ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಹ್ಯುಂಡೈ ಒರಾ
ಹ್ಯುಂಡೈ ಇಂಡಿಯಾ ಕಂಪನಿಯು ತನ್ನ ಬಹುನಿರೀಕ್ಷಿತ ಒರಾ ಸೆಡಾನ್ ಅನ್ನು ಮುಂದಿನ ವರ್ಷದ ಜನವರಿ 21ರಂದು ಬಿಡುಗಡೆಗೊಳಿಸಲಿದೆ. ಹ್ಯುಂಡೈ ಕಂಪನಿಯು ತನ್ನ ಸರಣಿಯಲ್ಲಿನ ಎಕ್ಸೆಂಟ್ ಕಾರ್ ಅನ್ನು ಬದಲಾಯಿಸಿ ಒರಾ ಸೆಡಾನ್ ಅನ್ನು ಬಿಡುಗಡೆಗೊಳಿಸುತ್ತಿದೆ.

ಹ್ಯುಂಡೈ ಕಂಪನಿಯು ಜನವರಿ ತಿಂಗಳಲ್ಲಿ ಒರಾ ಸೆಡಾನ್‍ನ ವಿತರಣೆಯನ್ನು ಪ್ರಾರಂಭಿಸುವ ಸಾಧ್ಯತೆಗಳಿದೆ. ಹ್ಯುಂಡೈ ಒರಾ ಕಾರಿನ ಮುಂಭಾಗದಲ್ಲಿ ಅಲ್-ಬ್ಲ್ಯಾಕ್ ಹನಿಕ್ಯೂಬ್ ಗ್ರಿಲ್, ಟ್ವಿನ್ ಬೂಮರಾಂಗ್ ಆಕಾರದ ಡಿಆರ್‍ಎಲ್, ಫಾಗಲ್ಯಾಂಪ್ ಮತ್ತು ಪೇರ್ ಪ್ರೊಜೇಕ್ಟರ್ ಹೆಡ್‍ಲ್ಯಾಂಪ್‍ಗಳನ್ನು ಒಳಗೊಂಡಿದೆ. ಈ ವರ್ಷದ ಆರಂಭದಲ್ಲಿ ಬಿಡುಗಡೆಯಾದ ಗ್ರ್ಯಾಂಡ್ ಐ10 ನಿಯೊಸ್ ಕಾರಿನ ಮಾದರಿಯಲ್ಲೇ ಈ ಕಾರಿನ ವಿನ್ಯಾಸವಿದೆ.

ಹ್ಯುಂಡೈ ಒರಾ ಕಾರಿನಲ್ಲಿ ಒಂದು ಸೆಟ್ ಆರ್ 15 ಡೈಮೆಂಡ್ ಕಟ್ ಅಲಾಯ್ ವ್ಹೀಲ್, ಸ್ಪೋರ್ಟಿ ರೇರ್ ಬಂಪರ್, 3ಡಿ ಔಟರ್ ಲೆನ್ಸ್ ಜೊತೆಯಲ್ಲಿ ಎಲ್‍ಇಡಿ ಟೇಲ್ ಲೈಟ್‍ಗಳನ್ನು ಅಳವಡಿಸಲಾಗಿದೆ. ಹ್ಯುಂಡೈ ಕಂಪನಿಯು ಇತ್ತೀಚಿಗೆ ಬಿಡುಗಡೆಗೊಳಿಸಿದ ಕಾರುಗಳಲ್ಲಿ ಇರುವ ಮಾದರಿಯ ಶಾರ್ಕ್ ಫಿನ್ ಅಂಟೆನಾ ಕೂಡ ಒಳಗೊಂಡಿದೆ.

ಹ್ಯುಂಡೈ ಕಂಪನಿಯ ಪ್ರಕಾರ ಒರಾ ಮೂರು ಮಾದರಿಯ ಎಂಜಿನ್ ಆಯ್ಕೆಗಳನ್ನು ಹೊಂದಿರಲಿದೆ. ಇದರಲ್ಲಿ ಎಲೈಟ್ ಐ20ನಲ್ಲಿರುವ 1.2 ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ವೆನ್ಯೂ ಕಾರಿನಲ್ಲಿರುವ 1.0 ಲೀಟರ್ ಟರ್ಬೊ ಪೆಟ್ರೋಲ್ ಮತ್ತು ಕ್ರೇಟಾ ಕಾರಿನಲ್ಲಿರುವ 1.2 ಲೀಟರ್ ಡೀಸೆಲ್ ಎಂಜಿನ್ ಅನ್ನು ಹೊಂದಿದೆ. ಎಲ್ಲಾ ಮೂರು ಎಂಜಿನ್‍ಗಳು ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಸಾರವಾಗಿರಲಿವೆ.

