ಭಾರತಕ್ಕೂ ಕಾಲಿಡುತ್ತಾ ಹ್ಯುಂಡೈ ಮೈಕ್ರೋ ಎಸ್‍ಯುವಿ?

ಹ್ಯುಂಡೈ ಮೋಟಾರ್ಸ್ ಹೊಸ ಮೈಕ್ರೂ ಎಸ್‍‍ಯು‍ವಿಯನ್ನು ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವುದು ಖಚಿತವಾಗಿದೆ. ಹೊಸ ಮೈಕ್ರೋ-ಎಸ್‍ಯು‍ವಿಗೆ ಎಎಕ್ಸ್ ಎಂಬ ಹೆಸರಿಟ್ಟಿದೆ, ಬಹುನಿರೀಕ್ಷಿತ ಈ ಮೈಕ್ರೋ ಎಸ್‍‍ಯು‍ವಿಯನ್ನು 2021ರಲ್ಲಿ ಭಾರತದಲ್ಲಿ ಬಿಡುಗಡೆ ಮಾಡುವ ನಿರೀಕ್ಷೆಯನ್ನು ಹೊಂದಿದೆ.

ಭಾರತಕ್ಕೂ ಕಾಲಿಡುತ್ತಾ ಹ್ಯುಂಡೈ ಮೈಕ್ರೋ ಎಸ್‍ಯುವಿ?

ಡಿಜಿಟಲ್ ಟೈಮ್ಸ್ ಸುದ್ದಿ ಮೂಲದ ಪ್ರಕಾರ ಎಎಕ್ಸ್ ಮೈಕ್ರೋ ಎಸ್‍‍ಯು‍‍ವಿಯ ಉತ್ಪಾದನೆಯನ್ನು ದಕ್ಷಿಣ ಕೂರಿಯಾದಲ್ಲಿ ಮಾಡಲಿದ್ದಾರೆ. ಹ್ಯುಂಡೈ 19 ವರ್ಷಗಳ ಹಿಂದೆ ಮೊದಲ ಬಾರಿಗೆ ಮೈಕ್ರೋ ಎಸ್‍ಯು‍‍ವಿ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪರಿಚಯಿಸಿದ್ದರು. 2002ರಲ್ಲಿ ಹುಂಡೈ ಅಥೋಸ್ ಮೈಕ್ರೋ ಎಸ್‍‍ಯು‍‍ವಿಯನ್ನು ಸ್ಥಗಿತಗೊಳಿಸಿದ್ದರು.

ಭಾರತಕ್ಕೂ ಕಾಲಿಡುತ್ತಾ ಹ್ಯುಂಡೈ ಮೈಕ್ರೋ ಎಸ್‍ಯುವಿ?

ಹ್ಯುಂಡೈ ಎ‍ಎಕ್ಸ್ ಮೈಕ್ರೋ ಎಸ್‍‍ಯು‍ವಿಯನ್ನು ವರ್ಷಕ್ಕೆ 70,000 ಸಾವಿರ ಯು‍ನಿ‍ಟ್‍‍ಗಳ ಉತ್ಪಾದನೆಯ ಗುರಿಯನ್ನು ಹೊಂದಿದೆ. ಹ್ಯುಂಡೈ ಎಎಕ್ಸ್ ಮೈಕ್ರೊ ಎಸ್‍‍ಯುವಿ 1.0 ಲೀಟರ್ 3 ಸಿಲಿಂಡರ್ ಪೆಟ್ರೋಲ್ ಎಂಜಿನ್ ಹೊಂದಿರಲಿದೆ ಎಂದು ಕಂಪನಿ ಎಂದು ಕಂಪನಿ ಮಾಹಿತಿ ನೀಡಿದೆ.

ಭಾರತಕ್ಕೂ ಕಾಲಿಡುತ್ತಾ ಹ್ಯುಂಡೈ ಮೈಕ್ರೋ ಎಸ್‍ಯುವಿ?

