ಸಾಮಾನ್ಯ ಪೆಟ್ರೋಲ್ ಕಾರಿಗಿಂತಲೂ ಶೇ.80 ರಷ್ಟು ಅಗ್ಗ ಹ್ಯುಂಡೈ ಕೊನಾ ರನ್ನಿಂಗ್ ಕಾಸ್ಟ್..!

ಎಲೆಕ್ಟ್ರಿಕ್ ಕಾರುಗಳು ಕೇವಲ ಪರಿಸರಕ್ಕೆ ಮಾತ್ರ ಪೂರಕವಾಗಿದೆ ಆರ್ಥಿಕವಾಗಿ ನಿಮ್ಮನ್ನು ರಕ್ಷಣೆ ಮಾಡುವಂತಹ ವೈಶಿಷ್ಟ್ಯತೆ ಹೊಂದಿದ್ದು, ರನ್ನಿಂಗ್ ಕಾಸ್ಟ್(ಸವಾರಿ ವೆಚ್ಚ) ವಿಚಾರದಲ್ಲಿ ಇಂಧನ ಆಧಾರಿತ ವಾಹನಗಳಿಂತಲೂ ಬೆಸ್ಟ್ ಎನ್ನುವುದನ್ನು ಮರೆಯುವಂತಿಲ್ಲ.

ಸಾಮಾನ್ಯ ಪೆಟ್ರೋಲ್ ಕಾರಿಗಿಂತಲೂ ಅಗ್ಗ ಕೊನಾ ರನ್ನಿಂಗ್ ಕಾಸ್ಟ್

ದೇಶಾದ್ಯಂತ ಎಲೆಕ್ಟ್ರಿಕ್ ಕಾರುಗಳ ಮಾರಾಟ ಸಂಖ್ಯೆಯು ದಿನದಿಂದಕ್ಕೆ ಹೆಚ್ಚುತ್ತಿದ್ದು, ಕೇಂದ್ರ ಸರ್ಕಾರದ ಮಹತ್ವದ ಯೋಜನೆ ಫೇಮ್ 2 ಹಂತದ ಸಬ್ಸಡಿ ಯೋಜನೆಯು ಸಾಕಷ್ಟು ಬದಲಾವಣೆಗೆ ಕಾರಣವಾಗಿದೆ. ಪೆಟ್ರೋಲ್ ಮತ್ತು ಡೀಸೆಲ್ ಕಾರುಗಳಿಂತಲೂ ಅತಿ ಕಡಿಮೆ ನಿರ್ವಹಣಾ ವೆಚ್ಚ ಹೊಂದಿರುವ ಎಲೆಕ್ಟ್ರಿಕ್ ಕಾರುಗಳು ವಾಹನ ಮಾಲೀಕರಿಗೆ ಸಾಕಷ್ಟು ಅನುಕೂಲಕರವಾಗಿದ್ದು, ಹ್ಯುಂಡೈ ಕೊನಾ ಸವಾರಿ ವೆಚ್ಚದ ಕುರಿತು ಒಂದಿಷ್ಟು ಮಾಹಿತಿ ಮಾಹಿತಿಗಳನ್ನುಇಲ್ಲಿ ಹಂಚಿಕೊಳ್ಳಲಾಗಿದೆ.

ಸಾಮಾನ್ಯ ಪೆಟ್ರೋಲ್ ಕಾರಿಗಿಂತಲೂ ಅಗ್ಗ ಕೊನಾ ರನ್ನಿಂಗ್ ಕಾಸ್ಟ್

ಸಾಮಾನ್ಯವಾಗಿ ಪೆಟ್ರೋಲ್ ಕಾರುಗಳ ರನ್ನಿಂಗ್ ಕಾಸ್ಟ್ ಪ್ರಸ್ತುತ ಮಾರುಕಟ್ಟೆಗಳಲ್ಲಿ ರೂ. 5ರಿಂದ ರೂ.6 ಖರ್ಚು ಮಾಡಬೇಕಾದ ಅನಿವಾರ್ಯತೆಗಳಿದ್ದು, ಎಲೆಕ್ಟ್ರಿಕ್ ಕಾರುಗಳು ಆಶ್ಚರ್ಯ ಎನ್ನುವಂತೆ ರೂ.1 ಗಿಂತಲೂ ಕಡಿಮೆ ನಿರ್ವಹಣಾ ವೆಚ್ಚ ಹೊಂದಿವೆ ಎಂದರೆ ನೀವು ನಂಬಲೇಬೇಕು.

