ಹೊಸ ಸುರಕ್ಷಾ ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆಯಾದ ಹೋಂಡಾ ಸಿಟಿ

ಸಿ ಸೆಗ್ಮೆಂಟ್ ಸೆಡಾನ್ ಕಾರುಗಳಲ್ಲಿ ಅತ್ಯುತ್ತಮ ಬೇಡಿಕೆ ಹೊಂದಿರುವ ಹೋಂಡಾ ಸಿಟಿ ಆವೃತ್ತಿಯು ಸದ್ಯ ಮಾರುಕಟ್ಟೆಯಲ್ಲಿ ಯಶಸ್ವಿ 20 ವರ್ಷಗಳನ್ನು ಪೂರೈಸಿದ್ದು, ಇದೀಗ ಗ್ರಾಹಕರ ಬೇಡಿಕೆಯೆಂತೆ ಮತ್ತುಷ್ಟು ಹೊಸ ಬದಲಾವಣೆಗಳೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ.

ಹೊಸ ಸುರಕ್ಷಾ ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆಯಾದ ಹೋಂಡಾ ಸಿಟಿ

ಹೋಂಡಾ ಇಂಡಿಯಾ ಸಂಸ್ಥೆಯು ಹೊಸ ಸುರಕ್ಷಾ ಮಾನದಂಡಗಳಿಗೆ ಅನುಗುಣವಾಗಿ ಸಿಟಿ ಸೆಡಾನ್ ಆವೃತ್ತಿಯನ್ನು ಬಿಡುಗಡೆ ಮಾಡಿದ್ದು, ಹೊಸ ಕಾರಿನಲ್ಲಿ ಹಲವು ಸುರಕ್ಷಾ ಸಾಧನಗಳನ್ನು ಅಳವಡಿಸಿದ್ದರು ಸಹ ಬೆಲೆಯಲ್ಲಿ ಯಾವುದೇ ಬದಲಾವಣೆ ತರದೆ ಈ ಹಿಂದಿನ ಬೆಲೆಯನ್ನು ಮುಂದುವರಿಸಿ ಹೊಸ ಕಾರನ್ನು ಬಿಡುಗಡೆ ಮಾಡಿದೆ.

ಹೊಸ ಸುರಕ್ಷಾ ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆಯಾದ ಹೋಂಡಾ ಸಿಟಿ

ಕೇಂದ್ರ ಸರ್ಕಾರವು ಜುಲೈ 1ರಿಂದಲೇ ಪ್ರತಿ ಕಾರಿನಲ್ಲೂ ಇಂತಿಷ್ಟು ಪ್ರಮಾಣದ ಸುರಕ್ಷಾ ಸಾಧನಗಳು ಕಡ್ಡಾಯವಾಗಿರಬೇಕೆಂಬ ನಿಯಮವನ್ನು ಜಾರಿಗೆ ತರಲು ಸಿದ್ದತೆ ನಡೆಸಿದ್ದು, ಇದರ ಪರಿಣಾಮವೇ ಬಹುತೇಕ ವಾಹನ ಉತ್ಪಾದನಾ ಸಂಸ್ಥೆಗಳು ಹೊಸ ನಿಯಮಕ್ಕೆ ಅನುಗುಣವಾಗಿ ಯೋಜನೆ ರೂಪಿಸುತ್ತಿವೆ.

ಹೊಸ ಸುರಕ್ಷಾ ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆಯಾದ ಹೋಂಡಾ ಸಿಟಿ

ಹೊಸ ನಿಯಮದ ಪ್ರಕಾರ ಹೊಸ ಕಾರುಗಳಲ್ಲಿ ಸ್ಟಾಂಡರ್ಡ್ ಆಗಿ ಏರ್‌ಬ್ಯಾಗ್, ಸೀಟ್ ಬೆಲ್ಟ್ ರಿಮೆಂಡರ್, ಸ್ಪೀಡ್ ಡ್ರೈವ್ ವಾರ್ನಿಂಗ್ ಸೇರಿದಂತೆ ಕೆಲವು ಸೆಫ್ಟಿ ಫೀಚರ್ಸ್‌ಗಳನ್ನು ನೀಡಬೇಕಿದ್ದು, ಹೊಸ ನಿಯಮ ಪಾಲಿಸದ ಕಾರುಗಳ ಮಾರಾಟಕ್ಕೆ ಬ್ರೇಕ್ ಬೀಳಲಿದೆ.

ಹೊಸ ಸುರಕ್ಷಾ ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆಯಾದ ಹೋಂಡಾ ಸಿಟಿ

ಹೀಗಾಗಿಯೇ ಹೋಂಡಾ ಸಂಸ್ಥೆಯು ಸಹ ತನ್ನ ಜನಪ್ರಿಯ ಸೆಡಾನ್ ಕಾರಿನಲ್ಲಿ ಸ್ಟ್ಯಾಂಡಂರ್ಡ್ ಆಗಿ ಎಲ್ಲಾ ಮಾದರಿಗಳನ್ನು ಸೀಟ್ ಬೆಲ್ಟ್ ರಿಮೆಂಡರ್ ಅಲಾರಾಂ ಮತ್ತು ಸ್ಪೀಡ್ ವಾರ್ನಿಂಗ್ ಸಿಸ್ಟಂಗಳನ್ನು ಜೋಡಣೆ ಮಾಡುತ್ತಿದ್ದು, ಹೊಸ ಸೆಫ್ಟಿ ಫೀಚರ್ಸ್ ಜೋಡಣೆಗಾಗಿ ಯಾವುದೇ ಹೆಚ್ಚುವರಿ ಚಾರ್ಜ್ ಮಾಡಿಲ್ಲ ಎನ್ನಲಾಗಿದೆ.

