವು ನಮ್ಮೆಲ್ಲರಿಗೂ ಆಗಿರುತ್ತದೆ ಅಲ್ಲವೇ.? ಆದರೆ ನಿಮ್ಮ ಹತ್ತಿರ ವಾಹನವಿದ್ದು ನಿಮ್ಮ ಸ್ನೇಹಿತನ ಹತ್ತಿರ ವಾಹನವಿಲ್ಲದ್ದರೆ ಕೆಲವೊಮ್ಮೆ ಆತ ಕರೆ ಮಾಡಿ ನಿಮಗೆ ಅಲ್ಲಿಗೆ ಡ್ರಾಪ್ ಮಾಡು ಇಲ್ಲಿಗೆ ಬಂದು ಪಿಕಪ್ ಮಾಡು ಅಂತಾ ಕರಿತಾನೇ ಇರ್ತಾರೆ.

ದಿನವೂ ಲಿಫ್ಟ್ ಕೇಳುತ್ತಿದ್ದ ಗೆಳೆಯನ ಕಾಟ ತಾಳಲಾರದೆ, ಸ್ನೇಹಿತರ ಗುಂಪು ಮಾಡಿದ ಕೆಲಸ ಏನು ಗೊತ್ತಾ.?

ಸರಿ ಒಂದೆರಡು ಬಾರಿ ಹೀಗೆ ಮಾಡಿದರೆ ಸರಿ, ಆದ್ರೆ ಇದನ್ನೆ ಹವ್ಯಾಸ ಮಾಡಿಕೊಂಡು ದಿನವೂ ಲಿಫ್ಟ್ ಕೊಡಲು ಹೇಳಿದರೆ ಎಂತಹ ಸ್ನೇಹಿತನೇ ಆಗಿರಲಿ ಆತನಿಗೆ ಕೋಪ ಬರುವುದಂತು ಸಹಜ. ಇಂತಹ ಘಟನೆಯೊಂದು ನಡೆದಿದ್ದು, ದಿನವೂ ಲಿಫ್ಟ್ ಕೇಳಿ ಹಿಂಸಿಸುತ್ತಿದ್ದ ಸ್ನೇಹಿತನಿಗೆ ಮತ್ತೊಬ್ಬ ಸ್ನೇಹಿತನ ತಂಡವೊಂದು ಹಣ ಕೂಡಿಟ್ಟು ಹೊಸ ಕಾರನ್ನೇ ಗಿಫ್ಟ್ ಮಾಡಿರುವ ದೃಶ್ಯವು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ದಿನವೂ ಲಿಫ್ಟ್ ಕೇಳುತ್ತಿದ್ದ ಗೆಳೆಯನ ಕಾಟ ತಾಳಲಾರದೆ, ಸ್ನೇಹಿತರ ಗುಂಪು ಮಾಡಿದ ಕೆಲಸ ಏನು ಗೊತ್ತಾ.?

ನಡೆದ ಘಟನೆಯ ವಿಡಿಯೋವನ್ನು ದಕ್ಷಿಣ ಆಫ್ರಿಕಾನಲ್ಲಿನ ಟೊಯೊಟಾ ಡೀಲರ್ ಒಬ್ಬ ತನ್ನ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಟ್ರೋಲ್ ಪೇಜ್‍ಗಳಲ್ಲಿ ನಿಮ್ಮ ನೆಚ್ಚಿನ ಗೆಳೆಯನನ್ನು ಟ್ಯಾಗ್ ಮಾಡಿ ಆತನಿಗೂ ಸಹ ತನ್ನ ಸ್ನೇಹಿತರು ಇಂತಹ ಗಿಫ್ಟ್ ಕೊಡಲು ಹೇಳುವಷ್ಟು ವೈರಲ್ ಆಗಿದೆ.

