ಮೋಟಾರ್ ಸ್ಪೋರ್ಟ್‌ನಲ್ಲಿ ಅರ್ಜುನ್ ಪ್ರಶಸ್ತಿ ವಿಜೇತನಿಂದಲೇ ಭೀಕರ ಅಪಘಾತ..!

ಕಳೆದ ತಿಂಗಳ ಹಿಂದಷ್ಟೇ ಮೋಟಾರ್ ಸ್ಪೋರ್ಟ್ ವಿಭಾಗದಲ್ಲಿ ವಿಶೇಷ ಸಾಧನೆಗಾಗಿ ಅರ್ಜುನ್ ಪ್ರಶಸ್ತಿಗೆ ಪಾತ್ರರಾಗಿದ್ದ ಗೌರವ್ ಗಿಲ್ ಚಾಲನೆ ಮಾಡುತ್ತಿದ್ದ ಕಾರು ಭೀಕರ ಅಪಘಾತಕ್ಕಿಡಾಗಿದ್ದು, ದುರಂತದಲ್ಲಿ ಒಂದೇ ಕುಟುಂಬ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಮೋಟಾರ್ ಸ್ಪೋರ್ಟ್‌ನಲ್ಲಿ ಅರ್ಜುನ್ ಪ್ರಶಸ್ತಿ ವಿಜೇತನಿಂದಲೇ ಭೀಕರ ಅಪಘಾತ..!

ರಾಜಸ್ತಾನದ ಜೋಧಪುರ್ ಬಳಿ ನಡೆಯುತ್ತಿದ್ದ ಇಂಡಿಯನ್ ನ್ಯಾಷನಲ್ ಚಾಂಪಿಯನ್‌ಶಿಪ್ ವೇಳೆ ಈ ದುರಂತ ಸಂಭವಿಸಿದ್ದು, ಅತಿ ವೇಗದಲ್ಲಿದ್ದ ರೇಸ್ ಕಾರ್‌ನಿಂದಾಗಿ ಬೈಕಿನಲ್ಲಿದ್ದ ಮೂವರು ಸ್ಥಳದಲ್ಲೇ ಪ್ರಾಣಬಿಟ್ಟಿದ್ದಾರೆ. ರಾಷ್ಟ್ರೀಯ ಮಟ್ಟದ ಕಾರ್ ರ‍್ಯಾಲಿಯಾಗಿದ್ದರಿಂದ ಪ್ರತ್ಯೇಕವಾದ ರೇಸ್ ಟ್ರ್ಯಾಕ್‌ನಲ್ಲಿಯೇ ಕಾರು ಚಾಲನೆ ಮಾಡುತ್ತಿದ್ದರೂ ಈ ಘಟನೆ ನಡೆದಿದ್ದು, ನಿಷೇಧಿತ ವಲಯದಲ್ಲಿ ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧ ನಡುವೆಯೂ ಬೈಕ್ ಸವಾರನು ರೇಸ್ ಟ್ರ್ಯಾಕ್ ಪ್ರವೇಶ ಮಾಡಿದ್ದೆ ಈ ದುರಂತಕ್ಕೆ ಪ್ರಮುಖ ಕಾರಣವಾಗಿದೆ.

ಮೋಟಾರ್ ಸ್ಪೋರ್ಟ್‌ನಲ್ಲಿ ಅರ್ಜುನ್ ಪ್ರಶಸ್ತಿ ವಿಜೇತನಿಂದಲೇ ಭೀಕರ ಅಪಘಾತ..!

ಗೌರವ್ ಗಿಲ್ ಗುರಿ ತಲುಪಲು ಇನ್ನೇನು 150 ಮೀಟರ್ ಬಾಕಿ ಇರುವಾಗಲೇ ಈ ಘಟನೆ ನಡೆದಿದ್ದು, ಗಂಟೆಗೆ ಸುಮಾರು 140ರಿಂದ 150 ಕಿ.ಮೀ ವೇಗದಲ್ಲಿದ್ದ ರೇಸ್ ಕಾರು ಟ್ರ್ಯಾಕ್‌ನಲ್ಲಿ ಅಡ್ಡಬಂದ ಬೈಕಿಗೆ ನಿಯಂತ್ರಣ ತಪ್ಪಿ ಡಿಕ್ಕಿಹೊಡೆದಿದೆ.

