ಹೊಸ ಸಿಟಿ ಆರ್‍ಎಸ್ ಕಾರಿನ ವೀಡಿಯೋ ಬಿಡುಗಡೆಗೊಳಿಸಿದ ಹೋಂಡಾ
ಹೋಂಡಾ ಕಂಪನಿಯ ಹೊಸ 2020ರ ಸಿಟಿಯ ಸ್ಪೋರ್ಟಿ ಆವೃತ್ತಿಯನ್ನು ಇತ್ತೀಚಿಗೆ ಥೈಲ್ಯಾಂಡ್‍ನಲ್ಲಿ ಬಿಡುಗಡೆಗೊಳಿಸಲಾಗಿತ್ತು. ಇದೀಗ ಹೊಸ ಟರ್ಬೋ ಆವೃತ್ತಿಯ ವಾಕ್‍ರೌಂಡ್ ವೀಡಿಯೋವನ್ನು ಬಹಿರಂಗಪಡಿಸಲಾಗಿದೆ.

ಹೋಂಡಾ ಸಿಟಿ ಆರ್‍ಎಸ್ ಟರ್ಬೊ ಆವೃತ್ತಿಯ ಹೊಸ ವೀಡಿಯೋದಲ್ಲಿ ವಿನ್ಯಾಸ, ದೊಡ್ಡ ಟಯರ್ ಮತ್ತು 1.0 ಲೀಟರ್ ಟರ್ಬೊಚಾಜ್ಡ್ ಪೆಟ್ರೋಲ್ ಎಂಜಿನ್‍ಗಳನ್ನು ತೋರಿಸಲಾಗಿದೆ. ಸಾಮಾನ್ಯ 2020ರ ಸಿಟಿ ಕಾರ್‍ಗೆ ಹೋಲಿಸಿದರೆ, ಆರ್‍ಎಸ್ ಟರ್ಬೊ ಹನಿಕೊಬ್ ಸ್ಟೈಲ್ಡ್ ಮೆಶ್ ಗ್ರಿಲ್ ಅಫ್ ಫ್ರಂಟ್ ಅನ್ನು ಹೊಂದಿದೆ.

ಜೊತೆಗೆ ಆರ್‍ಎಸ್ ಬ್ಯಾಡ್ಜಿಂಗ್ ಅನ್ನು ಒಳಗೊಂಡಿರುವ ಬ್ಲ್ಯಾಕ್ ಸ್ಟ್ರಿಪ್ ಅನ್ನು ಹೊಂದಿದೆ. ಇದು ಹಿಂದಿದ್ದ ಕಾರಿನಲ್ಲಿದ್ದಂತಹ ಕ್ರೋಮ್ ವಿಂಗ್ ಫೇಸ್ ಗ್ರಿಲ್ ಅನ್ನು ಹೊಂದಿದೆ. ಫ್ರಂಟ್ ಡಿಫ್ಯೂಸರ್ ಮತ್ತು ಒಆರ್‍ವಿಎಂಗಳನ್ನು ಕಾರ್ಬನ್ ಫೈಬರ್‍ನಲ್ಲಿ ಫೀನಿಶಿಂಗ್ ಮಾಡಲಾಗಿದೆ.

ಸಾಮಾನ್ಯ ಸಿಟಿ ಕಾರಿನಲ್ಲಿರುವ 15 ಇಂಚಿನ ಟಯರ್‍ಗಳಿಗಿಂತ, 16 ಇಂಚಿನ ದೊಡ್ಡ ಡ್ಯುಯಲ್ ಟೋನ್ ಡೈಮೆಂಡ್ ಕಟ್ ಅಲಾಯ್ ವ್ಹೀಲ್‍ಗಳನ್ನು ಹೊಂದಿದೆ. ಆರ್‍ಎಸ್ ಟರ್ಬೊ ಆವೃತ್ತಿಯ ಹಿಂಭಾಗದಲ್ಲಿ ಪಿಯಾನೋ ಬ್ಲ್ಯಾಕ್ ಲಿಪ್ ಸ್ಪಾಯ್ಲರ್ ಮತ್ತು ಶಾರ್ಕ್ ಫಿನ್ ಆಂಟೆನಾ ಜೊತೆಗೆ ಕಾರ್ಬನ್ ಫೈಬರ್‍ನ ಫಿನಿಂಶಿಗ್‍ನೊಂದಿಗೆ ಫಾಕ್ಸ್ ಡಿಫ್ಯೂಸರ್‍ಗಳಿವೆ.

ಹಿಂಭಾಗದಲ್ಲಿರುವ ವಿಂಡ್‍ಸ್ಕ್ರೀನ್ ಕೆಳಭಾಗದಲ್ಲಿ ಇರಿಸಲಾಗಿರುವ ವಿಟಿಇಸಿ ಟರ್ಬೊ ಸ್ಟಿಕ್ಕರ್ ಅನ್ನು ಹೊಂದಿದೆ. 2020ರ ಹೋಂಡಾ ಸಿಟಿಯ ಇಂಟಿರಿಯರ್ ಡ್ಯುಯಲ್ ಟೋನ್ ಬಣ್ಣವನ್ನು ಹೊಂದಿದೆ. ಆರ್‍ಎಸ್ ಟರ್ಬೊ ಕಾಂಟ್ರಾಸ್ಟ್ ರೆಡ್ ಸ್ಟಿಚಿಂಗ್ ಜೊತೆಗೆ ಕಪ್ಪು ಬಣ್ಣದ ಇಂಟಿರಿಯರ್ ಹೊಂದಿದೆ.

