ಗುಜರಿ ಸೇರಲು ಸಜ್ಜಾದ 82 ಸಾವಿರ ಹಳೆಯ ವಾಹನಗಳು..!

ಆರ್‍‍ಟಿ‍ಒ ಅಧಿಕಾರಿಗಳು ಹಳೆಯ 82,000 ವಾಹನಗಳನ್ನು ಸಂಪೂರ್ಣವಾಗಿ ನಾಶ ಪಡಿಸಲು ತೀರ್ಮಾನಿಸಿದ್ದಾರೆ. ಯಾವ ಆರ್‍‍ಟಿ‍ಒ ಅಧಿಕಾರಿಗಳು, ಯಾವ ವಾಹನಗಳನ್ನು, ಯಾವ ಕಾರಣಕ್ಕೆ ನಾಶ ಪಡಿಸಲು ಬಯಸಿದ್ದಾರೆ ಎಂಬುದನ್ನು ಈ ಲೇಖನದಲ್ಲಿ ನೋಡೋಣ.

ಗುಜರಿ ಸೇರಲು ಸಜ್ಜಾದ 82 ಸಾವಿರ ಹಳೆಯ ವಾಹನಗಳು..!

ಪೆಟ್ರೋಲ್ ಹಾಗೂ ಡೀಸೆಲ್ ವಾಹನಗಳ ಬಳಕೆಯಿಂದ ಹಲವಾರು ಸಮಸ್ಯೆಗಳು ಎದುರಾಗುತ್ತವೆ. ಮುಖ್ಯವಾಗಿ ಅವುಗಳು ಬಿಡುಗಡೆಗೊಳಿಸುವ ಹೊಗೆಯಿಂದಾಗಿ ಗ್ಲೋಬಲ್ ವಾರ್ಮಿಂಗ್ ಹಾಗೂ ವಾಯು ಮಾಲಿನ್ಯದಂತಹ ಹಲವಾರು ಸಮಸ್ಯೆಗಳು ಉಂಟಾಗುತ್ತಿವೆ.

ಗುಜರಿ ಸೇರಲು ಸಜ್ಜಾದ 82 ಸಾವಿರ ಹಳೆಯ ವಾಹನಗಳು..!

ಆದ ಕಾರಣ ಕೇಂದ್ರ ಸರ್ಕಾರ ಹಾಗೂ ಹಲವಾರು ರಾಜ್ಯ ಸರ್ಕಾರಗಳು ಈ ಸಮಸ್ಯೆಗೆ ಪರಿಹಾರ ಹುಡುಕಿ, ಈ ಸಮಸ್ಯೆಯನ್ನು ಕೊನೆಗಾಣಿಸಲು ಬಯಸಿವೆ. ಇವುಗಳ ಜೊತೆಗೆ ವಾಯು ಮಾಲಿನ್ಯವನ್ನು ತಡೆಗಟ್ಟಲು ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಉತ್ತೇಜಿಸಲಾಗುತ್ತಿದೆ.

ಗುಜರಿ ಸೇರಲು ಸಜ್ಜಾದ 82 ಸಾವಿರ ಹಳೆಯ ವಾಹನಗಳು..!

ಚಾರ್ಜಿಂಗ್ ಸ್ಟೇಷನ್‍‍ನಂತಹ ಮೂಲಭೂತ ಸೌಕರ್ಯಗಳ ಕೊರತೆ ಹಾಗೂ ಇನ್ನಿತರ ಕಾರಣಗಳಿಂದಾಗಿ ಜನರೂ ಸಹ ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಹೆಚ್ಚು ಆಸಕ್ತಿ ತೋರುತ್ತಿಲ್ಲ. ಪೆಟ್ರೋಲ್ ಹಾಗೂ ಡೀಸೆಲ್ ವಾಹನಗಳು ಹಲವಾರು ಸಮಸ್ಯೆಗಳಿಗೆ ಮೂಲವಾಗಿವೆ.

ಗುಜರಿ ಸೇರಲು ಸಜ್ಜಾದ 82 ಸಾವಿರ ಹಳೆಯ ವಾಹನಗಳು..!

ಈ ಕಾರಣಕ್ಕಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಇಂಧನ ವಾಹನಗಳ ಬಳಕೆಯನ್ನು ಕಡಿಮೆಗೊಳಿಸುವ ಸಲುವಾಗಿ ಹಲವಾರು ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿವೆ. ದೆಹಲಿಯಲ್ಲಿನ ವಾಯು ಮಾಲಿನ್ಯವನ್ನು ಗಮನಿಸಿದರೆ, ಪರಿಸ್ಥಿತಿಯ ಗಂಭೀರತೆಯ ಬಗ್ಗೆ ತಿಳಿಯಲಿದೆ. ಆದ ಕಾರಣ ಅಲ್ಲಿನ ಪರಿಸ್ಥಿತಿಯನ್ನು ಸುಧಾರಿಸಲು ದೆಹಲಿ ಸರ್ಕಾರವು ಹಲವು ನೀತಿಗಳನ್ನು ರೂಪಿಸುತ್ತಿದೆ.

