2030ರ ವೇಳೆಗೆ ಸಂಪೂರ್ಣ ಎಲೆಕ್ಟ್ರಿಕ್ ವಾಹನಗಳನ್ನು ಹೊಂದಲಿದೆ ಈ ರಾಜ್ಯ

ಹಿಮಾಚಲ ಪ್ರದೇಶವು 2030ರ ವೇಳೆಗೆ ಸಂಪೂರ್ಣವಾಗಿ ಎಲೆಕ್ಟ್ರಿಕ್ ವಾಹನಗಳನ್ನು ಹೊಂದುವ ಗುರಿಯನ್ನಿಟ್ಟು ಕೊಂಡಿದೆ. ಹಿಮಾಚಲ ಪ್ರದೇಶದ ರಾಜ್ಯ ಸರ್ಕಾರವು ಎಲೆಕ್ಟ್ರಿಕ್ ವಾಹನಗಳ ಅಳವಡಿಕೆಯಲ್ಲಿ ಮಾದರಿ ರಾಜ್ಯವಾಗಲು ಬಯಸಿದೆ. ಮುಂದಿನ ಹತ್ತು ವರ್ಷದ ವೇಳೆಗೆ ರಾಜ್ಯದಲ್ಲಿರುವ ಎಲ್ಲಾ ವಾಹನಗಳು ಎಲೆಕ್ಟ್ರಿಕ್ ವಾಹನಗಳಾಗಿರಲಿ ಎಂದು ಬಯಸಿದೆ.

2030ರ ವೇಳೆಗೆ ಸಂಪೂರ್ಣ ಎಲೆಕ್ಟ್ರಿಕ್ ವಾಹನಗಳನ್ನು ಹೊಂದಲಿದೆ ಈ ರಾಜ್ಯ

ಎಲೆಕ್ಟ್ರಿಕ್ ವಾಹನಗಳು ಮುಂಬರುವ ದಿನಗಳಲ್ಲಿ ಹೆಚ್ಚು ಜನಪ್ರಿಯವಾಗಲಿವೆ. ಬಹುತೇಕ ಎಲ್ಲಾ ವಾಹನ ತಯಾರಕ ಕಂಪನಿಗಳು ಎಲೆಕ್ಟ್ರಿಕ್ ವಾಹನಗಳನ್ನು ಅಭಿವೃದ್ಧಿಪಡಿಸುತ್ತಿವೆ. ಇನ್ನೂ ಕೆಲವು ಕಂಪನಿಗಳು ಈಗಾಗಲೇ ಎಲೆಕ್ಟ್ರಿಕ್ ವಾಹನಗಳನ್ನು ಬಿಡುಗಡೆಗೊಳಿಸಿವೆ.

2030ರ ವೇಳೆಗೆ ಸಂಪೂರ್ಣ ಎಲೆಕ್ಟ್ರಿಕ್ ವಾಹನಗಳನ್ನು ಹೊಂದಲಿದೆ ಈ ರಾಜ್ಯ

ಭಾರತದ ಮಾರುಕಟ್ಟೆಯಲ್ಲಿ ಬೇರೆ ಅಭಿವೃದ್ದಿ ಹೊಂದಿದ ದೇಶಗಳಂತೆ ಹೆಚ್ಚಿನ ಪ್ರಮಾಣದ ಎಲೆಕ್ಟ್ರಿಕ್ ವಾಹನಗಳನ್ನು ಬಿಡುಗಡೆಗೊಳಿಸಲಾಗಿಲ್ಲ. ಆದರೂ ಸಹ, ಭಾರತದಲ್ಲಿನ ಎಲೆಕ್ಟ್ರಿಕ್ ವಾಹನಗಳ ಮಾರುಕಟ್ಟೆಯು ಕಳೆದ ಕೆಲ ವರ್ಷಗಳಿಂದ ವ್ಯಾಪಕ ಬೆಳವಣಿಗೆಯನ್ನು ಕಂಡಿದೆ. ಕೇಂದ್ರ ಸರ್ಕಾರವು ಎಲೆಕ್ಟ್ರಿಕ್ ವಾಹನಗಳನ್ನು ಉತ್ತೇಜಿಸಲು ಹಲವಾರು ಕ್ರಮಗಳನ್ನು ಕೈಗೊಂಡಿದೆ.

