ಸೆಪ್ಟೆಂಬರ್‍‍ನಲ್ಲಿ ಹ್ಯುಂಡೈ ಎಲಾಂಟ್ರ ಪೇಸ್‍‍ಲಿಪ್ಟ್ ಭಾರತದಲ್ಲಿ ಬಿಡುಗಡೆ

ಹುಂಡೈ ಇಂಡಿಯಾ, ದೇಶಿಯ ಮಾರುಕಟ್ಟೆಯಲ್ಲಿ ಎಲಾಂಟ್ರ ಕಾರ್ ಅನ್ನು ಕಳೆದ ವರ್ಷ ಬಿಡುಗಡೆಗೊಳಿಸಿತ್ತು. ಈ ಕಾರಿನ ಫೇಸ್‍‍ಲಿಫ್ಟ್ ಆವೃತ್ತಿಯನ್ನು ಸೆಪ್ಟಂಬರ್ ನಲ್ಲಿ ಬಿಡುಗಡೆಗೊಳಿಸಲಾಗುತ್ತಿದೆ. ಇದರ ನಡುವೆ ಎಕ್ಸಿಕ್ಯೂಟೀವ್ ಸೆಡಾನ್ ಅನ್ನು ಪರೀಕ್ಷಿಸಲಾಗಿತ್ತು. ಫೇಸ್ ಲಿಫ್ಟ್ ಆವೃತ್ತಿಯ ಎಲಾಂಟ್ರ ಸೆಪ್ಟೆಂಬರ್‍‍ನಲ್ಲಿ ಬಿಡುಗಡೆಯಾಗುವುದು ಖಚಿತವಾಗಿದೆ.

ಸೆಪ್ಟೆಂಬರ್‍‍ನಲ್ಲಿ ಹ್ಯುಂಡೈ ಎಲಾಂಟ್ರ ಪೇಸ್‍‍ಲಿಪ್ಟ್ ಭಾರತದಲ್ಲಿ ಬಿಡುಗಡೆ

ಹೊಸ ಎಲಾಂಟ್ರ ಕಾರಿನಲ್ಲಿ ಎರಡು ರೀತಿಯ ಎಂಜಿನ್‍‍ಗಳನ್ನು ಅಳವಡಿಸಲಾಗಿದೆ. ಇದರಲ್ಲಿ 2.0 ಲೀಟರಿನ ನಾಲ್ಕು ಪೆಟ್ರೋಲ್ ಸಿಲಿಂಡರ್ ಎಂಜಿನ್, 152 ಬಿಎಚ್‍‍ಪಿ ಮತ್ತು 192 ಟಾರ್ಕ್‍‍ ಅನ್ನು ಉತ್ಪಾದಿಸುತ್ತದೆ. ಇದನ್ನು ಬಿಎಸ್6 ಎಮಿಷನ್ ನಿಯಮಕ್ಕೆ ಅನುಗುಣವಾಗಿ ಅಪ್‍‍‍ಗ್ರೇಡ್ ಮಾಡಲಾಗಿದೆ. 1.6 ಲೀಟರ್‍‍ನ ಎಂಜಿನ್ 128 ಬಿಎಚ್‍‍ಪಿ ಉತ್ಪಾದಿಸುತ್ತದೆ. ಬಿ‍ಎಸ್4 ಮಾದರಿ ಎಂಜಿನ್ ಅನ್ನು ಹ್ಯುಂಡೈ, ಕ್ರೆಟಾ ವೆರ್ನಾದಲ್ಲಿ ಬಳಸಿಕೊಂಡಿದೆ.

