ಆಗಸ್ಟ್ 1ರಿಂದ ಏರಿಕೆಯಾಗಲಿವೆ ಹ್ಯುಂಡೈ ಕಾರಿನ ಬೆಲೆಗಳು

ಹ್ಯುಂಡೈ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿರುವ ತನ್ನ ಎಲ್ಲಾ ಸರಣಿಯ ಕಾರುಗಳ ಬೆಲೆಯನ್ನು 2019ರ ಆಗಸ್ಟ್1ರಿಂದ ಏರಿಕೆ ಮಾಡಲಿದೆ. ಈ ಬೆಲೆ ಏರಿಕೆಯು ರೂ.9,200 ಗಳವರೆಗೆ ಇರಲಿದೆ. ಇತ್ತೀಚಿಗೆ ಬಿಡುಗಡೆಯಾದ ವೆನ್ಯೂ ಹಾಗೂ ಕೋನಾ ಎಲೆಕ್ಟ್ರಿಕ್ ವಾಹನದ ಹೊರತಾಗಿ ಹ್ಯುಂಡೈ ಕಂಪನಿಯ ಎಲ್ಲಾ ಕಾರುಗಳ ಬೆಲೆ ಏರಿಕೆಯಾಗಲಿದೆ.

ಆಗಸ್ಟ್ 1ರಿಂದ ಏರಿಕೆಯಾಗಲಿವೆ ಹ್ಯುಂಡೈ ಕಾರಿನ ಬೆಲೆಗಳು

ಹ್ಯುಂಡೈ ಪ್ರಕಾರ, ಹೆಚ್ಚುತ್ತಿರುವ ಬಿಡಿ ಭಾಗಗಳ ಬೆಲೆ ಹಾಗೂ ಕಾರುಗಳಲ್ಲಿ ಹೊಸ ಸುರಕ್ಷಾ ನಿಯಮಗಳನ್ನು ಅಳವಡಿಸುತ್ತಿರುವ ಕಾರಣಗಳಿಂದಾಗಿ ಬೆಲೆ ಏರಿಕೆ ಮಾಡಲಾಗಿದೆ. ಹ್ಯುಂಡೈ ಕಂಪನಿಯು, ಸದ್ಯಕ್ಕೆ ದೇಶಿಯ ಮಾರುಕಟ್ಟೆಯಲ್ಲಿ 11 ಮಾದರಿಯ ಕಾರುಗಳನ್ನು ಮಾರಾಟ ಮಾಡುತ್ತಿದೆ.

ಆಗಸ್ಟ್ 1ರಿಂದ ಏರಿಕೆಯಾಗಲಿವೆ ಹ್ಯುಂಡೈ ಕಾರಿನ ಬೆಲೆಗಳು

ಇದರಲ್ಲಿ ಸ್ಯಾಂಟ್ರೊ, ಗ್ರ್ಯಾಂಡ್ ಐ10, ಎಕ್ಸೆಂಟ್, ಎಲೈಟ್ ಐ20, ಆಕ್ಟಿವ್ ಐ20, ವೆನ್ಯೂ, ಕ್ರೆಟಾ, ವರ್ನಾ, ಎಲಾಂಟ್ರಾ, ಕೋನಾ ಎಲೆಕ್ಟ್ರಿಕ್ ಹಾಗೂ ಟಕ್ಸನ್ ಕಾರುಗಳು ಸೇರಿವೆ. ಈ ಪೈಕಿ ಹೊಸ ಸುರಕ್ಷಾ ಫೀಚರ್‍‍ಗಳನ್ನು ಹೊಂದಿರುವ ವೆನ್ಯೂ ಹಾಗೂ ಕೋನಾ ಎಲೆಕ್ಟ್ರಿಕ್ ವಾಹನವನ್ನು ಹೊರತುಪಡಿಸಿ ಬೇರೆ ಎಲ್ಲಾ ಮಾದರಿಗಳನ್ನು ನವೀಕರಿಸಲಿದೆ.

ಆಗಸ್ಟ್ 1ರಿಂದ ಏರಿಕೆಯಾಗಲಿವೆ ಹ್ಯುಂಡೈ ಕಾರಿನ ಬೆಲೆಗಳು

ಉಳಿದ 9 ಕಾರುಗಳ ಬೆಲೆ ಏರಿಕೆಯ ಬಗ್ಗೆ ಹ್ಯುಂಡೈ ಕಂಪನಿಯು ಆಗಸ್ಟ್ 1ರಂದು ಅಧಿಕೃತವಾಗಿ ಘೋಷಿಸಲಿದೆ. ಬೆಲೆ ಏರಿಕೆಯ ಹೊರತಾಗಿ, ಹ್ಯುಂಡೈ ತನ್ನ ಮೂರನೇ ತಲೆಮಾರಿನ ಗ್ರ್ಯಾಂಡ್ ಐ10 ಹ್ಯಾಚ್‌ಬ್ಯಾಕ್ ಕಾರ್ ಅನ್ನು ಭಾರತದಲ್ಲಿ ಆಗಸ್ಟ್ ತಿಂಗಳಲ್ಲಿ ಬಿಡುಗಡೆ ಮಾಡಲು ಸಿದ್ಧತೆ ನಡೆಸಿದೆ.

