ಕಾರಿನಲ್ಲಿರುವ ವೈಪರ್ ಅಭಿವೃದ್ಧಿ ಹಿಂದಿದೆ ಒಂದು ರೋಚಕ ಕಥೆ..!

ಪ್ರತಿದಿನ ಬಳಕೆಯಾಗುವ ಯಾವುದೇ ವಸ್ತುವನ್ನಾಗಲಿ ಯಾರಾದರೂ ಒಬ್ಬರು ಸಂಶೋಧಿಸಿರಲೇ ಬೇಕು. ಆ ರೀತಿ ಸಂಶೋಧನೆಯ ಹಿಂದೆ ಯಾವುದಾದರೂ ಒಂದು ಕಾರಣವಿರುತ್ತದೆ. ಒಂದು ಅಗತ್ಯವೂ ಇರುತ್ತದೆ. ಈಗ ಕಾರುಗಳಲ್ಲಿ ಬಳಕೆಯಾಗುತ್ತಿರುವ ವೈಪರ್ ಸಹ ಅದರಲ್ಲಿ ಒಂದು.

ಕಾರಿನಲ್ಲಿರುವ ವೈಪರ್ ಅಭಿವೃದ್ಧಿ ಹಿಂದಿದೆ ಒಂದು ರೋಚಕ ಕಥೆ..!

ವೈಪರ್‍‍ಗಳಿಲ್ಲದ ಕಾರುಗಳನ್ನು ಊಹಿಸಿಕೊಳ್ಳುವುದೂ ಸಹ ಕಷ್ಟವಾಗುತ್ತದೆ. ಆದರೆ ವೈಪರ್‍‍ಗಳಿಲ್ಲದ ಕಾರ್ ಅನ್ನು ಬಳಸಿದ್ದವರಲ್ಲಿ ಮೇರಿ ಆಂಡರ್‍‍ಸನ್ ಸಹ ಒಬ್ಬರು. ಮೇರಿ ಆಂಡರ್‍‍ಸನ್ ಅಮೇರಿಕಾದವರು. ಇವರು 1902ರಲ್ಲಿ ನ್ಯೂಯಾರ್ಕ್ ನಗರಕ್ಕೆ ಹೋಗಿದ್ದರು.

ಕಾರಿನಲ್ಲಿರುವ ವೈಪರ್ ಅಭಿವೃದ್ಧಿ ಹಿಂದಿದೆ ಒಂದು ರೋಚಕ ಕಥೆ..!

ಇದರ ಬಗ್ಗೆ ಮಾತನಾಡಿರುವ ಮೇರಿ ಆಂಡರ್‍‍ಸನ್‍‍ರವರ ಮರಿ ಸೊಸೆಯಾದ ರಿಚ್ಮಂಡ್‍‍ನಲ್ಲಿರುವ ಇಮ್ಯಾನುವಲ್ ಎಪಿಸ್ಕಾಪಲ್ ಚರ್ಚ್‍‍ನ ರೆಕ್ಟರ್ ಆದ ಸಾರಾ ಸ್ಕಾಟ್ ವಿಂಗೋರವರು, ಆಂಡರ್‍‍ಸನ್‍ರವರು ತಮ್ಮ ಕಾರ್ ಅನ್ನು ಚಲಿಸಿಕೊಂಡು ಹೋಗುವ ವೇಳೆಯಲ್ಲಿ ಹಿಮಪಾತವಾಗುತ್ತಿತ್ತು ಎಂದು ಹೇಳಿದ್ದಾರೆ.

ಕಾರಿನಲ್ಲಿರುವ ವೈಪರ್ ಅಭಿವೃದ್ಧಿ ಹಿಂದಿದೆ ಒಂದು ರೋಚಕ ಕಥೆ..!

ಅಂದ ಹಾಗೆ ವಿಂಗೋರವರು ಆಂಡರ್‍‍ಸನ್‍‍ರವರನ್ನು ಎಂದೂ ಭೇಟಿಯಾಗಿಲ್ಲ. ವೈಪರ್ ಸಂಶೋಧನೆಯ ಬಗೆಗಿನ ಕಥೆಯನ್ನು ಅವರಿಗೆ ಹೇಳಲಾಗಿದೆ. ವಿಂಗೋರವರ ಪ್ರಕಾರ, ಮೇರಿ ಆಂಡರ್‍‍ಸನ್‍‍ರವರು ತಮ್ಮ ಕಾರಿನಲ್ಲಿ ಹೋಗುವಾಗ, ಅವರ ಕಾರು ಚಾಲಕನು ಪದೇ ಪದೇ ಕಾರಿನಿಂದ ಇಳಿದು ಕಾರಿನ ಗ್ಲಾಸ್ ಅನ್ನು ಒರೆಸುತ್ತಿದ್ದನು.