2030ರ ವೇಳೆಗೆ ಸಂಪೂರ್ಣ ಎಲೆಕ್ಟ್ರಿಕ್ ವಾಹನಗಳನ್ನು ಹೊಂದಲಿದೆ ಈ ರಾಜ್ಯ

ಕೆಲ ತಿಂಗಳ ಹಿಂದೆ ಕೇಂದ್ರ ಸರ್ಕಾರವು ಎಲೆಕ್ಟ್ರಿಕ್ ವಾಹನಗಳ ಮೇಲಿನ ಜಿ‍ಎಸ್‍‍ಟಿಯನ್ನು 12% ನಿಂದ 5%ಗಳಿಗೆ ಇಳಿಸಿದೆ. ಆದರೂ ಸಹ ಸರ್ಕಾರವು ನಿರೀಕ್ಷಿಸಿದ ಮಟ್ಟಕ್ಕೆ ಎಲೆಕ್ಟ್ರಿಕ್ ವಾಹನಗಳು ತಮ್ಮ ಗುರಿಯನ್ನು ಮುಟ್ಟಿಲ್ಲ.

2030ರ ವೇಳೆಗೆ ಸಂಪೂರ್ಣ ಎಲೆಕ್ಟ್ರಿಕ್ ವಾಹನಗಳನ್ನು ಹೊಂದಲಿದೆ ಈ ರಾಜ್ಯ

2017ರಲ್ಲಿ ಕೇಂದ್ರ ಸರ್ಕಾರವು 2030ರ ವೇಳೆಗೆ ಎಲ್ಲಾ ವಾಹನಗಳನ್ನು ಎಲೆಕ್ಟ್ರಿಕರಣಗೊಳಿಸಲು ಬಯಸಿತ್ತು. ಹಲವರು ಈ ನಿರ್ಧಾರವನ್ನು ಆಶಾದಾಯಕ ಬೆಳವಣಿಗೆಯೆಂದು ಕರೆದರೂ ಸಹ ಸರ್ಕಾರವು ತನ್ನ ನಿರ್ಧಾರದಿಂದ ಹಿಂದೆ ಸರಿಯಿತು.

2030ರ ವೇಳೆಗೆ ಸಂಪೂರ್ಣ ಎಲೆಕ್ಟ್ರಿಕ್ ವಾಹನಗಳನ್ನು ಹೊಂದಲಿದೆ ಈ ರಾಜ್ಯ

ತನ್ನ ನಿರ್ಧಾರವನ್ನು ಪುನರ್ ಪರಿಶೀಲಿಸಿದ ಸರ್ಕಾರವು ಕಡೇ ಪಕ್ಷ ಮಾರುಕಟ್ಟೆಯಲ್ಲಿರುವ 30% ವಾಹನಗಳನ್ನು ಎಲೆಕ್ಟ್ರಿಕರಣಗೊಳಿಸಲು ಬಯಸಿದೆ. ಆದರೆ ಹಿಮಾಚಲ ಪ್ರದೇಶವು 2030ರ ವೇಳೆಗೆ ತನ್ನ ರಾಜ್ಯದಲ್ಲಿರುವ ಎಲ್ಲಾ ವಾಹನಗಳನ್ನು 100%ನಷ್ಟು ಎಲೆಕ್ಟ್ರಿಕರಣಗೊಳಿಸಲು ಬಯಸಿದೆ.

2030ರ ವೇಳೆಗೆ ಸಂಪೂರ್ಣ ಎಲೆಕ್ಟ್ರಿಕ್ ವಾಹನಗಳನ್ನು ಹೊಂದಲಿದೆ ಈ ರಾಜ್ಯ

ಹಿಮಾಚಲ ಪ್ರದೇಶ ಎಲೆಕ್ಟ್ರಿಕ್ ವಾಹನ ನೀತಿ 2019ರ ಕರಡು ರೂಪಿಸಲು ಸರ್ಕಾರವು ಸಭೆಯನ್ನು ಕರೆದಿತ್ತು. ಈ ಹೊಸ ನೀತಿಯ ಉದ್ದೇಶವು ಹಿಮಾಚಲ ಪ್ರದೇಶವನ್ನು ಎಲೆಕ್ಟ್ರಿಕ್ ವಾಹನಗಳ ಅಳವಡಿಕೆಯಲ್ಲಿ ಹಿಮಾಚಲ ಪ್ರದೇಶವನ್ನು ಮಾದರಿ ರಾಜ್ಯವನ್ನಾಗಿಸುವುದರ ಜೊತೆಗೆ, ಸುರಕ್ಷಿತವಾದ ಹಾಗೂ ಪರಿಸರ ಸ್ನೇಹಿ ಎಲೆಕ್ಟ್ರಿಕ್ ವಾಹನಗಳನ್ನು ಬಿಡುಗಡೆಗೊಳಿಸುವುದಾಗಿದೆ.

MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

2030ರ ವೇಳೆಗೆ ಸಂಪೂರ್ಣ ಎಲೆಕ್ಟ್ರಿಕ್ ವಾಹನಗಳನ್ನು ಹೊಂದಲಿದೆ ಈ ರಾಜ್ಯ

ಹಿಮಾಚಲ ಪ್ರದೇಶದ ಮುಖ್ಯ ಕಾರ್ಯದರ್ಶಿಗಳಾದ ಶ್ರೀಕಾಂತ್ ಬಾಲ್ಡಿರವರು ಮಾತನಾಡಿ, ವಿಶ್ವ ಸಂಸ್ಥೆಯ ಅಭಿವೃದ್ಧಿ ಗುರಿ ಹಾಗೂ ಕೇಂದ್ರ ಸರ್ಕಾರದ ದೂರದೃಷ್ಟಿಯಂತೆ, ಹೊಸ ಎಲೆಕ್ಟ್ರಿಕ್ ವಾಹನ ನೀತಿಯನ್ವಯ ರಾಜ್ಯದಲ್ಲಿ 100%ನಷ್ಟು ಎಲೆಕ್ಟ್ರಿಕ್ ವಾಹನಗಳನ್ನು ಜಾರಿಗೊಳಿಸಲಾಗುವುದು ಎಂದು ಹೇಳಿದರು.

MOST READ: ಹಳೆಯದಾದಷ್ಟು ದುಬಾರಿಯಾಗುತ್ತವೆ ಈ ಜನಪ್ರಿಯ ಬೈಕುಗಳು

2030ರ ವೇಳೆಗೆ ಸಂಪೂರ್ಣ ಎಲೆಕ್ಟ್ರಿಕ್ ವಾಹನಗಳನ್ನು ಹೊಂದಲಿದೆ ಈ ರಾಜ್ಯ

ಹಿಮಾಚಲ ಪ್ರದೇಶವು ಹಿಮಾಲಯದ ಪಶ್ಚಿಮಕ್ಕಿರುವ ರಾಜ್ಯಗಳಲ್ಲಿ ಒಂದಾಗಿದೆ. ಈ ರಾಜ್ಯವು ತನ್ನ ಪ್ರಕೃತಿಗೆ ಹಾಗೂ ಪ್ರವಾಸೋದ್ಯಮಕ್ಕೆ ಹೆಸರುವಾಸಿಯಾಗಿದೆ. ಹೇರಳವಾದ ಪ್ರಕೃತಿ ಸಂಪತ್ತನ್ನು ಹೊಂದಿರುವ ರಾಜ್ಯವು ತನ್ನ ಪರಿಸರಕ್ಕೆ ಹಾನಿಯಾಗುವುದನ್ನು ತಡೆಗಟ್ಟಲು ಬಯಸಿ ಎಲೆಕ್ಟ್ರಿಕ್ ವಾಹನಗಳನ್ನು ಅಳವಡಿಸಿಕೊಳ್ಳುತ್ತಿದೆ.

