ಇನ್ಮುಂದೆ ಮಾರಾಟವಾಗಲ್ಲ ಗ್ರಾಂಡ್ ಐ10 ಡೀಸೆಲ್ ಆವೃತ್ತಿ ಕಾರುಗಳು

ಹ್ಯುಂಡೈ ಮೋಟರ್ ಇಂಡಿಯಾ, ತನ್ನ ಗ್ರ್ಯಾಂಡ್ ಐ10 ಮಾದರಿಯ ಕಾರ್ ಅನ್ನು ಸದ್ದಿಲ್ಲದೇ ಮರುಜೋಡಿಸಿದೆ. ಹ್ಯುಂಡೈ ಕಂಪನಿಯು ಮೂಲ ಮಾದರಿಯ ಹ್ಯಾಚ್‌ಬ್ಯಾಕ್‌ ಎರಾ ಹಾಗೂ ಟಾಪ್ ಮಾದರಿಯಾದ ಅಸ್ತಾ ಕಾರುಗಳ ಪೆಟ್ರೋಲ್ ಆಟೋಮ್ಯಾಟಿಕ್ ಹಾಗೂ 1.2 ಲೀಟರ್ ಡೀಸೆಲ್ ಎಂಜಿನ್ ಮಾದರಿಗಳನ್ನು ಸ್ಥಗಿತಗೊಳಿಸಿದೆ.

ಇನ್ಮುಂದೆ ಮಾರಾಟವಾಗಲ್ಲ ಗ್ರಾಂಡ್ ಐ10 ಡೀಸೆಲ್ ಆವೃತ್ತಿ ಕಾರುಗಳು

ಈಗ, ಗ್ರ್ಯಾಂಡ್ ಐ 10 ಅನ್ನು 5-ಸ್ಪೀಡ್ ಮ್ಯಾನ್ಯುವಲ್ ಗೇರ್ ಬಾಕ್ಸ್ ಹೊಂದಿರುವ ಪೆಟ್ರೋಲ್ ಅಥವಾ ಸಿಎನ್‍‍ಜಿ ಎಂಜಿನ್‍‍ನೊಂದಿಗೆ ಮಾತ್ರ ಖರೀದಿಸಬಹುದು. ಈ ಎಂಜಿನ್‍‍ಗಳನ್ನು ಮ್ಯಾಗ್ನಾ ಹಾಗೂ ಸ್ಪೋರ್ಟ್ಜ್ ಟ್ರಿಮ್‍‍ಗಳಲ್ಲಿ ಮಾತ್ರ ಮಾರಾಟ ಮಾಡಲಾಗುವುದು. ಸಿಎನ್‌ಜಿ ಎಂಜಿನ್ ಅನ್ನು ಕಡಿಮೆ ಮಾದರಿಯ ಕಾರುಗಳಲ್ಲಿ ಅಳವಡಿಸಲಾಗುವುದು.

ಇನ್ಮುಂದೆ ಮಾರಾಟವಾಗಲ್ಲ ಗ್ರಾಂಡ್ ಐ10 ಡೀಸೆಲ್ ಆವೃತ್ತಿ ಕಾರುಗಳು

ಗ್ರ್ಯಾಂಡ್ ಐ 10 ನಿಯೋಸ್‌ಗೆ ಅವಕಾಶ ಕಲ್ಪಿಸುವ ಸಲುವಾಗಿ ಹ್ಯುಂಡೈ ಕಂಪನಿಯು ಗ್ರ್ಯಾಂಡ್ ಐ 10 ಕಾರುಗಳನ್ನು ಸ್ಥಗಿತಗೊಳಿಸಲಿದೆಯೆಂದು ಈ ಹಿಂದೆಯೇ ವರದಿಯಾಗಿತ್ತು. ಮುಂಬರುವ ದಿನಗಳಲ್ಲಿ ಗ್ರ್ಯಾಂಡ್ ಐ 10 ಕಾರ್ ಅನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸುವ ಸಾಧ್ಯತೆಗಳಿವೆ.