ಕಾರಿನಲ್ಲಿರುವ ವೈಪರ್ ಅಭಿವೃದ್ಧಿ ಹಿಂದಿದೆ ಒಂದು ರೋಚಕ ಕಥೆ..!

ಇದರಿಂದಾಗಿ ಹೋಗ ಬೇಕಾಗಿದ್ದ ಜಾಗಕ್ಕೆ ತಡವಾಗಿ ತಲುಪಬೇಕಾಯಿತು. ಕಾರಿನಿಂದ ಡ್ರೈವರ್ ಹೊರ ಹೋಗದೆ, ಕಾರಿನ ಗ್ಲಾಸಿನ ಮೇಲಿರುವ ಹಿಮವನ್ನಾಗಲೀ ಅಥವಾ ನೀರನ್ನಾಗಲೀ ಒರೆಸುವ ಒಂದು ಬ್ಲೇಡ್ ಇದ್ದರೆ ಎಷ್ಟು ಚೆನ್ನಾಗಿತ್ತು ಎಂಬ ಆಲೋಚನೆ ಆಂಡರ್‍‍ಸನ್‍‍ರವರಿಗೆ ಬಂದಿದೆ.

ಕಾರಿನಲ್ಲಿರುವ ವೈಪರ್ ಅಭಿವೃದ್ಧಿ ಹಿಂದಿದೆ ಒಂದು ರೋಚಕ ಕಥೆ..!

ಬರ್ಮಿಂಗ್‍‍ಹ್ಯಾಮ್‍‍ಗೆ ಹಿಂದುರಿಗಿದ ಆಂಡರ್‍‍ಸನ್ ತಮ್ಮ ಆಲೋಚನೆಯ ಬಗೆಗಿನ ಸ್ಕೆಚ್ ಅನ್ನು ತಯಾರಿಸಿದ್ದಾರೆ. ನಂತರ ಅದು ಹೇಗೆ ಕಾರ್ಯನಿರ್ವಹಿಸಲಿದೆ ಎಂಬ ವಿವರಗಳನ್ನೂ ಸಹ ಅದರಲ್ಲಿ ವಿವರಿಸಿದ್ದಾರೆ. ಅದಾದ ನಂತರ ಈ ಹೊಸ ಸಾಧನಕ್ಕೆ ಪೇಟೆಂಟ್ ಅರ್ಜಿ ಸಲ್ಲಿಸಿದರು.

ಕಾರಿನಲ್ಲಿರುವ ವೈಪರ್ ಅಭಿವೃದ್ಧಿ ಹಿಂದಿದೆ ಒಂದು ರೋಚಕ ಕಥೆ..!

ಪೇಟೆಂಟ್ ಅರ್ಜಿಯಲ್ಲಿ ಕಾರಿನಲ್ಲಿರುವ ಮೋಟಾರ್‍‍ನಿಂದ ವೈಪರ್‍ ಹೇಗೆ ಕಾರ್ಯ ನಿರ್ವಹಿಸುತ್ತದೆ ಎಂಬುದನ್ನು ವಿವರಿಸಲಾಗಿತ್ತು. ಅದನ್ನು ಹೇಗೆ ಹೊರತೆಗೆಯಬಹುದು ಎಂಬುದನ್ನೂ ಸಹ ವಿವರಿಸಲಾಗಿತ್ತು. ಮಳೆ ಹಾಗೂ ಹಿಮ ಬೀಳದ ಸಾಮಾನ್ಯ ಸಂದರ್ಭಗಳಲ್ಲಿ ಈ ವೈಪರ್‍‍ನಿಂದ ಕಾರಿಗೆ ಯಾವುದೇ ಹಾನಿಯಾಗುವುದಿಲ್ಲವೆಂದು ಈ ಪೇಟೆಂಟ್ ಅರ್ಜಿಯಲ್ಲಿ ತಿಳಿಸಲಾಗಿತ್ತು.

MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಕಾರಿನಲ್ಲಿರುವ ವೈಪರ್ ಅಭಿವೃದ್ಧಿ ಹಿಂದಿದೆ ಒಂದು ರೋಚಕ ಕಥೆ..!

