ಪರ್ಫಾಮೆನ್ಸ್ ಪ್ರಿಯರಿಗಾಗಿ ಗ್ರ್ಯಾಂಡ್ ಐ10 ನಿಯೋಸ್‌ನಲ್ಲಿ ಟರ್ಬೋ ಪೆಟ್ರೋಲ್ ಎಂಜಿನ್

ಕಳೆದ ತಿಂಗಳ ಹಿಂದಷ್ಟೇ ಗ್ರ್ಯಾಂಡ್ ಐ10 ನಿಯೋಸ್ ಆವೃತ್ತಿಯನ್ನು ಬಿಡುಗಡೆ ಮಾಡಿದ್ದ ಹ್ಯುಂಡೈ ಸಂಸ್ಥೆಯು ಪರ್ಫಾಮೆನ್ಸ್ ಪ್ರಿಯರಿಗಾಗಿ ಹೊಸ ಕಾರಿನಲ್ಲಿ ಮತ್ತೊಂದು ಟರ್ಬೋ ಎಂಜಿನ್ ಮಾದರಿಯನ್ನು ಪರಿಚಯಿಸುವ ಸುಳಿವು ನೀಡಿದೆ.

ಪರ್ಫಾಮೆನ್ಸ್ ಪ್ರಿಯರಿಗಾಗಿ ಗ್ರ್ಯಾಂಡ್ ಐ10 ನಿಯೋಸ್‌ನಲ್ಲಿ ಟರ್ಬೋ ಪೆಟ್ರೋಲ್ ಎಂಜಿನ್

ವೆನ್ಯೂ ಮಾದರಿಯಲ್ಲಿ ಗ್ರ್ಯಾಂಡ್ ಐ10 ನಿಯೋಸ್ ಮಾದರಿಯಲ್ಲೂ ಕೂಡಾ ಟರ್ಬೋ ಎಂಜಿನ್ ಪರಿಚಯಿಸಲಿರುವ ಹ್ಯುಂಡೈ ಸಂಸ್ಥೆಯು 100-ಬಿಎಚ್‌ಪಿ ಉತ್ಪಾದನಾ ಸಾಮರ್ಥ್ಯದ 1.0-ಲೀಟರ್ ಪೆಟ್ರೋಲ್ ಎಂಜಿನ್ ಅಭಿವೃದ್ದಿ ಪಡಿಸಿದ್ದು, 2020ರ ದೆಹಲಿ ಆಟೋ ಮೇಳದಲ್ಲಿ ಭಾಗಿ ನಂತರ ಹೊಸ ಕಾರನ್ನು ಪರಿಚಯಿಸುವ ಇರಾದೆಯಲ್ಲಿದೆ. ಈ ಮೂಲಕ ಯುವ ಕಾರು ಖರೀದಿದಾರರನ್ನು ಸೆಳೆಯಲು ಯತ್ನಿಸುತ್ತಿರುವ ಹ್ಯುಂಡೈ ಸಂಸ್ಥೆಯು 100-ಬಿಎಚ್‌ಪಿ ಉತ್ಪಾದನೆಗೆ ತಕ್ಕಂತೆ ಹಲವು ಪ್ರೀಮಿಯಂ ಸೌಲಭ್ಯಗಳನ್ನು ನೀಡಲಿದೆ.

ಪರ್ಫಾಮೆನ್ಸ್ ಪ್ರಿಯರಿಗಾಗಿ ಗ್ರ್ಯಾಂಡ್ ಐ10 ನಿಯೋಸ್‌ನಲ್ಲಿ ಟರ್ಬೋ ಪೆಟ್ರೋಲ್ ಎಂಜಿನ್

ಇನ್ನು ಹೊಸ ತಲೆಮಾರಿನ ವೈಶಿಷ್ಟ್ಯತೆಗಳೊಂದಿಗೆ ರಸ್ತೆಗಿಳಿದಿರುವ ಗ್ರಾಂಡ್ ಐ10 ನಿಯೋಸ್ ಕಾರು ಹಳೆಯ ಆವೃತ್ತಿಗಿಂತಲೂ ಹೆಚ್ಚಿನ ಮಟ್ಟದ ಉದ್ದಳತೆಯನ್ನು ಹೊಂದಿದ್ದು, ಗ್ರಾಂಡ್ ಐ10 ಮತ್ತು ಎಲೈಟ್ ಐ20 ನಡುವಿನ ಸ್ಥಾನ ಗಿಟ್ಟಿಸಿಕೊಂಡಿರುವ ಗ್ರಾಂಡ್ ಐ10 ನಿಯೋಸ್ ಆವೃತ್ತಿಯು ಇತರೆ ಹ್ಯಾಚ್‌ಬ್ಯಾಕ್ ಆವೃತ್ತಿಗಳಿಂತಲೂ ಅತಿಹೆಚ್ಚು ಪ್ರೀಮಿಯಂ ಸೌಲಭ್ಯಗಳನ್ನು ಪಡೆದಿದೆ.

