ಅಚ್ಚರಿಯಾದ್ರು ಸತ್ಯ: ಎತ್ತಿನ ಗಾಡಿಗೂ ದುಬಾರಿ ದಂಡ ವಿಧಿಸಿದ ಟ್ರಾಫಿಕ್ ಪೊಲೀಸರು..!

ದೇಶಾದ್ಯಂತ ಹೊಸ ಸಂಚಾರಿ ನಿಯಮದಡಿ ಭರ್ಜರಿ ದಂಡ ವಸೂಲಿ ಮಾಡಲಾಗುತ್ತಿದ್ದು, ಕೆಲವು ರಾಜ್ಯಗಳಲ್ಲಿ ದಂಡದಲ್ಲಿ ವಿನಾಯ್ತಿ ನೀಡದರೆ ಇನ್ನೂ ಕೆಲವು ರಾಜ್ಯಗಳಲ್ಲಿ ಹೊಸ ನಿಯಮದಡಿ ದಂಡ ವಸೂಲಿ ಮಾಡುವುದಕ್ಕೆ ಬ್ರೇಕ್ ಹಾಕಲಾಗಿದೆ. ಆದರೆ ಇಲ್ಲೊಂದು ಪ್ರಕರಣದಲ್ಲಿ ಎತ್ತಿನ ಗಾಡಿಗೂ ದುಬಾರಿ ದಂಡ ವಿಧಿಸಿರುವ ಬಗ್ಗೆ ವರದಿಯಾಗಿದೆ.

ಅಚ್ಚರಿಯಾದ್ರು ಸತ್ಯ: ಎತ್ತಿನ ಗಾಡಿಗೂ ದುಬಾರಿ ದಂಡ ವಿಧಿಸಿದ ಟ್ರಾಫಿಕ್ ಪೊಲೀಸರು..!

ಹೊಸ ಸಂಚಾರಿ ನಿಯಮದಡಿ ದೇಶಾದ್ಯಂತ ಇದುವರೆಗೂ ನೂರಾರು ಕೋಟಿ ಲೆಕ್ಕದಲ್ಲಿ ದಂಡ ವಸೂಲಿಯಾಗಿದ್ದು, ದುಬಾರಿ ದಂಡಕ್ಕೆ ಬೇಸತ್ತ ವಾಹನ ಸವಾರರು ಕೇಂದ್ರ ಮತ್ತು ಆಯಾ ರಾಜ್ಯ ಸರ್ಕಾರಗಳ ವಿರುದ್ಧ ಕಿಡಿಕಾರುತ್ತಿದ್ದಾರೆ. ಇದರಿಂದ ದುಬಾರಿ ದಂಡದಲ್ಲಿ ವಿನಾಯ್ತಿ ನೀಡಲಾಗಿದ್ದರೂ ಕೂಡಾ ಡೆಹರಾಡೂನ್‌ನಲ್ಲಿ ಮಾತ್ರ ಹೊಸ ನಿಯಮದಲ್ಲಿ ಯಾವುದೇ ಇಲ್ಲದಿರುವುದರಿಂದ ದುಬಾರಿ ದಂಡವನ್ನೇ ತೆರಬೇಕಾದ ಪರಿಸ್ಥಿತಿಯಿದೆ.

ಅಚ್ಚರಿಯಾದ್ರು ಸತ್ಯ: ಎತ್ತಿನ ಗಾಡಿಗೂ ದುಬಾರಿ ದಂಡ ವಿಧಿಸಿದ ಟ್ರಾಫಿಕ್ ಪೊಲೀಸರು..!

ಹೀಗಿರುವಾಗ ತಪ್ಪು ಮಾಡಿದ ವಾಹನ ಸವಾರರಿಂದ ಮಾತ್ರವೇ ದಂಡ ವಸೂಲಿ ಮಾಡಬೇಕಿದ್ದ ಟ್ರಾಫಿಕ್ ಪೊಲೀಸರು ರಾಂಗ್ ಪಾರ್ಕಿಂಗ್ ಹೆಸರಿನಲ್ಲಿ ಎತ್ತಿನ ಗಾಡಿಗೂ ದಂಡ ವಿಧಿಸಿದ್ದಾರೆ. ಅದು ಮೋಟಾರ್ ವೆಹಿಕಲ್ ಕಾಯ್ದೆಯಡಿ ಬರುವುದಿಲ್ಲ ಎಂಬುವುದು ಗೊತ್ತಿದ್ದರೂ ದಂಡ ವಿಧಿಸಿದ ಪೊಲೀಸರು ಈಡಾಗಿದ್ದಾರೆ.

