ಹ್ಯುಂಡೈನಿಂದ ಹಬ್ಬದ ಕೊಡುಗೆ: ಹೊಸ ಕಾರುಗಳ ಖರೀದಿ ಮೇಲೆ ಭರ್ಜರಿ ಡಿಸ್ಕೌಂಟ್

ಹ್ಯುಂಡೈ ಸಂಸ್ಥೆಯು ತನ್ನ ಜನಪ್ರಿಯ ಕಾರುಗಳ ಮೇಲೆ ಹಬ್ಬದ ಕೊಡುಗೆಗಳನ್ನು ಪ್ರಕಟಿಸಿದ್ದು, ಗ್ರಾಹಕರಿಗೆ ಗರಿಷ್ಠ ಮಟ್ಟದ ಡಿಸ್ಕೌಂಟ್‌ಗಳನ್ನು ನೀಡುತ್ತಿದೆ. ಜನಪ್ರಿಯ ಕಾರು ಆವೃತ್ತಿಗಳಾದ ಸ್ಯಾಂಟ್ರೋ, ಗ್ರಾಂಡ್ ಐ10, ಎಲೈಟ್ ಐ20 ಮತ್ತು ಕ್ರೆಟಾ ಕಾರುಗಳ ಮೇಲೆ ಆಕರ್ಷಕ ಡಿಸ್ಕೌಂಟ್‌ಗಳು ಲಭ್ಯವಿದ್ದು, ಸೆಪ್ಟೆಂಬರ್ 21ರಿಂದ 30ರ ತನಕ ಕಾರು ಖರೀದಿಸುವ ಗ್ರಾಹಕರಿಗೆ ಮಾತ್ರವೇ ಈ ಆಫರ್ ಅನ್ವಯವಾಗಲಿವೆ.

ಹ್ಯುಂಡೈನಿಂದ ಹಬ್ಬದ ಕೊಡುಗೆ: ಹೊಸ ಕಾರುಗಳ ಖರೀದಿ ಮೇಲೆ ಭರ್ಜರಿ ಡಿಸ್ಕೌಂಟ್

ಆಟೋ ಮಾರುಕಟ್ಟೆಯಲ್ಲಿ ಸದ್ಯ ದಸರಾ ಮತ್ತು ದೀಪಾವಳಿ ವಿಶೇಷತೆ ಹಿನ್ನಲೆ ಬಹುತೇಕ ವಾಹನ ಸಂಸ್ಥೆಗಳು ಗರಿಷ್ಠ ಮಟ್ಟದ ಗ್ರಾಹಕರನ್ನು ಸೆಳೆಯುವ ಉದ್ದೇಶದಿಂದ ವಿವಿಧ ಆಕರ್ಷಕ ಆಫರ್‌ಗಳನ್ನು ಘೋಷಿಸುತ್ತಿವೆ. ಇದೀಗ ಹ್ಯುಂಡೈ ಕೂಡಾ ತನ್ನ ಪ್ರಮುಖ ಕಾರುಗಳ ಮೇಲೆ ರೂ.60 ಸಾವಿರದಿಂದ ಗರಿಷ್ಠ ರೂ.2 ಲಕ್ಷದ ತನಕ ಡಿಸ್ಕೌಂಟ್ ಘೋಷಿಸಿದ್ದು, ಜನಪ್ರಿಯ ಕಾರು ಮಾದರಿಗಳಾದ ಸ್ಯಾಂಟ್ರೋ, ಗ್ರಾಂಡ್ ಐ10, ಎಲೈಟ್ ಐ20 ಮತ್ತು ಕ್ರೆಟಾ ಕಾರುಗಳ ಖರೀದಿಗೆ ಇದುವ ಸುವರ್ಣಾವಕಾಶ ಎನ್ನಬಹುದು.