ಹೊಸ ಸುರಕ್ಷಾ ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆಯಾದ ಹೋಂಡಾ ಸಿಟಿ

ಸದ್ಯ ಮಾರುಕಟ್ಟೆಯಲ್ಲಿ ಹೋಂಡಾ ಸಿಟಿ ಕಾರುಗಳು ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 9.72 ಲಕ್ಷ ಮತ್ತು ಹೈ ಎಂಡ್ ಮಾದರಿಗೆ ರೂ.14.07 ಲಕ್ಷ ಬೆಲೆ ಹೊಂದಿದ್ದು, ಸಿಟಿ ಕಾರಿನಲ್ಲಿ ಈಗಾಗಲೇ ಹೊಸ ನಿಯಮಕ್ಕೆ ಅನುಗುಣವಾಗಿ ಡ್ಯುಯಲ್ ಏರ್‌ಬ್ಯಾಗ್ ಮತ್ತು ಎಬಿಎಸ್ ಸೌಲಭ್ಯವನ್ನು ಕಡ್ಡಾಯಗೊಳಿಸಿಲಾಗಿದೆ.

ಹೊಸ ಸುರಕ್ಷಾ ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆಯಾದ ಹೋಂಡಾ ಸಿಟಿ

ಇನ್ನು ಹೊಸ ಸುರಕ್ಷಾ ನಿಯಮದಿಂದಾಗಿ ಸೀಟ್ ಬೆಲ್ಟ್ ಹಾಕದೇ ಕಾರು ಚಾಲನೆ ಮಾಡುವವರನ್ನು ಎಚ್ಚರಿಸಲು ಸಹಕಾರಿಯಾಗಲಿದ್ದು, ಇದು ಕಾರು ಚಾಲನೆಯ ವೇಳೆ ಆಗಬಹುದಾದ ಅನಾಹುತ ತಪ್ಪಿಸುವ ಉದ್ದೇಶದಿಂದ ಈ ಸೌಲಭ್ಯವನ್ನು ಕಡ್ಡಾಯಗೊಳಿಸಲಾಗುತ್ತಿದೆ.

ಹೊಸ ಸುರಕ್ಷಾ ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆಯಾದ ಹೋಂಡಾ ಸಿಟಿ

ಹಾಗೆಯೇ ಸ್ಪೀಡ್ ವಾರ್ನಿಂಗ್ ಸೌಲಭ್ಯವು ಸಹ ಅತಿ ವೇಗವಾಗಿ ಕಾರು ಚಾಲನೆ ಮಾಡುವವರನ್ನು ಎಚ್ಚರಿಸಲಿದ್ದು, ಗಂಟೆಗೆ 120 ಕಿ.ಮಿ ದಾಟಿದ್ದಲ್ಲಿ ಬೀಪ್ಸ್ ಸೌಂಡ್ ಮೂಲಕ ವೇಗವಾಗಿ ಡ್ರೈವ್ ಮಾಡುವ ಚಾಲಕನಿಗೆ ಎಚ್ಟರಿಕೆಯ ಗಂಟೆ ನೀಡುತ್ತದೆ.

MOST READ:ನಿಮ್ಮ ವಾಹನಗಳ ಮೈಲೇಜ್ ಕಡಿತವಾಗುತ್ತಿರುವುದಕ್ಕೆ ಅಸಲಿ ಕಾರಣ ಏನು ಗೊತ್ತಾ?

ಹೊಸ ಸುರಕ್ಷಾ ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆಯಾದ ಹೋಂಡಾ ಸಿಟಿ

ಇದಲ್ಲದೇ ಡ್ಯುಯಲ್ ಏರ್‌ಬ್ಯಾಗ್ ಮತ್ತು ಎಬಿಎಸ್ ಸೌಲಭ್ಯವು ಸಹ ಅಪಘಾತಗಳ ತೀವ್ರತೆಯನ್ನು ತಗ್ಗಿಸಲು ನೆರವಾಗಲಿದ್ದು, ಮುಂದುವರಿದ ರಾಷ್ಟ್ರಗಳಲ್ಲಿ ಇಂತಹ ನಿಯಮಗಳು ಈಗಾಗಲೇ ಕಡ್ಡಾಯವಾಗಿ ಜಾರಿಗೊಳಿಸಲಾಗಿದೆ. ಹೀಗಾಗಿಯೇ ಕೇಂದ್ರ ಸರ್ಕಾರವು ಆಟೋ ಉತ್ಪಾದನಾ ಸಂಸ್ಥೆಗಳಿಗೆ ಹೊಸ ನಿಯಮ ಜಾರಿಗೊಳಿಸುವ ಮೂಲಕ ಪ್ರಯಾಣಿಕ ಸುರಕ್ಷತೆ ಹೆಚ್ಚಿನ ಆದ್ಯತೆ ನೀಡುವಂತೆ ಖಡಕ್ ಸೂಚನೆ ನೀಡಿದೆ.

Article Published On: Thursday, June 6, 2019, 19:50 [IST]
English summary
All variants of the Honda City now come with New safety features.
Read more on ಹೋಂಡಾ honda
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+