ಕ್ರ್ಯಾಶ್ ಟೆಸ್ಟಿಂಗ್‍ನಲ್ಲಿ ಗರಿಷ್ಠ ಮಟ್ಟದ ಅಂಕ ಪಡೆದ ಹೋಂಡಾ ಅಮೇಜ್

ಮೇ 2018ರಲ್ಲಿ ಬಿಡುಗಡೆಗೊಂಡ ಹೋಂಡಾ ಅಮೇಜ್ ಕಾರುಗಳು ಮಾರುಕಟ್ಟೆಯಲ್ಲಿ ಉತ್ತಮ ಪ್ರದರ್ಷನವನ್ನು ಕಾಣುತ್ತಿದ್ದು, ಮಾರುಕಟ್ಟೆಯಲ್ಲಿರುವ ಮಾರುತಿ ಸುಜುಕಿ ಡಿಜೈರ್, ಫೋರ್ಡ್ ಆಸ್ಫೈರ್, ಹ್ಯುಂಡೈ ಎಕ್ಸೆಂಟ್ ಮತ್ತು ವೋಲ್ಕ್ಸ್ ವ್ಯಾಗನ್ ಎಮಿಯೋ ಸೆಡಾನ್ ಕಾರುಗಳಿಗೆ ಪೈಪೋಟಿಯನ್ನು ನೀಡುತ್ತಿದೆ.

ಕ್ರ್ಯಾಶ್ ಟೆಸ್ಟಿಂಗ್‍ನಲ್ಲಿ ಗರಿಷ್ಠ ಮಟ್ಟದ ಅಂಕ ಪಡೆದ ಹೋಂಡಾ ಅಮೇಜ್

ವಿಷಯ ಏನಪ್ಪ ಅಂದ್ರೆ ಹಿಂದಿನ ದಿನಗಳಲ್ಲಿ ಹೊಸ ವಾಹನ ಖರೀದಿ ಮಾಡುವ ಮುನ್ನ ಕೆವಲ ಬೆಲೆ ಮತ್ತು ಈ ವಾಹನ ಎಷ್ಟು ಮೈಲೇಜ್ ನೀಡುತ್ತೆ ಎಂದು ನೋಡುತ್ತಿದ್ದರು. ಆದರೆ ಇದೀಗ ಗ್ರಾಹಕರು ಬುದ್ದಿವಂತರಾಗಿದ್ದು, ಕಾರಿನಲ್ಲಿ ಯಾವ ಮಟ್ಟದ ಸುರಕ್ಷಾ ಸಾಧನಗಳನ್ನು ಮತು ವಾಹನ ನಿರ್ಮಾಣದ ಗುಣಮಟ್ಟದ ಬಗ್ಗೆ ಆಲೋಚಿಸಲು ಶುರು ಮಾಡಿದ್ದಾರೆ. ಹೀಗಾಗಿ ಬಹು ಹಿಂದಿನಿಂದ ಯಾವುದಾದ್ರು ವಾಹನ ಬಿಡುಗಡೆಗೊಂಡಲ್ಲಿ ಅವುಗಳನ್ನು ಕ್ರ್ಯಾಶ್ ಟೆಸ್ಟಿಂಗ್‍ಗಾಗಿ ಕಳುಹಿಸಲಾಗುತ್ತದೆ. ಅದರಲ್ಲಿ 5 ಕ್ಕೆ 3ಕಿಂತಲೂ ಹೆಚ್ಚಿನ ಅಂಕವನ್ನು ಪಡೆದ ಕಾರುಗಳು ಉತ್ತಮ ಗುಣಮಟ್ಟದಿಂದ ಕೂಡಿದೆ ಎಂದರ್ಥ.

