ಹೊಸ ವಿನ್ಯಾಸ ಹೊಂದಲಿದೆ 2020ರ ಹ್ಯುಂಡೈ ಸ್ಯಾಂಟ್ರೋ

ದಕ್ಷಿಣ ಕೊರಿಯಾದ ಬ್ರ್ಯಾಂಡ್‍ನ ಜನಪ್ರಿಯ ಹ್ಯಾಚ್‍‍ಬ್ಯಾಕ್‍ಗಳಲ್ಲಿ ಸ್ಯಾಂಟ್ರೋ ಕೂಡ ಒಂದಾಗಿದೆ. ಭಾರತದಲ್ಲಿ ಮೂರನೇ ತಲೆಮಾರಿನ ಸ್ಯಾಂಟ್ರೋ ಕಾರ್ ಅನ್ನು 2018ರಲ್ಲಿ ಬಿಡುಗಡೆಗೊಳಿಸಿದ್ದರು.

ಹೊಸ ವಿನ್ಯಾಸ ಹೊಂದಲಿದೆ 2020ರ ಹ್ಯುಂಡೈ ಸ್ಯಾಂಟ್ರೋ

ಸ್ಯಾಂಟ್ರೋ ಕಾರು ಬಿಡುಗಡೆಯಾದ ಮೊದಲ ತಿಂಗಳಲ್ಲಿ 7,000 ಯುನಿ‍‍ಟ್‍‍ಗಳು ಮಾರಾಟವಾಗಿತ್ತು. ಈ ವರ್ಷದ ಮೇ ತಿಂಗಳಲ್ಲಿ ಹ್ಯುಂಡೈ ಸ್ಯಾಂಟ್ರೋ ಉತ್ತಮವಾಗಿ ಮಾರಾಟವಾಗಿವೆ. ಆದರೆ ಕಳೆದ ಆಗಸ್ಟ್ ತಿಂಗಳಲ್ಲಿ ಕೇವಲ 3,288 ಯುನಿ‍‍ಟ್‍‍ಗಳು ಮಾತ್ರ ಮಾರಾಟವಾಗಿತ್ತು. ಮಾರುತಿ ಸುಜುಕಿ ಕಂಪನಿಯ ವ್ಯಾಗನ್‍ಆರ್ ಕಾರು ಹ್ಯುಂಡೈ ಸ್ಯಾಂಟ್ರೊ ಕಾರಿಗೆ ಉತ್ತಮ ಪೈಪೋಟಿಯನ್ನು ನೀಡುತ್ತಿದೆ.

ಹೊಸ ವಿನ್ಯಾಸ ಹೊಂದಲಿದೆ 2020ರ ಹ್ಯುಂಡೈ ಸ್ಯಾಂಟ್ರೋ

ಈ ವರ್ಷದ ಆಕ್ಟೋಬರ್ ತಿಂಗಳಲ್ಲಿ ಕಂಪನಿಯು ಹ್ಯುಂಡೈ ಸ್ಯಾಂಟ್ರೋ ಅನಿವರ್ಸರಿ ಎಡಿಷನ್‍‍ನನ್ನು ಸ್ಪೋರ್ಟಿ ಬ್ಲ್ಯಾಕ್ ವಿನ್ಯಾಸದಲ್ಲಿ ಕೆಲವು ಬದಲಾವಣೆಗಳೊಂದಿಗೆ ಬಿಡುಗಡೆಗೊಳಿಸಿತು. ಸ್ಪೆಷಲ್ ಎಡಿಷನ್ ಅನ್ನು ಸ್ಪೋಟ್ಸ್ ಮತ್ತು ಸ್ಪೋಟ್ಸ್ ಎಎಂಟಿ ಮಾದರಿ‍ಗಳಲ್ಲಿ ಬಿಡುಗಡೆಗೊಳಿಸಿತ್ತು. ಈ ಕಾರಿನ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.5.16 ಲಕ್ಷ ಮತ್ತು 5.74 ಲಕ್ಷಗಳಾಗಿದೆ.

ಹೊಸ ವಿನ್ಯಾಸ ಹೊಂದಲಿದೆ 2020ರ ಹ್ಯುಂಡೈ ಸ್ಯಾಂಟ್ರೋ

ಪ್ರಸ್ತುತ ಹ್ಯುಂಡೈ ಸ್ಯಾಂಟ್ರೊ ಕಾರಿನ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.4.3 ಲಕ್ಷಗಳಿಂದ ರೂ.5.79 ಲಕ್ಷಗಳಾಗಿದೆ. ಮುಂದಿನ ವರ್ಷದ ಆರಂಭದಲ್ಲಿ ಇದು ಸಣ್ಣ ಫೇಸ್‍‍ಲಿಫ್ಟ್ ಹೊಂದಲಿರುವ ಸಾಧ್ಯತೆಗಳಿದೆ.

