ಹ್ಯುಂಡೈ ಕ್ರೆಟಾ ಪಡೆಯುಲು ನೀವು ಇಷ್ಟು ದಿನ ಕಾಯಲೇ ಬೇಕು
ನಿಮಗೆ ಎಸ್‍ಯುವಿ ಕಾರು ಖರೀದಿಸುವ ಮನಸ್ಸಿದ್ದರೇ ರೆನಾಲ್ಟ್ ಡಸ್ಟರ್ ಕಾರು ಖರೀದಿಸುವುದು ಒಳಿತು. ಹ್ಯುಂಡೈ ಕ್ರೆಟಾಗಿಂತ ರೆನಾಲ್ಟ್ ಡಸ್ಟರ್ ನ ವಿತರಣಾ ಅವಧಿ ಕಡಿಮೆ ಇರುವುದೇ ಇದಕ್ಕೆ ಕಾರಣ. ಕ್ರೆಟಾ ಕಾರಿನ ಕಾಯುವಿಕೆ ಅವಧಿ 2 ವಾರಗಳಿಂದ 12 ವಾರಗಳ ವರೆಗೂ ಇದ್ದು, ಅದು ಸ್ಥಳಗಳ ಮೇಲೂ ಅವಲಂಬಿತವಾಗಿದೆ. ಅತಿ ಹೆಚ್ಚಿನ ಕಾಯುವಿಕೆ ಅವಧಿ ಫರೀದಾಬಾದ್‍ನಲ್ಲಿದ್ದು, ಇಲ್ಲಿ 12 ವಾರಗಳ ಕಾಯುವಿಕೆ ಅವಧಿ ಇದೆ. ಕಡಿಮೆ ಅವಧಿಯು ಚೆನ್ನೈನಲ್ಲಿದ್ದು ಇಲ್ಲಿ ವಾಹನದ ವಿತರಣೆಗೆ 2 ವಾರಗಳು ಬೇಕಾಗುತ್ತವೆ.

ಹ್ಯುಂಡೈ ಕ್ರೆಟಾ ವಾಹನವನ್ನು ಶ್ರೀ ಪೆರಂಬದೂರಿನಲ್ಲಿ ಉತ್ಪಾದಿಸಲಾಗುತ್ತಿದ್ದು, ಈಗ ಇದು ಚೆನ್ನೈನ ಉಪನಗರವಾಗಿದೆ. ರೆನಾಲ್ಟ್ ಡಸ್ಟರ್ ವಾಹನವನ್ನು ಚೆನ್ನೈ ನ ಹೊರವಲಯದ ಒರಗದಂನಲ್ಲಿ ಉತ್ಪಾದಿಸಲಾಗುತ್ತದೆ. ಡಸ್ಟರ್ ಎಸ್‍ಯುವಿ ಯನ್ನು ಚೆನ್ನೈನಲ್ಲಿ ಬಹು ಬೇಗ ವಿತರಿಸಲಾಗುತ್ತದೆ. ಹ್ಯುಂಡೈ ಕ್ರೆಟಾದ ಸರಾಸರಿ ಕಾಯುವಿಕೆ ಅವಧಿಯು, 20 ಪ್ರಮುಖ ನಗರಗಳಲ್ಲಿ 5.78 ವಾರಗಳಾಗಿದ್ದರೆ, ಡಸ್ಟರ್ ನ ಕಾಯುವಿಕೆ ಅವಧಿಯು 1.45 ವಾರಗಳಾಗಿದೆ.

ರೆನಾಲ್ಟ್ ಕ್ಯಾಪ್ಚರ್ ವಾಹನವನ್ನು ಅತಿ ಕಡಿಮೆಯಲ್ಲಿ ಅಥವಾ ಯಾವುದೇ ಕಾಯುವಿಕೆ ಇಲ್ಲದೇ ತಕ್ಷಣವೇ ನೀಡಲಾಗುವುದು.ಈ ವಾಹನವು ನಿಧಾನವಾಗಿ ಜನಪ್ರಿಯವಾಗುತ್ತಿದ್ದು, ಬಹುತೇಕ ಡೀಲರ್‍ಗಳು ಸ್ಟಾಕ್ ಹೊಂದಿದ್ದಾರೆ.