ಇನ್ಮುಂದೆ ಮಾರಾಟವಾಗಲ್ಲ ಗ್ರಾಂಡ್ ಐ10 ಡೀಸೆಲ್ ಆವೃತ್ತಿ ಕಾರುಗಳು

ಹ್ಯುಂಡೈ ತನ್ನ ಹೊಸ ಕಾಂಪ್ಯಾಕ್ಟ್ ಸೆಡಾನ್ ಆದ ಒರಾ ಕಾರಿನ ನವೀಕರಣಕ್ಕೆ ಮುಂದಾಗಿದೆ, ಇದು ಗ್ರ್ಯಾಂಡ್ ಐ10 ನಿಯೋಸ್ ಕಾರಿನ ಆಧಾರದ ಮೇಲೆ ತಯಾರಾಗಿದೆ. ಗ್ರ್ಯಾಂಡ್ ಐ10 ಕಾರ್ ಅನ್ನು ಈಗ ಮ್ಯಾಗ್ನಾ ಹಾಗೂ ಸ್ಪೋರ್ಟ್ಜ್ ಎಂಬ ಎರಡು ಮಾದರಿಗಳಲ್ಲಿ ಮಾರಾಟ ಮಾಡಲಾಗುತ್ತಿದೆ.

ಇನ್ಮುಂದೆ ಮಾರಾಟವಾಗಲ್ಲ ಗ್ರಾಂಡ್ ಐ10 ಡೀಸೆಲ್ ಆವೃತ್ತಿ ಕಾರುಗಳು

ಮ್ಯಾಗ್ನಾ ಪೆಟ್ರೋಲ್ ಎಂಜಿನ್ ಕಾರಿನ ಮಾರಾಟವನ್ನು ಮುಂದುವರೆಸುವುದಾಗಿ ಬೆಂಗಳೂರಿನ ಡೀಲರ್‍‍ಗಳು ತಿಳಿಸಿದ್ದಾರೆ. ಮ್ಯಾಗ್ನಾ ಮಾದರಿಯ ಕಾರಿನಲ್ಲಿ ಬ್ಲೂಟೂತ್, ಯುಎಸ್‌ಬಿ, ಎಯುಎಕ್ಸ್-ಇನ್ ಹೊಂದಿರುವ ಆಡಿಯೊ ಸಿಸ್ಟಂ, ಸ್ಟೀಯರಿಂಗ್ ಮೌಂಟೆಡ್ ಆಡಿಯೊ ಕಂಟ್ರೋಲ್‍‍ಗಳಿವೆ.

ಇನ್ಮುಂದೆ ಮಾರಾಟವಾಗಲ್ಲ ಗ್ರಾಂಡ್ ಐ10 ಡೀಸೆಲ್ ಆವೃತ್ತಿ ಕಾರುಗಳು

ಇದರ ಜೊತೆಗೆ ಎಲೆಕ್ಟ್ರಿಕಲಿ ಅಡ್ಜಸ್ಟಬಲ್ ಒ‍ಆರ್‍‍ವಿ‍ಎಂಗಳು, ಮ್ಯಾನುವಲ್ ಏರ್ ಕಾನ್ ಹೊಂದಿರುವ ಹಿಂಭಾಗದ ಎಸಿ ವೆಂಟ್, ಮುಂಭಾಗದ ಹಾಗೂ ಹಿಂಭಾಗದ ಪವರ್ ವಿಂಡೋಗಳು, ಮಲ್ಟಿ ಇನ್ಫೋ ಡಿಸ್‍‍ಪ್ಲೇ, ಡ್ಯೂಯಲ್ ಏರ್‍‍ಬ್ಯಾಗ್‌, ಇಬಿಡಿಯೊಂದಿಗೆ ಎಬಿಎಸ್, ರೇರ್ ಪಾರ್ಕಿಂಗ್ ಸೆನ್ಸಾರ್‍‍ಗಳಂತಹ ಫೀಚರ್‍‍ಗಳಿವೆ.