ಅಚ್ಚರಿಯಾದ್ರು ಸತ್ಯ: ಎತ್ತಿನ ಗಾಡಿಗೂ ದುಬಾರಿ ದಂಡ ವಿಧಿಸಿದ ಟ್ರಾಫಿಕ್ ಪೊಲೀಸರು..!

ಡೆಹರಾಡೂನ್ ಹೊರವಲಯದ ಸಹಾಸ್ಪುರ್ ಮುಖ್ಯರಸ್ತೆಯ ಬದಿಯಲ್ಲಿ ನಿಂತಿದ್ದ ಎತ್ತಿನಗಾಡಿಗೆ ರೂ.1 ಸಾವಿರ ದಂಡವಿಧಿಸಲಾಗಿದ್ದು, ಟ್ರಾಫಿಕ್ ಪೊಲೀಸರ ಕ್ರಮಕ್ಕೆ ಎತ್ತಿನಗಾಡಿ ಮಾಲೀಕ ರಿಯಾಜ್ ಹಸನ್ ತಬ್ಬಿಬ್ಬಾಗಿದ್ದಾರೆ.

ಅಚ್ಚರಿಯಾದ್ರು ಸತ್ಯ: ಎತ್ತಿನ ಗಾಡಿಗೂ ದುಬಾರಿ ದಂಡ ವಿಧಿಸಿದ ಟ್ರಾಫಿಕ್ ಪೊಲೀಸರು..!

1 ಸಾವಿರ ರೂಪಾಯಿ ದಂಡ ವಿಧಿಸಿರುವ ರಶೀದಿಯನ್ನು ಕೂಡಾ ನೀಡಲಾಗಿದ್ದು, ಅದರಲ್ಲಿ ವಾಹನದ ನೋಂದಣಿ ಸಂಖ್ಯೆಯಿಲ್ಲದೆಯೇ ದಂಡ ವಿಧಿಸಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಕ್ಕೆ ವೈರಲ್ ಆಗುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತಂತೆ ಭಾರೀ ಚರ್ಚೆಯಾದ ಎಚ್ಚೆತ್ತುಕೊಂಡ ಸ್ಥಳೀಯ ಪೊಲೀಸರು ದಂಡ ಮೊತ್ತದ ಚಲನ್ ಅನ್ನು ವಜಾಗೊಳಿಸಿದ್ದಲ್ಲದೇ ದಂಡ ಹಾಕಿದ್ದಕ್ಕೆ ಬೇರೆಯದ್ದೆ ಕಾರಣ ನೀಡಿದ್ದಾರೆ.

ಅಚ್ಚರಿಯಾದ್ರು ಸತ್ಯ: ಎತ್ತಿನ ಗಾಡಿಗೂ ದುಬಾರಿ ದಂಡ ವಿಧಿಸಿದ ಟ್ರಾಫಿಕ್ ಪೊಲೀಸರು..!

ಸಹಾಸ್ಪುರ್ ಬಳಿ ಅಕ್ರಮವಾಗಿ ಮರಳು ಗಣಿಗಾರಿಕೆ ಮಾಡುತ್ತಿದ್ದ ಮಾಹಿತಿ ಮೇರೆಗೆ ಪೊಲೀಸರು ಅಲ್ಲಿಗೆ ಗಸ್ತಿಗೆ ತೆರಳಿದ್ದರೂ ಈ ವೇಳೆ ಅದೇ ಸ್ಥಳದಲ್ಲಿದ್ದ ಎತ್ತಿನ ಗಾಡಿಯೂ ಕೂಡಾ ಅದೇ ಕಾರಣಕ್ಕೆ ಬಂದಿರಬಹುದು ಎನ್ನುವ ಆಧಾರದ ಮೇಲೆ ದಂಡವಿಧಿಸಿದ್ದಾರೆ ಎನ್ನಲಾಗಿದೆ.

