ಒರಾ ಕಾರಿನ ಅಧಿಕೃತ ಟೆಸ್ಟ್ ಆರಂಭಿಸಿದ ಹ್ಯುಂಡೈ

ಹ್ಯುಂಡೈ ಮೋಟಾರ್ ಇಂಡಿಯಾ ಲಿಮಿಟೆಡ್(ಹೆಚ್‍ಎಂಐಎಲ್) ಹೊಸ ಓರಾ ಕಾಂಪ್ಯಾಕ್ಟ್ ಸೆಡಾನ್‍‍ನ ಅಧಿಕೃತವಾಗಿ ಟೆಸ್ಟ್ ನಡೆಸಲು ಚಾಲನೆ ನೀಡಿದೆ. ಒರಾ ಟೆಸ್ಟ್ ಆರಂಭಿಸಿರುವುದರಿಂದ ಮುಂದಿನ ವರ್ಷದ ಆರಂಭದಲ್ಲಿ ಬಿಡುಗಡೆಯಾಗಬಹುದೆಂದು ನೀರಿಕ್ಷಿಸಬಹುದು.

ಒರಾ ಕಾರಿನ ಅಧಿಕೃತ ಟೆಸ್ಟ್ ಆರಂಭಿಸಿದ ಹ್ಯುಂಡೈ

ಪ್ರತಿಯೊಂದು ಗ್ರಾಹಕರ ಅಗತ್ಯತೆಗಳನ್ನು ಪೂರೈಸಲು ಮತ್ತು ಭಾರತದ ಪರಿಸ್ಥಿತಿಗಳಿಗೆ ಸರಿಹೊಂದುವಂತೆ ವಾಹನವನ್ನು ಚಾಲನೆ ಮಾಡುವಂತಹ ವಾಹನವನ್ನು ಅಭಿವೃದ್ದಿಪಡಿಸಲು ಗಮನ ಹರಿಸುವುದಾಗಿ ಕೊರಿಯಾದ ವಾಹನ ತಯಾರಕ ಕಂಪನಿಯಾದ ಹ್ಯುಂಡೈ ಮುಖ್ಯಸ್ಥರು ಹೇಳಿದ್ದಾರೆ.

ಒರಾ ಕಾರಿನ ಅಧಿಕೃತ ಟೆಸ್ಟ್ ಆರಂಭಿಸಿದ ಹ್ಯುಂಡೈ

ಭಾರತೀಯ ಹವಾಮಾನ ಮತ್ತು ಚಾಲಾನಾ ಪರಿಸ್ಥಿತಿಗಳಲ್ಲಿ ವಾಹನದ ಸಾಮರ್ಥ್ಯವನ್ನು ಪರೀಕ್ಷಿಸಲು ಕಂಪನಿಯು ಭಾರತೀಯ ಪೆನಿನ್ಸುಲರ್ ಪ್ರದೇಶ, ಹಿಮಾಲಯ ಮತ್ತು ಪೂರ್ವ ಕರಾವಳಿ ಪ್ರದೇಶಗಳಲ್ಲಿ ಟೆಸ್ಟ್ ಮಾಡುತ್ತಿದ್ದಾರೆ.

ಒರಾ ಕಾರಿನ ಅಧಿಕೃತ ಟೆಸ್ಟ್ ಆರಂಭಿಸಿದ ಹ್ಯುಂಡೈ

ಎಕ್ಸೆಂಟ್‍‍ನ ಉತ್ತರಾಧಿಕಾರಿಯಾಗಲಿರುವ ಸೆಡಾನ್ ಹೆಸರನ್ನು ಕಂಪನಿಯು ಅಧಿಕೃತವಾಗಿ ಬಹಿರಂಗಪಡಿಸಿದೆ. ಹ್ಯುಂಡೈ ಎಕ್ಸೆಂಟ್ ಎಂಬ ಸೆಡಾನ್‍‍ನ ಹೆಸರನ್ನು ಕಂಪನಿಯು ಅಧಿಕೃತವಾಗಿ ಒರಾ ಎಂದು ಮರುನಾಮಕರಣವನ್ನು ಮಾಡಿದ್ದಾರೆ. ಎಕ್ಸೆಂಟ್ ಕಾರಿಗೆ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ಲಭಿಸಿದರು, ಅದರ ಪ್ರತಿಸ್ಪರ್ಧಿಗಳಾದ ಮಾರುತಿ ಸುಜುಕಿ ಡಿಜೈರ್ ಮತ್ತು ಹೋಂಡಾ ಅಮೇಜ್ ಕಾರುಗಳಷ್ಟು ಜನಪ್ರಿಯವಾಗಿಲ್ಲ.