ಪರ್ಫಾಮೆನ್ಸ್ ಪ್ರಿಯರಿಗಾಗಿ ಗ್ರ್ಯಾಂಡ್ ಐ10 ನಿಯೋಸ್‌ನಲ್ಲಿ ಟರ್ಬೋ ಪೆಟ್ರೋಲ್ ಎಂಜಿನ್

ಗ್ರಾಂಡ್ ಐ10 ನಿಯೋಸ್ ಕಾರು ಎರಾ, ಮ್ಯಾಗ್ನಾ, ಸ್ಪೋರ್ಟ್ಜ್ ಮತ್ತು ಆಸ್ಟಾ ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿದ್ದು, ಆರಂಭಿಕ ಮಾದರಿಯಾದ ಎರಾ ಪೆಟ್ರೋಲ್ ಮ್ಯಾನುವಲ್ ಆವೃತ್ತಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 4.99 ಲಕ್ಷ ಬೆಲೆ ಹೊಂದಿದ್ದರೆ ಹೈ ಎಂಡ್ ಮಾದರಿಯಾದ ಆಸ್ಟಾ ಮ್ಯಾನುವಲ್ ಆವೃತ್ತಿಯು ಎಕ್ಸ್‌ಶೋರೂಂ ಪ್ರಕಾರ ರೂ.7.99 ಲಕ್ಷ ಬೆಲೆ ಪಡೆದಿದೆ.

ಪರ್ಫಾಮೆನ್ಸ್ ಪ್ರಿಯರಿಗಾಗಿ ಗ್ರ್ಯಾಂಡ್ ಐ10 ನಿಯೋಸ್‌ನಲ್ಲಿ ಟರ್ಬೋ ಪೆಟ್ರೋಲ್ ಎಂಜಿನ್

ಪೆಟ್ರೋಲ್ ಮತ್ತು ಡೀಸೆಲ್ ಎರಡು ಮಾದರಿಗಳಲ್ಲೂ ಖರೀದಿಗೆ ಲಭ್ಯವಿರುವ ಗ್ರಾಂಡ್ ಐ10 ನಿಯೋಸ್ ಕಾರು ಹಳೆಯ ಆವೃತ್ತಿಗಿಂತಲೂ ಹೆಚ್ಚು ಸ್ಪೋರ್ಟಿ ಲುಕ್ ಪಡೆದುಕೊಂಡಿದ್ದು, ಮುಂಭಾಗದ ಗ್ರಿಲ್ ಡಿಸೈನ್ ಹೊಸ ಕಾರಿಗೆ ಹೆಚ್ಚಿನ ಮಟ್ಟದ ಪ್ರೀಮಿಯಂ ಲುಕ್ ನೀಡಿದೆ. ಹ್ಯುಂಡೈ ಸಂಸ್ಥೆಯು ಇದೇ ಮೊದಲ ಬಾರಿಗೆ ಗ್ರಾಂಡ್ ಐ10 ನಿಯೋಸ್ ಮೂಲಕ ತನ್ನ ನವೀಕೃತ ಕಾರುಗಳ ಮಾದರಿಗಳಲ್ಲಿ ಬಿಎಸ್- 6 ಎಂಜಿನ್ ಜೋಡಣೆ ಚಾಲನೆ ನೀಡಿದ್ದು, ಹೊಸ ಕಾರು ಕೂಡಾ 2020ರ ಏಪ್ರಿಲ್ 1ರಿಂದ ಜಾರಿಗೆ ಬರಲಿರುವ ಹೊಸ ಮಾಲಿನ್ಯ ನಿಯಂತ್ರಣ ನಿಯಮದಂತೆಯೇ ಉನ್ನತೀಕರಣಗೊಂಡಿದೆ.

