Just In
Don't Miss!
- News
ರೈತರು 2024ರವರೆಗೂ ಪ್ರತಿಭಟನೆ ನಡೆಸಲು ಸಿದ್ಧರಿದ್ದಾರೆ:ಭಾರತೀಯ ಕಿಸಾನ್ ಯೂನಿಯನ್
- Finance
Gold, Silver Rate: ಪ್ರಮುಖ ನಗರಗಳಲ್ಲಿ ಜ. 17ರ ಚಿನ್ನ, ಬೆಳ್ಳಿ ದರ
- Sports
ಐಎಸ್ಎಲ್: ಜೆಮ್ಷೆಡ್ಪುರಕ್ಕೆ ಆಘಾತ ನೀಡಿದ ನಾರ್ಥ್ಈಸ್ಟ್
- Movies
ಹರ ಜಾತ್ರೆಯಲ್ಲಿ ಪುನೀತ್ ರಾಜ್ ಕುಮಾರ್; ಅಪ್ಪು ಹಾಡು ಕೇಳಿ ಸಂಭ್ರಮಿಸಿದ ಅಭಿಮಾನಿಗಳು
- Lifestyle
ಸಂಜೆ ಸ್ನ್ಯಾಕ್ಸ್ ಗೆ ಹೇಳಿಮಾಡಿಸಿದ್ದು ಈ ತಡ್ಕಾ ಮಸಾಲೆ ಮ್ಯಾಗಿ
- Education
BEL Recruitment 2021: 205 ಟೆಕ್ನೀಶಿಯನ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಸೋರಿಕೆಯಾದ ಸ್ಯಾಂಗ್‍ಯೊಂಗ್ ಟಿವೊಲಿ ರಹಸ್ಯ ಚಿತ್ರಗಳು
ಕೆಲವೇ ದಿನಗಳ ಹಿಂದೆ ಎಡ ಭಾಗದಲ್ಲಿ ಸ್ಟೀಯರಿಂಗ್ ಹೊಂದಿದ್ದ ಸ್ಯಾಂಗ್ ಯೊಂಗ್ ಟಿವೊಲಿ ಫೇಸ್ ಲಿಫ್ಟ್ ಆವೃತ್ತಿಯನ್ನು ಭಾರತದಲ್ಲಿ ಸ್ಪಾಟ್ ಟೆಸ್ಟ್ ಮಾಡಲಾಗಿತ್ತು. ಈಗ ಬಲಭಾಗದಲ್ಲಿ ಸ್ಟೀಯರಿಂಗ್ ಹೊಂದಿರುವ ಕಾರನ್ನು ಅಭಿವೃದ್ಧಿಪಡಿಸಲಾಗಿದೆ. ಈ ಕಾರಿನ ರಹಸ್ಯ ಚಿತ್ರಗಳ ಸೋರಿಕೆಯಾಗಿವೆ. ಚಿತ್ರಗಳಲ್ಲಿ ತೋರಿಸಿರುವಂತೆ, ಈ ಕಾರು ಮೊದಲಿದ್ದ ಆವೃತ್ತಿಗಿಂತ ಭಿನ್ನವಾಗಿದೆ. ಬ್ಲಾಕ್ ಗಡಿಯಾರವು ಮುಂಭಾಗದ ಇಂಟಿರಿಯರ್ ನೋಟಕ್ಕೆ ಅಡ್ಡಿಯಾಗಿದ್ದು, ಹಿಂಭಾಗದಲ್ಲಿರುವ ಫಾಸ್ಕಿಯದಿಂದ ಇಂಟಿರಿಯರ್ ಅನ್ನು ಹತ್ತಿರದಿಂದ ತೋರಿಸಲಾಗಿದೆ.