MOST READ: ವಾಹನ ಸವಾರರೇ ಎಚ್ಚರ: ನಕಲಿ ಪೊಲೀಸರಿಂದ ಹಗಲು ದರೋಡೆ

2030ರ ವೇಳೆಗೆ ಸಂಪೂರ್ಣ ಎಲೆಕ್ಟ್ರಿಕ್ ವಾಹನಗಳನ್ನು ಹೊಂದಲಿದೆ ಈ ರಾಜ್ಯ

ತನ್ನ ರಾಜ್ಯದಲ್ಲಿ ಪೆಟ್ರೋಲ್, ಡೀಸೆಲ್ ಹಾಗೂ ಸಿ‍ಎನ್‍‍ಜಿ ವಾಹನಗಳ ಮಾರಾಟವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸುವುದರ ಮೂಲಕ ಸರ್ಕಾರವು ವಾಯು ಮಾಲಿನ್ಯವನ್ನು ತಡೆಗಟ್ಟಲಿದೆ. ಆದರೆ ಶೀತ ವಾತಾವರಣವನ್ನು ಹಾಗೂ ಕಡಿದಾದ ರಸ್ತೆಗಳನ್ನು ಹೊಂದಿರುವ ಹಿಮಾಚಲ ಪ್ರದೇಶದಂತಹ ರಾಜ್ಯದಲ್ಲಿ ಎಲೆಕ್ಟ್ರಿಕ್ ವಾಹನಗಳ ಬಳಕೆಯು ನಿಜಕ್ಕೂ ಸವಾಲಿನದಾಗಿದೆ.

2030ರ ವೇಳೆಗೆ ಸಂಪೂರ್ಣ ಎಲೆಕ್ಟ್ರಿಕ್ ವಾಹನಗಳನ್ನು ಹೊಂದಲಿದೆ ಈ ರಾಜ್ಯ

ಬ್ಯಾಟರಿಗಳು ಕೆಲವು ಹವಾಮಾನಗಳಲ್ಲಿ ಸೂಕ್ಷ್ಮವಾಗಿರುತ್ತವೆ. ಹೆಚ್ಚು ಉಷ್ಣಾಂಶವಿರುವ ಹಾಗೂ ತೀರ ಕಡಿಮೆ ತಾಪಮಾನವಿರುವ ಹವಾಮಾನ ಪ್ರದೇಶದಲ್ಲಿ ಬ್ಯಾಟರಿಗಳನ್ನು ಬಳಸದಿದ್ದರೂ ಚಾರ್ಜ್ ಕಳೆದುಕೊಳ್ಳುತ್ತವೆ. ಬಳಸಿದರೆ ಇನ್ನೂ ವೇಗವಾಗಿ ಚಾರ್ಜ್ ಕಳೆದುಕೊಳ್ಳುತ್ತವೆ.

2030ರ ವೇಳೆಗೆ ಸಂಪೂರ್ಣ ಎಲೆಕ್ಟ್ರಿಕ್ ವಾಹನಗಳನ್ನು ಹೊಂದಲಿದೆ ಈ ರಾಜ್ಯ

ಇಂದಿಗೂ ಸಹ ಹಿಮಾಚಲ ಪ್ರದೇಶದಲ್ಲಿರುವ ಅನೇಕ ಸ್ಥಳಗಳಲ್ಲಿ ಪೆಟ್ರೋಲ್, ಡೀಸೆಲ್ ಬಂಕ್‍‍ಗಳಿಲ್ಲ. ಎಲೆಕ್ಟ್ರಿಕ್ ವಾಹನಗಳನ್ನು ಪೂರ್ಣವಾಗಿ ಜಾರಿಗೊಳಿಸಿದ ನಂತರ, ಈ ಯೋಜನೆಯು ಯಶಸ್ವಿಯಾಗ ಬೇಕಾದರೆ ಹೆಚ್ಚಿನ ಸಂಖ್ಯೆಯಲ್ಲಿ ಚಾರ್ಜಿಂಗ್ ಸ್ಟೇಷನ್‍‍ಗಳನ್ನು ತೆರೆಯಬೇಕಾಗುತ್ತದೆ.

2030ರ ವೇಳೆಗೆ ಸಂಪೂರ್ಣ ಎಲೆಕ್ಟ್ರಿಕ್ ವಾಹನಗಳನ್ನು ಹೊಂದಲಿದೆ ಈ ರಾಜ್ಯ

ಈ ಬಗ್ಗೆ ಮಾತನಾಡಿದ ಶ್ರೀಕಾಂತ್ ಬಾಲ್ಡಿರವರು ಇಂಧನ ವಾಹನಗಳ ಬದಲಿಗೆ ಎಲೆಕ್ಟ್ರಿಕ್ ವಾಹನಗಳನ್ನು ಬಳಸಲು ನೀತಿಯನ್ನು ರೂಪಿಸಲಾಗುವುದು. ಹೊಸ ನೀತಿಯನ್ವಯ ರಾಜ್ಯದ್ಯಂತ ಸಾರ್ವಜನಿಕ ಎಲೆಕ್ಟ್ರಿಕ್ ಚಾರ್ಜಿಂಗ್ ಸ್ಟೇಷನ್‍‍ಗಳನ್ನು ಸ್ಥಾಪಿಸಲಾಗುವುದು ಎಂದು ತಿಳಿಸಿದರು.