ಹ್ಯುಂಡೈನಿಂದ ಹಬ್ಬದ ಕೊಡುಗೆ: ಹೊಸ ಕಾರುಗಳ ಖರೀದಿ ಮೇಲೆ ಭರ್ಜರಿ ಡಿಸ್ಕೌಂಟ್

ಗ್ರಾಂಡ್ ಐ10 ಹ್ಯಾಚ್‌ಬ್ಯಾಕ್(95 ಸಾವಿರ)

ಹ್ಯುಂಡೈ ಸಂಸ್ಥೆಯು ಮುಂದಿನ ಕೆಲವೇ ದಿನಗಳಲ್ಲಿ ಹೊಸ ಡಿಸೈನ್ ಪ್ರೇರಿತ ಗ್ರಾಂಡ್ ಐ10 ಬಿಡುಗಡೆ ಮಾಡುತ್ತಿದ್ದು, ಈ ಹಿನ್ನೆಲೆಯಲ್ಲಿ ಸ್ಟಾಕ್ ಕ್ಲಿಯೆರೆನ್ಸ್ ಸಂಬಂಧ ಗ್ರಾಂಡ್ ಐ10 ಖರೀದಿ ಮೇಲೆ ರೂ.95 ಡಿಸ್ಕೌಂಟ್ ಘೋಷಣೆ ಮಾಡಲಾಗಿದೆ. ಆದರೆ ಗ್ರಾಂಡ್ ಐ10 ಮತ್ತೊಂದು ಹೊಸ ಮಾದರಿಯಾದ ನಿಯೋಸ್ ಆವೃತ್ತಿಯ ಮೇಲೆ ಯಾವುದೇ ಆಫರ್‌ಗಳನ್ನು ನೀಡಿಲ್ಲವಾದರೂ ನಿಗದಿತ ಅವಧಿಯಲ್ಲಿ ಕಾರು ವಿತರಣೆಯ ಭರವಸೆ ನೀಡಿದೆ.

ಹ್ಯುಂಡೈನಿಂದ ಹಬ್ಬದ ಕೊಡುಗೆ: ಹೊಸ ಕಾರುಗಳ ಖರೀದಿ ಮೇಲೆ ಭರ್ಜರಿ ಡಿಸ್ಕೌಂಟ್

ಸ್ಯಾಂಟ್ರೋ ಹ್ಯಾಚ್‌ಬ್ಯಾಕ್(ರೂ. 65 ಸಾವಿರ)

ಕಳೆದ 2018ರ ನವೆಂಬರ್‌ನಲ್ಲಿ ಹೊಸ ಬದಲಾವಣೆಗಳೊಂದಿಗೆ ಮರಳಿ ಮಾರುಕಟ್ಟೆಗೆ ಪ್ರವೇಶಿಸಿರುವ ಸ್ಯಾಂಟ್ರೋ ಹ್ಯಾಚ್‌ಬ್ಯಾಕ್ ಖರೀದಿ ಮೇಲೆ ರೂ. 65 ಸಾವಿರ ಡಿಸ್ಕೌಂಟ್ ಘೋಷಿಸಲಾಗಿದ್ದು, ಮಾರುತಿ ಸೆಲೆರಿಯೊ ಮತ್ತು ಟಾಟಾ ಟಿಯಾಗೋ ಕಾರುಗಳಿಗೆ ಪೈಪೋಟಿ ನೀಡುವ ಉದ್ದೇಶದಿಂದ ಗರಿಷ್ಠ ಮಟ್ಟದ ಗ್ರಾಹಕರನ್ನು ಸೆಳೆಯಲು ಆಕರ್ಷಕ ಡಿಸ್ಕೌಂಟ್ ನೀಡಲಾಗಿದೆ.