ಸಿಟಿ ಆರ್‍ಎಸ್ ಟರ್ಬೊ 1.0 ಲೀಟರ್‍ನ ಮೂರು ಸಿಲಿಂಡರ್ ಟರ್ಬೊ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 122 ಬಿಹೆಚ್‍ಪಿ ಪವರ್ ಮತ್ತು 173 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಥೈಲ್ಯಾಂಡ್‍ನಲ್ಲಿ ಬಿಡುಗಡೆಗೊಳಿಸಿದ ಕಾರಿನ ಬೆಲೆಯು ರೂ.13.7 ಲಕ್ಷಗಳಾಗಿದೆ.

ಹೊಸ ಸಿಟಿ ಕಾರು ಹಿಂದಿನ ತಲೆಮಾರಿನ ಕಾರ್ ಗಿಂತ ದೊಡ್ಡದಾಗಿದೆ. ಈ ಸೆಗ್‍ಮೆಂಟ್‍ನಲ್ಲಿ 2020ರ ಸಿಟಿ ಕಾರು 4553 ಎಂಎಂ ಉದ್ದವನ್ನು ಹೊಂದಿರುವ ಅತಿ ಉದ್ದದ ಕಾರ್ ಆಗಿದೆ. 2020ರ ಹೊಸ ಹೋಂಡಾ ಕಾರಿನಲ್ಲಿ ಶಾರ್ಕ್ ಫಿನ್ ಆಂಟೆನಾ, ಟೇಲ್ ಸೆಗ್‍ಮೆಂಟ್ ಮತ್ತು ಉತ್ತಮವಾದ ಬೂಟ್ ಲಿಡ್‍ಗಳಿವೆ.
MOST READ: ಪ್ರತಿ ಲೀಟರ್ ನೀರಿಗೆ 35 ಕಿ.ಮಿ ಮೈಲೇಜ್ ನೀಡುವ ಕಾರ್ ಎಂಜಿನ್ ಸಿದ್ದಪಡಿಸಿದ 21 ವರ್ಷದ ಯುವಕ

ಹೊಸ ಹೋಂಡಾ ಸಿಟಿ ಕಾರಿನ ಇಂಟಿರಿಯರ್‍ನಲ್ಲಿ ಡ್ಯುಯಲ್ ಟೋನ್ ಸಿಸ್ಟಂ, ಅಡ್ಜಸ್ಟ್ ಮಾಡಬಹುದಾದ ಹಿಂಭಾಗದ ಹೆಡ್‍ರೆಸ್ಟ್, ಡಿಜಿಟಲ್ ಇನ್ಸ್ ಟ್ರೂಮೆಂಟ್ ಕನ್ಸೋಲ್, ಹೊಸ ಟಚ್‍ಸ್ಕ್ರೀನ್ ಇನ್ಪೋಟೇನ್‍ಮೆಂಟ್ ಸಿಸ್ಟಂ ಅನ್ನು ಅಳವಡಿಸಲಾಗಿದೆ.
MOST READ: ಕಾರು ಖರೀದಿದಾರರ ನೆಚ್ಚಿನ ಬಣ್ಣ ಯಾವುದು ಗೊತ್ತಾ?
ಹೋಂಡಾ ಕಂಪನಿಯು, ಭಾರತದಲ್ಲಿ ಬಿಡುಗಡೆಯಾಗಲಿರುವ 2020ರ ಹೋಂಡಾ ಸಿಟಿ ಮಾದರಿಯಲ್ಲಿ ಯಾವ ಎಂಜಿನ್ ಅನ್ನು ಅಳವಡಿಸಲಿದೆ ಎಂಬುದರ ಬಗ್ಗೆ ಮಾಹಿತಿ ಇಲ್ಲ. ಜಪಾನಿನ ಕಾರು ತಯಾರಕ ಕಂಪನಿಯಾದ ಹೋಂಡಾ, ಹೊಸ ಸಿಟಿ ಕಾರಿನಲ್ಲಿ ಅಳವಡಿಸಲಿರುವ ಎಂಜಿನ್ ಬಿಎಸ್-6 ಆಗಿರಲಿದೆ.
MOST READ: ಬೈಕ್ ಚಲಾಯಿಸಿದ್ದು ಮಗ, ದಂಡ ಬಿದ್ದಿದ್ದು ಅಪ್ಪನಿಗೆ..!

ಹೊಸ ಹೋಂಡಾ ಕಾರಿನಲ್ಲಿ 1.5 ಲೀಟರ್ ನಾಲ್ಕು ಸಿಲಿಂಡರ್ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಬಹುದು. 2020ರ ಹೋಂಡಾ ಸಿಟಿ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಬಳಿಕ ಹ್ಯುಂಡೈ ವರ್ನಾ ಫೇಸ್‌ಲಿಫ್ಟ್, ಸ್ಕೋಡಾ ರಾಪಿಡ್, ಫೋಕ್ಸ್‌ವ್ಯಾಗನ್ ವೆಂಟೊ, ಟೊಯೊಟಾ ಯಾರಿಸ್ ಮತ್ತು ಮಾರುತಿ ಸುಜುಕಿ ಸಿಯಾಜ್ ಕಾರುಗಳಿಗೆ ಪೈಪೋಟಿ ನೀಡುತ್ತದೆ.


Click it and Unblock the Notifications