ಈ ಪೇಟೆಂಟ್ ಅರ್ಜಿಯನ್ನು 1903ರ ಜೂನ್ 18ರಂದು ಸಲ್ಲಿಸಲಾಗಿತ್ತು. ಅದೇ ವರ್ಷದ ನವೆಂಬರ್ 10ರಂದು ಅಮೇರಿಕಾದ ಪೇಟೆಂಟ್ ಕಚೇರಿಯು ಆಂಡರ್‍‍ಸನ್‍‍ರವರಿಗೆ ಅವರು ಸಂಶೋಧಿಸಿದ್ದ ವಿಂಡೋ ಕ್ಲಿನಿಂಗ್ ಸಾಧನಕ್ಕೆ, 743,801 ಎಂಬ ಪೇಟೆಂಟ್ ಸಂಖ್ಯೆಯನ್ನು ನೀಡಿತು.

MOST READ: ಜೆ‍‍ಸಿ‍‍ಬಿ ಯಂತ್ರವು ಹಳದಿ ಬಣ್ಣದಲ್ಲೇ ಏಕಿರುತ್ತೆ?

ಕಾರಿನಲ್ಲಿರುವ ವೈಪರ್ ಅಭಿವೃದ್ಧಿ ಹಿಂದಿದೆ ಒಂದು ರೋಚಕ ಕಥೆ..!

ಆಂಡರ್‍‍ಸನ್‍‍ರವರು ಈ ಸಾಧನವನ್ನು ಕಾರು ಉದ್ಯಮಕ್ಕೆ ಮಾರಾಟ ಮಾಡಲು ಬಯಸಿದ್ದರು. ಆದರೆ ಈ ಸಾಧನವನ್ನು ಖರೀದಿಸಲು ಯಾರೂ ಮುಂದೆ ಬರಲಿಲ್ಲವೆಂದು ವಿಂಗೋರವರು ತಿಳಿಸುತ್ತಾರೆ. ಈ ಬಗ್ಗೆ ಡೈನಿಂಗ್ ಹಾಗೂ ಇಕೆನ್‍‍ಸೈನ್ ಕಂಪನಿಯು ಬರೆದಿದ್ದ ಪತ್ರವೊಂದನ್ನು ವಿಂಗೋರವರು ಸಂರಕ್ಷಿಸಿಕೊಂಡಿದ್ದಾರೆ.

MOST READ: ಹಳೆಯದಾದಷ್ಟು ದುಬಾರಿಯಾಗುತ್ತವೆ ಈ ಜನಪ್ರಿಯ ಬೈಕುಗಳು

ಕಾರಿನಲ್ಲಿರುವ ವೈಪರ್ ಅಭಿವೃದ್ಧಿ ಹಿಂದಿದೆ ಒಂದು ರೋಚಕ ಕಥೆ..!

ಪ್ರೀತಿಯ ಮೇಡಂ ಎಂದು ಆರಂಭವಾಗುವ ಈ ಪತ್ರದಲ್ಲಿ, ನೀವು ನಿಮ್ಮ ಸಾಧನವನ್ನು ಮಾರಾಟ ಮಾಡುತ್ತಿರುವ ಬಗ್ಗೆ ತಿಳಿದು ಬಂದಿದೆ. ಆದರೆ ನಿಮ್ಮ ಸಾಧನವು ಸದ್ಯಕ್ಕೆ ವಾಹನಗಳಲ್ಲಿ ಅಳವಡಿಸಿಕೊಳ್ಳಲು ಸೂಕ್ತವಾಗಿರುವುದಿಲ್ಲ ಎಂದು ತಿಳಿಸಲಾಗಿದೆ.

ಕಾರಿನಲ್ಲಿರುವ ವೈಪರ್ ಅಭಿವೃದ್ಧಿ ಹಿಂದಿದೆ ಒಂದು ರೋಚಕ ಕಥೆ..!

ಆ ಕಂಪನಿಯವರು ಈ ಸಾಧನವನ್ನು ಮಿಸ್ ಕೊಂಡರು ಎಂದು ವಿಂಗೋ ಹೇಳುತ್ತಾರೆ. ಆಂಡರ್‍‍ಸನ್‍‍ರವರ ಅನ್ವೇಷಣೆ ಏಕೆ ಆಗ ಜನಪ್ರಿಯವಾಗಲಿಲ್ಲ ಎಂದು ಆಶ್ಚರ್ಯ ವ್ಯಕ್ತಪಡಿಸುವ ವಿಂಗೋರವರು, ತಮ್ಮ ಮುತ್ತಜ್ಜಿ ಸ್ವತಂತ್ರವಾದ ಮಹಿಳೆಯಾಗಿದ್ದರು.

ಕಾರಿನಲ್ಲಿರುವ ವೈಪರ್ ಅಭಿವೃದ್ಧಿ ಹಿಂದಿದೆ ಒಂದು ರೋಚಕ ಕಥೆ..!