ಸಾಮಾನ್ಯ ಪೆಟ್ರೋಲ್ ಕಾರಿಗಿಂತಲೂ ಅಗ್ಗ ಕೊನಾ ರನ್ನಿಂಗ್ ಕಾಸ್ಟ್

ಅದರಲ್ಲೂ ಹ್ಯುಂಡೈ ಸಂಸ್ಥೆಯು ಇತ್ತೀಚೆಗೆ ಬಿಡುಗಡೆ ಮಾಡಿರುವ ಕೊನಾ ಎಲೆಕ್ಟ್ರಿಕ್ ಕಾರು ಕೂಡಾ ಬಿಡುಗಡೆಯಾದ ಕೆಲವೇ ತಿಂಗಳಿನಲ್ಲಿ ಉತ್ತಮ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಹೊಸ ಕಾರಿನ ನಿರ್ವಹಣಾ ವೆಚ್ಚವು 75 ಪೈಸೆಯಿಂದ 80 ಪೈಸೆಯಷ್ಟು ಎಂದು ಹೇಳಲಾಗಿದೆ.

ಸಾಮಾನ್ಯ ಪೆಟ್ರೋಲ್ ಕಾರಿಗಿಂತಲೂ ಅಗ್ಗ ಕೊನಾ ರನ್ನಿಂಗ್ ಕಾಸ್ಟ್

ಅಂದರೆ, ಸಾಮಾನ್ಯ ಪೆಟ್ರೋಲ್ ಕಾರುಗಳಿಂತಲೂ ಶೇ.80 ರಷ್ಟು ಕಡಿಮೆ ನಿರ್ವಹಣಾ ವೆಚ್ಚ ಹೊಂದಿರುವ ಹ್ಯುಂಡೈ ಕೊನಾ ಕಾರು ಪ್ರತಿ ಚಾರ್ಜ್‌ಗೆ 452ಕಿ.ಮಿ ಮೈಲೇಜ್ ಹೊಂದಿದ್ದು, ಅತಿ ಕಡಿಮೆ ನಿರ್ವಹಣಾ ವೆಚ್ಚದ ಮೂಲಕ ಕಾರು ಖರೀದಿದಾರರ ಗಮನಸೆಳೆಯುತ್ತಿದೆ. ಕೋನಾ ಕಾರು 39.2kWh ಬ್ಯಾಟರಿ ಸಾಮರ್ಥ್ಯದೊಂದಿಗೆ ಪ್ರತಿ ಚಾರ್ಜ್‌ಗೆ ಗರಿಷ್ಠ 452 ಕಿ.ಮಿ ಮೈಲೇಜ್ ಹಿಂದಿರುಗಿಸಬಲ್ಲ ವೈಶಿಷ್ಟ್ಯತೆಯನ್ನು ಹೊಂದಿದ್ದು, ಎಲೆಕ್ಟ್ರಿಕ್ ವಾಹನಗಳ ಮೈಲೇಜ್ ಪ್ರಮಾಣಕ್ಕೆ ಪ್ರಮಾಣ ಪತ್ರ ಒದಗಿಸುವ ಎಆರ್‌ಎಐ ಸಂಸ್ಥೆಯೇ ಕೋನಾ ಮೈಲೇಜ್ ಪ್ರಮಾಣವನ್ನು ಪ್ರಮಾಣಿಕರಿಸಿದೆ.