ಒರಾ ಕಾರಿನ ಅಧಿಕೃತ ಟೆಸ್ಟ್ ಆರಂಭಿಸಿದ ಹ್ಯುಂಡೈ

ಹ್ಯುಂಡೈ ಕಂಪನಿಯು ಮಾರಾಟವನ್ನು ಹೆಚ್ಚಿಸುವ ಪ್ರಯತ್ನದಿಂದ ಈ ಕಾರನ್ನು ಟಾಕ್ಸಿ ವಿಭಾಗದಲ್ಲಿ ಮಾರಾಟ ಮಾಡಲಾಯಿತು. ಈ ಕಾರಣದಿಂದಾಗಿ ವೈಯಕ್ತಿಕ ಬಳಕೆಗೆ ಕಾರು ಖರೀದಿಸುವವರ ಸಂಖ್ಯೆ ಕಡಿಮೆಯಾಯ್ತು. ಪ್ರಸ್ತುತ ಎಕ್ಸೆಂಟ್ ಸೆಡಾನ್ ಮಾದರಿಯು ಶೇ.50 ಕ್ಕೂ ಹೆಚ್ಚು ವಾಹನಗಳು ಟ್ಯಾಕ್ಸಿ ವಿಭಾಗದಲ್ಲಿ ಮಾರಾಟವಾಗಿರುವುದು ಕುತೂಹಲಕಾರಿ ವಿಷಯವಾಗಿದೆ.

ಒರಾ ಕಾರಿನ ಅಧಿಕೃತ ಟೆಸ್ಟ್ ಆರಂಭಿಸಿದ ಹ್ಯುಂಡೈ

ವಿನ್ಯಾಸದಲ್ಲಿ ಒರಾ ಆಕರ್ಷಕ ಸ್ಪೋರ್ಟಿ ಲುಕ್ ಅನ್ನು ಹೊಂದಿದೆ. ಕ್ಯಾಸ್ಕೇಡಿಂಗ್ ಗ್ರಿಲ್ ಮತ್ತು ಗ್ರ್ಯಾಂಡ್ ಐ10 ನಿಯೊಸ್‍‍ನಂತಹ ಹೆಡ್‍‍ಲೈಟ್‍‍ಗಳನ್ನು ಹೊಂದಿದೆ. ಎಕ್ಸೆಂಟ್ ಹೋಲಿಸಿದರೆ ಹೊಸ ಸೆಡಾನ್‍‍ನಲ್ಲಿ ವಿನ್ಯಾಸಗೊಳಿಸಲಾದ ಬೋಲ್ಡ್ ಅಲಾಯ್ ವ್ಹೀಲ್ ಮತ್ತು ಹಿಂದಿನದಕ್ಕಿಂತ ಭಿನ್ನವಾಗಿ ಹಿಂಭಾಗದ ವಿನ್ಯಾಸವನ್ನು ನವೀಕರಿಸಿದೆ.

ಒರಾ ಕಾರಿನ ಅಧಿಕೃತ ಟೆಸ್ಟ್ ಆರಂಭಿಸಿದ ಹ್ಯುಂಡೈ

ಎಕ್ಸೆಂಟ್ ಮಾದರಿಗೆ ಹೋಲಿಸಿದರೆ ಒರಾ ಇಂಟಿರಿಯರ್‍‍‍ನಲ್ಲಿ ದೊಡ್ದ ಬದಲಾವಣೆಗಳನ್ನು ನಿರೀಕ್ಷಿಸಲಾಗಿದೆ. ಇದರಲ್ಲಿ ಸ್ಟೀಯರಿಂಗ್ ವ್ಹೀಲ್, ಡ್ಯಾಶ್‍ಬೋರ್ಡ್ ಮತ್ತು ನಿಯೊಸ್‍‍ನಲ್ಲಿರುವ ಕೆಲವು ವೈಶಿಷ್ಟ್ಯಗಳನ್ನು ಹೊಂದಿರಲಿದೆ. ಟಾಪ್ ಸ್ಪೆಕ್ ರೂಪಾಂತರದಲ್ಲಿ ಆ್ಯಪಲ್ ಕಾರ್‍‍ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಕನೆಕ್ಟಿವಿಟಿ ಮತ್ತು ಬ್ಲೂಟತ್‍‍ನೊಂದಿಗೆ ದೊಡ್ಡ ಟಚ್‍‍ಸ್ಕ್ರೀನ್ ಇನ್ಫೋಟೇನ್‍‍ಮೆಂಟ್ ಸಿಸ್ಟಂ ಅನ್ನು ಹೊಂದಿರಲಿದೆ.