ಸೆಪ್ಟೆಂಬರ್‍‍ನಲ್ಲಿ ಹ್ಯುಂಡೈ ಎಲಾಂಟ್ರ ಪೇಸ್‍‍ಲಿಪ್ಟ್ ಭಾರತದಲ್ಲಿ ಬಿಡುಗಡೆ

ಬಿ‍ಎಸ್6 ಮಾಲಿನ್ಯ ನಿಯಮ 2020ರಲ್ಲಿ ಜಾರಿಯಾಗಲಿದ್ದು ಈ ಸಂದರ್ಭದಲ್ಲಿ ಬಿಎಸ್4 ಎಂಜಿನ್ ಅನ್ನು ಬದಲಾಯಿಸಬಹುದು ಅಥವಾ ಅದನ್ನೇ ಮುಂದುವರಿಸಬಹುದು. 6-ಸ್ಪೀಡ್ ಆಟೋ ಮ್ಯಾಟಿಕ್ ಗೇರ್‍‍ಬಾಕ್ಸ್ ಅದನ್ನು ಕೂಡ ಹಾಗೆ ಮುಂದುವರಿಸಬಹುದು.

ಸೆಪ್ಟೆಂಬರ್‍‍ನಲ್ಲಿ ಹ್ಯುಂಡೈ ಎಲಾಂಟ್ರ ಪೇಸ್‍‍ಲಿಪ್ಟ್ ಭಾರತದಲ್ಲಿ ಬಿಡುಗಡೆ

ಹೊಸ ಹ್ಯುಂಡೈ ಎಲಾಂಟ್ರದಲ್ಲಿ ಹಲವಾರು ಬದಲಾವಣೆಗಳನ್ನು ಮಾಡಲಾಗಿದೆ. ಮುಖ್ಯವಾಗಿ ಇದರ ಡಿಸೈನ್‍‍ನಲ್ಲಿ ಬದಲಾವಣೆಯನ್ನು ಮಾಡಲಾಗಿದೆ. ಉಳಿದಂತೆ ಹ್ಯುಂಡೈ ಶೈಲಿಯ ಕ್ಯಾಸ್ಕೇಡಿಂಗ್ ಗ್ರಿಲ್, ಎಲ್‍ಇಡಿ ಡಿ‍ಆರ್‍ಎಲ್ ಹೊಸ ಶೈಲಿಯ ಹೆಡ್‍‍ಲ್ಯಾಪ್, ಫಾಗ್ ಲ್ಯಾಂಪ್‍‍ಗಳಿರಲಿವೆ.

ಸೆಪ್ಟೆಂಬರ್‍‍ನಲ್ಲಿ ಹ್ಯುಂಡೈ ಎಲಾಂಟ್ರ ಪೇಸ್‍‍ಲಿಪ್ಟ್ ಭಾರತದಲ್ಲಿ ಬಿಡುಗಡೆ

ಹೊಸ ಡಿಸೈನ್‍‍‍ನ 16 ಅಥವಾ 17 ಇಂಚಿನ ಅಲಾಯ್ ವೀಲ್ಹ್, ಹಿಂಭಾಗದಲ್ಲಿ ರಿವರ್ಸ್ ಲೈಟ್‍‍ನ್ನು ಹೊಂದಿದೆ. ಪ್ರಯಾಣಿಕರ ಸುರಕ್ಷತೆಗಾಗಿ 6 ಏರ್ ಬ್ಯಾಗ್, ರೇರ್ ಪಾರ್ಕಿಂಗ್ ಸೆನ್ಸಾರ್, ಸ್ಟಾಬಿಲಿಟಿ ಪ್ರೋಗ್ರಾಂ, ರೇರ್ ಪಾರ್ಕಿಂಗ್ ಕ್ಯಾಮೆರಾ ಸೌಲಭ್ಯವನ್ನು ಅಳವಡಿಸಲಾಗಿದೆ.

MOST READ: ಸೀಟ್ ಬೆಲ್ಟ್ ಧರಿಸದ ಪೊಲೀಸರನ್ನೇ ಅಡ್ಡಗಟ್ಟಿದ ಭೂಪ..!