ಗುಜರಿ ಸೇರಲು ಸಜ್ಜಾದ 82 ಸಾವಿರ ಹಳೆಯ ವಾಹನಗಳು..!

ದೆಹಲಿಯಲ್ಲಿನ ಮಾಲಿನ್ಯವನ್ನು ಗಮನದಲ್ಲಿಟ್ಟು ಕೊಂಡು ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯು 2015ರಲ್ಲಿ ಸುತ್ತೋಲೆಯೊಂದನ್ನು ಹೊರಡಿಸಿದೆ. ಈ ಸುತ್ತೋಲೆಯ ಪ್ರಕಾರ, 15 ವರ್ಷಕ್ಕೂ ಹೆಚ್ಚು ಹಳೆಯದಾದ ಪೆಟ್ರೋಲ್ ಹಾಗೂ 10 ವರ್ಷಕ್ಕೂ ಹೆಚ್ಚು ಹಳೆಯದಾದ ಡೀಸೆಲ್ ವಾಹನಗಳ ಬಳಕೆಯನ್ನು ನಿಷೇಧಿಸಲಾಗಿದೆ.

ಗುಜರಿ ಸೇರಲು ಸಜ್ಜಾದ 82 ಸಾವಿರ ಹಳೆಯ ವಾಹನಗಳು..!

ಆದ ಕಾರಣ ಗಾಜಿಯಾಬಾದ್‍‍ನ ಆರ್‍‍ಟಿ‍ಒ 82,000ಕ್ಕೂ ಹೆಚ್ಚು ವಾಹನಗಳನ್ನು ಗುಜರಿ ಹಾಕಿದೆ. ಈ ಯೋಜನೆಯನ್ನು ಎರಡು ಹಂತಗಳಲ್ಲಿ ಹಮ್ಮಿಕೊಳ್ಳಲಾಗಿದೆ. ದೆಹಲಿ ಎನ್‍‍ಸಿ‍ಆರ್ ವ್ಯಾಪ್ತಿಯಲ್ಲಿರುವ 15 ವರ್ಷಕ್ಕೂ ಹಳೆಯ ಡೀಸೆಲ್ ಹಾಗೂ 10 ವರ್ಷ ಹಳೆಯದಾದ ಪೆಟ್ರೋಲ್ ಎಂಜಿನ್ ವಾಹನಗಳನ್ನು ರಿ-ರಿಜಿಸ್ಟ್ರರ್ ಮಾಡಬೇಕಿದೆ.

MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಗುಜರಿ ಸೇರಲು ಸಜ್ಜಾದ 82 ಸಾವಿರ ಹಳೆಯ ವಾಹನಗಳು..!

ಇದರ ಜೊತೆಗೆ ಹಳೆಯ ವಾಹನಗಳನ್ನು ದೆಹಲಿಯ ಹೊರಗೆ ವರ್ಗಾಯಿಸುವುದು. ಇದಕ್ಕಾಗಿ ಆರ್‍‍ಟಿ‍ಒ ಅಧಿಕಾರಿಗಳಿಂದ ನಿರಾಕ್ಷೇಪಣಾ ಪತ್ರ ಪಡೆಯಬೇಕಾಗುತ್ತದೆ. ಈ ರೀತಿಯ ವಾಹನಗಳಿಗಾಗಿ ಇತ್ತೀಚಿಗೆ ಈ ಆರ್‍‍ಟಿ‍ಒ ಅರ್ಜಿಯನ್ನು ವಿತರಿಸಿತ್ತು. ಈ ವಾಹನಗಳ ಪೈಕಿ ಕೆಲವು ವಾಹನಗಳನ್ನು ಮಾತ್ರ ರಿ-ರಿಜಿಸ್ಟರ್ ಮಾಡಲಾಯಿತು. ಉಳಿದ ವಾಹನಗಳನ್ನು ತಿರಸ್ಕರಿಸಲಾಯಿತು.

MOST READ: ಹಳೆಯದಾದಷ್ಟು ದುಬಾರಿಯಾಗುತ್ತವೆ ಈ ಜನಪ್ರಿಯ ಬೈಕುಗಳು

ಗುಜರಿ ಸೇರಲು ಸಜ್ಜಾದ 82 ಸಾವಿರ ಹಳೆಯ ವಾಹನಗಳು..!