ಹ್ಯುಂಡೈನಿಂದ ಹಬ್ಬದ ಕೊಡುಗೆ: ಹೊಸ ಕಾರುಗಳ ಖರೀದಿ ಮೇಲೆ ಭರ್ಜರಿ ಡಿಸ್ಕೌಂಟ್

ಎಲೈಟ್ ಐ20 ಹ್ಯಾಚ್‌ಬ್ಯಾಕ್(ರೂ. 65 ಸಾವಿರ)

ಹ್ಯಾಚ್‌ಬ್ಯಾಕ್ ಮಾದರಿಗಳಲ್ಲಿ ಸದ್ಯ ಸ್ವಿಫ್ಟ್ ನಂತರ 2ನೇ ಸ್ಥಾನದಲ್ಲಿರುವ ಎಲೈಟ್ ಐ20 ಮತ್ತು ಐ20 ಆಕ್ಟಿವ್ ಕಾರುಗಳ ಮೇಲೆ ಹ್ಯುಂಡೈ ಸಂಸ್ಥೆಯು ರೂ. 65 ಸಾವಿರ ಡಿಸ್ಕೌಂಟ್ ನೀಡಲಾಗಿದ್ದು, ಭಾರೀ ಪ್ರಮಾಣದಲ್ಲಿರುವ ಸ್ಟಾಕ್ ಪ್ರಮಾಣವನ್ನು ತಗ್ಗಿಸಲು ಆಫರ್‌ಗಳನ್ನು ನೀಡಲಾಗುತ್ತಿದೆ. ಮುಂಬರುವ ಕೆಲವೇ ದಿನಗಳಲ್ಲಿ ಎಲೈಟ್ ಐ20 ಹೊಸ ಆವೃತ್ತಿಯು ಬಿಡುಗಡೆಯಾಗುತ್ತಿದ್ದು, ಈ ಹಿನ್ನಲೆಯಲ್ಲಿ ಹಳೆಯ ಮಾದರಿಯ ಮೇಲೆ ಡಿಸ್ಕೌಂಟ್ ಜೊತೆಗೆ 4 ವರ್ಷಗಳ ವಾರಂಟಿ ಆಫರ್‌ಗಳನ್ನು ನೀಡಲಾಗುತ್ತಿದೆ.

ಹ್ಯುಂಡೈನಿಂದ ಹಬ್ಬದ ಕೊಡುಗೆ: ಹೊಸ ಕಾರುಗಳ ಖರೀದಿ ಮೇಲೆ ಭರ್ಜರಿ ಡಿಸ್ಕೌಂಟ್

ಕ್ರೆಟಾ ಕಂಪ್ಯಾಕ್ಟ್ ಎಸ್‌ಯುವಿ(80 ಸಾವಿರ)

ಹ್ಯುಂಡೈ ಜನಪ್ರಿಯ ಕಾರು ಆವೃತ್ತಿಯಾದ ಕ್ರೆಟಾ ಮೇಲೆ ರೂ.80 ಸಾವಿರ ಡಿಸ್ಕೌಂಟ್ ನೀಡಲಾಗುತ್ತಿದ್ದು, ಎಂಜಿ ಹೆಕ್ಟರ್ ಮತ್ತು ಕಿಯಾ ಸೆಲ್ಟೊಸ್ ಮಾರಾಟ ಹೆಚ್ಚಳವಾಗುತ್ತಿರುವ ಹಿನ್ನಲೆಯಲ್ಲಿ ಇದೇ ಮೊದಲ ಬಾರಿಗೆ ಕ್ರೆಟಾ ಕಂಪ್ಯಾಕ್ಟ್ ಎಸ್‌ಯುವಿ ಮೇಲೆ ದೊಡ್ಡ ಮೊತ್ತದ ಡಿಸ್ಕೌಂಟ್ ಘೋಷಿಸಲಾಗಿದೆ.