ಕ್ರ್ಯಾಶ್ ಟೆಸ್ಟಿಂಗ್‍ನಲ್ಲಿ ಗರಿಷ್ಠ ಮಟ್ಟದ ಅಂಕ ಪಡೆದ ಹೋಂಡಾ ಅಮೇಜ್

ಈ ನಿಟ್ಟಿನಲ್ಲಿ ಮೇ 2018ರ ಸಿ-ಸೆಗ್ಮೆಂಟ್ ಬಿಡುಗಡೆಗೊಂಡ ಹೋಂಡಾ ಅಮೇಜ್ ಕಾರುಗಳನ್ನು ಸಹ ಕ್ರ್ಯಾಶ್ ಟೆಸ್ಟಿಂಗ್ ಮಾಡಲಾಗಿದ್ದು, ಇದೀಗ ಕ್ರ್ಯಾಶ್ ಟೆಸ್ಟಿಂಗ್‍ನಲ್ಲಿ 5ಕ್ಕೆ ಸುಮಾರು 4 ಅಂಕಗಳನ್ನು ಪಡೆದು ತನ್ನ ಗುಣಮಟ್ಟದ ಸಾಮರ್ಥ್ಯವನ್ನು ನಿರೂಪಿಸಿದೆ.

ಕ್ರ್ಯಾಶ್ ಟೆಸ್ಟಿಂಗ್‍ನಲ್ಲಿ ಗರಿಷ್ಠ ಮಟ್ಟದ ಅಂಕ ಪಡೆದ ಹೋಂಡಾ ಅಮೇಜ್

ನಮ್ಮ ಭಾರತದಲ್ಲಿ ಉತ್ಪಾದನೆಗೊಳ್ಳುತ್ತಿರುವ ಹೋಂಡಾ ಅಮೇಜ್ ಕಾರುಗಳನ್ನು ಜಗತ್ತಿನಲ್ಲಿರುವ ಇನ್ನಿತರೆ ದೇಶದ ಮಾರುಕಟ್ಟೆಗಳಿಗೆ ಮಾರಾಟಕ್ಕಾಗಿ ರವಾನಿಸಲಾಗುತ್ತದೆ. ಹೀಗಿದ್ದಲ್ಲಿ ಹೋಂಡಾ ಅಮೇಜ್ ಕಾರುಗಳು ಕ್ರ್ಯಾಶ್ ಟೆಸ್ಟಿಂಗ್ ವೇಳೆ ವಯಸ್ಕರ ಸುರಕ್ಷಣೆಯಲ್ಲಿ 4 ಅಂಕ ಮತ್ತು ಮಕ್ಕಳ ಸುರಕ್ಷಣೆಯಲ್ಲಿ ಕೇವಲ ಒಂದು ಅಂಕವನ್ನು ಪಡೆದುಕೊಂಡಿದೆ.

ಕ್ರ್ಯಾಶ್ ಟೆಸ್ಟಿಂಗ್‍ನಲ್ಲಿ ಗರಿಷ್ಠ ಮಟ್ಟದ ಅಂಕ ಪಡೆದ ಹೋಂಡಾ ಅಮೇಜ್

ಮಕ್ಕಳ ಸುರಕ್ಷಣೆಯ ವಿಚಾರದಲ್ಲಿ ಹೋಂಡಾ ಅಮೇಜ್ ಕರು ಅಷ್ಟು ಸುರಕ್ಷಿತವಲ್ಲವೆಂದು ತೀರ್ಮಾನ ಮಾಡಲಾಗಿದ್ದು, ಕ್ರ್ಯಾಶ್ ಟೆಸ್ಟಿಂಗ್ ವೇಳೆ ಕಾರಿನ ಹಿಂಭಾಗದಲ್ಲಿ 18 ವರ್ಷದ ಗೊಂಬೆ ಮತೊಂದು ಕಡೆ 3 ವರ್ಷ ತುಂಬಿದ ಮಗಿವಿನ ಗೊಂಬೆಯನ್ನು ಕೂರಿಸಲಾಗಿದ್ದು, ಆ ಸಂದರ್ಭದಲ್ಲಿ ಅವರ ಹಣೆಗೆ ಅಪಾಯಕಾರಿಗಿರಲಿದೆ ಎಂದು ತಿಳಿದುಬಂದಿದೆ.