ಗಾಜಿಯಾಬಾದ್‍ನ ಆರ್‍‍ಟಿ‍ಒ ಕಚೇರಿ, ಹಳೆಯ ವಾಹನಗಳನ್ನು ರಿಜಿಸ್ಟರ್ ಮಾಡುವುದಿಲ್ಲವೆಂದು ತಿಳಿಸಿದೆ. ಈ ವಾಹನಗಳನ್ನು ರಸ್ತೆಗಳಲ್ಲಿ ಚಲಾಯಿಸುವುದು ಕಂಡು ಬಂದರೆ ಅಂತಹ ವಾಹನಗಳ ಮಾಲೀಕರ ವಿರುದ್ಧ ಮೋಟಾರು ವಾಹನ ಕಾಯ್ದೆಯನ್ವಯ ಕ್ರಿಮಿನಲ್ ಪ್ರಕರಣ ದಾಖಲಿಸುವುದಾಗಿ ತಿಳಿಸಿದೆ.

MOST READ: ಜೆ‍‍ಸಿ‍‍ಬಿ ಯಂತ್ರವು ಹಳದಿ ಬಣ್ಣದಲ್ಲೇ ಏಕಿರುತ್ತೆ?

ಗುಜರಿ ಸೇರಲು ಸಜ್ಜಾದ 82 ಸಾವಿರ ಹಳೆಯ ವಾಹನಗಳು..!

ಆದ ಕಾರಣ ಅಂತಹ ವಾಹನಗಳನ್ನು ಗುಜರಿಗೆ ಸೇರಿಸ ಬೇಕಾಗಿದೆ. ಗುಜರಿ ಸೇರುವ ಅಂತಹ ವಾಹನಗಳನ್ನು ತೆರವುಗೊಳಿಸುವಂತೆ ಸಂಬಂಧಪಟ್ಟವರಿಗೆ ಸೂಚಿಸಲಾಗಿದೆ. ಈ ಬಗ್ಗೆ ದೆಹಲಿ ಎನ್‍‍ಸಿ‍ಆರ್‍‍ನ ಆರ್‍‍ಟಿ‍ಒ ಅಧಿಕಾರಿ ವಿಶ್ವಜಿತ್ ಸಿಂಗ್‍‍ರವರು ಪ್ರತಿಕ್ರಿಯೆ ನೀಡಿದ್ದಾರೆ.

ಗುಜರಿ ಸೇರಲು ಸಜ್ಜಾದ 82 ಸಾವಿರ ಹಳೆಯ ವಾಹನಗಳು..!

2018ರ ಜುಲೈನಲ್ಲಿ ಸಾರ್ವಜನಿಕ ಪ್ರಕಟಣೆ ಹೊರಡಿಸಿ ದೆಹಲಿಯ ಹೊರಗೆ ವಾಹನಗಳನ್ನು ತೆಗೆದುಕೊಂಡು ಹೋಗಲು ನೋ ಅಬ್ಜಕ್ಷನ್ ಸರ್ಟಿಫಿಕೇಟ್ ಪಡೆಯುವಂತೆ ಸೂಚಿಸಲಾಗಿತ್ತು. ಆದರೆ ಕೆಲವರು ಮಾತ್ರ ಅರ್ಜಿ ಸಲ್ಲಿಸಿದ್ದರು.

ಗುಜರಿ ಸೇರಲು ಸಜ್ಜಾದ 82 ಸಾವಿರ ಹಳೆಯ ವಾಹನಗಳು..!

ಹಳೆಯ ವಾಹನಗಳ ರಿಜಿಸ್ಟ್ರೇಷನ್‍‍ಗಾಗಿ 60 ದಿನಗಳ ಕಾಲಾವಕಾಶ ನೀಡಲಾಗಿತ್ತು. ಆದರೆ ಕೆಲವರು ಮಾತ್ರ ರಿಜಿಸ್ಟರ್ ಮಾಡಿಸಿದರು. ಉಳಿದವರು ರಿಜಿಸ್ಟರ್ ಮಾಡಿಸಲು ವಿಫಲರಾದರು. ರಿ-ರಿಜಿಸ್ಟರ್ ಮಾಡಿಸದ ವಾಹನಗಳನ್ನು ಗುಜರಿಗೆ ಸೇರಿಸಲಾಗುವುದೆಂದು ಹೇಳಿದರು.

More from DriveSpark

Article Published On: Saturday, September 21, 2019, 17:09 [IST]
English summary
Registration of 82,000 old vehicles scrapped by city RTO - Read in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+