ಕ್ಯಾಪ್ಚರ್ ವಾಹನವು ಡಸ್ಟರ್ ನ ಪ್ರಿಮೀಯಂ ಆವೃತ್ತಿಯಾಗಿದ್ದು, ವಿಭಿನ್ನ ಲುಕ್ ಮತ್ತು ಇಂಟಿರಿಯರ್‍ಗಳನ್ನು ಹೊಂದಿದೆ. ಡಸ್ಟರ್ ನಲ್ಲಿರುವಂತಹ ಗೇರ್ ಬಾಕ್ಸ್, ಎಂಜಿನ್ ಮತ್ತು ಪ್ಲಾಟ್ ಫಾರಂಗಳನ್ನೇ ಹೊಂದಿದ್ದರೂ ಡಸ್ಟರ್ ನಂತೆ ಅಗಲವನ್ನು ಹೊಂದಿಲ್ಲ. ಬೇರೆ ವಾಹನಗಳಿಗೆ ಹೋಲಿಸಿದರೆ ಕಡಿಮೆ ಬೆಲೆ ಹೊಂದಿದೆ.

ಬಹುತೇಕ ರೆನಾಲ್ಟ್ ಡೀಲರ್ ಗಳು ಈ ವಾಹನದ ಮೇಲೆ ಭಾರೀ ರಿಯಾಯಿತಿಗಳನ್ನು ನೀಡುತ್ತಿದ್ದಾರೆ. 2018ರ ಕ್ಯಾಪ್ಚರ್ ಎಸ್‍ಯುವಿ ಮೇಲೆ ಸುಮಾರು 2 ಲಕ್ಷಕ್ಕೂ ಹೆಚ್ಚು ರಿಯಾಯಿತಿ ನೀಡಲಾಗುತ್ತಿದೆ. ಕ್ಯಾಪ್ಚರ್ ನ ಸರಾಸರಿ ಕಾಯುವಿಕೆ ಅವಧಿ 1.55 ವಾರಗಳು. ಇತ್ತೀಚಿಗೆ ಬಿಡುಗಡೆಯಾದ ನಿಸ್ಸಾನ್ ಕಿಕ್ಸ್ ಎಸ್‍ಯುವಿ ಸಹ ಬಹುತೇಕ ಭಾರತೀಯ ನಗರಗಳಲ್ಲಿ ಕಡಿಮೆ ಕಾಯುವಿಕೆ ಅವಧಿಯನ್ನು ಹೊಂದಿದೆ. ಈ ಎಸ್‍ಯುವಿ ರೆನಾಲ್ಟ್ ಕ್ಯಾಪ್ಚರ್ ಗಿಂತ ಹೆಚ್ಚು ಸ್ಟೈಲ್ ಹೊಂದಿದೆ.

