ವಾಹನ ಚಾಲಕರೇ ಇತ್ತ ಗಮನಿಸಿ - ಓವರ್‍‍ಸ್ಪೀಡಿಂಗ್ ಮಾಡುವವರನ್ನು ತಡೆಯಲು ಪೊಲೀಸರ ಕೈಗೆ ಹೊಸ ಅಸ್ತ್ರ

ಭಾರತೀಯ ರಸ್ತೆಗಳಲ್ಲಿ ವಾಹನ ಚಲನೆ ಮಾಡುವುದು ಅಷ್ಟು ಸುಲಭವಾದ ಕೆಲಸವೇನಲ್ಲ. ಕೆಲವೊಮ್ಮೆ ನೀವು ಸರಿಯಾಗಿ ಟ್ರಾಫಿಕ್ ನಿಯಮಗಳನ್ನು ಪಾಲಿಸಿದರು ಸಹ ಬೇರೊಬ್ಬರ ತಪ್ಪಿನಿಂದ ಅಪಘಾತಗಳು ಸಂಭವಿಸುತ್ತದೆ. ಅಂತಹ ತಪ್ಪುಗಳಲ್ಲಿ ಓವರ್‍‍ಸ್ಪೀಡಿಂಗ್ ಕೂಡಾ ಒಂದು. ಓವರ್‍‍ಸ್ಪೀಡಿಂಗ್ ಮಾಡುವುದರಿಂದ ಚಾಲನೆಯ ನಿಯಂತ್ರಣವು ತಪ್ಪಿ ಅಪಘಾತಗಳು ಸಂಭವಿಸುತ್ತದೆ.

ವಾಹನ ಚಾಲಕರೇ ಇತ್ತ ಗಮನಿಸಿ - ಓವರ್‍‍ಸ್ಪೀಡಿಂಗ್ ಮಾಡುವವರನ್ನು ತಡೆಯಲು ಪೊಲೀಸರ ಕೈಗೆ ಹೊಸ ಅಸ್ತ್ರ

ಈ ನಿಟ್ಟಿನಲ್ಲಿ ಬಹು ಹಿಂದಿನಿಂದಲೂ ಸಹ ಹೆದ್ದಾರಿಗಳಲ್ಲಿ ಮತ್ತು ಪ್ರಮುಖ ರಸ್ತೆಗಳಲ್ಲಿ ಸ್ಪೀಡ್ ಲಿಮಿಟ್ ಪಲಕಗಳನ್ನು ಇಟ್ಟಿದರೂ ಸಹ ಅವುಗಳನ್ನು ಲೆಕ್ಕಿಸದೆ ಓವರ್‍‍ಪೀಡಿಂಗ್ ಮಾಡುವುದು ಕೆಲವರಿಗೆ ಹವ್ಯಾಸವಾಗಿ ಹೋಗಿದೆ. ಅಧಿಕ ಪರ್ಫಾರ್ಮೆನ್ಸ್ ಇರುವ ವಾಹನಗಳನ್ನು ಖರೀದಿಸಿ, ಹೆಚ್ಚಿನ ವೇಗದಲ್ಲಿ ವಾಹನ ಚಾಲನೆ ಮಾಡುವುದು ಹೆಚ್ಚಾಗಿ ಹೋಗಿದೆ ಎಂತಾನೆ ಹೇಳ್ಬೋದು. ಹೀಗಾಗಿ ಇಂತವರನ್ನು ತಡೆಯಲು ಪೊಲೀಸರ ಕೈಗೆ ಹೊಸ ಅಸ್ತ್ರವೊಂದು ದೊರೆತಿದೆ.

ವಾಹನ ಚಾಲಕರೇ ಇತ್ತ ಗಮನಿಸಿ - ಓವರ್‍‍ಸ್ಪೀಡಿಂಗ್ ಮಾಡುವವರನ್ನು ತಡೆಯಲು ಪೊಲೀಸರ ಕೈಗೆ ಹೊಸ ಅಸ್ತ್ರ

ಹೌದು, ಓವರ್‍‍ಸ್ಪೀಡಿಂಗ್ ಮಾಡುವವರನ್ನು ತಡೆಯಲು ರಾಜಸ್ಥಾನದ ಸರ್ಕಾರವು ಹೊಸ ಆಲೋಚನೆಯನ್ನು ಮಾಡಿ ಅಲ್ಲಿನ ಟ್ರಾಫಿಕ್ ಪೊಲೀಸರ ಕೈಗೆ ಹೈ-ಟೆಕ್ ಲೇಸರ್ ಗನ್ ಅನ್ನು ನೀಡಲಾಗಿದೆ. ಇದರಿಂದ ನೀವು ಸುಮಾರು ಒಂದು ಕಿಲೋಮೀಟರ್‍‍ನಿಂದ ಓವರ್‍‍ಸ್ಪೀಡಿಂಗ್ ಮಾಡುತ್ತಾ ಬರುತ್ತಿದ್ದರೂ ಸಹ ಈ ಉಪಕರಣದ ಸಹಾಯದಿಂದ ಕಂಡು ಹಿಡಿಯಬಹುದಾಗಿದೆ.