ಪರ್ಫಾಮೆನ್ಸ್ ಪ್ರಿಯರಿಗಾಗಿ ಗ್ರ್ಯಾಂಡ್ ಐ10 ನಿಯೋಸ್‌ನಲ್ಲಿ ಟರ್ಬೋ ಪೆಟ್ರೋಲ್ ಎಂಜಿನ್

ಎಂಜಿನ್ ಸಾಮಾರ್ಥ್ಯ

ಗ್ರಾಂಡ್ ಐ10 ನಿಯೋಸ್ ಕಾರು 1.2-ಲೀಟರ್ ಕಪ್ಪಾ ಪೆಟ್ರೋಲ್ ಎಂಜಿನ್ ಮೂಲಕ 81-ಬಿಎಚ್‌ಪಿ, 114-ಎನ್ಎಂ ಟಾರ್ಕ್ ಉತ್ಪಾದನೆ ಮಾಡಿದ್ದಲ್ಲಿ 1.2-ಲೀಟರ್ ಸಿಆರ್‌ಡಿಐ ಡೀಸೆಲ್ ಎಂಜಿನ್ ಮೂಲಕ 76-ಬಿಎಚ್‌ಪಿ, 190-ಎನ್ಎಂ ಟಾರ್ಕ್ ಉತ್ಪಾದನಾ ಗುಣಹೊಂದಿದೆ. ಇದೀಗ ಹೊಸದಾಗಿ ಬಿಡುಗಡೆಗೆ ಸಿದ್ದವಾಗಿರುವ ಟರ್ಬೋ ಎಂಜಿನ್ ಮಾದರಿಯು 100-ಬಿಎಚ್‌ಪಿ ಪ್ರೇರಿತ 1.0-ಲೀಟರ್ ಪೆಟ್ರೋಲ್ ಎಂಜಿನ್ ಪಡೆಯಲಿದೆ.

ಪರ್ಫಾಮೆನ್ಸ್ ಪ್ರಿಯರಿಗಾಗಿ ಗ್ರ್ಯಾಂಡ್ ಐ10 ನಿಯೋಸ್‌ನಲ್ಲಿ ಟರ್ಬೋ ಪೆಟ್ರೋಲ್ ಎಂಜಿನ್

ಹೊಸ ಕಾರಿನಲ್ಲಿ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಒಟ್ಟು 10 ವೆರಿಯೆಂಟ್‌ಗಳು ಆಯ್ಕೆಗೆ ಲಭ್ಯವಿದ್ದು, 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಮತ್ತು 5-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಮೂಲಕ ಅತ್ಯುತ್ತಮ ಎಂಜಿನ್ ಕಾರ್ಯಕ್ಷಮತೆಯನ್ನು ಹೊಂದಿದೆ.

MOST READ: ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾರಿನ ಬೆಲೆ ಮಾಹಿತಿ ಬಹಿರಂಗ

ಪರ್ಫಾಮೆನ್ಸ್ ಪ್ರಿಯರಿಗಾಗಿ ಗ್ರ್ಯಾಂಡ್ ಐ10 ನಿಯೋಸ್‌ನಲ್ಲಿ ಟರ್ಬೋ ಪೆಟ್ರೋಲ್ ಎಂಜಿನ್

ಹೊಸ ಕಾರಿನ ಒಳಾಂಗಣ ವಿನ್ಯಾಸವು ಈ ಬಾರಿ ಹ್ಯಾಚ್‌ಬ್ಯಾಕ್ ಪ್ರಿಯರ ಆಕರ್ಷಣೆ ಕಾರಣವಾಗಲಿದ್ದು, ಡ್ಯುಯಲ್ ಟೋನ್ ಲೇಔಟ್, ಸಾಫ್ಟ್ ಟಚ್ ಮೆಟಿರಿಯಲ್ಸ್, ಆ್ಯಪಲ್ ಕಾರ್ ಪ್ಲೇ ಮತ್ತು ಅಂಡ್ರಾಯಿಡ್ ಆಟೋ ಪ್ಲೇ ಪ್ರೇರಣೆಯ 8-ಇಂಚಿನ ಟಚ್‌ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಜೋಡಿಸಲಾಗಿದೆ.

MOST READ: ಟಿಂಟೆಡ್ ಗ್ಲಾಸ್ ಹೊಂದಿದ್ದ ಶಾಸಕನಿಗೂ ಬಿತ್ತು ದಂಡ..!

