ಹೊಸ ರೇಂಜ್ ರೋವರ್ ಜೊತೆಗೆ ಪೋಸ್ ನೀಡಿದ ಕತ್ರಿನಾ ಕೈಫ್
ಬಾಲಿವುಡ್ ತಾರೆ ಕತ್ರಿನಾ ಕೈಫ್ ನಟನೆಯ ಭಾರತ್ ಚಿತ್ರ ಬಿಡುಗಡೆಯ ಹಂತದಲ್ಲಿದ್ದು, ತಾವು ಖರೀದಿಸಿರುವ ದುಬಾರಿ ಬೆಲೆಯ ಲಗ್ಷುರಿ ರೇಂಜ್ ರೋವರ್ ಎಸ್ಇ ವೋಗ್ ಎಸ್‍ಯುವಿ ಕಾರಿನ ಜೊತೆಗೆ ಪೋಸ್ ನೀಡಿ, ಆ ಚಿತ್ರವನ್ನು ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿದ್ದಾರೆ. ಡೀಸೆಲ್ ಆವೃತ್ತಿಯ ರೇಂಜ್ ರೋವರ್ ಎಸ್ಇ ವೋಗ್ ಎಸ್‍ಯುವಿ ಕಾರಿನ ಬೆಲೆಯು ಮುಂಬೈನ ಎಕ್ಸ್ ಶೋರೂಂ ದರದಂತೆ ರೂ.2.37 ಕೋಟಿಗಳಾಗಿದೆ. ಟ್ಯಾಕ್ಸ್ ಮತ್ತು ರಿಜಿಷ್ಟ್ರೇಶನ್ ಗಳಿಗೆ ಪ್ರತ್ಯೇಕ ರೂ.35 ಲಕ್ಷ ವೆಚ್ಚವಾಗಲಿದ್ದು, ಒಟ್ಟಾರೆಯಾಗಿ ಈ ಕಾರಿನ ಆನ್ ರೋಡ್ ಬೆಲೆಯು ರೂ. 2.72 ಕೋಟಿಗಳಾಗಲಿದೆ.

ಕತ್ರಿನಾ ಕೈಫ್ ರವರು ಈ ದುಬಾರಿ ಬೆಲೆಯ ಕಾರನ್ನು ಹಲವಾರು ದಿನಗಳ ಹಿಂದೆಯೇ ಖರೀದಿಸಿದ್ದರೂ ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈಗ ಅದರ ಚಿತ್ರಗಳನ್ನು ಶೇರ್ ಮಾಡಿ, ಮುಂಬೈನ ವರ್ಲಿಯಲ್ಲಿರುವ ಜಾಗ್ವಾರ್-ಲ್ಯಾಂಡ್ ರೋವರ್ ಕಾರುಗಳ ಡೀಲರ್ ಆದ ಮೋದಿ ಮೋಟಾರ್ಸ್ ಗೆ ಧನ್ಯವಾದ ಸಲ್ಲಿಸಿದ್ದಾರೆ. ಕತ್ರಿನಾ ಕೈಫ್ ರವರು ಖರೀದಿಸಿರುವ ರೇಂಜ್ ರೋವರ್ ಕಾರು ಎಸ್ಇ ಡೀಸೆಲ್ ಎಲ್‍ಡಬ್ಲೂಬಿ ಮಾದರಿಯಾಗಿದ್ದು. ಈ ಎಸ್‍ಯುವಿ ಕಾರು ಡೀಸೆಲ್ ನಿಂದ ಪವರ್ ಪಡೆಯಲಿದ್ದು, ಇದರಲ್ಲಿ 4.4 ಲೀಟರಿನ ಟರ್ಬೋ ಚಾರ್ಜ್ ಡೀಸೆಲ್ ಎಂಜಿನ್ ಇದ್ದು, 335 ಬಿಹೆಚ್‍ಪಿ ಪೀಕ್ ಪವರ್ ಮತ್ತು 740 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುತ್ತದೆ.