ಈಗಿರುವ ಟಿವೊಲಿ ಮತ್ತು ಎಕ್ಸ್ ಯುವಿ 300 ಗಳಿಗೆ ಹೋಲಿಸಿದರೆ, ಬಿಡುಗಡೆಯಾಗಿರುವ ಕಾರಿನ ಇಂಟೀರಿಯರ್ ಸಂಪೂರ್ಣ ಭಿನ್ನವಾಗಿದೆ. ಡ್ಯಾಶ್ ಬೋರ್ಡ್ ಚಿತ್ರಗಳ ಪ್ರಕಾರ ಮಧ್ಯದಲ್ಲಿದ್ದ ಎಸಿ ವೆಂಟ್‍ಗಳು ಟಚ್ ಸ್ಕ್ರೀನ್ ನ ಮೇಲೆ ಇವೆ, ಮೊದಲಿದ್ದ ಟಿವೊಲಿ ಮತ್ತು ಎಕ್ಸ್ ಯುವಿ 300 ನಲ್ಲಿ ಪಕ್ಕದಲ್ಲಿದ್ದವು. ಇದರ ಪ್ರಕಾರ ಹೊಸ ಟಿವೊಲಿ ದೊಡ್ಡದಾದ ಟಚ್ ಸ್ಕ್ರೀನ್ ಇನ್ಫೋ ಟೇನ್ ಸಿಸ್ಟಂ ಹೊಂದಿರುವ ಸಾಧ್ಯತೆಗಳಿವೆ. ಈ ಚಿತ್ರದಲ್ಲಿರುವ ಕಾರಿನಲ್ಲಿ ಇನ್ನೂ ಟಚ್ ಸ್ಕ್ರೀನ್ ಸಿಸ್ಟಂ ಅಳವಡಿಸಲಾಗಿಲ್ಲ. ಡ್ಯಾಶ್ ಬೋರ್ಡ್ ನಲ್ಲಿ ಮಾಡಿರುವ ಬದಲಾವಣೆಗಳು ಉತ್ತಮವಾಗಿವೆ.

ಈಗ ಕೆಲವೇ ಕೆಲವು ಬಟನ್ ಗಳನ್ನು ಮಾತ್ರವೇ ನೀಡಲಾಗಿದೆ. ಎಸಿ ಕಂಟ್ರೋಲ್ ನ ಕೆಳಗೆ ಫೋನಿಗಾಗಿ ಸ್ಟೋರೆಜ್ ಸ್ಪೇಸ್ ನೀಡಲಾಗಿದೆ. ಇನ್ಸ್ ಟ್ರೂಮೆಂಟ್ ಕಂಸೋಲ್ ನಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಹೊಸ ಬದಲಾವಣೆಗಳನ್ನು, ಹೊಸ ಎಕ್ಸ್ ಯುವಿ 300 ಆವೃತ್ತಿಯಲ್ಲೂ ಅಳವಡಿಸುವ ಸಾಧ್ಯತೆಗಳಿವೆ.

ಇಂಟಿರಿಯರ್ ಅನ್ನು ಬ್ಲಾಕ್ ಬಣ್ಣದಿಂದ ಫಿನೀಷಿಂಗ್ ಮಾಡಲಾಗಿದೆ. ಈ ರಹಸ್ಯ ಚಿತ್ರಗಳನ್ನು ಆಟೋಮೊಬೈಲ್ ಪ್ರಿಯರಾದ ರಾಜೀವ್ ಪಿರಯಟ್ಟು ಮತ್ತು ಅರ್ಷದ್ ರವರು ಹಂಚಿಕೊಂಡಿದ್ದಾರೆ. ಸ್ಯಾಂಗ್ ಯೊಂಗ್ ಟಿವೊಲಿ ಫೇಸ್ ಲಿಫ್ಟ್ ನಲ್ಲಿ ಸುಧಾರಿತ ಆವೃತ್ತಿಯ ಗ್ರಿಲ್, ಹೆಡ್ ಲ್ಯಾಂಪ್ಸ್ ಮತ್ತು ಬಂಪರ್ ಗಳನ್ನು ಅಳವಡಿಸಲಾಗಿದೆ.

ಈ ಕಾರು ಕಳೆದ ಮಾರ್ಚ್ ನಲ್ಲಿ ಜಿನಿವಾ ಮೋಟಾರ್ ಶೋ ನಲ್ಲಿ ಅನಾವರಣಗೊಂಡ ಹೊಸ ಕೊರಾಂಡೋ ವಾಹನವನ್ನೆ ಹೋಲುತ್ತದೆ. ಈ ವಾಹನವು ಇನ್ನೂ ಉತ್ಪಾದನಾ ಹಂತದಲ್ಲಿದ್ದು, ಈಗಲೇ ಇದರ ಬಗ್ಗೆ ಖಚಿತವಾಗಿ ಏನನ್ನೂ ಹೇಳುವಂತಿಲ್ಲ, ಆದರೆ ಕೆಲ ಭಾಗಗಳನ್ನು 2020ರ ಕೊರಾಂಡೋ ಮಾದರಿಯಿಂದ ಪಡೆಯಲಾಗಿದೆ. ಮಹೀಂದ್ರಾ ಮತ್ತು ಅದರ ಕೊರಿಯಾದ ಪಾಲುದಾರ ಸ್ಯಾಂಗ್ ಯೊಂಗ್ ಕಂಪನಿಗಳು ಜೊತೆಯಾಗಿ ಪ್ಲಾಟ್ ಫಾರಂ ಮತ್ತು ಪವರ್ ಟ್ರೆನ್ ಗಳನ್ನು ಅಭಿವೃದ್ಧಿ ಪಡಿಸುತ್ತಿದ್ದು ಆಟೋ ಮೊಬೈಲ್ ಆರ್ಥಿಕತೆಯ ಲಾಭ ಪಡೆಯಲು ಪ್ರಯತ್ನಿಸುತ್ತಿವೆ.