ಅಚ್ಚರಿಯಾದ್ರು ಸತ್ಯ: ಎತ್ತಿನ ಗಾಡಿಗೂ ದುಬಾರಿ ದಂಡ ವಿಧಿಸಿದ ಟ್ರಾಫಿಕ್ ಪೊಲೀಸರು..!

ಆದರೆ ಅಸಲಿಗೆ ಆ ಎತ್ತಿನ ಗಾಡಿ ಮಾಲೀಕನು ಮುಖ್ಯ ರಸ್ತೆಗೆ ಹೊಂದಿಕೊಂಡತ್ತಿರುವ ತನ್ನ ಜಮೀನ ಕೆಲಸಕ್ಕಾಗಿ ನಿಲ್ಲಿಸಿದ್ದ ಎಂಬುವುದು ಗೊತ್ತಾದ ನಂತರ ಪೊಲೀಸರು ದಂಡದ ಚಲನ್ ಅನ್ನು ವಜಾಗೊಳಿಸಿದ್ದು, ಪೊಲೀಸರ ಕಾರ್ಯವೈಖರಿ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿವೆ.

MOST READ: ನಿಮ್ಮ ವಾಹನಗಳ ಮೈಲೇಜ್ ಕಡಿತವಾಗುತ್ತಿರುವುದಕ್ಕೆ ಅಸಲಿ ಕಾರಣ ಏನು ಗೊತ್ತಾ?

ಅಚ್ಚರಿಯಾದ್ರು ಸತ್ಯ: ಎತ್ತಿನ ಗಾಡಿಗೂ ದುಬಾರಿ ದಂಡ ವಿಧಿಸಿದ ಟ್ರಾಫಿಕ್ ಪೊಲೀಸರು..!

ಟ್ರಾಫಿಕ್ ಪೊಲೀಸರು ಈ ಹಿಂದೆಯೂ ಕೂಡಾ ದಂಡ ವಿಧಿಸುವ ವಿಚಾರದಲ್ಲಿ ಸಾಕಷ್ಟು ವಿವಾದಕ್ಕೆ ಕಾರಣವಾಗಿದ್ದಲ್ಲದೇ ಟ್ರೋಲ್‌ಗಳಿಗೆ ಆಹಾರವಾಗುತ್ತಿದ್ದಾರೆ. ಕಳೆದ ವಾರವಷ್ಟೇ ಆಟೋ ಚಾಲಕರಿಗೆ ಸೀಟ್ ಹಾಕಿಲ್ಲವೆಂದು ದಂಡ ವಿಧಿಸಿದ್ದಲ್ಲದೇ ಕಾರು ಚಾಲಕನಿಗೆ ಹೆಲ್ಮೆಟ್ ಹಾಕಿಲ್ಲವೆಂಬ ಕಾರಣಕ್ಕೆ ರೂ.1 ಸಾವಿರ ವಿಧಿಸಿ ಸಾರ್ವಜನಿಕರ ಆಕ್ರೋಶ ಕಾರಣವಾಗಿದ್ದರು.

MOST READ: ಸುಳ್ಳು ಮಾಹಿತಿಯಿಂದ ಪೆಟ್ರೋಲ್‌ಗೆ ಲಕ್ಷ ಲಕ್ಷ ಖರ್ಚು- ಡೀಲರ್ಸ್ ವಿರುದ್ಧ ಕೇಸ್ ಜಡಿದ ಜೀಪ್ ಕಂಪಾಸ್ ಮಾಲೀಕ..!

ಅಚ್ಚರಿಯಾದ್ರು ಸತ್ಯ: ಎತ್ತಿನ ಗಾಡಿಗೂ ದುಬಾರಿ ದಂಡ ವಿಧಿಸಿದ ಟ್ರಾಫಿಕ್ ಪೊಲೀಸರು..!

