ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಖರೀದಿಸಿದ ಬೆಂಝ್ ದುಬಾರಿ ಕಾರಿನ ವಿಶೇಷತೆ ಏನು ಗೊತ್ತಾ?

ಭಾರತದಲ್ಲಿ ಮರ್ಸಿಡಿಸ್ ಬೆಂಝ್ ಸಂಸ್ಥೆಯು ಪ್ರತಿ ವರ್ಷ ಸರಾಸರಿಯಾಗಿ 15 ಸಾವಿರ ಕಾರುಗಳನ್ನು ಮಾರಾಟ ಮಾಡುತ್ತಿದ್ದು, ಬಹುತೇಕ ಉದ್ಯಮಿಗಳು, ಸ್ಟಾರ್ ನಟರು ಮತ್ತು ಕ್ರಿಕೆಟಿಗರ ಬಳಿ ಬೆಂಝ್ ನಿರ್ಮಾಣದ ಹೈ ಎಂಡ್ ಕಾರುಗಳಿವೆ. ಇದೀಗ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಕೂಡಾ ಬೆಂಝ್ ನಿರ್ಮಾಣದ ಹೈ ಎಂಡ್ ಕಾರು ಮಾದರಿಯೊಂದನ್ನು ಖರೀದಿಸಿ ಸುದ್ದಿಯಲ್ಲಿದ್ದಾರೆ.

ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಖರೀದಿಸಿದ ಬೆಂಝ್ ದುಬಾರಿ ಕಾರಿನ ವಿಶೇಷತೆ ಏನು ಗೊತ್ತಾ?

ಟೀ ಇಂಡಿಯಾದಲ್ಲಿ ಅಲ್‌ರೌಂಡರ್ ಆಗಿ ಮಿಂಚುತ್ತಿರುವ ಹಾರ್ದಿಕ್ ಪಾಂಡ್ಯ ಸದಾ ಒಂದಿಲ್ಲಾ ಒಂದು ಸುದ್ದಿಯಲ್ಲಿರುತ್ತಾರೆ. ಇತ್ತೀಚೆಗಷ್ಟೇ ಖಾಸಗಿ ವಾಹಿನಿವೊಂದರ ರಿಯಾಲಿಟಿ ಶೋನಲ್ಲಿ ಮಹಿಳೆಯ ಕುರಿತು ಅಸಭ್ಯ ಹೇಳಿಕೆ ನೀಡಿ ಟೀ ಇಂಡಿಯಾದಿಂದ ಅಮಾನತು ಶಿಕ್ಷೆಗೆ ಒಳಗಾಗಿದ್ದ ಪಾಂಡ್ಯ ಇದೀಗ ಐಪಿಎಲ್‌ನಲ್ಲಿ ಉತ್ತಮ ಪ್ರದರ್ಶನದ ಜೊತೆ ಜೊತೆಗೆ ದುಬಾರಿ ಮೌಲ್ಯದ ಮರ್ಸಿಡಿಸ್ ಬೆಂಝ್ ಎಎಂಜಿ ಜಿ63 ಎಸ್‌ಯುವಿ ಕಾರನ್ನು ಖರೀದಿಸಿದ್ದಾರೆ.

ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಖರೀದಿಸಿದ ಬೆಂಝ್ ದುಬಾರಿ ಕಾರಿನ ವಿಶೇಷತೆ ಏನು ಗೊತ್ತಾ?

ಸದ್ಯ ಐಪಿಎಲ್ ಟೂರ್ನಿಯತ್ತ ಹೆಚ್ಚಿನ ಒತ್ತು ನೀಡುತ್ತಿರುವ ಹಾರ್ದಿಕ್ ಪಾಂಡ್ಯ ಅವರು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ಖಾಸಗಿ ವಿಚಾರಗಳಿಗೆ ಕೊಂಚ ಬ್ರೇಕ್ ಹಾಕಿದ್ದು, ಹೊಸ ಕಾರು ಖರೀದಿಯ ವಿಚಾರವನ್ನು ಸಹ ಗುಟ್ಟಾಗಿದ್ದರೂ ಹಾರ್ದಿಕ್ ಪಾಂಡ್ಯ ಸಹೋದರ ಕುನಾಲ್ ಪಾಂಡ್ಯ ಅವರು ಹೊಸ ಕಾರಿನ ವಿಡಿಯೋ ಅನ್ನು ಸಾಮಾಜಿಕ ಜಾಲ ತಾಣಗಳಲ್ಲಿ ಹಂಚಿಕೊಂಡಿದ್ದಾರೆ.

ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಖರೀದಿಸಿದ ಬೆಂಝ್ ದುಬಾರಿ ಕಾರಿನ ವಿಶೇಷತೆ ಏನು ಗೊತ್ತಾ?

ಮುಂಬೈನಲ್ಲಿ ಹೊಸ ಕಾರು ಖರೀದಿ ಮಾಡಲಾಗಿದ್ದು, ಆಪ್ ರೋಡಿಂಗ್ ಕೌಶಲ್ಯ ಹಾಗೂ ಸುಧಾರಿತ ತಂತ್ರಜ್ಞಾನ ಪ್ರೇರಿತ ಮರ್ಸಿಡಿಸ್ ಎಎಂಜಿ ಜಿ63 ಕಾರು ದೆಹಲಿ ಎಕ್ಸ್‌ಶೋರಂ ಪ್ರಕಾರ ರೂ.2.19 ಕೋಟಿ ಬೆಲೆ ಹೊಂದಿದೆ.

ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಖರೀದಿಸಿದ ಬೆಂಝ್ ದುಬಾರಿ ಕಾರಿನ ವಿಶೇಷತೆ ಏನು ಗೊತ್ತಾ?

ಆಪ್ ರೋಡಿಂಗ್ ಬಗೆಗೆ ಸಾಕಷ್ಟು ಕ್ರೇಜ್ ಹೊಂದಿರುವ ಹಾರ್ದಿಕ್ ಪಾಂಡ್ಯ ಅವರು ಹೊಸ ಮರ್ಸಿಡಿಸ್ ಎಎಂಜಿ ಜಿ63 ಖರೀದಿಸುವ ಬಗ್ಗೆ ಈ ಹಿಂದೊಮ್ಮೆ ಸುಳಿವು ನೀಡಿದ್ದಲ್ಲದೇ ಇದೀಗ ತಮ್ಮ ಕನಸಿನ ಕಾರನ್ನು ಖರೀದಿಸಿದ್ದು, ಬಾಲಿವುಡ್ ನಟ 47 ವರ್ಷದ ಜಿಮ್ಮಿ ಶೇರ್‌ಗಿಲ್‌ ಕೂಡಾ ಇದೇ ಕಾರು ಮಾದರಿಯನ್ನು ಕಳೆದ 2 ತಿಂಗಳ ಹಿಂದಷ್ಟೇ ಖರೀದಿ ಮಾಡಿ ಸುದ್ದಿಯಾಗಿದ್ದರು.

ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಖರೀದಿಸಿದ ಬೆಂಝ್ ದುಬಾರಿ ಕಾರಿನ ವಿಶೇಷತೆ ಏನು ಗೊತ್ತಾ?

5.5-ಲೀಟರ್ ಟ್ವಿನ್ ಟರ್ಬೋ ವಿ8 ಪೆಟ್ರೋಲ್ ಎಂಜಿನ್ ಹೊಂದಿರುವ ಮರ್ಸಿಡಿಸ್ ಎಎಂಜಿ ಜಿ63 ಕಾರುಗಳು 571-ಬಿಎಚ್‌ಪಿ ಮತ್ತು 560-ಎನ್ಎಂ ಟಾರ್ಕ್ ಉತ್ಪಾದನಾ ಶಕ್ತಿ ಹೊಂದಿದ್ದು, 7-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನೊಂದಿಗೆ ಕಠಿಣ ಪರಿಸ್ಥಿತಿಯಲ್ಲೂ ಉತ್ತಮ ಕೌಶಲ್ಯ ಪ್ರದರ್ಶನ ಮಾಡಬಲ್ಲವು.

ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಖರೀದಿಸಿದ ಬೆಂಝ್ ದುಬಾರಿ ಕಾರಿನ ವಿಶೇಷತೆ ಏನು ಗೊತ್ತಾ?

ಜೊತೆಗೆ 4x4 ಡ್ರೈವ್ ಟೆಕ್ನಾಲಜಿ ಹೊಂದಿರುವ ಮರ್ಸಿಡಿಸ್ ಎಎಂಜಿ ಜಿ63 ಕಾರುಗಳು ಕೇವಲ 5.4 ಸೇಕೆಂಡುಗಳಲ್ಲಿ ಸೊನ್ನೆಯಿಂದ 100 ಕಿಮಿ ವೇಗ ಪಡೆದುಕೊಳ್ಳುವುದಲ್ಲದೇ ಗಂಟೆಗೆ 210 ಕಿ.ಮೀ ಟಾಪ್ ಸ್ಪೀಡ್ ಸಾಧಿಸುವ ಗುಣ ಹೊಂದಿವೆ.