ಆಗಸ್ಟ್ 1ರಿಂದ ಏರಿಕೆಯಾಗಲಿವೆ ಹ್ಯುಂಡೈ ಕಾರಿನ ಬೆಲೆಗಳು

2019ರ ಹೊಸ ಹ್ಯುಂಡೈ ಗ್ರ್ಯಾಂಡ್ ಐ10 ಹ್ಯಾಚ್‌ಬ್ಯಾಕ್ ಆಗಸ್ಟ್ 20ರಿಂದ ಭಾರತದಲ್ಲಿ ಮಾರಾಟವಾಗಲಿದೆ. ಸೆಪ್ಟೆಂಬರ್‌ನಲ್ಲಿ ನಡೆಯಲಿರುವ ಫ್ರಾಂಕ್‌ಫರ್ಟ್ ಮೋಟಾರ್ ಶೋನಲ್ಲಿ ಮೊದಲ ಬಾರಿಗೆ ಅಂತರ್‍‍ರಾಷ್ಟ್ರಿಯ ಮಟ್ಟದಲ್ಲಿ ಸಾರ್ವಜನಿಕವಾಗಿ ಕಾಣಿಸಿಕೊಳ್ಳಲಿದೆ.

ಆಗಸ್ಟ್ 1ರಿಂದ ಏರಿಕೆಯಾಗಲಿವೆ ಹ್ಯುಂಡೈ ಕಾರಿನ ಬೆಲೆಗಳು

ಹೋಂಡಾ ಸಿಟಿ ಮತ್ತು ಮಾರುತಿ ಸುಜುಕಿ ಸಿಯಾಜ್‌ಗೆ ಟಕ್ಕರ್ ನೀಡುತ್ತಿರುವ ಟೊಯೊಟಾ ಯಾರಿಸ್ ಖರೀದಿಗೆ ಈಗಲೇ ಟೆಸ್ಟ್ ಡ್ರೈವ್ ಮಾಡಿ..!

ಕೊರಿಯಾ ಮೂಲದ ಕಂಪನಿಯು ಇತ್ತೀಚೆಗಷ್ಟೇ ಭಾರತದಲ್ಲಿ ಕೋನಾ ಎಲೆಕ್ಟ್ರಿಕ್ ವಾಹನವನ್ನು ಬಿಡುಗಡೆಗೊಳಿಸಿತು. ಕೋನಾ ದೇಶದ ಮೊದಲ ಪೂರ್ಣ ಪ್ರಮಾಣದ ಎಲೆಕ್ಟ್ರಿಕ್ ಎಸ್‍‍ಯುವಿಯಾಗಿದೆ. ಇದರ ಬೆಲೆ ಭಾರತದ ಎಕ್ಸ್ ಶೋರೂಂ ದರದಂತೆ ರೂ.25.6ಲಕ್ಷಗಳಾಗಿದೆ.

ಆಗಸ್ಟ್ 1ರಿಂದ ಏರಿಕೆಯಾಗಲಿವೆ ಹ್ಯುಂಡೈ ಕಾರಿನ ಬೆಲೆಗಳು

ಹ್ಯುಂಡೈ ವೆನ್ಯೂ ಕಾರ್ ಅನ್ನು ಇತ್ತೀಚೆಗೆ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಾಗಿತ್ತು. ವೆನ್ಯೂ ವಾಹನವು ಭಾರತದಲ್ಲಿ ಬಿಡುಗಡೆಯಾದ ಕಂಪನಿಯ ಮೊದಲ ಕಾಂಪ್ಯಾಕ್ಟ್ ಎಸ್‌ಯುವಿಯಾಗಿದೆ. ಹ್ಯುಂಡೈ ವೆನ್ಯೂ ಈ ಸೆಗ್‍‍ಮೆಂಟಿನಲ್ಲಿ ಕಡಿಮೆ ಅವಧಿಯಲ್ಲಿಯೇ ಜನಪ್ರಿಯತೆಯನ್ನು ಪಡೆದು, ಮಾರಾಟದಲ್ಲಿ ಇತರ ಕಂಪನಿಗಳ ಎಸ್‍‍ಯುವಿಗಳನ್ನು ಹಿಂದಿಕ್ಕಿದೆ.