ಹ್ಯುಂಡೈನಿಂದ ಹಬ್ಬದ ಕೊಡುಗೆ: ಹೊಸ ಕಾರುಗಳ ಖರೀದಿ ಮೇಲೆ ಭರ್ಜರಿ ಡಿಸ್ಕೌಂಟ್

ಎಕ್ಸ್‌ಸೆಂಟ್ ಕಂಪ್ಯಾಕ್ ಸೆಡಾನ್(ರೂ. 95 ಸಾವಿರ)

ಟ್ಯಾಕ್ಸಿ ಮತ್ತು ವೈಯಕ್ತಿಯ ಬಳಕೆ ಕಾರು ಮಾದರಿಯಾಗಿರುವ ಎಕ್ಸ್‌ಸೆಂಟ್ ಕಂಪ್ಯಾಕ್ಟ್ ಸೆಡಾನ್ ಮಾದರಿಯು ಹ್ಯುಂಡೈ ಸಂಸ್ಥೆಯ ಜನಪ್ರಿಯ ಕಾರು ಆವೃತ್ತಿಯಾಗಿದ್ದು, ಎಕ್ಸ್‌ಸೆಂಟ್ ಕೂಡಾ ಮುಂಬರುವ ಡಿಸೆಂಬರ್ ಹೊತ್ತಿಗೆ ಹೊಸ ಡಿಸೈನ್ ಪ್ರೇರಣೆಯೊಂದಿಗೆ ಉನ್ನತಿಕರಣಗೊಳ್ಳಲಿದೆ. ಹೀಗಾಗಿ ಸ್ಟಾಕ್ ತೆರವು ಮಾಡಲಾಗುತ್ತಿದ್ದು, ಎಕ್ಸ್‌ಸೆಂಟ್ ಖರೀದಿ ಮೇಲೂ ರೂ.95 ಸಾವಿರ ಡಿಸ್ಕೌಂಟ್ ಘೋಷಣೆ ಮಾಡಲಾಗಿದೆ.

ಹ್ಯುಂಡೈನಿಂದ ಹಬ್ಬದ ಕೊಡುಗೆ: ಹೊಸ ಕಾರುಗಳ ಖರೀದಿ ಮೇಲೆ ಭರ್ಜರಿ ಡಿಸ್ಕೌಂಟ್

ವೆರ್ನಾ ಸೆಡಾನ್(ರೂ. 60 ಸಾವಿರ)

ಸಿ ಸೆಗ್ಮೆಂಟ್‌ನಲ್ಲಿ ಭಾರೀ ಜನಪ್ರಿಯತೆ ಹೊಂದಿರುವ ವೆರ್ನಾ ಸೆಡಾನ್ ಆವೃತ್ತಿಯು ಹಲವು ವಿಶೇಷತೆಗಳಿಗೆ ಕಾರಣವಾಗಿದ್ದು, ಹೋಂಡಾ ಸಿಟಿ ಮತ್ತು ಮಾರುತಿ ಸುಜುಕಿ ಸಿಯಾಜ್ ಕಾರುಗಳಿಗೆ ಉತ್ತಮ ಪೈಪೋಟಿ ಮಾದರಿಯಾಗಿದೆ. ಆದ್ರೆ ಕೆಲ ತಿಂಗಳಿನಿಂದ ಕಾರು ಮಾರಾಟವು ತಗ್ಗಿರುವ ಹಿನ್ನೆಲೆಯಲ್ಲಿ ವೆರ್ನಾ ಮೇಲೂ ಕೆಲವು ಆಕರ್ಷಕ ಡಿಸ್ಕೌಂಟ್ ನೀಡಲಾಗಿದೆ. ವೆರ್ನಾ ಮೇಲೆ ರೂ.60 ಸಾವಿರ ಆಫರ್ ನೀಡಲಾಗುತ್ತಿದ್ದು, ಆಯ್ದ ಕೆಲವು ಡೀಲರ್ಸ್ ಮಟ್ಟದಲ್ಲಿ ಇನ್ನು ಹೆಚ್ಚುವರಿ ಉಚಿತ ಸರ್ವಿಸ್‌ಗಳು ಕೂಡಾ ಲಭ್ಯವಿವೆ.