ವೈರಲ್ ಆಗಿರುವ ಈ ವಿಡಿಯೋನಲ್ಲಿ ಸ್ನೇಹಿತರ ಗುಂಪಿನಲ್ಲಿದ್ದ ಯುವಕನು ದಿನಕ್ಕೊಮ್ಮೆ ಆ ಗುಂಪಿನಲ್ಲಿದ್ದ ಸ್ನೇಹಿತರಲ್ಲಿ ಒಬ್ಬರಿಗೆ ಕರೆ ಮಾಡಿ ತನಗೆ ಲಿಫ್ಟ್ ಕೊಡಲು ಒತ್ತಾಯಿಸುತ್ತಿದ್ದನಂತೆ. ಹೀಗಿರುವಾಗ ಆ ಸ್ನೇಹಿತರ ಗುಂಪೊಂದು ದಕ್ಷಿಣ ಆಫ್ರಿಕಾದಲ್ಲಿರುವ ಟೊಯೊಟಾ ಶೋರುಂಗೆ ಕರೆದೊಯ್ದು ಆತನಿಗೆ ಟೊಯೊಟಾ ಇಟಿಯಾಸ್ ಲಿವಾ ಕಾರನ್ನು ಗಿಫ್ಟ್ ಆಗಿ ಕೊಟ್ಟಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಆ ವಿಡಿಯೋ ಇಲ್ಲಿದೆ ನೋಡಿ..

ದಿನವೂ ಲಿಫ್ಟ್ ಕೇಳುತ್ತಿದ್ದ ಗೆಳೆಯನ ಕಾಟ ತಾಳಲಾರದೆ, ಸ್ನೇಹಿತರ ಗುಂಪು ಮಾಡಿದ ಕೆಲಸ ಏನು ಗೊತ್ತಾ.?

ಟೊಯೊಟಾ ಸಂಸ್ಥೆಯು ಈಗಾಗಲೇ ದೇಶಿಯ ಮಾರುಕಟ್ಟೆಯಲ್ಲಿ ಇನ್ಫರ್ನೊ ಆರೆಂಜ್ ಪೇಯಿಂಟ್ ಸ್ಕೀಮ್ ಅನ್ನು ತಮ್ಮ ಇಟಿಯಾಸ್ ಕ್ರಾಸ್ ಕಾರಿಗೆ ನೀಡಿದ್ದು, ಅದು ಡ್ಯುಯಲ್ ಟೋನ್ ಫಿನಿಶ್ ಅನ್ನು ಪಡೆದಿರುವುದಿಲ್ಲ. ಈಗಾಗಲೇ ಲಭ್ಯವಿರುವ ಡ್ಯುಯಲ್-ಟೋನ್ ಬಣ್ಣದ ಆಯ್ಕೆಗಳಂತೆಯೇ, ಇಟಿಯಾಸ್ ಲಿವಾದ ವಿ, ವಿಎಕ್ಸ್, ವಿಡಿ ಮತ್ತು ವಿಡಿಎಕ್ಸ್ ಟ್ರಿಮ್ಸ್ ಗಳೊಂದಿಗೆ ಹೊಸ ಆರೆಂಜ್-ಕಪ್ಪು ಬಣ್ಣ ಲಭ್ಯವಿದೆ.

ದಿನವೂ ಲಿಫ್ಟ್ ಕೇಳುತ್ತಿದ್ದ ಗೆಳೆಯನ ಕಾಟ ತಾಳಲಾರದೆ, ಸ್ನೇಹಿತರ ಗುಂಪು ಮಾಡಿದ ಕೆಲಸ ಏನು ಗೊತ್ತಾ.?

ಹೊಸ ಟೊಯೊಟಾ ಇಟಿಯಾಸ್ ಲಿವಾ ಡ್ಯುಯಲ್ ಟೋನ್ ಇನ್ಫರ್ನೊ ಆರೆಂಜ್ ಬಣ್ಣದ ಕಾರು ಬ್ಲೇಕ್ಡ್ ಔಟ್ ರೂಫ್, ರಿಯರ್ ಸ್ಪಾಯ್ಲರ್, ಫ್ರಂಟ್ ಗ್ರಿಲ್ ಮತ್ತು ಒಆರ್‍‍ವಿಎಮ್‍‍ಗಳನ್ನು ಪಡೆದುಕೊಂದಿರಲಿದ್ದು, ಕಾರಿನ ಇನ್ನಿತರೆ ಬಾಗಗಳನ್ನು ಆರೆಂಜ್ ಬಣ್ಣದಿಂದ ಸಜ್ಜುಗೊಳಿಸಲಾಗಿದೆ.