ಜೊತೆಗೆ ಹೋಂಡಾ ಅಮೇಜ್ ಕಾರುಗಳಲ್ಲಿ ಪ್ರಯಾಣಿಕರ ಸುರಕ್ಷತೆಯ ಅನುಸಾರ ಕೀ ಲೇಸ್ ಎಂಟ್ರಿ, ಎಬಿಎಸ್, ಇಬಿಡಿ, ಸೆಂಟ್ರಲ್ ಲಾಕಿಂಗ್, ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್, ಕ್ರೂಸ್ ಕಂಟ್ರೋಲರ್, ರಿವರ್ಸ್ ಪಾರ್ಕಿಂಗ್ ಕ್ಯಾಮೆರಾ ಜೊತೆ ಸೆನ್ಸಾರ್ ಒದಗಿಸಲಾಗಿದ್ದು, ಮಾರುತಿ ಡಿಜೈರ್, ಹ್ಯುಂಡೈ ಎಕ್ಸ್ಸೆಂಟ್ ಮತ್ತು ಟಾಟಾ ಟಿಗೋರ್ ಕಾರುಗಳಿಗೆ ತ್ರೀವ ಪೈಪೋಟಿ ನೀಡಲಿದೆ.

ಕ್ರ್ಯಾಶ್ ಟೆಸ್ಟಿಂಗ್‍ನಲ್ಲಿ ಗರಿಷ್ಠ ಮಟ್ಟದ ಅಂಕ ಪಡೆದ ಹೋಂಡಾ ಅಮೇಜ್

ಹೋಂಡಾ ಸಂಸ್ಥೆಯು ಬಿಡುಗಡೆ ಮಾಡಿರುವ ಅಮೇಜ್ ಕಾರುಗಳು ಒಟ್ಟು ನಾಲ್ಕು ಮಾದರಿಯಲ್ಲಿ ಖರೀದಿ ಲಭ್ಯವಿದ್ದು, ಗ್ರಾಹಕರು ತಮ್ಮ ಬೇಡಿಕೆಗೆ ಅನುಗುಣವಾಗಿ ಇ, ಎಸ್, ವಿ ಮತ್ತು ವಿಎಕ್ಸ್ ವೆರಿಯೆಂಟ್‌ಗಳನ್ನು ಆಯ್ಕೆ ಮಾಡಬಹುದಾಗಿದೆ. ಹೀಗಾಗಿ ವೆರಿಯೆಂಟ್‌ಗಳಿಗೆ ಅನುಗುಣವಾಗಿ ಕಾರಿನ ಬೆಲೆಗಳು ನಿಗದಿ ಮಾಡಲಾಗಿದೆ.

MOST READ: ಸ್ಮಾರ್ಟ್ ಹೈಬ್ರಿಡ್ ಟೆಕ್ನಾಲಜಿಯೊಂದಿಗೆ ಮಾರಾಟದಲ್ಲಿ ಮಿಂಚುತ್ತಿದೆ ಮಾರುತಿ ಬಲೆನೊ

ಕ್ರ್ಯಾಶ್ ಟೆಸ್ಟಿಂಗ್‍ನಲ್ಲಿ ಗರಿಷ್ಠ ಮಟ್ಟದ ಅಂಕ ಪಡೆದ ಹೋಂಡಾ ಅಮೇಜ್

ಸ್ಪೋರ್ಟಿ ಲುಕ್ ಹೊಂದಿರುವ ಅಮೇಜ್ ಕಾರುಗಳು ಎರಡನೇ ತಲೆಮಾರಿನ ಶಾರ್ಪರ್ ಆಂಗಲ್ಸ್, ಬೋಲ್ಡರ್ ಡಿಸೈನ್ ಹಾಗೂ ಆಂಗ್ಯೂಲರ್ ಹೆಡ್‍‍ಲ್ಯಾಂಪ್‍‍ಗಳನ್ನು ಪಡೆದುಕೊಂಡಿದ್ದು, 15 ಇಂಚಿನ ಅಲಾಯ್ ವೀಲ್‍‍ಗಳು, ಹಿಂಭಾಗದ ವಿನ್ಯಾಸದಲ್ಲಿ ಹೊಸ ಪ್ರೇರಣೆಯ ಕ್ರೋಮ್ ಸ್ಟ್ರಿಪ್, ಸಿ ಟೈಪ್ ಟೈಲ್‍ ಲೈಟ್ಸ್ ಗಳನ್ನು ಪಡೆದಿದಿರುವುದು ಆಕರ್ಷಕವಾಗಿದೆ.