ಇನ್ಮುಂದೆ ಮಾರಾಟವಾಗಲ್ಲ ಗ್ರಾಂಡ್ ಐ10 ಡೀಸೆಲ್ ಆವೃತ್ತಿ ಕಾರುಗಳು

ಟಾಪ್ ಮಾದರಿಯ ಸ್ಪೋರ್ಟ್ಜ್ ಕಾರಿನಲ್ಲಿ 7 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೇನ್‌ಮೆಂಟ್ ಸಿಸ್ಟಂ, ಆಂಡ್ರಾಯ್ಡ್ ಆಟೋ ಹಾಗೂ ಆಪಲ್ ಕಾರ್ ಪ್ಲೇ, ರೇರ್ ಪಾರ್ಕಿಂಗ್ ಕ್ಯಾಮೆರಾ, ವಾಯ್ಸ್ ರೆಕಗ್ನಿಷನ್, ಎಲೆಕ್ಟ್ರಿಕ್ ಫೋಲ್ಡಿಂಗ್ ಮಿರರ್, ಕೂಲ್ ಗ್ಲವ್‌ಬಾಕ್ಸ್, ಟಿಲ್ಟ್ ಅಡ್ಜಸ್ಟಬಲ್ ಸ್ಟೀಯರಿಂಗ್ ವ್ಹೀಲ್, ಎಲ್ಇಡಿ ಡಿಆರ್‍ಎಲ್‍ ಹಾಗೂ ರೇರ್ ಸ್ಪಾಯ್ಲರ್‍‍ಗಳಂತಹ ಹೆಚ್ಚುವರಿ ಕಿಟ್‍‍ಗಳಿವೆ.

MOST READ: ಕೈಕೊಟ್ಟ ದುಬಾರಿ ಬೆಲೆಯ ಕಾರಿನ ಬ್ರೇಕ್..!

ಇನ್ಮುಂದೆ ಮಾರಾಟವಾಗಲ್ಲ ಗ್ರಾಂಡ್ ಐ10 ಡೀಸೆಲ್ ಆವೃತ್ತಿ ಕಾರುಗಳು

ಪ್ರೀಮಿಯಂ ಗ್ರ್ಯಾಂಡ್ ಐ 10 ನಿಯೋಸ್‌‍‍ನಲ್ಲಿ ಕ್ಲೈಮೆಟ್ ಕಂಟ್ರೋಲ್, ರೇರ್ ವಾಶ್ ಹಾಗೂ ವೈಪರ್, ಪುಶ್ ಬಟನ್ ಸ್ಟಾರ್ಟ್‌ನೊಂದಿಗೆ ಕೀಲೆಸ್ ಎಂಟ್ರಿ, ಲೆದರ್ ಹೊಂದಿರುವ ಸ್ಟೀಯರಿಂಗ್‌ನಂತಹ ಫೀಚರ್‍‍ಗಳಿವೆ.

MOST READ: ಬೈಕುಗಳಲ್ಲಿ ಡೀಸೆಲ್ ಎಂಜಿನ್ ಏಕೆ ಬಳಸಲ್ಲ ಗೊತ್ತಾ?

ಇನ್ಮುಂದೆ ಮಾರಾಟವಾಗಲ್ಲ ಗ್ರಾಂಡ್ ಐ10 ಡೀಸೆಲ್ ಆವೃತ್ತಿ ಕಾರುಗಳು

1.2 ಲೀಟರಿನ ಕಪ್ಪಾ ಪೆಟ್ರೋಲ್ ಎಂಜಿನ್ 82 ಬಿ‍‍ಹೆಚ್‍‍ಪಿ ಪವರ್ ಹಾಗೂ 114 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಸಿಎನ್‍‍ಜಿ ಎಂಜಿನ್ 66 ಬಿ‍‍ಹೆಚ್‍‍ಪಿ ಪವರ್ ಹಾಗೂ 98 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎರಡೂ ಮಾದರಿಗಳಲ್ಲಿ 5 ಸ್ಪೀಡಿನ ಮ್ಯಾನುವಲ್ ಗೇರ್‌ಬಾಕ್ಸ್‌ ಅಳವಡಿಸಲಾಗಿದೆ.

MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಇನ್ಮುಂದೆ ಮಾರಾಟವಾಗಲ್ಲ ಗ್ರಾಂಡ್ ಐ10 ಡೀಸೆಲ್ ಆವೃತ್ತಿ ಕಾರುಗಳು

ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಬಯಸುವವರು, ನಿಯೋಸ್‌ ಖರೀದಿಸಬಹುದು. ಈ ಮೊದಲು, ಗ್ರ್ಯಾಂಡ್ ಐ 10 ಕಾರಿನಲ್ಲಿ 4 ಸ್ಪೀಡ್ ಟಾರ್ಕ್ ಕನ್ವರ್ಟರ್ ಅಳವಡಿಸಲಾಗಿತ್ತು. ಗ್ರ್ಯಾಂಡ್ ಐ10 ನಲ್ಲಿದ್ದ 1.2 ಲೀಟರ್ ಡೀಸೆಲ್ ಎಂಜಿನ್ ಅನ್ನು ಇನ್ನು ಮುಂದೆ ನಿಯೋಸ್‌ ಕಾರಿನಲ್ಲಿ ನೀಡಲಾಗುವುದು.

ಇನ್ಮುಂದೆ ಮಾರಾಟವಾಗಲ್ಲ ಗ್ರಾಂಡ್ ಐ10 ಡೀಸೆಲ್ ಆವೃತ್ತಿ ಕಾರುಗಳು

ಈ ಎಂಜಿನ್ 73 ಬಿ‍ಹೆಚ್‍‍ಪಿ ಪವರ್ ಹಾಗೂ 190 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಡೀಸೆಲ್ ನಿಯೋಸ್ ಎಎಂಟಿ ಜೊತೆಗೆ 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ ಲಭ್ಯವಿದೆ. ಈ ಮೊದಲು ಲಭ್ಯವಿದ್ದ ಮರೀನಾ ಬ್ಲೂ ಹಾಗೂ ಫ್ಲೇಮ್ ಆರೆಂಜ್ ಬಣ್ಣಗಳನ್ನು ಹ್ಯುಂಡೈ ಸ್ಥಗಿತಗೊಳಿಸಿದ್ದರಿಂದ ಗ್ರ್ಯಾಂಡ್ ಐ10 ಕಾರಿನ ಬಣ್ಣಗಳನ್ನು ಕಡಿಮೆಗೊಳಿಸಲಾಗಿದೆ.

ಇನ್ಮುಂದೆ ಮಾರಾಟವಾಗಲ್ಲ ಗ್ರಾಂಡ್ ಐ10 ಡೀಸೆಲ್ ಆವೃತ್ತಿ ಕಾರುಗಳು

ಈಗ, ಗ್ರ್ಯಾಂಡ್ ಐ10 ಅನ್ನು ಫಿಯರಿ ರೆಡ್, ಟೈಫೂನ್ ಸಿಲ್ವರ್, ಟೈಟಾನ್ ಗ್ರೇ ಹಾಗೂ ಪೋಲಾರ್ ವೈಟ್ ಎಂಬ ನಾಲ್ಕು ಬಣ್ಣಗಳಲ್ಲಿ ಮಾತ್ರ ಮಾರಾಟ ಮಾಡಲಿದೆ. ಗ್ರಾಂಡ್ ಐ10 ಕಾರು ಫೋರ್ಡ್ ಫಿಗೊ , ಮಾರುತಿ ಸ್ವಿಫ್ಟ್ ಹಾಗೂ ಗ್ರ್ಯಾಂಡ್ ಐ10 ನಿಯೋಸ್ ಕಾರುಗಳಿಗೆ ಪೈಪೋಟಿ ನೀಡುತ್ತದೆ.

Article Published On: Wednesday, November 13, 2019, 16:46 [IST]
English summary
Hyundai grand i10 diesel variant discontinued in India - Read in Kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+