ಮೋಟಾರ್ ಸ್ಪೋರ್ಟ್‌ನಲ್ಲಿ ಅರ್ಜುನ್ ಪ್ರಶಸ್ತಿ ವಿಜೇತನಿಂದಲೇ ಭೀಕರ ಅಪಘಾತ..!

ರೇಸ್ ಕಾರ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸುಮಾರು 25 ಅಡಿ ದೂರದವರೆಗೆ ತೂರಿ ಹೋಗಿದ್ದು, ಬೈಕಿನಲ್ಲಿದ್ದ ನರೇಂದ್ರ ಮತ್ತು ಪತ್ನಿ ಪುಷ್ಪಾ ಹಾಗೂ ಪುತ್ರ ಜಿತೇಂದ್ರ ಸ್ಥಳದಲ್ಲೇ ಜೀವಬಿಟ್ಟಿದ್ದಾರೆ. ಘಟನೆಯಲ್ಲಿ ಗೌರವ್ ಗಿಲ್ ಅವರಿಗೂ ಗಂಭೀರ ಗಾಯಗಳಾಗಿವೆ.

ಮೋಟಾರ್ ಸ್ಪೋರ್ಟ್‌ನಲ್ಲಿ ಅರ್ಜುನ್ ಪ್ರಶಸ್ತಿ ವಿಜೇತನಿಂದಲೇ ಭೀಕರ ಅಪಘಾತ..!

ಫಿನಿಶಿಂಗ್ ಹಂತದಲ್ಲಿದ್ದರಿಂದ ಕಾರಿನ ವೇಗವನ್ನು ಮತ್ತಷ್ಟು ವೇಗ ಹೆಚ್ಚಿಸಿದ ಗೌರವ್ ಗಿಲ್‌ಗೆ ಸಡನ್ ಆಗಿ ಅಡ್ಡಬಂದ ಬೈಕಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಸಾಧ್ಯವಾಗಿಲ್ಲ. ಮೋಟಾರ್‌ ಸ್ಪೋರ್ಟ್‌ನಲ್ಲಿ ಸತತ 6 ಬಾರಿ ಚಾಂಪಿಯನ್ ಆಗಿ ಮತ್ತೊಂದು ಪ್ರಶಸ್ತಿ ಮುಡಿಗೇರಿಸಿಕೊಳ್ಳುವ ತವಕದಲ್ಲಿದ್ದ ಗೌರವ್ ಗಿಲ್ ಅವರಿಗೆ ಈ ಭೀಕರ ಅಪಘಾತವು ಸಾಕಷ್ಟು ನೋವುಂಟು ಮಾಡಿದ್ದು, ಅಪಘಾತದ ನಂತರ ಮೋಟಾರ್ ಸ್ಪೋಟ್ಸ್ ರ‍್ಯಾಲಿಯನ್ನು ರದ್ದುಗೊಳಿಸಲಾಗಿದೆ.

ಮೋಟಾರ್ ಸ್ಪೋರ್ಟ್‌ನಲ್ಲಿ ಅರ್ಜುನ್ ಪ್ರಶಸ್ತಿ ವಿಜೇತನಿಂದಲೇ ಭೀಕರ ಅಪಘಾತ..!

ರಾಷ್ಟ್ರೀಯ ಮಟ್ಟದ ಮೋಟಾರ್ ಸ್ಪೋರ್ಟ್ ಚಾಂಪಿಯನ್‌ಶಿಪ್ ಆಗಿದ್ದರಿಂದ ಭಾರೀ ಭದ್ರತೆ ಕೈಗೊಳ್ಳಲಾಗಿದ್ದರೂ ಇಂತದೊಂದು ಘಟನೆ ನಡೆದಿರುವುದು ಭಾರೀ ಚರ್ಚೆಗೆ ಕಾರಣವಾಗಿದ್ದು, ಭದ್ರತೆಗಾಗಿ ತಡೆಗೋಡೆ ಹಾಕಿದ್ದರೂ ಒಳನುಗ್ಗಿ ಬಂದಿದ್ದೆ ಇದಕ್ಕೆ ಪ್ರಮುಖ ಕಾರಣ ಎನ್ನಲಾಗಿದೆ.