MOST READ: ರಾಜ್ಯದೆಲ್ಲೆಡೆ ಎಂಬತ್ತೊಂಬತ್ತು ಸಾವಿರಕ್ಕು ಹೆಚ್ಚಿನ ಡ್ರೈವಿಂಗ್ ಲೈಸೆನ್ಸ್ ರದ್ದು

ಕ್ರ್ಯಾಶ್ ಟೆಸ್ಟಿಂಗ್‍ನಲ್ಲಿ ಗರಿಷ್ಠ ಮಟ್ಟದ ಅಂಕ ಪಡೆದ ಹೋಂಡಾ ಅಮೇಜ್

ಎಂಜಿನ್ ವೈಶಿಷ್ಟ್ಯತೆಗಳು

ಹೊಸ ಅಮೇಜ್ ಕಾರುಗಳು 1.2-ಲೀಟರ್ ಪೆಟ್ರೋಲ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್‌ನಲ್ಲಿ ಖರೀದಿಸಬಹುದಾಗಿದ್ದು, ಪೆಟ್ರೋಲ್ ಆವೃತ್ತಿಯು 89-ಬಿಎಚ್‌ಪಿ, 110-ಎನ್ಎಂ ಟಾರ್ಕ್ ಉತ್ಪಾದನೆ ಮಾಡಿದಲ್ಲಿ ಡಿಸೇಲ್ ಆವೃತ್ತಿಯು 99-ಬಿಎಚ್‌ಪಿ, 200-ಎನ್ಎಂ ಉತ್ಪಾದನೆ ಮಾಡಬಲ್ಲವು.

MOST READ: ಮುಂಬೈನಲ್ಲಿ ಶುರುವಾದ ಬಜಾಜ್ ಕ್ಯೂಟ್ ಸಂಚಾರ - ಇದು ದೇಶದ ಮೊದಲ 4 ವ್ಹೀಲರ್ ಆಟೋ ರಿಕ್ಷಾ

ಕ್ರ್ಯಾಶ್ ಟೆಸ್ಟಿಂಗ್‍ನಲ್ಲಿ ಗರಿಷ್ಠ ಮಟ್ಟದ ಅಂಕ ಪಡೆದ ಹೋಂಡಾ ಅಮೇಜ್

ಇದಲ್ಲದೇ ಹೊಸ ಕಾರುಗಳಲ್ಲಿ 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಮತ್ತು 5-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಯಿದ್ದು, ಮ್ಯಾನುವಲ್‌ಗಿಂತ ಡಿಸೇಲ್ ಆವೃತ್ತಿಗಿಂತ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಹೊಂದಿರುವ ಡಿಸೇಲ್ ಆವೃತ್ತಿಯು 79-ಬಿಎಚ್‌ಪಿ ಮತ್ತು 160-ಎನ್ಎಂ ಟಾರ್ಕ್ ಮಾತ್ರ ಉತ್ಪಾದಿಸಲಿವೆಯೆಂತೆ.

ಕ್ರ್ಯಾಶ್ ಟೆಸ್ಟಿಂಗ್‍ನಲ್ಲಿ ಗರಿಷ್ಠ ಮಟ್ಟದ ಅಂಕ ಪಡೆದ ಹೋಂಡಾ ಅಮೇಜ್

ಕಾರಿನ ಒಳವಿನ್ಯಾಸ

ಹೊಸ ಅಮೇಜ್ ಕಾರುಗಳು ಎಲ್ಇಡಿ ಡಿಎಲ್‍ಆರ್, ಡ್ಯುಯಲ್ ಟೋನ್ ಡ್ಯಾಶ್‌ಬೋರ್ಡ್, ಆಪಲ್ ಕಾರ್ ಪ್ಲೇ ಹಾಗೂ ಆಂಡ್ರಾಯ್ಡ್ ಆಟೋ ಅನ್ನು ಒಳಗೊಂಡ ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಂ, ಕ್ಲೈಮೆಟ್ ಕಂಟ್ರೋಲರ್, ಸ್ಟೀರಿಂಗ್ ಮೌಟೆಂಡ್ ಕಂಟ್ರೋಲರ್ ಮತ್ತು ಪೆಡಲ್ ಶಿಫ್ಟರ್ಸ್ ಅನ್ನು ಅಳವಡಿಸಲಾಗಿದೆ.

More from DriveSpark

Article Published On: Wednesday, May 29, 2019, 17:32 [IST]
English summary
Honda Amaze Scored 4 Star Rating In Global NCAP Crash Test. Read In Kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+