ಆಗಸ್ಟ್ 1ರಿಂದ ಏರಿಕೆಯಾಗಲಿವೆ ಹ್ಯುಂಡೈ ಕಾರಿನ ಬೆಲೆಗಳು

ಹ್ಯುಂಡೈ ವೆನ್ಯೂವಿನ ಯಶಸ್ಸು ಕಾಂಪ್ಯಾಕ್ಟ್ ಎಸ್‌ಯುವಿ ಸೆಗ್‍‍ಮೆಂಟಿನಲ್ಲಿ ಮುಂಚೂಣಿಯಲ್ಲಿದ್ದ ಮಾರುತಿ ಸುಜುಕಿ ಕಂಪನಿಯ ವಿಟಾರಾ ಬ್ರಿಝಾಗೆ ತೀವ್ರವಾದ ಪೈಪೋಟಿ ನೀಡಿದೆ. ಮುಂಬರುವ ತಿಂಗಳುಗಳಲ್ಲಿ ವೆನ್ಯೂ, ವಿಟಾರಾ ಬ್ರಿಝಾವನ್ನು ಮಾರಾಟದಲ್ಲಿ ಹಿಂದಿಕ್ಕುವ ಸಾಧ್ಯತೆಗಳಿವೆ.

ಆಗಸ್ಟ್ 1ರಿಂದ ಏರಿಕೆಯಾಗಲಿವೆ ಹ್ಯುಂಡೈ ಕಾರಿನ ಬೆಲೆಗಳು

ಬಿಡುಗಡೆಯಾದ ಮೊದಲ ಎರಡು ತಿಂಗಳಲ್ಲಿ, ವೆನ್ಯೂ ಎಸ್‍‍ಯುವಿಯ ವಾಹನಗಳು ಪ್ರತಿ ತಿಂಗಳಿಗೆ ಸುಮಾರು 8,000 ಯುನಿಟ್‍‍ಗಳಂತೆ ಮಾರಾಟವಾಗಿವೆ. ಬ್ರಿಝಾ ಎಸ್‌ಯುವಿಗಿಂತ ಕೆಲವು ನೂರು ಕಡಿಮೆ ಮಾರಾಟವಾಗುತ್ತಿವೆ.

ಆಗಸ್ಟ್ 1ರಿಂದ ಏರಿಕೆಯಾಗಲಿವೆ ಹ್ಯುಂಡೈ ಕಾರಿನ ಬೆಲೆಗಳು

ಹ್ಯುಂಡೈ ವೆನ್ಯೂ, ಈಗಾಗಲೇ ತನ್ನದೇ ಕಂಪನಿಯ ಎಸ್‍‍ಯು‍‍ವಿಯಾದ ಕ್ರೆಟಾವನ್ನು ಹಿಂದಿಕ್ಕಿದೆ. ಈ ಮೂಲಕ ಎಲೈಟ್ ಐ20 ಪ್ರೀಮಿಯಂ ಹ್ಯಾಚ್‌ಬ್ಯಾಕ್ ನಂತರ ಭಾರತದಲ್ಲಿ ಅತಿ ಹೆಚ್ಚು ಮಾರಾಟವಾದ ಹ್ಯುಂಡೈ ಕಂಪನಿಯ ಎರಡನೇ ವಾಹನವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಆಗಸ್ಟ್ 1ರಿಂದ ಏರಿಕೆಯಾಗಲಿವೆ ಹ್ಯುಂಡೈ ಕಾರಿನ ಬೆಲೆಗಳು

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಹೊಸ ಸುರಕ್ಷತಾ ನಿಯಮಗಳನ್ನು 2019ರ ಅಕ್ಟೋಬರ್1ರಿಂದ ದೇಶದಲ್ಲಿ ಜಾರಿಗೊಳಿಸಲಾಗುತ್ತಿದೆ. ಅದಕ್ಕೆ ಮುಂಚಿತವಾಗಿ, ಹೊಸ ಸುರಕ್ಷತಾ ಮಾನದಂಡಗಳನ್ನು ಅನುಸರಿಸಲು ಹ್ಯುಂಡೈ ತನ್ನ ಎಲ್ಲಾ ಕಾರುಗಳನ್ನು ನವೀಕರಿಸುತ್ತಿದೆ. ಇದರಿಂದ ಹಬ್ಬದ ವೇಳೆಗೆ ಹ್ಯುಂಡೈ ಕಂಪನಿಗೆ ಅನುಕೂಲವಾಗಲಿದೆ. ಹೊಸ ಅಪ್‍‍ಡೇಟ್‍‍ಗಳು ಗ್ರಾಹಕರನ್ನು ಕಂಪನಿಯತ್ತ ಆಕರ್ಷಿಸಲು ಸಹಾಯ ಮಾಡಲಿವೆ.

Article Published On: Wednesday, July 24, 2019, 12:40 [IST]
English summary
Hyundai India To Hike Prices Across Its Entire Range — Will Receive New Safety Regulations Update - Read in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+