ಗೇರ್ ಬಾಕ್ಸ್ 8 ಸ್ಪೀಡಿನ ಝಡ್ಎಫ್ ಆಟೋಮ್ಯಾಟಿಕ್ ಯೂನಿಟ್ ನಿಂದ ಕೂಡಿದ್ದು, ಪ್ಯಾಡಲ್ ಶಿಫ್ಟರ್ ಗಳು ಸ್ಟಾಂಡರ್ಡ್ ಆಗಿವೆ. ಆಲ್ ವ್ಹೀಲ್ ಡ್ರೈವ್ ಈ ಎಸ್‍ಯುವಿಯ ಜೊತೆಗೆ ಸ್ಟಾಂಡರ್ಡ್ ಆಗಿರಲಿದ್ದು, ಅನೇಕ ಸುರಕ್ಷಾ ಕ್ರಮಗಳನ್ನು ಒಳಗೊಂಡಿರಲಿದೆ.

8 ಏರ್‍ಬ್ಯಾಗ್ ಗಳಿರಲಿದ್ದು, ಆಲ್ ವ್ಹೀಲ್ ಡ್ರೈವ್ ಗಾಗಿ ಟೆರೇನ್ ರೆಸ್ಪಾನ್ಸ್ ಸಿಸ್ಟಂ, ಇಎಸ್‍ಪಿ, ಟ್ರಾಕ್ಷನ್ ಕಂಟ್ರೋಲ್, ಹಿಲ್ ಹೋಲ್ಡ್, ಮಲ್ಟಿಪಲ್ ಡ್ರೈವಿಂಗ್ ಮೋಡ್, ಲಿಮಿಟೆಡ್ ಸ್ಲಿಪ್ ಡಿಫರೆಂಶಿಯಲ್ ಗಳನ್ನು ಹೊಂದಿದೆ. ಈ ಸೆಗ್‍ಮೆಂಟಿನಲ್ಲಿ ಅತಿ ಹೆಚ್ಚು ಸುರಕ್ಷತೆಯನ್ನು ಹೊಂದಿರುವ ಕಾರುಗಳಲ್ಲಿ ಒಂದಾಗಿದೆ.

ಈ ಎಸ್‍ಯುವಿ ಜನರು ಗಮನವನ್ನು ತನ್ನತ್ತ ಸೆಳೆಯಲಿದೆ. ಪನೋರಮಿಕ್ ಸನ್‍ರೂಫ್ ಹೊಂದಿದ್ದು, ಒಳಗೆ ಕುಳಿತಿರುವವರಿಗೆ ಗಾಳಿಯಾಡುವ ಅನುಭವವಾಗುತ್ತದೆ. ಇದು ಉದ್ದವಾಗಿರುವ ವ್ಹೀಲ್ ಬೇಸ್ ಹೊಂದಿರುವ ಕಾರಣದಿಂದ, ಒಳ ಭಾಗದಲ್ಲೂ ಹೆಚ್ಚಿನ ಸ್ಪೇಸ್ ಹೊಂದಿದ್ದು, ಕಾಲುಗಳನ್ನು ಉದ್ದವಾಗಿ ಚಾಚಲು ಅನುಕೂಲವಾಗುತ್ತದೆ. ಸ್ಟಾಂಡರ್ಡ್ ಆಗಿ ಲೆದರ್ ಇಂಟಿರಿಯರ್‍ಗಳನ್ನು ನೀಡಲಾಗುವುದು. ಈ ಎಸ್‍ಯುವಿ ಲಗ್ಷುರಿ, ಕಂಫರ್ಟ್ ಮತ್ತು ಜನರ ಗಮನ ಸೆಳೆಯುವ ವಾಹನವಾಗಿದ್ದು, ಭಾರತದ ಮಾರುಕಟ್ಟೆಯಲ್ಲಿರುವ ರೇಂಜ್ ರೋವರ್ ಸರಣಿಯಲ್ಲಿ ದುಬಾರಿಯಾದ ಮತ್ತು ಜನಪ್ರಿಯವಾದ ವಾಹನವಾಗಿದೆ.
MOST READ: ಸೋರಿಕೆಯಾದ ಸ್ಯಾಂಗ್‍ಯೊಂಗ್ ಟಿವೊಲಿ ರಹಸ್ಯ ಚಿತ್ರಗಳು