ಇದೇ ಕಾರಣದಿಂದಾಗಿ ಟಿವೊಲಿ ಆವೃತ್ತಿಯನ್ನು ಭಾರತದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಉತ್ಪಾದನಾ ಹಂತದಲ್ಲಿರುವ ಕಾರಿನ ಎಂಜಿನ್ ಅನ್ನು ಅಪ್ ಡೇಟ್ ಮಾಡಲಾಗುತ್ತಿದ್ದು, ಬಿಎಸ್6 ಮಾಲಿನ್ಯ ನಿಯಮಗಳಿಗೆ ಅನುಗುಣವಾಗಿ ಉತ್ಪಾದಿಸಲಾಗುತ್ತಿದೆ. ಟಿವೊಲಿ ಮಾದರಿಯಲ್ಲಿರುವ ಸಣ್ಣ ವಾಹನವಾದ ಮಹೀಂದ್ರಾ ಎಕ್ಸ್ ಯುವಿ 300 ಹೊಸ ಟರ್ಬೋ ಚಾರ್ಜ್ 1.2 ಲೀಟರಿನ ಪೆಟ್ರೋಲ್ ಎಂಜಿನ್ ಹೊಂದಿದೆ. ಹೊಸ ವಾಹನದಲ್ಲಿ ಚಾಲ್ತಿಯಲ್ಲಿರುವ ಹಳೆಯ 1.6 ಲೀಟರ್ ನ ನ್ಯಾಚುರಲ್ ಪೆಟ್ರೋಲ್ ಮೋಟಾರ್ ಅನ್ನು ಅಂತರ್‍ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬದಲಾಯಿಸಲಾಗುತ್ತದೆ. ಈ ಟರ್ಬೋ ಪೆಟ್ರೋಲ್ ಎಂಜಿನ್ 110 ಹೆಚ್‍ಪಿ ಮತ್ತು 200 ಎನ್ಎಂ ಟಾರ್ಕ್ ಅನ್ನು, ಭಾರತದ ಸಬ್ 4ಎಂ ಕ್ರಾಸ್ಒವರ್ ವಾಹನಗಳಲ್ಲಿ ಉತ್ಪಾದಿಸುತ್ತದೆ.
MOST READ: ಇಗ್ನೆನಿಯಂ ಪೆಟ್ರೋಲ್ ಎಂಜಿನ್ ಪ್ರೇರಿತ ರೇಂಜ್ ರೋವರ್ ಅನಾವರಣ

ಹೊಸ ಆವೃತ್ತಿಯ ಟಿವೊಲಿಯಲ್ಲಿ ಇನ್ನೂ ಹೆಚ್ಚಿನ ಪವರ್ ಉತ್ಪಾದಿಸುವ ಸಾಧ್ಯತೆಗಳಿವೆ. ಯೂರೋಪಿಯನ್ ಆವೃತ್ತಿಯಲ್ಲಿರುವ ಟಿವೊಲಿ ವಾಹನ 1.6 ಲೀಟರಿನ 115 ಹೆಚ್‍ಪಿ ಡೀಸೆಲ್ ಎಂಜಿನ್ ಹೊಂದಿದೆ, ಇದರ ಬದಲಿಗೆ ಹೊಸ 1.5 ಲೀಟರಿನ ಎಕ್ಸ್ ಯುವಿ 300 ನಲ್ಲಿ 115 ಹೆಚ್‍ಪಿ ಉತ್ಪಾದಿಸುವ ಎಂಜಿನ್ ಅಳವಡಿಸಲಾಗುವುದು. ಹೊಸ ಎಂಜಿನ್ ಅನ್ನು ಚೆನ್ನೈ ನಲ್ಲಿರುವ ಮಹೀಂದ್ರಾ ರಿಸರ್ಚ್ ವ್ಯಾಲಿಯಲ್ಲಿ ಸ್ಯಾಂಗ್ ಯೊಂಗ್ ಇನ್ ಪುಟ್ ಗಳನ್ನು ಬಳಸಿ ಅಭಿವೃದ್ದಿಪಡಿಸಲಾಗಿದೆ. ಈ ಕಾರನ್ನು ಬೆಂಗಳೂರಿನಲ್ಲಿ ಸ್ಪಾಟ್ ಟೆಸ್ಟ್ ಮಾಡಲಾಗಿದ್ದು, ಕರ್ನಾಟಕದ ರಿಜಿಸ್ಟ್ರೇಷನ್ ಪ್ಲೇಟ್ ಹೊಂದಿದೆ. ಬೆಂಗಳೂರಿನಲ್ಲಿ ಮಹೀಂದ್ರಾ ಕಂಪನಿಯ ಎಲೆಕ್ಟ್ರಿಕ್ ಪ್ಲಾಂಟ್ ಇದ್ದು, ಈ ಪ್ಲಾಂಟ್ ನಲ್ಲಿ ಎಕ್ಸ್ ಯುವಿ 300 ಎಲೆಕ್ಟ್ರಿಕ್ ವಾಹನವನ್ನು ಉತ್ಪಾದಿಸಲಾಗುವುದು.