ಪರ್ಫಾಮೆನ್ಸ್ ಪ್ರಿಯರಿಗಾಗಿ ಗ್ರ್ಯಾಂಡ್ ಐ10 ನಿಯೋಸ್‌ನಲ್ಲಿ ಟರ್ಬೋ ಪೆಟ್ರೋಲ್ ಎಂಜಿನ್

ಹಾಗೆಯೇ ಹೊಸ ಕಾರಿನಲ್ಲಿ ಡಿಜಿಟಲ್ ಇನ್ಟ್ರುಮೆಂಟ್ ಕ್ಲಸ್ಟರ್, ಸ್ಟಿರಿಂಗ್ ಮೌಟೆಂಡ್ ಕಂಟ್ರೋಲ್ಸ್, ಆಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೋಲ್, ರಿಯರ್ ಎಸಿ ವೆಂಟ್ಸ್ ಸೌಲಭ್ಯಗಳಿದ್ದು, ಪ್ರಯಾಣಿಕ ಸುರಕ್ಷತೆಗಾಗಿ ಡ್ಯುಯಲ್ ಏರ್‌ಬ್ಯಾಗ್, ಎಬಿಎಸ್ ಜೊತೆ ಇಬಿಡಿ, ರಿವರ್ಸ್ ಪಾರ್ಕಿಂಗ್ ಸೆನ್ಸಾರ್, ಸೀಟ್ ಬೆಲ್ಟ್ ರಿಮೆಂಡರ್, ಹೈ ಸ್ಪೀಡ್ ವಾರ್ನಿಂಗ್, ISOFIX ಚೈಲ್ಡ್ ಸೀಟ್ ಒದಗಿಸಲಾಗಿದೆ.

MOST READ: ಕಾರಿನಲ್ಲಿರುವ ವೈಪರ್ ಅಭಿವೃದ್ಧಿ ಹಿಂದಿದೆ ಒಂದು ರೋಚಕ ಕಥೆ..!

ಪರ್ಫಾಮೆನ್ಸ್ ಪ್ರಿಯರಿಗಾಗಿ ಗ್ರ್ಯಾಂಡ್ ಐ10 ನಿಯೋಸ್‌ನಲ್ಲಿ ಟರ್ಬೋ ಪೆಟ್ರೋಲ್ ಎಂಜಿನ್

ಪ್ರೀಮಿಯಂ ಲುಕ್ ಹೆಚ್ಚಿಸಲು ಟಾಪ್ ಎಂಡ್ ಮಾಡೆಲ್‌ಗಳಲ್ಲಿ 15-ಇಂಚಿನ ಡೈಮಂಡ್ ಕಟ್ ಅಲಾಯ್ ವೀಲ್ಹ್, ಲೆದರ್ ವ್ಯಾರ್ಪ್ ಸ್ಟಿರಿಂಗ್ ವೀಲ್ಹ್, ಶಾರ್ಕ್ ಫಿನ್ ಆಂಟೆನಾ, ಪ್ರೋಜೆಕ್ಟರ್ ಹೆಡ್‌ಲ್ಯಾಂಪ್, ರಿಯರ್ ಪಾರ್ಕಿಂಗ್ ಕ್ಯಾಮೆರಾ, ವೈರ್‌ಲೆಸ್ ಚಾರ್ಜಿಂಗ್, ಫುಶ್ ಬಟನ್ ಸ್ಟಾರ್ಟ್/ಸ್ಟಾಪ್, ರಿಯರ್ ಕ್ರೊಮ್ ಗಾರ್ನಿಶ್ ಮತ್ತು ಲಗೇಜ್ ಲ್ಯಾಂಪ್ ಸೌಲಭ್ಯಗಳನ್ನು ನೀಡಲಾಗಿದೆ.

ಪರ್ಫಾಮೆನ್ಸ್ ಪ್ರಿಯರಿಗಾಗಿ ಗ್ರ್ಯಾಂಡ್ ಐ10 ನಿಯೋಸ್‌ನಲ್ಲಿ ಟರ್ಬೋ ಪೆಟ್ರೋಲ್ ಎಂಜಿನ್

ಈ ಮೂಲಕ ಹ್ಯಾಚ್‌ಬ್ಯಾಕ್ ಮಾದರಿಗಳಲ್ಲೇ ಹೆಚ್ಚಿನ ಮಟ್ಟದ ಪ್ರೀಮಿಯಂ ಸೌಲಭ್ಯಗಳನ್ನು ಹೊಂದಿರುವ ಅತ್ಯುತ್ತಮ ಕಾರು ಮಾದರಿ ಇದಾಗಿದ್ದು, ಹೊಸ ತಲೆಮಾರಿನ ಮಾರುತಿ ಸುಜುಕಿ ಸ್ವಿಫ್ಟ್ ಕಾರಿಗೆ ಇದು ಮತ್ತಷ್ಟು ಪ್ರಬಲ ಪೈಪೋಟಿಯಾಗಲಿದೆ ಎನ್ನಬಹುದು.

Source: Autocarindia

Article Published On: Friday, October 4, 2019, 11:02 [IST]
English summary
Hyundai Motors is planning to launch Grand i10 NIOS with powerful turbo petrol engine option in India.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+