ಹೊಸ ಹ್ಯುಂಡೈ ಎಎಕ್ಸ್ ಮೈಕ್ರೊ ಎಸ್‍‍ಯು‍‍ವಿ ಇತ್ತೀಚೆಗೆ ಬಿ‍ಡುಗಡೆಯಾದ ವೆನ್ಯೂ ಮಾದರಿಯಲ್ಲಿ ಸ್ಥಾನ ಅಲಂಕರಿಸಲಿದೆ. ಹೊಸ ಎಎಕ್ಸ್ ಮೈಕ್ರೊ ಎಸ್‍‍ಯು‍ವಿ ಭಾರತದಲ್ಲೋ ಬಿಡುಗಡೆ ಮಾಡುವ ನಿರೀಕ್ಷೆ ಇದೆ.

ಭಾರತಕ್ಕೂ ಕಾಲಿಡುತ್ತಾ ಹ್ಯುಂಡೈ ಮೈಕ್ರೋ ಎಸ್‍ಯುವಿ?

ಮುಂದಿನ ವರ್ಷದ ಆಟೋ ಎಕ್ಸ್ ಪೋದಲ್ಲಿ ಹ್ಯುಂಡೈ ಎಎಕ್ಸ್ ಮೈಕ್ರೊ ಎಸ್‍‍ಯು‍ವಿ ಕಾನ್ಸಪ್ಟ್ ಆವೃತ್ತಿಯನ್ನು ಪ್ರದರ್ಶಿಸಬಹುದು. ಭಾರತದಲ್ಲಿ ಹ್ಯುಂಡೈ ಎಎಕ್ಸ್ ಮೈಕ್ರೊ ಎಸ್‍‍ಯು‍ವಿಯನ್ನು ಬಿಡುಗಡೆಗೊಳಿಸಿದರೆ ಸ್ಯಾಂಟ್ರೊ ಮತ್ತು ವೆನ್ಯೂ ಮಾದರಿಯ ಸ್ಥಾನವನ್ನು ಪಡೆಯಬಹುದು.

ಭಾರತಕ್ಕೂ ಕಾಲಿಡುತ್ತಾ ಹ್ಯುಂಡೈ ಮೈಕ್ರೋ ಎಸ್‍ಯುವಿ?

ಭಾರತದಲ್ಲಿ ಮೈಕ್ರೋ ಎಸ್‍‍ಯು‍ವಿ ಕಾರುಗಳು ಹೆಚ್ಚು ಮಾರಾಟವಾಗುವುದರಿಂದ ಮತ್ತು ಹ್ಯುಂಡೈ ಅವರ ಇತರ ಮಾದರಿಗಳು ಭಾರತದಲ್ಲಿ ಯಶಸ್ವಿಯಾಗಿರುವುದರಿಂದ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡುವ ಸಾಧ್ಯತೆ ಹೆಚ್ಚಿದೆ.

ಭಾರತಕ್ಕೂ ಕಾಲಿಡುತ್ತಾ ಹ್ಯುಂಡೈ ಮೈಕ್ರೋ ಎಸ್‍ಯುವಿ?

ಹೊಸ ಹ್ಯುಂಡೈ ಎಎಕ್ಸ್ ಮೈಕ್ರೊ ಎಸ್‍‍ಯು‍ವಿ ಕಾರು ಸ್ಯಾಂಟ್ರೊದ ಅದೇ ಪ್ಲಾಟ್‍‍ಫಾರ್ಮ್ ಅನ್ನು ಹೊಂದಿರುವುದರಿಂದ ಎಎಕ್ಸ್ ಮೈಕ್ರೋ ಎಸ್‍‍ಯು‍ವಿ ಹ್ಯಾಚ್‍‍ಬ್ಯಾಕ್‍ನಂತೆಯೇ ಎಂಜಿನ್‍ ಅನ್ನು ಹೊಂದಿರಲಿದೆ. ಇದು 1.1 ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿರಲಿದೆ. ಇದು 67 ಬಿ‍ಎಚ್‍ಪಿ ಪವರ್ 100 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. 5-ಸ್ಪೀಡ್ ಮ್ಯಾನುವಲ್ ಗೇರ್‍‍ಬಾಕ್ಸ್ ಮತ್ತು ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಅನ್ನು ಜೋಡಿಸಿದೆ.