ವಾಹನ ಚಾಲಕರೇ ಇತ್ತ ಗಮನಿಸಿ - ಓವರ್‍‍ಸ್ಪೀಡಿಂಗ್ ಮಾಡುವವರನ್ನು ತಡೆಯಲು ಪೊಲೀಸರ ಕೈಗೆ ಹೊಸ ಅಸ್ತ್ರ

ದೇಶದಲ್ಲಿಯೇ ಮೊದಲು

ಸಧ್ಯ ರಾಜಸ್ಥಾನದಲ್ಲಿರುವ ಟ್ರಾಫಿಕ್ ಪೊಲೀಸರ ಕೈಗೆ ಸಿಕ್ಕ ಈ ಹೈ-ಟೆಕ್ ಲೇಸರ್ ಸ್ಪೀಡ್ ಗನ್‍ ನಮ್ಮ ದೇಶದಲ್ಲಿಯೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಹೀಗಾಗಿ ಇನ್ಮುಂದೇ ಅಲ್ಲಿನ ಸ್ಥಳಿಯರು ಮತ್ತು ಅಕಸ್ಮಾತ್ ನೀವೇನಾದರು ಲಾಂಗ್ ಡ್ರೈವ್ ಹೋಗುವಾಗ ಅಲ್ಲಿ ಓವರ್‍‍ಸ್ಪೀಡಿಂಗ್ ಮಾಡಿದರೆ ತೊಂದರೆಗೆ ಸಿಲುಕುವುದಂತು ಪಕ್ಕಾ.

ವಾಹನ ಚಾಲಕರೇ ಇತ್ತ ಗಮನಿಸಿ - ಓವರ್‍‍ಸ್ಪೀಡಿಂಗ್ ಮಾಡುವವರನ್ನು ತಡೆಯಲು ಪೊಲೀಸರ ಕೈಗೆ ಹೊಸ ಅಸ್ತ್ರ

ಮಾಹಿತಿಗಳ ಪ್ರಕಾರ ಅಲ್ಲಿನ ಸರ್ಕಾರವು ಒಟ್ಟು 39 ಹೈ-ಟೆಕ್ ಲೇಸರ್ ಗನ್ ಅನ್ನು ಖರೀದಿಸುವ ಯೋಜನೆಯಲ್ಲಿದ್ದು, ಇವುಗಳನ್ನು ರೂ. 3.9 ಕೋಟಿಯ ವೆಚ್ಚದಲ್ಲಿ ಖರೀದಿಸಲಾಗುತ್ತಿದೆ ಎಂದು ಹೇಳಲಾಗಿದೆ. ಅಂದರೆ ಒಂದೊಂದು ಉಪರಣವು ರೂ. 10 ಲಕ್ಷದ ವೆಚ್ಚದಲ್ಲಿ ಖರೀದಿಸಿ ಸರ್ಕಾರವು ಇದನ್ನು ಟ್ರಾಫಿಕ್ ಪೊಲೀಸರ ಕೈಗೆ ನೀಡಲಾಗುತ್ತದೆ.

ವಾಹನ ಚಾಲಕರೇ ಇತ್ತ ಗಮನಿಸಿ - ಓವರ್‍‍ಸ್ಪೀಡಿಂಗ್ ಮಾಡುವವರನ್ನು ತಡೆಯಲು ಪೊಲೀಸರ ಕೈಗೆ ಹೊಸ ಅಸ್ತ್ರ

ಲೇಸರ್ ಆಧಾರಿತ ಈ ಹೈ-ಟೆಕ್ ಸ್ಪೀಡ್‍ ಗನ್‍ಗಳು ಸಾಧಾರಣ ರ್‍ಯಾಡರ್ ಆಧಾರಿತ ಸ್ಪೀಡ್ ಗನ್‍‍ಗಳಿಗುಂತಲೂ ಹತ್ತು ಪಟ್ಟು ಅಡ್ವಾನ್ಸ್ಡ್ ಎಂದು ಹೇಳಬಹುದು. ಇವುಗಳು ತುಂಬಾ ಸುಲಭವಗಿ ನಿಯಂತ್ರಿಸಬಹುದಾಗಿದ್ದು, ಮತ್ತು ಕ್ಯಾಮೆರಾವನ್ನು ಆರೋಹಿಸಲು ಟ್ರೈಪಾಡ್ ಅಗತ್ಯವಿಲ್ಲದೆಯೇ ಕೈಯಲ್ಲಿ ಹಿಡಿಯುವ ಸಾಧನವಾಗಿ ಬಳಸಬಹುದು.