ರೇಂಜ್ ರೋವರ್ ವೋಗ್ ಬಾಲಿವುಡ್ ತಾರೆಯರ ನೆಚ್ಚಿನ ಕಾರುಗಳಲ್ಲಿ ಒಂದಾಗಿದೆ. ಮೊದಲು ಲಗ್ಷುರಿ ಆಡಿ ಕ್ಯೂ7 ಖರೀದಿಸುತ್ತಿದ್ದ ಬಾಲಿವುಡ್ ತಾರೆಯರು ಅದರ ಬದಲಿಗೆ ಈ ವಾಹನವನ್ನು ಖರೀದಿಸುತ್ತಿದ್ದಾರೆ. ಬಾಲಿವುಡ್ ನಟರಾದ ಅಮಿತಾಬ್ ಬಚ್ಚನ್, ಶಾರೂಖ್ ಖಾನ್ ಮತ್ತು ಅಕ್ಷಯ್ ಕುಮಾರು ಈ ಕಾರನ್ನು ಹೊಂದಿದ್ದರೆ, ನಟಿಯರ ಪೈಕಿ ಆಲಿಯಾ ಭಟ್, ಶಿಲ್ಪಾ ಶೆಟ್ಟಿ ಮತ್ತು ಅನುಷ್ಕಾ ಶರ್ಮ ಈ ಐಷಾರಾಮಿ ಕಾರಿನ ಒಡೆಯರಾಗಿದ್ದಾರೆ.

ಲ್ಯಾಂಡ್ ರೋವರ್ ಈ ರೇಂಜ್ ರೋವರ್ ವೋಗ್ ನ ಜೊತೆಗೆ ನಮಗೆ ಬೇಕಾದ ಸೌಲಭ್ಯಗಳನ್ನು ಪಡೆಯುವ ಅವಕಾಶ ನೀಡುತ್ತದೆ. ಕತ್ರಿನಾ ಕೈಫ್ ರವರು ಯಾವ ರೀತಿಯ ಸೌಲಭ್ಯಗಳನ್ನು ಪಡೆದಿದ್ದಾರೆ ಎನ್ನುವುದು ಸ್ಪಷ್ಟವಾಗಿಲ್ಲ. ಅಲ್ಲದೇ ಕತ್ರಿನಾ ಕೈಫ್ ರವರು ಈ ಎಸ್‍ಯುವಿಯನ್ನು ಪೂರ್ತಿ ಹಣ ನೀಡಿ ಖರೀದಿಸಿದರೆ ಅಥವಾ ಮೋದಿ ಮೋಟಾರ್ಸ್/ಲ್ಯಾಂಡ್ ರೋವರ್ ಕಂಪನಿಯವರು ಕತ್ರಿನಾ ರವರಿಗೆ ಬ್ರಾಂಡ್/ಡೀಲರ್‍ಶಿಪ್ ಅನ್ನು ಉತ್ತೇಜಿಸಿದ ಕಾರಣಕ್ಕಾಗಿ ಭಾರೀ ರಿಯಾಯಿತಿ ದರದಲ್ಲಿ ನೀಡಿದರೆ ಅಥವಾ ಕಾಣಿಕೆಯಾಗಿ ನೀಡಿದರೆ ಎಂಬುದು ಸ್ಪಷ್ಟವಾಗಿಲ್ಲ.

ಸೆಲೆಬ್ರಿಟಿಗಳಿಗೆ ಕಾಣಿಕೆಯಾಗಿ ದುಬಾರಿ ಕಾರುಗಳನ್ನು ನೀಡುವುದು ಸಾಮಾನ್ಯ ಸಂತತಿಯಾಗಿದೆ. ಈ ರೀತಿಯಾಗಿ ಅನೇಕ ಸಂದರ್ಭಗಳಲ್ಲಿ ದುಬಾರಿ ಕಾರು ಮತ್ತು ಮೋಟಾರ್ ಸೈಕಲ್ ಗಳನ್ನು ಸೆಲೆಬ್ರಿಟಿಗಳು ಬ್ರಾಂಡ್ ಪ್ರಮೋಟ್ ಮಾಡಿದ ಕಾರಣಕ್ಕಾಗಿ ನೀಡಿದ ಉದಾಹರಣೆಗಳಿವೆ. ಈ ಹಿಂದೆ ಫಿಯಟ್ ಕ್ರಿಸ್ಲರ್ ಆಟೊಮೊಬೈಲ್ಸ್ ಇಂಡಿಯಾ ಕಂಪನಿಯು ಸೈಫ್ ಅಲಿ ಖಾನ್ ರವರಿಗೆ ಗ್ರಾಂಡ್ ಚಿರೊಕಿ ಎಸ್ಆರ್‍ಟಿ ವಾಹನವನ್ನು ಕಾಣಿಕೆಯಾಗಿ ನೀಡಿತ್ತು.


Click it and Unblock the Notifications