ಸಾಮಾನ್ಯ ಪೆಟ್ರೋಲ್ ಕಾರಿಗಿಂತಲೂ ಅಗ್ಗ ಕೊನಾ ರನ್ನಿಂಗ್ ಕಾಸ್ಟ್

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಎರಡು ಮಾದರಿಯ ಬ್ಯಾಟರಿ ಆಯ್ಕೆಯನ್ನು ಹೊಂದಿರುವ ಕೋನಾ ಎಲೆಕ್ಟ್ರಿಕ್ ಕಾರು 64kWh ಮತ್ತು 39.2kWh ಬ್ಯಾಟರಿ ವೈಶಿಷ್ಟ್ಯತೆಗಳನ್ನು ಹೊಂದಿದೆ. ಇದರಲ್ಲಿ ಸದ್ಯಕ್ಕೆ 39.2kWh ಬ್ಯಾಟರಿ ಸಾಮಾರ್ಥ್ಯ ಮಾದರಿಯನ್ನು ಮಾತ್ರವೇ ಭಾರತದಲ್ಲಿ ಬಿಡುಗಡೆ ಮಾಡಲಾಗಿದ್ದು, 52 ನಿಮಿಷಗಳಲ್ಲಿ ಶೇ.80 ರಷ್ಟು ಬ್ಯಾಟರಿ ಚಾರ್ಜ್‌ ಆಗಬಲ್ಲ ಫಾಸ್ಟ್ ಚಾರ್ಜರ್ ಸೌಲಭ್ಯ ಈ ಕಾರಿನಲ್ಲಿದೆ.

ಸಾಮಾನ್ಯ ಪೆಟ್ರೋಲ್ ಕಾರಿಗಿಂತಲೂ ಅಗ್ಗ ಕೊನಾ ರನ್ನಿಂಗ್ ಕಾಸ್ಟ್

ಹ್ಯುಂಡೈ ಹೊಸ ಎಲೆಕ್ಟ್ರಿಕ್ ಕಾರು ಸಾಮಾರ್ಥ್ಯ ಕಾರುಗಳಂತೆಯೇ ಪರ್ಫಾಮೆನ್ಸ್‌ನಲ್ಲೂ ಉತ್ತಮ ಮುನ್ನಡೆ ಕಾಯ್ದುಕೊಂಡಿದ್ದು, 100kW ಫ್ರಂಟ್ ವೀಲ್ಹ್ ಮೋಟಾರ್ ಪವರ್ ಮೂಲಕ 131-ಬಿಎಚ್‌ಪಿ ಮತ್ತು 395-ಎನ್ಎಂ ಟಾರ್ಕ್ ಉತ್ಪಾದನೆಯೊಂದಿಗೆ ಕೇವಲ 9.7-ಸೇಕೆಂಡುಗಳಲ್ಲಿ ಸೊನ್ನೆಯಿಂದ 100ಕಿ.ಮಿ ವೇಗ ತಲುಪಬಲ್ಲದು.

MOST READ: ಹ್ಯುಂಡೈನಿಂದ ಹಬ್ಬದ ಕೊಡುಗೆ: ಹೊಸ ಕಾರುಗಳ ಖರೀದಿ ಮೇಲೆ ಭರ್ಜರಿ ಡಿಸ್ಕೌಂಟ್..!

ಸಾಮಾನ್ಯ ಪೆಟ್ರೋಲ್ ಕಾರಿಗಿಂತಲೂ ಅಗ್ಗ ಕೊನಾ ರನ್ನಿಂಗ್ ಕಾಸ್ಟ್

ಕೋನಾ ಕಾರು 155 ಕಿ.ಮಿ ಟಾಪ್ ಸ್ಪೀಡ್ ಸೌಲಭ್ಯವನ್ನು ಹೊಂದಿದ್ದು, ಪೂರ್ಣ ಪ್ರಮಾಣದಲ್ಲಿ ಬ್ಯಾಟರಿ ಚಾರ್ಜ್‌ ಆಗಲು ಕನಿಷ್ಠ 8 ಗಂಟೆ ತೆಗೆದುಕೊಳ್ಳಲಿದೆ. ಹೀಗಾಗಿ ಕೋನಾ ಕಾರಿನಲ್ಲಿ ಫಾಸ್ಟ್ ಚಾರ್ಜಿಂಗ್ ಸೌಲಭ್ಯವು ಆಕರ್ಷಕವಾಗಿದ್ದು, ಶೇ.80 ರಷ್ಟು ಚಾರ್ಜಿಂಗ್ ಮಾಡಲು ಕೇವಲ 52 ನಿಮಿಷ ತೆಗೆದುಕೊಳ್ಳುತ್ತದೆ.

MOST READ: ನಿಮ್ಮ ವಾಹನಗಳ ಮೈಲೇಜ್ ಕಡಿತವಾಗುತ್ತಿರುವುದಕ್ಕೆ ಅಸಲಿ ಕಾರಣ ಏನು ಗೊತ್ತಾ?