ವಾಹನ ಚಾಲಕರೇ ಇತ್ತ ಗಮನಿಸಿ - ಓವರ್‍‍ಸ್ಪೀಡಿಂಗ್ ಮಾಡುವವರನ್ನು ತಡೆಯಲು ಪೊಲೀಸರ ಕೈಗೆ ಹೊಸ ಅಸ್ತ್ರ

ಒಂದೇ ಬಾರಿಗೆ ಮೂರು ವಾಹನಗಳ ವೇಗವನ್ನು ಕಂಡು ಹಿಡುಯಬಹುದು

ಲೇಸರ್ ಆಧಾರಿತ ಸ್ಪೀಡ್ ಗನ್‍ಗಳು ಎಷ್ಟರ ಮಟ್ಟಿಗೆ ಸುಧಾರಿತವೆಂದರೆ ಒಂದೇ ಬಾರಿ ಮೂರು ವಾಹನಗಳ ಸ್ಪೀಡ್ ಅನ್ನು ಇದು ಕಂಡುಹಿಡಿಯುತ್ತಂತೆ. ಈ ಉಪಕರಣದ ಮತ್ತೊಂದು ವಿಶೇಷವೆಂದರೆ ವಾಹನಗಳ ವ್ಯಾಪ್ತಿಯನ್ನು ಸಹ ಪತ್ತೆ ಹಚ್ಚಬಲ್ಲವು.

MOST READ: ಸ್ಮಾರ್ಟ್ ಹೈಬ್ರಿಡ್ ಟೆಕ್ನಾಲಜಿಯೊಂದಿಗೆ ಮಾರಾಟದಲ್ಲಿ ಮಿಂಚುತ್ತಿದೆ ಮಾರುತಿ ಬಲೆನೊ

ವಾಹನ ಚಾಲಕರೇ ಇತ್ತ ಗಮನಿಸಿ - ಓವರ್‍‍ಸ್ಪೀಡಿಂಗ್ ಮಾಡುವವರನ್ನು ತಡೆಯಲು ಪೊಲೀಸರ ಕೈಗೆ ಹೊಸ ಅಸ್ತ್ರ

ಸಧ್ಯ ಟ್ರಾಫಿಕ್ ಪೊಲೀಸರ ಕೈಯಲ್ಲಿರುವ ರ್‍ಯಾಡರ್ ಸ್ಪೀಡ್ ಗನ್‍ಗಳು ಕೇವಲ 500 ಮೀಟರ್ ದೂರದಲ್ಲಿರುವ ವಾಹನದ ವೇಗವನ್ನು ಕಂಡು ಹಿಡಿಯುವ ಸಾಮರ್ಥ್ಯವಿದ್ದರೂ, ಈ ಹೊಸ ಹೈ-ಟೆಕ್ ಲೇಸರ್ ಸ್ಪೀಡ್ ಗನ್‍‍ಗಳ ವ್ಯಾಪ್ತಿಯು ಸುಮಾರು 1 ಕಿಲೋಮೀಟರ್‍‍ಗಿಂತಲೂ ಹೆಚ್ಚಿನ ವ್ಯಾಪ್ತಿಯಲ್ಲಿರುವ ವಾಹನಗಳ ವೇಗವನ್ನು ಪತ್ತೆಹಚ್ಚಬಹುದಾಗಿದೆ.

MOST READ: ರಾಜ್ಯದೆಲ್ಲೆಡೆ ಎಂಬತ್ತೊಂಬತ್ತು ಸಾವಿರಕ್ಕು ಹೆಚ್ಚಿನ ಡ್ರೈವಿಂಗ್ ಲೈಸೆನ್ಸ್ ರದ್ದು

ವಾಹನ ಚಾಲಕರೇ ಇತ್ತ ಗಮನಿಸಿ - ಓವರ್‍‍ಸ್ಪೀಡಿಂಗ್ ಮಾಡುವವರನ್ನು ತಡೆಯಲು ಪೊಲೀಸರ ಕೈಗೆ ಹೊಸ ಅಸ್ತ್ರ

ಪ್ರಸ್ತುತ, ಐದು ಸಾಧನಗಳನ್ನು USA ನಿಂದ ಆಮದು ಮಾಡಲಾಗಿದೆ. ಇದನ್ನು ಅಹಮದಾಬಾದ್ ಪೊಲೀಸರಿಗೆ ನೀಡಲಾಗುತ್ತದೆ ಮತ್ತು ಮುಂಬರುವ ದಿನಗಳಲ್ಲಿ, ಪ್ರತಿ ಜಿಲ್ಲೆಯ ಪೋಲಿಸ್ ಪಡೆಯ ಕೈಗೆ ಈ ಸಾಧನಗಳಲ್ಲಿ ಒಂದನ್ನು ಒದಗಿಸಲಾಗುವುದು.