ಇನ್ನು ಭಾರೀ ದಂಡಕ್ಕೆ ಬಹುತೇಕ ರಾಜ್ಯಗಳಲ್ಲಿ ವಾಹನ ಸವಾರರು ಸಾಕಷ್ಟು ಆಕ್ರೋಶ ವ್ಯಕ್ತಪಡಿಸುತ್ತಿರುವುದರಿಂದ ದಂಡ ಪರಿಷ್ಕರಣೆಗೆ ಮುಂದಾಗಿರುವ ಕೇಂದ್ರ ಸರ್ಕಾರವು ಮತ್ತೊಂದು ಸಭೆ ಕರೆದಿದ್ದು, ಎಲ್ಲಾ ರಾಜ್ಯಗಳ ಸಿಎಂಗಳ ಜೊತೆ ಹೆದ್ದಾರಿ ಮತ್ತು ರಸ್ತೆಸಾರಿಗೆ ಸಚಿವ ನಿತಿನ್ ಗಡ್ಕರಿ ಮಾತುಕತೆ ನಡೆಸಲಿದ್ದಾರೆ.

MOST READ: ದುಬಾರಿ ದಂಡಕ್ಕೆ ಜನಾಕ್ರೋಶ: ವಾಹನ ಸವಾರರಿಗೆ ಸಿಹಿಸುದ್ದಿ ನೀಡಿದ ಕರ್ನಾಟಕ ಸರ್ಕಾರ..!

ಅಚ್ಚರಿಯಾದ್ರು ಸತ್ಯ: ಎತ್ತಿನ ಗಾಡಿಗೂ ದುಬಾರಿ ದಂಡ ವಿಧಿಸಿದ ಟ್ರಾಫಿಕ್ ಪೊಲೀಸರು..!

ಈ ವೇಳೆ ಭಾರೀ ಹೊಸ ದಂಡದ ಮೊತ್ತದಲ್ಲಿ ಇಳಿಕೆ ಮಾಡುವ ಸಾಧ್ಯತೆಗಳಿದ್ದು, ಅಲ್ಲಿನ ತನಕ ಹೊಸ ಸಂಚಾರಿ ನಿಯಮದಡಿ ದಂಡ ವಸೂಲಿ ಮಾಡದಂತೆ ಈಗಾಗಲೇ ಕರ್ನಾಟಕದಲ್ಲಿ ಸೂಚನೆ ನೀಡಲಾಗಿದೆ.

ಅಚ್ಚರಿಯಾದ್ರು ಸತ್ಯ: ಎತ್ತಿನ ಗಾಡಿಗೂ ದುಬಾರಿ ದಂಡ ವಿಧಿಸಿದ ಟ್ರಾಫಿಕ್ ಪೊಲೀಸರು..!

ಹೀಗಾಗಿ ಕೇಂದ್ರ ಸರ್ಕಾರದಿಂದ ಹೊಸ ದರ ಪರಿಷ್ಕರಣೆ ಪಟ್ಟಿ ಬರುವ ತನಕ ವಾಹನ ಸವಾರರಿಗೆ ತುಸು ರೀಲಿಫ್ ಸಿಗಲಿದ್ದು, ಈ ಹಿಂದಿನಂತಯೇ ಹೆಲ್ಮೆಟ್ ಇಲ್ಲದವರಿಗೆ, ಹಿಂಬದಿ ಸವಾರರಿಗೆ ಹೆಲ್ಮೆಟ್ ಇಲ್ಲದಿರುವುದು, ಸಿಟ್ ಬೆಲ್ಟ್ ಹಾಕದಿರುವುದಕ್ಕೆ ರೂ.100, ಸಿಗ್ನಲ್ ಜಂಪ್‌ಗೆ ರೂ.200, ಡಿಎಲ್ ಇಲ್ಲದ ವಾಹನ ಸವಾರರಿಗೆ ರೂ.300 ಮತ್ತು ಡ್ರಿಂಕ್ ಆ್ಯಂಡ್ ಡ್ರೈವ್ ವಾಹನ ಸವಾರರಿಗೆ ರೂ.2 ಸಾವಿರ ದಂಡವನ್ನೇ ಮುಂದುವರಿಸಲಿದೆ.

More from DriveSpark

Article Published On: Monday, September 16, 2019, 19:33 [IST]
English summary
Bullock Cart Owner Fined Rs 1,000 Under Motor Vehicles Act. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+