ದಿನವೂ ಲಿಫ್ಟ್ ಕೇಳುತ್ತಿದ್ದ ಗೆಳೆಯನ ಕಾಟ ತಾಳಲಾರದೆ, ಸ್ನೇಹಿತರ ಗುಂಪು ಮಾಡಿದ ಕೆಲಸ ಏನು ಗೊತ್ತಾ.?

ಹೊಸ ಬಣ್ಣ ಪಡೆದ ಟೊಯೊಟಾ ಇಟಿಯಾಸ್ ಲಿವಾ ಕಾರುಗಳು ಡ್ಯುಯಲ್ ಟೋನ್ ಅಲಾಯ್ ಚಕ್ರಗಳು ಮತ್ತು ಕಾರಿನ ಸೆಂಟ್ರಲ್ ಕಂಸೋಲ್ ಅನ್ನು ಪಿಯಾನೊ ಬ್ಲಾಕ್ ಬಣ್ಣದಿಂದ ವಿನ್ಯಾಸಗೊಳಿಸಲಾಗಿದೆ.

MOST READ: ಸ್ಮಾರ್ಟ್ ಹೈಬ್ರಿಡ್ ಟೆಕ್ನಾಲಜಿಯೊಂದಿಗೆ ಮಾರಾಟದಲ್ಲಿ ಮಿಂಚುತ್ತಿದೆ ಮಾರುತಿ ಬಲೆನೊ

ದಿನವೂ ಲಿಫ್ಟ್ ಕೇಳುತ್ತಿದ್ದ ಗೆಳೆಯನ ಕಾಟ ತಾಳಲಾರದೆ, ಸ್ನೇಹಿತರ ಗುಂಪು ಮಾಡಿದ ಕೆಲಸ ಏನು ಗೊತ್ತಾ.?

ಟೊಯೊಟಾ ಇಟಿಯಾಸ್ ಲಿವಾ ಡ್ಯುಯಲ್ ಟೋನ್ ಬಣ್ಣದ ಕಾರುಗಳು 2-ದಿನ್ ಮ್ಯೂಸಿಕ್ ಸಿಸ್ಟಮ್, ವಿದ್ಯುತ್‍ನಿಂದ ಮಡಿಚಬಹುದಾದ ಒಆರ್‍‍ವಿಅಮ್, ಡೇ/ನೈಟ್ ಐಆರ್‍‍‍ವಿಎಮ್ ಮತ್ತು ಹೈಟ್ ಅಡ್ಜಸ್ಟ್ ಮಾಡಬಹುದಾದ ಡ್ರೈವರ್ ಸೀಟ್ ಅನ್ನು ಪಡೆದುಕೊಂಡಿರಲಿದೆ.

MOST READ: ವಾಹನ ಚಾಲಕರೇ ಇತ್ತ ಗಮನಿಸಿ - ಓವರ್‍‍ಸ್ಪೀಡಿಂಗ್ ಮಾಡುವವರನ್ನು ತಡೆಯಲು ಪೊಲೀಸರ ಕೈಗೆ ಹೊಸ ಅಸ್ತ್ರ

ದಿನವೂ ಲಿಫ್ಟ್ ಕೇಳುತ್ತಿದ್ದ ಗೆಳೆಯನ ಕಾಟ ತಾಳಲಾರದೆ, ಸ್ನೇಹಿತರ ಗುಂಪು ಮಾಡಿದ ಕೆಲಸ ಏನು ಗೊತ್ತಾ.?

ಇದಲ್ಲದೆ ಡ್ಯುಯಲ್ ಟೋನ್ ಬಣ್ಣ ಪಡೆದ ಟೊಯೊಟಾ ಇಟಿಯಾಸ್ ಕಾರಿನ ಟಾಪ್ ವೇರಿಯಂಟ್ ಅಧಿಕವಾಗಿ ಸ್ಟೀರಿಂಗ್ ಮೌಂಟೆಡ್ ಆಡಿಯೊ ಕಂಟ್ರೋಲ್ಸ್, ಫಾಗ್ ಲ್ಯಾಂಪ್ಸ್ ಮತ್ತು ರಿವರ್ಸ್ ಪಾರ್ಕಿಂಗ್ ಸೆನ್ಸಾರ್ಸ್ ವೈಶಿಷ್ತ್ಯತೆಗಳನ್ನು ಪಡೆದುಕೊಂಡಿದೆ.