MOST READ: ಶೀಘ್ರವೇ ಬ್ಯಾನ್ ಆಗಲಿವೆ 150ಸಿಸಿಗಿಂತಲೂ ಕಡಿಮೆ ಸಾಮರ್ಥ್ಯದ ವಾಹನಗಳು

ವಾಹನ ಚಾಲಕರೇ ಇತ್ತ ಗಮನಿಸಿ - ಓವರ್‍‍ಸ್ಪೀಡಿಂಗ್ ಮಾಡುವವರನ್ನು ತಡೆಯಲು ಪೊಲೀಸರ ಕೈಗೆ ಹೊಸ ಅಸ್ತ್ರ

ಈ ಸ್ಪೀಡ್ ಗನ್ ಸ್ವತಃ ಇಂಟರ್‍‍ನೆಟ್ ಸಂಪರ್ಕ ಹೊಂದಿದ್ದು, ಇ-ಚಲನ್ ಅನ್ನು ಫೋಟೊದೊಂದಿಗೆ ವಾಹನದ ಮಾಲೀಕರಿಗೆ ಕಳುಹಿಸಲಾಗುತ್ತದೆ. ಅದಾಗ್ಯೂ, ವಿವರಗಳನ್ನು ಪರಿಶೀಲಿಸಲು ಸ್ಥಳದಲ್ಲಿ ಚಾಲಾನ್ ಮುದ್ರಿಸಬಹುದಾಗಿದ್ದು, ಸಾಧನವು ಅತಿ ವೇಗವಾಗಿ ಚಲಿಸುವ ವಾಹನಗಳ ವೀಡಿಯೊಗಳನ್ನು ರೆಕಾರ್ಡ್ ಮಾಡಬಹುವ ಟೆಕ್ನಾಲಜಿಯನ್ನು ಇವು ಪಡೆದುಕೊಂಡಿದೆ.

ವಾಹನ ಚಾಲಕರೇ ಇತ್ತ ಗಮನಿಸಿ - ಓವರ್‍‍ಸ್ಪೀಡಿಂಗ್ ಮಾಡುವವರನ್ನು ತಡೆಯಲು ಪೊಲೀಸರ ಕೈಗೆ ಹೊಸ ಅಸ್ತ್ರ

ನಗರದ ಪೊಲೀಸ್ ಇಲಾಖೆ ಕಾರೈ ಪೊಲೀಸ್ ಅಕಾಡೆಮಿಯಲ್ಲಿ ಮೂರು ದಿನಗಳ ಕಾರ್ಯಾಗಾರವನ್ನು ಏರ್ಪಡಿಸಿತು. ಹೊಸ ಸಾಧನವನ್ನು ಪರಿಣಾಮಕಾರಿಯಾಗಿ ಮತ್ತು ಸರಿಯಾಗಿ ಹೇಗೆ ಬಳಸಬೇಕೆಂಬುದನ್ನು ಪೊಲೀಸ್ ಅಧಿಕಾರಿಗಳಿಗೆ ತರಬೇತಿ ನೀಡಲಾಯಿತು. 200 ಕ್ಕೂ ಹೆಚ್ಚಿನ ಪೊಲೀಸರಿಗೆ ತರಬೇತಿಯನ್ನು ನೀಡಲಾಗಿದೆ ಎಂದು ಗಮನಿಸಬೇಕು. ಆದ್ದರಿಂದ ಮುಂಬರುವ ದಿನಗಳಲ್ಲಿ ಸಂಚಾರದ ವೇಗವನ್ನು ನಿಯಂತ್ರಿಸಲು ಮತ್ತು ನಿಯಂತ್ರಿಸಲು ಹಲವಾರು ಪೊಲೀಸರು ಸಾಧನವನ್ನು ಪಡೆಯುತ್ತಾರೆ.

Note: Images for representation purpose only

Most Read Articles

Kannada
English summary
Rajasthan Traffic Police Gets Laser Speed Gun To Detect Over Speeding. Read In Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X