ಮೋಟಾರ್ ಸ್ಪೋರ್ಟ್‌ನಲ್ಲಿ ಅರ್ಜುನ್ ಪ್ರಶಸ್ತಿ ವಿಜೇತನಿಂದಲೇ ಭೀಕರ ಅಪಘಾತ..!

ಇನ್ನು ಜೋಧಪುರ್ ಬಳಿ ನಡೆಯುತ್ತಿದ್ದ ಇಂಡಿಯನ್ ನ್ಯಾಷನಲ್ ಚಾಂಪಿಯನ್‌ಶಿಪ್‌ನಲ್ಲಿ ಮಹೀಂದ್ರಾ ತಂಡವನ್ನು ಪ್ರತಿನಿಧಿಸಿದ್ದ ಗೌರವ್ ಗಿಲ್, ಎಕ್ಸ್‌ಯುವಿ300 ಪೆಟ್ರೋಲ್ ಟರ್ಬೋ ರೇಸ್ ಆವೃತ್ತಿಯನ್ನು ಚಾಲನೆ ಮಾಡುತ್ತಿದ್ದರು.

MOST READ: ಕೊಹ್ಲಿಗೆ ಟೋಪಿ ಹಾಕಿದ ಕಾಲ್ ಸೆಂಟರ್ ಕಿಲಾಡಿ- ಠಾಣೆಯಲ್ಲೇ ಅನಾಥವಾಗಿ ಬಿದ್ದ ರೂ. 3 ಕೋಟಿ ಕಾರು..!

ಮೋಟಾರ್ ಸ್ಪೋರ್ಟ್‌ನಲ್ಲಿ ಅರ್ಜುನ್ ಪ್ರಶಸ್ತಿ ವಿಜೇತನಿಂದಲೇ ಭೀಕರ ಅಪಘಾತ..!

ಈ ಹಿಂದಿನ ಎರಡು ರಾಷ್ಟ್ರೀಯ ಮೋಟಾರ್ ಸ್ಪೋರ್ಟ್ ಚಾಂಪಿಯನ್‌ನಲ್ಲಿ ಮಿಂಚಿದ್ದ ಎಕ್ಸ್‌ಯುವಿ500 ಆವೃತ್ತಿಯನ್ನು ಈ ಬಾರಿ ಕೈಬಿಟ್ಟಿದ್ದ ಮಹೀಂದ್ರಾ ಸಂಸ್ಥೆಯು ತನ್ನ ಹೊಸ ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯಾದ ಎಕ್ಸ್‌ಯುವಿ300 ಆಯ್ಕೆ ಮಾಡಿತ್ತು.

MOST READ: ನಿಮ್ಮ ವಾಹನಗಳ ಮೈಲೇಜ್ ಕಡಿತವಾಗುತ್ತಿರುವುದಕ್ಕೆ ಅಸಲಿ ಕಾರಣ ಏನು ಗೊತ್ತಾ?

ಮೋಟಾರ್ ಸ್ಪೋರ್ಟ್‌ನಲ್ಲಿ ಅರ್ಜುನ್ ಪ್ರಶಸ್ತಿ ವಿಜೇತನಿಂದಲೇ ಭೀಕರ ಅಪಘಾತ..!