ದಿನವೂ ಲಿಫ್ಟ್ ಕೇಳುತ್ತಿದ್ದ ಗೆಳೆಯನ ಕಾಟ ತಾಳಲಾರದೆ, ಸ್ನೇಹಿತರ ಗುಂಪು ಮಾಡಿದ ಕೆಲಸ ಏನು ಗೊತ್ತಾ.?

ಎಂಜಿನ್ ಸಾಮರ್ಥ್ಯ

ಟೊಯೊಟಾ ಇಟಿಯಾಸ್ ಲಿವಾ ಕಾರುಗಳು 1.2 ಲೀಟರ್ ಪೆಟ್ರೋಲ್ ಹಾಗು 1.4 ಲೀಟರ್ ಡೀಸೆಲ್ ಎಂಜಿನ್ ಅನ್ನು ಪಡೆದುಕೊಂಡಿದ್ದು, ಪೆಟ್ರೋಲ್ ಎಂಜಿನ್ 79ಬಿಹೆಚ್‍‍ಪಿ ಮತ್ತು 104ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದೆ.

MOST READ: ರಾಜ್ಯದೆಲ್ಲೆಡೆ ಎಂಬತ್ತೊಂಬತ್ತು ಸಾವಿರಕ್ಕು ಹೆಚ್ಚಿನ ಡ್ರೈವಿಂಗ್ ಲೈಸೆನ್ಸ್ ರದ್ದು

ದಿನವೂ ಲಿಫ್ಟ್ ಕೇಳುತ್ತಿದ್ದ ಗೆಳೆಯನ ಕಾಟ ತಾಳಲಾರದೆ, ಸ್ನೇಹಿತರ ಗುಂಪು ಮಾಡಿದ ಕೆಲಸ ಏನು ಗೊತ್ತಾ.?

ಇನ್ನು 1.4 ಲೀಟರ್ ಡೀಸೆಲ್ ಎಂಜಿನ್‍ಗಳು 67ಬಿಹೆಚ್‍‍ಪಿ ಮತ್ತು 170ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದೆ. ಪೆಟ್ರೋಲ್ ಹಾಗು ಡೀಸೆಲ್ ಎಂಜಿನ್‍‍ಗಳನ್ನು 5 ಸ್ಪೀಡ್ ಮ್ಯಾನುವಲ್ ಗೇರ್‍‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ದಿನವೂ ಲಿಫ್ಟ್ ಕೇಳುತ್ತಿದ್ದ ಗೆಳೆಯನ ಕಾಟ ತಾಳಲಾರದೆ, ಸ್ನೇಹಿತರ ಗುಂಪು ಮಾಡಿದ ಕೆಲಸ ಏನು ಗೊತ್ತಾ.?

ಟೊಯೊಟಾ ಇಟಿಯಾಸ್ ಲಿವಾ ಕಾರುಗಳು ಈಗಾಗಲೆ ಮಾರುಕಟ್ಟೇಯಲ್ಲಿ ಲಭ್ಯವಿರುವ ಇನ್ನಿತರೆ ಡ್ಯುಯಲ್ ಟೋನ್ ಬಣ್ಣ ಹೊಂದಿರುವ ಕಾರುಗಳ ಬೆಲೆಯನ್ನೆ ಪಡೆಯಲಿದ್ದು, ಟೊಯೊಟಾ ಇಟಿಯಾಸ್ ಕಾರು ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ. 5.85 ಲಕ್ಷದಿಂದ ಪ್ರಾರಂಭಿಕ ಬೆಲೆಯನ್ನು ಪಡೆದುಕೊಂಡಿದೆ.

More from DriveSpark

Article Published On: Saturday, June 1, 2019, 16:46 [IST]
English summary
Group Of Friends Gifted Toyota Etios Liva to Their Friend Who Was Asking Lift Always In South Africa. Read In Kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+