MOST READ: ಬೈಕ್ ಚಲಾಯಿಸಿದ್ದು ಮಗ, ದಂಡ ಬಿದ್ದಿದ್ದು ಅಪ್ಪನಿಗೆ..!

ಒರಾ ಕಾರಿನ ಅಧಿಕೃತ ಟೆಸ್ಟ್ ಆರಂಭಿಸಿದ ಹ್ಯುಂಡೈ

ಹ್ಯುಂಡೈ ಬ್ಲೂಲಿಂಕ್ ತಂತ್ರಜ್ಞಾನವನ್ನು ಹೊಂದಿರಲಿದ್ದು, ಐದು ಸೀಟಿನ ಸೆಡಾನ್ ಎಂದು ನಿರೀಕ್ಷಿಸಲಾಗಿದೆ. ಹೊಸ ಒರಾ 1.2 ಲೀಟರ್ ಪೆಟ್ರೋಲ್ ಬಿಎಸ್-6 ಎಂಜಿನ್ ಅನ್ನು ಹೊಂದಿರಲಿದೆ ಎಂದು ನಿರೀಕ್ಷಿಸುತ್ತೇವೆ. ಜೊತೆಗೆ 1.2 ಲೀಟರ್ ಲೀಟರ್ ಬಿಎಸ್-6 ಡೀಸೆಲ್ ಎಂಜಿನ್ ಅಳವಡಿಸಬಹುದು. ಈ ಎಂಜಿನ್‍‍ಗಳೊಂದಿಗೆ ಮ್ಯಾನುವಲ್ ಮತ್ತು ಎಎಂಟಿ ಆಯ್ಕೆಯನ್ನು ಹೊಂದಿರಲಿದೆ.

MOST READ: ಬೈಕ್ ಸವಾರನ ಪ್ರಾಣ ಉಳಿಸಿದ ಆಪಲ್ ವಾಚ್..!

ಒರಾ ಕಾರಿನ ಅಧಿಕೃತ ಟೆಸ್ಟ್ ಆರಂಭಿಸಿದ ಹ್ಯುಂಡೈ

ಪ್ರಸ್ತುತ ಮಾರುಕಟ್ಟೆಯಲ್ಲಿರುವ ಹ್ಯುಂಡೈ ಎಕ್ಸೆಂಡ್ ಕಾರು ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಗಳನ್ನು ಹೊಂದಿದೆ. ಇದರಲ್ಲಿ 1.2 ಲೀಟರ್ ನಾಲ್ಕು ಸಿಲಿಂಡರ್ ಪೆಟ್ರೋಲ್ ಎಂಜಿನ್ 83 ಬಿಹೆಚ್‍‍ಪಿ ಪವರ್ ಮತ್ತು 114 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇನ್ನೂ 1.2 ಲೀಟರ್ ಮೂರು-ಸಿಲಿಂಡರ್ ಡೀಸೆಲ್ ಎಂಜಿನ್ 75 ಬಿ‍ಹೆಚ್‍‍ಪಿ ಪವರ್ ಮತ್ತು 190 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಎಂಜಿನ್‍‍ನೊಂದಿಗೆ 5 ಸ್ಪೀಡ್ ಮ್ಯಾನುವಲ್ ಮತ್ತು 4 ಸ್ಪೀಡ್ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಅನ್ನು ಅಳವಡಿಸಲಾಗಿದೆ.

MOST READ: ವಾಹನ ಸವಾರರಿಗೆ ಸಿಹಿ ಸುದ್ದಿ ನೀಡಿದ ಸಚಿವ ನಿತಿನ್ ಗಡ್ಕರಿ ..!

ಒರಾ ಕಾರಿನ ಅಧಿಕೃತ ಟೆಸ್ಟ್ ಆರಂಭಿಸಿದ ಹ್ಯುಂಡೈ

ಹೊಸ ಒರಾ ಸೆಡಾನ್ ಮಾದರಿಯು ಎಕ್ಸೆಂಟ್‍‍ನ ಮಾದರಿಯಲ್ಲೇ ಬೆಲೆಯನ್ನು ಹೊಂದಿರಬಹುದು. ಎಕ್ಸೆಂಟ್ ಮಾದರಿಗಿಂತಲೂ ಹೆಚ್ಚು ವೈಶಿಷ್ಟ್ಯಗಳನ್ನು ಹೊಂದಿರಬಹುದು ಎಂದು ನಿರೀಕ್ಷಿಸಬಹುದು. ಹೊಸ ಸೆಡಾನ್ ಮುಂದಿನ ವರ್ಷದ ಆರಂಭದಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿವೆ.

Article Published On: Friday, November 15, 2019, 19:33 [IST]
English summary
Hyundai Aura Sedan’s Testing Officially Begins In India - Read in Kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+