ನಿಸ್ಸಾನ್ ಕಿಕ್ಸ್ ಕ್ಯಾಪ್ಚರ್ ಗಿಂತ ಹೆಚ್ಚು ಫೀಚರ್ ಗಳನ್ನು ಹೊಂದಿದ್ದು, ಎರಡೂ ಎಸ್‍ಯುವಿ ಗಳು ಒಂದೇ ತರಹದ ಎಂಜಿನ್ ಮತ್ತು ಬಿ-ಜೀರೋ ಪ್ಲಾಟ್ ಫಾರಂ ಹೊಂದಿವೆ. ಕಿಕ್ಸ್ ಮತ್ತು ಕ್ಯಾಪ್ಚರ್ ಎರಡೂ ವಾಹನಗಳ ಬೆಲೆಯು ಒಂದೇ ಆಗಿದೆ. ಇದು ನಿಸ್ಸಾನ್ ಕಂಪನಿಯು ದೇಶಿಯ ಮಾರುಕಟ್ಟೆಗೆ ನೀಡುತ್ತಿರುವ ಕೊಡುಗೆಯಾಗಿದೆ. ಬಿಡುಗಡೆಯಾದಾಗಿನಿಂದ ಕಿಕ್ಸ್ ಕ್ಯಾಪ್ಚರ್ ಗಿಂತ ಹೆಚ್ಚು ಮಾರಾಟವಾಗುತ್ತಿದೆ. ಕಿಕ್ಸ್ ವಾಹನಕ್ಕೆ ಕಾಯುವ ಸಮಯವು ಪುಣೆಯಲ್ಲಿ 6 ವಾರಗಳಾಗಿದ್ದರೆ, ಮುಂಬೈ, ಅಹಮದಾಬಾದ್, ಕೊಲ್ಕತ್ತಾ, ಥಾಣೆ ಗಳಲ್ಲಿ ತಕ್ಷಣವೇ ವಿತರಿಸಲಾಗುವುದು.

ಎಸ್‍ಯುವಿ ಯಲ್ಲಿ ಕ್ರೆಟಾದ ನಂತರ, ಎರಡನೇ ಸ್ಥಾನದಲ್ಲಿರುವ ಮಾರುತಿ ಎಸ್-ಕ್ರಾಸ್ ವಾಹನವು ಸಹ ಹೆಚ್ಚು ಬೇಡಿಕೆಯನ್ನು ಹೊಂದಿದೆ. ಎಸ್ - ಕ್ರಾಸ್ ನ ಕಾಯುವಿಕೆ ಅವಧಿಯು, ದೇಶಾದ್ಯಂತ 3 ರಿಂದ 4 ವಾರಗಳಾಗಿರುತ್ತವೆ. ಪುಣೆ, ಚಂಡಿಗಡ ಮತ್ತು ಇಂದೋರ್ ಗಳಲ್ಲಿ ತಕ್ಷಣವೇ ಡೆಲಿವರಿ ನೀಡಲಾಗುವುದು.
MOST READ: ಹೊಸ ರೇಂಜ್ ರೋವರ್ ಜೊತೆಗೆ ಪೋಸ್ ನೀಡಿದ ಕತ್ರಿನಾ ಕೈಫ್

ಕಾಂಪ್ಯಾಕ್ಟ್ ಎಸ್‍ಯುವಿ ಗಳ ಪಟ್ಟಿಯಲ್ಲಿರುವ ವಾಹನಗಳಲ್ಲಿ ಮಾರುತಿಯ ಎಸ್-ಕ್ರಾಸ್ ಮಾತ್ರವೇ ಡೀಸೆಲ್ ಮ್ಯಾನುವಲ್ ನ ಸಿಂಗಲ್ ಎಂಜಿನ್ ಗೇರ್ ಬಾಕ್ಸ್ ಹೊಂದಿದೆ. ವಾಹನದ ಸಾಮರ್ಥ್ಯತೆ ಮತ್ತು ಬಾನೆಟ್ ಮೇಲಿರುವ ಮಾರುತಿಯ ಬ್ಯಾಡ್ಜ್ ಸಹ ಜನರನ್ನು ಆಕರ್ಷಿಸುತ್ತಿದೆ. ಎಸ್-ಕ್ರಾಸ್ ಮಾತ್ರವೇ ಲಘು ಹೈಬ್ರಿಡ್ ವಾಹನವಾಗಿದ್ದು, ಶೀಘ್ರದಲ್ಲೇ 1.5 ಲೀಟರಿನ ಪೆಟ್ರೋಲ್ ಮತ್ತು ಟರ್ಬೋ ಚಾರ್ಜ್ ಡೀಸೆಲ್ ಎಂಜಿನ್ ವಾಹನಗಳನ್ನು ಬಿಡುಗಡೆ ಮಾಡಲಾಗುವುದು.


Click it and Unblock the Notifications