ಸೆಪ್ಟೆಂಬರ್‍‍ನಲ್ಲಿ ಹ್ಯುಂಡೈ ಎಲಾಂಟ್ರ ಪೇಸ್‍‍ಲಿಪ್ಟ್ ಭಾರತದಲ್ಲಿ ಬಿಡುಗಡೆ

ಹೊಸ ಎಲಾಂಟ್ರದ ಇಂಟಿರಿಯರ್ ವಿನ್ಯಾಸ ಆಕರ್ಷಕವಾಗಿದ್ದು, ಹುಂಡೈನ ಹೊಸ 8.0 ಇಂಚಿನ್ ಟಚ್‍ಸ್ಕ್ರೀನ್ ಇನ್ಫೋಟೈನ್‍ಮೆಂಟ್ ಸಿಸ್ಟಂನಲ್ಲಿ ಅಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ ಪ್ಲೆಗಳಿವೆ. ಉನ್ನತ ಮಟ್ಟದ ಟ್ರಿಮ್‍, ರಿವರ್ಸ್ ಕ್ಯಾಮೆರಾ, ಕ್ಲ್ಯಾಮೇಟ್ ಕಂಟ್ರೋಲರ್, ಟೈರ್ ಫ್ರೆಶ್ರರ್ ಮಾನಿಟರಿಂಗ್ ಸಿಸ್ಟಮ್, ಸೆಪ್ಟಿ ಕಿಟ್, 6 ಏರ್‍‍ಬ್ಯಾಗ್, ಎಬಿ‍ಎಸ್, ಇಬಿಡಿ ವಾಹನ ನಿಯಂತ್ರಣ ಮುಂತಾದ ಫೀಚರ್‍‍‍‍ಗಳನ್ನು ಹೊಂದಿದೆ.

ಸೆಪ್ಟೆಂಬರ್‍‍ನಲ್ಲಿ ಹ್ಯುಂಡೈ ಎಲಾಂಟ್ರ ಪೇಸ್‍‍ಲಿಪ್ಟ್ ಭಾರತದಲ್ಲಿ ಬಿಡುಗಡೆ

ಎಲಾಂಟ್ರ ಕಾರಿನ ಬೆಲೆಯು ಮಾರುಕಟ್ಟೆಯಲ್ಲಿರುವ ಕಾರಿನ ಬೆಲೆಗಳಷ್ಟೇ ಇರಬಹುದು. ಪೆಟ್ರೋಲ್ ಕಾರಿನ ಬೆಲೆ ರೂ.13.82 ರಿಂದ 16.92 ಲಕ್ಷದವರೆಗೂ, ಡಿಸೇಲ್ ಕಾರು ಪ್ರಾರಂಭಿಕ ರೂ. 15.13 ರಿಂದ 20.05 ಲಕ್ಷಗಳವರೆಗೂ ಇರಬಹುದು.

MOST READ: ಭಾರತದಲ್ಲಿ ಐಕಾನಿಕ್ ಯಜ್ಡಿ ಬೈಕ್‌ಗಳ ಮರುಬಿಡುಗಡೆ ಪಕ್ಕಾ

ಸೆಪ್ಟೆಂಬರ್‍‍ನಲ್ಲಿ ಹ್ಯುಂಡೈ ಎಲಾಂಟ್ರ ಪೇಸ್‍‍ಲಿಪ್ಟ್ ಭಾರತದಲ್ಲಿ ಬಿಡುಗಡೆ

ಈ ಮೂಲಕ ಹ್ಯುಂಡೈಮತ್ತಷ್ಟು ಗ್ರಾಹಕರನ್ನು ಸೆಳೆಯುವ ಪ್ರಯತ್ನ ಮಾಡುತ್ತಿದೆ. ಹ್ಯುಂಡೈ ಎಲಾಂಟ್ರ ಹೆಚ್ಚುವರಿ ಫೀಚರ್ಸ್, ವಿನ್ಯಾಸದಲ್ಲಿ ಕೆಲ ಬದಲಾವಣೆಗಳನ್ನು ಹೊಂದುವ ಮೂಲಕ ದೇಶಿಯ ಮಾರುಕಟ್ಟೆಯಲ್ಲಿ ಹೊಂಡಾ ಸಿವಿಕ್, ಟೊಯೊಟಾ ಕೊರೊಲಾ ಹಾಗೂ ಅಟ್ಲೆಸ್ ಕಾರುಗಳಿಗೆ ಪೈಪೋಟಿ ನೀಡಲಿದೆ.

Article Published On: Thursday, August 22, 2019, 16:15 [IST]
English summary
Hyundai Elantra facelift India launch in September- Read In Kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+