ಸಾಮಾನ್ಯ ಪೆಟ್ರೋಲ್ ಕಾರಿಗಿಂತಲೂ ಅಗ್ಗ ಕೊನಾ ರನ್ನಿಂಗ್ ಕಾಸ್ಟ್

ಕ್ರೆಟಾ ಕಾರಿಗಿಂತಲೂ ತುಸು ಕಡಿಮೆ ಉದ್ದಳತೆ ಹೊಂದಿರುವ ಕೋನಾ ಎಲೆಕ್ಟ್ರಿಕ್ ಕಾರು ಹಲವು ಪ್ರೀಮಿಯಂ ಸೌಲಭ್ಯಗಳನ್ನು ಹೊತ್ತು ಬಂದಿದ್ದು, 4,180-ಎಂಎಂ ಉದ್ದ, 1,800-ಎಂಎಂ ಅಗಲ, 1,570-ಎಂಎಂ ಎತ್ತರ ಮತ್ತು 2,600-ಎಂಎಂ ವೀಲ್ಹ್‌ಬೇಸ್‌ನೊಂದಿಗೆ 332-ಲೀಟರ್ ಸಾಮರ್ಥ್ಯದ ಲಗೇಜ್ ಸ್ಪೆಸ್ ಪಡೆದುಕೊಂಡಿದೆ.

MOST READ: ಎಲೆಕ್ಟ್ರಿಕ್ ವಾಹನಗಳ ಬೆಲೆ ಇಳಿಕೆಗೆ ಸಹಾಯವಾದ ಕೇಂದ್ರದ ಹೊಸ ತೆರಿಗೆ ನೀತಿ

ಸಾಮಾನ್ಯ ಪೆಟ್ರೋಲ್ ಕಾರಿಗಿಂತಲೂ ಅಗ್ಗ ಕೊನಾ ರನ್ನಿಂಗ್ ಕಾಸ್ಟ್

ಹ್ಯುಂಡೈ ಸಂಸ್ಥೆಯು ಸದ್ಯ ವಿದೇಶಿ ಮಾರುಕಟ್ಟೆಗಳಿಂದ ಕೋನಾ ಆಮದು ಮಾಡಿಕೊಂಡು ಭಾರತದಲ್ಲಿ ಮಾರಾಟ ಮಾಡುತ್ತಿರುವುದರಿಂದ ಹೊಸ ಕಾರು ತುಸು ದುಬಾರಿ ಎನ್ನಿಸಲಿದ್ದು, ಕಾರಿನ ಬೆಲೆಯನ್ನು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 23.90 ಲಕ್ಷಕ್ಕೆ ನಿಗದಿಪಡಿಸಲಾಗಿದೆ. ಹಾಗೆಯೇ ಹೊಸ ಕಾರಿನ ಮೇಲೆ ರೂ.1.50 ತೆರಿಗೆ ವಿನಾಯ್ತಿ ಸಹ ಸಿಗಲಿದ್ದು, ಬ್ಯಾಟರಿ ಮೇಲೆ 8 ವರ್ಷಗಳ ವಾರಂಟಿ ನೀಡಲಾಗಿದೆ.

ಸಾಮಾನ್ಯ ಪೆಟ್ರೋಲ್ ಕಾರಿಗಿಂತಲೂ ಅಗ್ಗ ಕೊನಾ ರನ್ನಿಂಗ್ ಕಾಸ್ಟ್

ಕೋನಾ ಕಾರು ಬೆಲೆ ದುಬಾರಿಯಾಗಿದ್ದರೂ ಸಹ ಉತ್ತಮ ಮೈಲೇಜ್ ಮತ್ತು ಪ್ರೀಮಿಯಂ ಫೀಚರ್ಸ್‌ಗಳಿಂದಾಗಿ ಖರೀದಿಗೆ ಉತ್ತಮ ಎನ್ನಿಸಲಿದ್ದು, ಸ್ಪೋರ್ಟಿ ವಿನ್ಯಾಸದ ಜೊತೆಗೆ ಕಾಸ್‌ಕ್ಲಾಡಿಂಗ್ ಫ್ರಂಟ್ ಗ್ರಿಲ್, ಬಾಡಿ ಕಲರ್ ಬಂಪರ್, ಸ್ಲಿಕ್ ಎಲ್ಇಡಿ ಟೈಲ್ ಲೈಟ್ಸ್, ಶಾರ್ಪ್ ಶೋಲ್ಡ್‌ರ್ ಲೈನ್ಸ್, ರಿಯರ್ ಸ್ಪಾಯ್ಲರ್ ನೀಡಿರುವುದು ಹೊಸ ಕಾರಿಗೆ ಮತ್ತಷ್ಟು ಆಕರ್ಷಣೆಯಾಗುವಂತೆ ಮಾಡಿದೆ.