2030ರ ವೇಳೆಗೆ ಸಂಪೂರ್ಣ ಎಲೆಕ್ಟ್ರಿಕ್ ವಾಹನಗಳನ್ನು ಹೊಂದಲಿದೆ ಈ ರಾಜ್ಯ

ಹಿಮಾಚಲ ಪ್ರದೇಶ ಸರ್ಕಾರವು ಈ ನೀತಿಗೆ ಅನುಸಾರವಾಗಿ ವ್ಯವಹಾರವನ್ನು ಸ್ಥಾಪಿಸುವ ಉದ್ದೇಶವನ್ನು ಹೊಂದಿದೆ. ಇದರನ್ವಯ ಖಾಸಗಿ ವ್ಯಕ್ತಿಗಳಿಗೆ ಎಲೆಕ್ಟ್ರಿಕ್ ಚಾರ್ಜಿಂಗ್ ಸ್ಟೇಷನ್‍‍ಗಳನ್ನು ಸ್ಥಾಪಿಸಲು ಆಹ್ವಾನ ನೀಡಲಾಗುವುದು. ಎಲೆಕ್ಟ್ರಿಕ್ ವಾಹನಗಳನ್ನು ಚಾರ್ಜ್ ಮಾಡುವ ವಿದ್ಯುತ್ ದರಗಳನ್ನು ಸಹ ಕಡಿಮೆಗೊಳಿಸುವ ಚಿಂತನೆಯಲ್ಲಿದೆ.

2030ರ ವೇಳೆಗೆ ಸಂಪೂರ್ಣ ಎಲೆಕ್ಟ್ರಿಕ್ ವಾಹನಗಳನ್ನು ಹೊಂದಲಿದೆ ಈ ರಾಜ್ಯ

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಕೇಂದ್ರ ಸರ್ಕಾರವು 2030ರ ವೇಳೆಗೆ ದೇಶಾದ್ಯಂತ ಎಲೆಕ್ಟ್ರಿಕ್ ವಾಹನಗಳ ಅಳವಡಿಕೆಯನ್ನು ಜಾರಿಗೊಳಿಸಲು ಚಿಂತನೆ ನಡೆಸಿತ್ತು. ನಮ್ಮ ದೇಶದಲ್ಲಿನ ವಾಹನಗಳ ಸಂಖ್ಯೆ ಹೆಚ್ಚಿರುವ ಕಾರಣಕ್ಕೆ ಹಾಗೂ ವಾಹನ ಕಂಪನಿಗಳ ನಕಾರತ್ಮಕ ಪ್ರತಿಕ್ರಿಯೆಯ ಹಿನ್ನೆಲೆಯಲ್ಲಿ ಸರ್ಕಾರವು ತನ್ನ ನಿರ್ಧಾರದಿಂದ ಹಿಂದೆ ಸರಿಯಿತು.

2030ರ ವೇಳೆಗೆ ಸಂಪೂರ್ಣ ಎಲೆಕ್ಟ್ರಿಕ್ ವಾಹನಗಳನ್ನು ಹೊಂದಲಿದೆ ಈ ರಾಜ್ಯ

ಹಿಮಾಚಲ ಪ್ರದೇಶವು ನಮ್ಮ ದೇಶದಲ್ಲಿರುವ ಚಿಕ್ಕ ರಾಜ್ಯಗಳ ಪೈಕಿ ಒಂದಾಗಿದೆ. ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಅಗತ್ಯವಿರುವ ಸೌಲಭ್ಯವನ್ನು ಸುಲಭವಾಗಿ ನೀಡಬಹುದು. ಆದರೆ ಅಲ್ಲಿನ ಜನರು ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಎಷ್ಟರ ಮಟ್ಟಿಗೆ ಒಪ್ಪಿಕೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

Most Read Articles

Kannada
English summary
Himachal Pradesh To Go 100 Percent Electric By 2030 Says State Government - Read in kannada
Story first published: Saturday, September 21, 2019, 11:25 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more