ರೇಸ್ ಆವೃತ್ತಿಯಾಗಿರುವ ಎಕ್ಸ್‌ಯುವಿ300 ಮಾದರಿಯು ಸಾಮಾನ್ಯ ಕಾರಿಗಿಂತಲೂ ಸಾಕಷ್ಟು ವಿಭಿನ್ನವಾಗಿದ್ದು, ಸ್ಪರ್ಧಿಗಳ ಆದ್ಯತೆ ಮೇರೆಗೆ ಕಾರಿನ ಒಳಭಾಗ ಮತ್ತು ಹೊರಭಾಗದ ವೈಶಿಷ್ಟ್ಯತೆಗಳನ್ನು ಸಾಕಷ್ಟು ಬದಲಾವಣೆಗೊಳಿಸಲಾಗಿರುವುದು ಮಹೀಂದ್ರಾ ರೇಸಿಂಗ್ ತಂಡಕ್ಕೆ ಮತ್ತಷ್ಟು ಬಲ ತುಂಬಿದಂತಾಗಿತ್ತು.

MOST READ: ಗುಜರಿ ಸೇರಲು ಸಜ್ಜಾದ 82 ಸಾವಿರ ಹಳೆಯ ವಾಹನಗಳು..!

ಮೋಟಾರ್ ಸ್ಪೋರ್ಟ್‌ನಲ್ಲಿ ಅರ್ಜುನ್ ಪ್ರಶಸ್ತಿ ವಿಜೇತನಿಂದಲೇ ಭೀಕರ ಅಪಘಾತ..!

ಇದರಲ್ಲಿ ಪೆಟ್ರೋಲ್ ಟರ್ಬೋ ಮಾದರಿಯನ್ನು ಗೌರವ್ ಗಿಲ್ ಚಾಲನೆ ಮಾಡುತ್ತಿದ್ದರೆ ಡೀಸೆಲ್ ಆವೃತ್ತಿಯ ಚಾಲನೆಯ ಜವಾಬ್ದಾರಿಯನ್ನು ಅರ್ಮಿತ್ಜ್ ಘೋಷ್ ಅವರಿಗೆ ನೀಡಲಾಗಿತ್ತು. ಎರಡು ಆವೃತ್ತಿಯು ಸಹ ಒಂದೇ ಮಾದರಿಯ ತಾಂತ್ರಿಕ ಅಂಶಗಳನ್ನು ಹೊಂದಿದ್ದರೂ ಸಹ ಗೌರವ್ ಅವರ ಕಾರು ಜೆಕೆ ಟೈರ್ ಸೌಲಭ್ಯ ಹೊಂದಲಿದ್ದರೆ ಘೋಷ್ ಕಾರಿನಲ್ಲಿ ಎಂಆರ್‌ಎಫ್ ಟೈರ್ ಬಳಕೆ ಮಾಡಲಾಗಿತ್ತು.

ಮೋಟಾರ್ ಸ್ಪೋರ್ಟ್‌ನಲ್ಲಿ ಅರ್ಜುನ್ ಪ್ರಶಸ್ತಿ ವಿಜೇತನಿಂದಲೇ ಭೀಕರ ಅಪಘಾತ..!

ಆದರೆ ಮೋಟಾರ್ ಸ್ಪೋರ್ಟ್ ಕೊನೆಯ ಕ್ಷಣದಲ್ಲಿ ಇಂತದೊಂದು ಭೀಕರ ಅಪಘಾತ ಸಂಭವಿಸಿದ್ದು, ಅಪಘಾತದ ಸಂದರ್ಭದಲ್ಲಿ ಬೈಕ್ ಸವಾರನು ಹೆಲ್ಮೆಟ್ ಕೂಡಾ ಹಾಕದೇ ಟ್ರ್ಯಾಕ್‌ನಲ್ಲಿ ವಿರುದ್ದ ದಿಕ್ಕಿನಲ್ಲಿ ನುಗ್ಗಿಬಂದಿದ್ದೆ ಈ ಘಟನೆಗೆ ಪ್ರಮುಖ ಕಾರಣ ಎಂಬುವುದು ಮೇಲ್ನೋಟಕ್ಕೆ ಕಂಡುಬರುತ್ತದೆ.

Most Read Articles

Kannada
English summary
Gaurav Gill Involved In An Accident During The INRC At Jodhpur: Three Dead Including A Minor.
Story first published: Sunday, September 22, 2019, 10:04 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X