MOST READ: ಅಚ್ಚರಿಯಾದ್ರು ಸತ್ಯ: ಎತ್ತಿನ ಗಾಡಿಗೂ ದುಬಾರಿ ದಂಡ ವಿಧಿಸಿದ ಟ್ರಾಫಿಕ್ ಪೊಲೀಸರು..!

ಹ್ಯುಂಡೈನಿಂದ ಹಬ್ಬದ ಕೊಡುಗೆ: ಹೊಸ ಕಾರುಗಳ ಖರೀದಿ ಮೇಲೆ ಭರ್ಜರಿ ಡಿಸ್ಕೌಂಟ್

ಎಲಾಂಟ್ರಾ ಸೆಡಾನ್(ರೂ. 2 ಲಕ್ಷ)

ಹ್ಯುಂಡೈ ಸಂಸ್ಥೆಯು ಈಗಾಗಲೇ ಯುರೋಪ್ ಮಾರುಕಟ್ಟೆಯಲ್ಲಿ ಫೇಸ್‌ಲಿಫ್ಟ್ ಎಲಂಟ್ರಾ ಮಾದರಿಯನ್ನು ಕಳೆದ ಕೆಲದಿನಗಳ ಹಿಂದಷ್ಟೇ ಬಿಡುಗಡೆ ಮಾಡಿದ್ದು, ಇದೀಗ ಭಾರತದಲ್ಲೂ ಫೇಸ್‌ಲಿಫ್ಟ್ ಮಾದರಿಯನ್ನು ಬಿಡುಗಡೆ ಮಾಡುತ್ತಿದೆ. ಹೀಗಾಗಿ ಸ್ಟಾಕ್ ಕ್ಲಿಯೆರೆನ್ಸ್‌ಗಾಗಿ ರೂ. 2 ಲಕ್ಷದ ತನಕ ಡಿಸ್ಕೌಂಟ್ ನೀಡಲಾಗುತ್ತಿದ್ದು, ಹೊಸ ಆವೃತ್ತಿಯು ಅಕ್ಟೋಬರ್ ಅಂತ್ಯಕ್ಕೆ ಖರೀದಿಗೆ ಲಭ್ಯವಾಗಲಿದೆ.

MOST READ: ಮೋಟಾರ್ ಸ್ಪೋರ್ಟ್‌ನಲ್ಲಿ ಅರ್ಜುನ್ ಪ್ರಶಸ್ತಿ ವಿಜೇತನಿಂದಲೇ ಭೀಕರ ಅಪಘಾತ..!

ಹ್ಯುಂಡೈನಿಂದ ಹಬ್ಬದ ಕೊಡುಗೆ: ಹೊಸ ಕಾರುಗಳ ಖರೀದಿ ಮೇಲೆ ಭರ್ಜರಿ ಡಿಸ್ಕೌಂಟ್

ಟಕ್ಸನ್ ಎಸ್‌ಯುವಿ

ಹ್ಯುಂಡೈ ಸಂಸ್ಥೆಯ ಫ್ಯಾಗ್‌ಶಿಫ್ ಎಸ್‌ಯುವಿ ಮಾದರಿಯಾದ ಟಕ್ಸನ್ ಮಾದರಿಯ ಮೇಲೆ ರೂ.2 ಲಕ್ಷ ಕ್ಯಾಶ್‌ಬ್ಯಾಕ್ ಆಫರ್ ನೀಡಲಾಗಿದ್ದು, ಪ್ರತಿ ವೆರಿಯೆಂಟ್ ಮೇಲೂ ವಿವಿಧ ಮಾದರಿಯ ಹೆಚ್ಚುವರಿ ಆಫರ್‌ಗಳು ಸಿಗಲಿವೆ. ಇದು 2.0-ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್‌ನಲ್ಲಿ ಖರೀದಿಗೆ ಲಭ್ಯವಿದೆ.

Most Read Articles

Kannada
English summary
Hyundai Offers Discount Benefits Up To Rs 95,000: Available On Creta, Santro, Grand i10 & Elite i20.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X