MOST READ: ಸೀಟ್ ಬೆಲ್ಟ್ ಧರಿಸದ ಪೊಲೀಸರನ್ನೇ ಅಡ್ಡಗಟ್ಟಿದ ಭೂಪ..!

ಭಾರತಕ್ಕೂ ಕಾಲಿಡುತ್ತಾ ಹ್ಯುಂಡೈ ಮೈಕ್ರೋ ಎಸ್‍ಯುವಿ?

ಹ್ಯುಂಡೈ ಇತ್ತೀಚೆಗೆ ಗ್ರ್ಯಾಂಡ್ ಐ 10 ಎನ್‍ಐಒಎಸ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ಹೊಸ ಹ್ಯುಂಡೈ ಗ್ರ್ಯಾಂಡ್ ಐ 10 ಬಿಎಸ್-6 ಪ್ರೇರಿತ 1.2-ಲೀಟರ್ ಪೆಟ್ರೋಲ್ ಮತ್ತು 1.2-ಲೀಟರ್ ಡೀಸೆಲ್ ಎಂಜಿನ್‌ನೊಂದಿಗೆ ಖರೀದಿಗೆ ಲಭ್ಯವಿರುವ ಗ್ರ್ಯಾಂಡ್ ಐ10 ಕಾರುಗಳು 5-ಸ್ಪೀಡ್ ಆಟೋಮ್ಯಾಟಿಕ್ ಮತ್ತು 4-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಹೊಂದಿದೆ. ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿರುವ ಹ್ಯುಂಡೈ ಎಎಕ್ಸ್ ನಲ್ಲಿ ಇದೇ ಎಂಜಿನ್ ಅನ್ನು ಹೊಂದಿರುವ ಸಾಧ್ಯತೆಗಳಿವೆ.

MOST READ: ತಡೆದು ನಿಲ್ಲಿಸಿದ್ದು ಒಂದು ಕಾರಣಕ್ಕೆ, ದಂಡ ವಿಧಿಸಿದ್ದು ಇನ್ನೊಂದಕ್ಕೆ..!

ಭಾರತಕ್ಕೂ ಕಾಲಿಡುತ್ತಾ ಹ್ಯುಂಡೈ ಮೈಕ್ರೋ ಎಸ್‍ಯುವಿ?

ಹ್ಯುಂಡೈ ಎಎಕ್ಸ್ ಮೈಕ್ರೋ ಎಸ್‍‍ಯು‍ವಿ ದಕ್ಷಿಣ ಕೊರಿಯಾದ ಮಾರುಕಟ್ಟೆಗೆ ಬಹುನಿರೀಕ್ಷಿತ ಕಾರು ಇದಾಗಿದೆ. ಹ್ಯುಂಡೈ ಭಾರತೀಯ ಎಸ್‍‍ಯು‍ವಿ ವಿಭಾಗದ ವೆನ್ಯೂ ಮತ್ತು ಕ್ರೆಟಾ ಕಾರಿಗೆ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆಯನ್ನು ಪಡೆದಿರುವುದರಿಂದ, ಹ್ಯುಂಡೈ ಎಎಕ್ಸ್ ಅನ್ನು ಕೂಡ ದೇಶಿಯ ಮಾರುಕಟ್ಟೆಗೆ ತರುತ್ತಾರೆ ಎಂದು ನಿರೀಕ್ಷಿಸಬಹುದು. ಆದರೆ 2021ರಲ್ಲಿ ಅಥಾವ ನಂತರದಲ್ಲಿ ದೇಶಿಯ ಮಾರುಕಟ್ಟೆಗೆ ಬಿಡುಗಡೆ ಮಾಡಬಹುದೆಂದು ನಿರೀಕ್ಷಿಸಬಹುದು.

Most Read Articles

Kannada
English summary
All-New Hyundai 'AX' Micro-SUV Confirmed For Global Markets: Will It Be Introduced In India? - Read in Kannda
Story first published: Friday, September 20, 2019, 20:17 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X