MOST READ: ಟಾಪ್ ಸ್ಪೀಡ್ ಶೋಕಿ- ಯುಟ್ಯೂಬ್‌ನಲ್ಲಿ ಲೈವ್ ಮಾಡಿ ಜೈಲು ಸೇರಿದ ಫೋರ್ಡ್ ಮಸ್ಟಾಂಗ್ ಮಾಲೀಕ..!

ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಖರೀದಿಸಿದ ಬೆಂಝ್ ದುಬಾರಿ ಕಾರಿನ ವಿಶೇಷತೆ ಏನು ಗೊತ್ತಾ?

ಹೀಗಾಗಿಯೇ ಪ್ರತಿ ಲೀಟರ್‌ ಪೆಟ್ರೋಲ್‌ಗೆ ಕೇವಲ 5 ಕಿಮಿ ಮೈಲೇಜ್ ನೀಡುವ ಮರ್ಸಿಡಿಸ್ ಎಎಂಜಿ ಜಿ63 ಕಾರುಗಳು ದೈನಂದಿನ ಬಳಕೆಗಿಂತ ಆಪ್ ರೋಡ್‌ಗೆ ಹೆಚ್ಚು ಸೂಕ್ತವಾಗಿದ್ದು, ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಮತ್ತು ನಟ ಜಿಮ್ಮಿ ಶೇರ್‌ಗಿಲ್‌ ಕೂಡಾ ಇದೇ ಉದ್ದೇಶಕ್ಕಾಗಿ ಈ ಹೊಸ ಕಾರನ್ನು ಖರೀದಿ ಮಾಡಿದ್ದಾರೆ.

ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಖರೀದಿಸಿದ ಬೆಂಝ್ ದುಬಾರಿ ಕಾರಿನ ವಿಶೇಷತೆ ಏನು ಗೊತ್ತಾ?

ಇನ್ನು ಭಾರತೀಯ ಮಾರುಕಟ್ಟೆಯಲ್ಲಿರುವ ಮರ್ಸಿಡಿಸ್ ಎಎಂಜಿ ಜಿ63 ಕಾರಿಗಿಂತ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿರುವ ಮರ್ಸಿಡಿಸ್ ಎಎಂಜಿ ಜಿ65 ಕಾರುಗಳು ಇನ್ನು ಹೆಚ್ಚಿನ ಎಂಜಿನ್ ಸಾಮರ್ಥ್ಯ ಹೊಂದಿದ್ದು, 6-ಲೀಟರ್ ಟ್ವಿನ್ ಟರ್ಬೋ ವಿ12 ಎಂಜಿನ್‌ನೊಂದಿಗೆ ಅಲ್ಟ್ರಾ ಲಗ್ಷುರಿ ಮೆಬ್ಯಾಚ್ ಎಸ್600 ಕಾರಿಗೆ ಸರಿಸಮನಾಗಿವೆ.

MOST READ: 30 ಕೋಟಿಗೂ ಹೆಚ್ಚು ಬೆಲೆಬಾಳುವ ಈ ಐಷಾರಾಮಿ ಎಸ್‌ಯುವಿ ಕಾರಿನ ವಿಶೇಷತೆ ಏನು?

ಹಾಗೆಯೇ ಹಾರ್ದಿಕ್ ಪಾಂಡ್ಯ ಬಳಿ ಈಗಾಗಲೇ ಲ್ಯಾಂಡ್ ರೋವರ್ ಡಿಸ್ಕವರಿ ಸ್ಪೋರ್ಟ್, ಬಿಎಂಡಬ್ಲ್ಯು ಎಕ್ಸ್5 ಮತ್ತು ಮಿನಿ ಕೂಪರ್, ಫಾರ್ಚೂನರ್ ಸೇರಿದಂತೆ ಹಲವು ಐಷಾರಾಮಿ ಕಾರುಗಳ ಸಂಗ್ರಹವಿದ್ದು, ಇದೀಗ ಹೊಸದಾಗಿ ಮರ್ಸಿಡಿಸ್ ಬೆಂಝ್ ಎಎಂಜಿ ಜಿ63 ಎಸ್‌ಯುವಿ ಸೇರ್ಪಡೆಯಾಗಿದೆ.

More from DriveSpark

Article Published On: Monday, April 8, 2019, 18:01 [IST]
English summary
Hardik Pandya bought new Mercedes AMG G63 SUV worth 2.19 Crore. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+