ಎಲ್ಲಾ ಮೂರು ಎಂಜಿನ್‍ಗಳು ಹ್ಯುಂಡೈ ವೆನ್ಯೂ ಮಾದರಿಯಲ್ಲೇ ಪವರ್ ಮತ್ತು ಟಾರ್ಕ್ ಅನ್ನು ಉತ್ಪಾದಿಸುತ್ತವೆ. ಇದರಲ್ಲಿ 1.2 ಲೀಟರ್ ಪೆಟ್ರೋಲ್ ಎಂಜಿನ್ 83 ಬಿಹೆಚ್‍ಪಿ ಪವರ್ ಮತ್ತು 113 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಇನ್ನೂ 1.2 ಲೀಟರ್ ಡೀಸೆಲ್ ಎಂಜಿನ್ 75 ಬಿಹೆಚ್‍ಪಿ ಪವರ್ ಮತ್ತು 190 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇನ್ನೂ 1.0 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ 120 ಬಿಹೆಚ್‍ಪಿ ಪವರ್ ಮತ್ತು 172 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.
MOST READ: ಬೈಕ್ ಚಲಾಯಿಸಿದ್ದು ಮಗ, ದಂಡ ಬಿದ್ದಿದ್ದು ಅಪ್ಪನಿಗೆ..!

ಈ ಎಲ್ಲಾ ಮೂರು ಎಂಜಿನ್‍ಗಳೊಂದಿಗೆ ಸ್ಟ್ಯಾಂಡರ್ಡ್ 5 ಸ್ಪೀಡ್ ಮ್ಯಾನುವಲ್ ಗೇರ್‍ಬಾಕ್ಸ್ ಅಳವಡಿಸಲಾಗಿದೆ. ಹ್ಯುಂಡೈ ವೆನ್ಯೂ ರೀತಿಯಲ್ಲಿ ಒರಾ ಕಾರಿನಲ್ಲಿ 1.0 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಆಟೋಮ್ಯಾಟಿಕ್ ಗೇರ್‍ಬಾಕ್ಸ್ ಅನ್ನು ನೀಡಲಾಗಿಲ್ಲ.
MOST READ: ಬೈಕ್ ಸವಾರನ ಪ್ರಾಣ ಉಳಿಸಿದ ಆಪಲ್ ವಾಚ್..!

ಹ್ಯುಂಡೈ ಒರಾ ಕಾರಿನಲ್ಲಿ ಹೊಸ ಎಂಜಿನ್ ಕಡಿಮೆ ವೈಬ್ರೇಷನ್ ಮತ್ತು ಹೆಚ್ಚಿನ ಇಂಧನ ದಕ್ಷತೆಯೊಂದಿಗೆ ಸುಧಾರಿತ ಪರ್ಫಾಮೆನ್ಸ್ ನೀಡುತ್ತದೆ ಎನ್ನಲಾಗಿದೆ. ಒರಾ ಹ್ಯುಂಡೈ 'ಅಡ್ವಾನ್ಸ್ಡ್ ಆಫ್ಟರ್ ಟ್ರೀಟ್ಮೆಂಟ್ ಸಿಸ್ಟಮ್' ಎಂದು ಕರೆಯಲಾಗಿದೆ.
MOST READ: ಖರೀದಿಸಿದ ಬೈಕ್ ಪಡೆಯಲು ಕಾನೂನು ಹೋರಾಟ ಮಾಡಿದ ಉದ್ಯಮಿ

ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿದೆ. ದೇಶಿಯ ಮಾರುಕಟ್ಟೆಯಲ್ಲಿ ಹ್ಯುಂಡೈ ಒರಾ ಬಿಡುಗಡೆಯಾದ ಬಳಿಕ ಹೋಂಡಾ ಅಮೇಜ್, ಫೋರ್ಡ್ ಆಸ್ಪೈರ್ ಮತ್ತು ಟಾಟಾ ಟೀಗೊರ್ ಕಾರುಗಳಿಗೆ ಪೈಪೋಟಿಯನ್ನು ನೀಡುತ್ತದೆ.


Click it and Unblock the Notifications