ಎಕ್ಸ್ ಯುವಿ 300 ನ ಎಲೆಕ್ಟ್ರಿಕ್ ವಾಹನವನ್ನು 2020ರಲ್ಲಿ ಬಿಡುಗಡೆಗೊಳಿಸಲಾಗುವುದು ಎಂದು ಮಹೀಂದ್ರಾ ಕಂಪನಿ ಈಗಾಗಲೇ ಖಚಿತಪಡಿಸಿದೆ. ಯೂರೋಪ್, ಕಾಂಪ್ಯಾಕ್ಟ್ ಕ್ರಾಸ್ ಒವರ್ ಕಾರುಗಳಿಗೆ ಪ್ರಮುಖ ಮಾರುಕಟ್ಟೆಯಾಗಿರುವುದರಿಂದ ಸ್ಯಾಂಗ್ ಯೊಂಗ್ ವಾಹನ ಚಲಾನೆಗಾಗಿ ಕೆಲವು ಸುರಕ್ಷತಾ ನಿಯಮಗಳನ್ನು ಅಳವಡಿಸುತ್ತಿದೆ. ಈ ವಾಹನವು ಜೀಪ್ ರೆನೆಗಡ್, ಮಾಜ್ದಾ ಸಿ ಎಕ್ಸ್ 3, ಸುಜುಕಿ ವಿಟಾರಾ ಮತ್ತು ನಿಸ್ಸಾನ್ ಜೂಕ್ ಗಳಿಂದ ಪೈಪೋಟಿ ಎದುರಿಸುವ ಸಾಧ್ಯತೆಗಳಿವೆ. ಯೂರೋಪಿಯನ್ ಮಾರುಕಟ್ಟೆಯಲ್ಲಿ ಅಷ್ಟೇನೂ ಜನಪ್ರಿಯವಲ್ಲದ ಕಾರಣ ಕೊರಿಯಾ ಮೂಲದ ಈ ವಾಹನವು ತನ್ನ ಹೆಚ್ಚು ಬಗೆಯ ಎಕ್ವಿಪ್ ಮೆಂಟ್ ಗಳಿಂದ ಮತ್ತು ಆಕರ್ಷಕ ದರಗಳಿಂದ ಮೋಡಿ ಮಾಡುವ ತವಕದಲ್ಲಿದೆ.

ಸ್ಯಾಂಗ್ ಯೊಂಗ್ ನ ಯಾವುದೇ ವಾಹನಗಳನ್ನು ಭಾರತದಲ್ಲಿ ಬಿಡುಗಡೆ ಮಾಡುವ ಯೋಜನೆ ಇಲ್ಲದೇ ಇದ್ದರೂ ಮುಂಬರುವ ದಿನಗಳಲ್ಲಿ ಮಹೀಂದ್ರಾ ಕಂಪನಿಯು ಬಿಡುಗಡೆ ಮಾಡಲಿರುವ ಮಾದರಿಗಳಲ್ಲಿ ಸ್ಯಾಂಗ್ ಯೊಂಗ್ ವಾಹನಗಳಲ್ಲಿ ಅಳವಡಿಸಿರುವ ಮೆಕಾನಿಕಲ್ ಗಳನ್ನು ಕಾಣಬಹುದು. ಹೊಸ ತಲೆಮಾರಿನ ಎಕ್ಸ್ ಯುವಿ500 ಹೊಸ ಕೊರಾಂಡೊ ವಾಹನದ ಮೇಲೆ ಆಧಾರಿತವಾಗಿದೆ.
Source: Rushlane