ಅವರಿಗೆ ತಂದೆಯಿರಲಿಲ್ಲ. ಗಂಡನಾಗಲೀ, ಮಗನಾಗಲೀ ಇರಲಿಲ್ಲ. ಆಗ ಪ್ರಪಂಚವು ಪುರುಷರಿಗೆ ಹೆಚ್ಚಿನ ಆದ್ಯತೆ ನೀಡುತ್ತಿತ್ತು. ಆದರೆ ವೈಪರ್ ಅನ್ನು ಕಂಪನಿಗಳು ಖರೀದಿಸಲು ಮುಂದೆ ಬರದ ಕಾರಣಕ್ಕೆ ಮೇರಿ ಆಂಡರ್‍‍ಸನ್‍‍ರವರು ನಿರಾಶರಾಗಲಿಲ್ಲ.

ಕಾರಿನಲ್ಲಿರುವ ವೈಪರ್ ಅಭಿವೃದ್ಧಿ ಹಿಂದಿದೆ ಒಂದು ರೋಚಕ ಕಥೆ..!

ಈ ಘಟನೆ ನಡೆದ 50 ವರ್ಷಗಳ ಕಾಲ ಆಕೆ ಬದುಕಿದ್ದರು. ತಮ್ಮ ಜೀವಿತಾವಧಿಯಲ್ಲಿ ವೈಪರ್‍‍ಗಳು ಕಾರಿನ ಭಾಗವಾಗುವುದನ್ನು ನೋಡಿ ಸಂತಸಪಟ್ಟರು ಎಂದು ಹೇಳಿದ್ದಾರೆ. ಮೇರಿ ಆಂಡರ್‍‍ಸನ್‍‍ರವರ ಈ ಸಾಧನೆಯಿಂದ ವಿಂಗೋ ಹಾಗೂ ಅವರ ಕುಟುಂಬವು ಹೆಮ್ಮೆ ಪಡುತ್ತಿದೆ.

ಕಾರಿನಲ್ಲಿರುವ ವೈಪರ್ ಅಭಿವೃದ್ಧಿ ಹಿಂದಿದೆ ಒಂದು ರೋಚಕ ಕಥೆ..!

ಈ ಬಗ್ಗೆ ಮಾತನಾಡಿರುವ ವಿಂಗೋರವರು, ಆಂಡರ್‍‍ಸನ್‍‍ರವರ ಕುಟುಂಬದಲ್ಲಿ ಜನಿಸಿರುವುದಕ್ಕೆ ನಮಗೆ ಹೆಮ್ಮೆಯಾಗುತ್ತಿದೆ. ನನಗೆ ಮೂವರು ಹೆಣ್ಣು ಮಕ್ಕಳಿದ್ದಾರೆ. ನಾವು ಯಾವಾಗಲೂ ಅವರ ಬಗ್ಗೆ ಮಾತನಾಡುತ್ತಲೇ ಇರುತ್ತೇವೆ. ನಾವೂ ಸಹ ಅವರ ರೀತಿಯಲ್ಲೇ ಏನಾದರೂ ಸಾಧನೆ ಮಾಡಬೇಕೆಂದಿದ್ದೇವೆ ಎಂದು ಹೇಳುತ್ತಾರೆ.

ಕಾರಿನಲ್ಲಿರುವ ವೈಪರ್ ಅಭಿವೃದ್ಧಿ ಹಿಂದಿದೆ ಒಂದು ರೋಚಕ ಕಥೆ..!

ವೈಪರ್ ಸಂಶೋಧಿಸಿದ್ದಕ್ಕೆ ಯಾವುದೇ ಹಣವನ್ನು ಆಂಡರ್‍‍ಸನ್‍‍ರವರು ಪಡೆಯದಿದ್ದರೂ, ವೈಪರ್ ಸಂಶೋಧಿಸಿದವರು ಎಂಬ ಕೀರ್ತಿಯನ್ನು ಪಡೆದಿದ್ದಾರೆ. 2011ರಲ್ಲಿ ಮೇರಿ ಆಂಡರ್‍‍ಸನ್‍‍ರವರನ್ನು ಇನ್ವೆಂಟರ್ಸ್ ಹಾಲ್ ಆಫ್ ಫೇಮ್‍‍ಗೆ ಸೇರಿಸಲಾಯಿತು.

More from DriveSpark

Article Published On: Friday, September 20, 2019, 13:17 [IST]
English summary
Alabama Woman Stuck In NYC Traffic In 1902 Invented The Windshield Wiper - Read in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+