ಹೊಸ ವಿನ್ಯಾಸ ಹೊಂದಲಿದೆ 2020ರ ಹ್ಯುಂಡೈ ಸ್ಯಾಂಟ್ರೋ

ಪ್ರಸ್ತುತ ದೇಶಿಯ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಹ್ಯುಂಡೈ ಸ್ಯಾಂಟ್ರೋ ಕಾರು 1.1 ಲೀಟರ್ ನಾಲ್ಕು ಸಿಲಿಂಡರ್ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 5,500 ಆರ್‍‍ಪಿಎಂನಲ್ಲಿ 68 ಬಿ‍‍ಹೆಚ್‍‍ಪಿ ಪವರ್ ಮತ್ತು 4,500 ಆರ್‍‍ಪಿಎಂನಲ್ಲಿ 99 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಹೊಸ ವಿನ್ಯಾಸ ಹೊಂದಲಿದೆ 2020ರ ಹ್ಯುಂಡೈ ಸ್ಯಾಂಟ್ರೋ

ಈ ಎಂಜಿನ್‍‍ನೊಂದಿಗೆ 5 ಸ್ಪೀಡ್ ಸ್ಮಾರ್ಟ್ ಆಟೋ ಎಎಂಟಿಯನ್ನು ಅಳವಡಿಸಲಾಗಿದೆ. ಸಿ‍ಎನ್‍‍ಜಿ ರೂಪಾಂತರವು 5,500 ಆರ್‍‍ಪಿಎಂನಲ್ಲಿ 58 ಬಿ‍‍ಹೆಚ್‍‍ಪಿ ಪವರ್ ಮತ್ತು 4,500 ಆರ್‍‍ಪಿಎಂನಲ್ಲಿ 84 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

MOST READ: ದುಬಾರಿ ಬೆಂಝ್ ಕಾರನ್ನು ಹೆಲಿಕಾಪ್ಟರ್ ಮೂಲಕ ಪುಡಿ ಮಾಡಿದ ಭೂಪ

ಹೊಸ ವಿನ್ಯಾಸ ಹೊಂದಲಿದೆ 2020ರ ಹ್ಯುಂಡೈ ಸ್ಯಾಂಟ್ರೋ

ಹ್ಯುಂಡೈ ಕಾರಿನಲ್ಲಿ 7-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೇನ್‍‍ಮೆಂಟ್ ಸಿಸ್ಟಂ, ಅಂಡ್ರಾಯಿಡ್ ಆಟೋ, ಆ್ಯಪಲ್ ಕಾರ್ ಪ್ಲೇ, ಮಿರರ್‌ ಲಿಂಕ್, ಎಲೆಕ್ಟ್ರಿಕ್ ಅಡ್ಜೆಸ್ಟ್‌ಮೆಂಟ್ ರೇರ್ ವ್ಯೂವ್ ಮಿರರ್, ಮಲ್ಟಿ ಇನ್ಫಾರ್ಮೆಷನ್ ಡಿಸ್‌ಪ್ಲೇ, ರಿಯರ್ ವೈಪರ್ ಮತ್ತು ರಿಯರ್ ಡಿಫಾಗರ್ ಸೌಲಭ್ಯವಿದೆ.

MOST READ: ಕಳ್ಳತನವಾಗಿದ್ದ ಕಾರು ಫಾಸ್ಟ್‌ಟ್ಯಾಗ್‌‍‍ನಿಂದಾಗಿ ವಾಪಸ್ ಸಿಕ್ಕಿದ್ದೆ ಒಂದು ರೋಚಕ

ಹೊಸ ವಿನ್ಯಾಸ ಹೊಂದಲಿದೆ 2020ರ ಹ್ಯುಂಡೈ ಸ್ಯಾಂಟ್ರೋ

ಮಾಲಿನ್ಯವನ್ನು ತಗ್ಗಿಸಲು ಕೇಂದ್ರ ಸರ್ಕಾರವು ಬಿಎಸ್-6 ಮಾಲಿನ್ಯ ನಿಯಮವನ್ನು ಜಾರಿಗೊಳಿಸುತ್ತಿದೆ. ಮುಂದಿನ ವರ್ಷದ ಏಪ್ರಿಲ್ ತಿಂಗಳವರೆಗೆ ಬಿಎಸ್-6 ಮಾಲಿನ್ಯ ನಿಯಮದ ಗಡುವನ್ನು ನೀಡಿದೆ. ಇದರಿಂದಾಗಿ 2020ರ ಹ್ಯುಂಡೈ ಬಿಎಸ್-6 ನಿಯಮಕ್ಕೆ ಅನುಗುಣವಾಗಿ ನವೀಕರಿಸಲಿದೆ.

MOST READ: ನವೆಂಬರ್ ತಿಂಗಳಲ್ಲಿ ಮಾರಾಟವಾದ ರಾಯಲ್ ಎನ್‍‍ಫೀಲ್ಡ್ ಬೈಕ್‍‍ಗಳೆಷ್ಟು ಗೊತ್ತಾ?

ಹೊಸ ವಿನ್ಯಾಸ ಹೊಂದಲಿದೆ 2020ರ ಹ್ಯುಂಡೈ ಸ್ಯಾಂಟ್ರೋ

2020ರ ಹ್ಯುಂಡೈ ಸ್ಯಾಂಟ್ರೋ ಬಿಎಸ್-6 ನವೀಕರಣ ಹೊರತುಪಡಿಸಿ ಇತರ ಬದಲಾವಣೆಗಳು ಯಾವುದು ಮಾಡಲಾಗುವುದಿಲ್ಲ. ಹೊಸ ಕಾರಿನ ಮುಂಭಾಗದಲ್ಲಿ ಮರುವಿನ್ಯಾಸಗೊಳಿಸಲಾದ ಬಂಪರ್ ಮತ್ತು ಗ್ರಿಲ್ ಅನ್ನು ಅಳವಡಿಸಲಿದೆ. ಕಾರಿನ ಇಂಟಿರಿಯರ್‍‍ನಲ್ಲಿ ಹೊಸ ಫೀಚರ್ಸ್‍‍ಗಳನ್ನು ಹೊಂದಬಹುದು.

Most Read Articles

Kannada
English summary
Hyundai Santro Likely To Get Minor Facelift Next Year - Read in Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X