ಸಾಮಾನ್ಯ ಪೆಟ್ರೋಲ್ ಕಾರಿಗಿಂತಲೂ ಅಗ್ಗ ಕೊನಾ ರನ್ನಿಂಗ್ ಕಾಸ್ಟ್

ಹೊರವಿನ್ಯಾಸದಲ್ಲಿ ಮಾತ್ರವಲ್ಲದೇ ಕಾರಿನ ಒಳಭಾಗದ ವಿನ್ಯಾಸವು ಸಹ ಎಲೆಕ್ಟ್ರಿಕ್ ಕಾರು ಖರೀದಿದಾರನ್ನು ಸೆಳೆಯುಲಿದ್ದು, ಬ್ಲ್ಯಾಕ್ ಥೀಮ್ ಡ್ಯಾಶ್‌ಬೋರ್ಡ್, ಹೋಂದಾಣಿಕೆ ಮಾಡಬಹುದಾದ 8-ಇಂಚಿನ ಇನ್ಪೋಟೈನ್‌ಮೆಂಟ್ ಸಿಸ್ಟಂ, ಡಿಜಿಟಲ್ ಇನ್‌ಸ್ಟುಮೆಂಟ್ ಕ್ಲಸ್ಟರ್, ವೆಂಟಿಲೆಟೆಡ್ ಲೆದರ್ ಸೀಟುಗಳು, ಲೆದರ್ ಹೊದಿಕೆಯ ಸ್ಟಿರಿಂಗ್ ವೀಲ್ಹ್ ಮೌಂಟ್, 10 ಹಂತದಲ್ಲಿ ಹೊಂದಾಣಿಕೆ ಮಾಡಿಕೊಳ್ಳಬಲ್ಲ ಚಾಲಕನ ಸೀಟು ಮತ್ತು ಎಲೆಕ್ಟ್ರಿಕ್ ಸನ್‌ರೂಫ್ ಸೌಲಭ್ಯ ಈ ಕಾರಿನಲ್ಲಿದೆ.

ಸಾಮಾನ್ಯ ಪೆಟ್ರೋಲ್ ಕಾರಿಗಿಂತಲೂ ಅಗ್ಗ ಕೊನಾ ರನ್ನಿಂಗ್ ಕಾಸ್ಟ್

ಸುರಕ್ಷತೆಗೂ ಕೋನಾ ಕಾರಿನಲ್ಲಿ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಆರು ಏರ್‌ಬ್ಯಾಗ್‌ಗಳು, ಫ್ರಂಟ್ ಪಾರ್ಕಿಂಗ್ ಸೆನ್ಸಾರ್, ರಿಯರ್ ಪಾರ್ಕಿಂಗ್ ಕ್ಯಾಮೆರಾ, ತುರ್ತು ಕರೆ ಸೌಲಭ್ಯ, ಎಬಿಎಸ್ ಜೊತೆ ಇಬಿಡಿ, ರೀ ಜನರೇಟಿವ್ ಬ್ರೇಕಿಂಗ್ ಸಿಸ್ಟಂ, ಆಲ್ ವೀಲ್ಹ್ ಡಿಸ್ಕ್ ಬ್ರೇಕ್ ಮತ್ತು ವಿವಿಧ ಮಾದರಿಯ ಚಾಲನಾ ಅನುಭವಕ್ಕಾಗಿ ಇಕೋ, ಇಕೋ ಪ್ಲಸ್, ಕಂಫರ್ಟ್ ಮತ್ತು ಸ್ಪೋರ್ಟ್ ಡ್ರೈವ್ ಮೋಡ್‌ಗಳನ್ನು ಬದಲಿಸಿಕೊಳ್ಳಬಹುದಾಗಿದೆ.

More from DriveSpark

Article Published On: Tuesday, September 24, 2019, 17:59 [IST]
English summary
Hyundai Kona Electric SUV Range, Running Cost. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+