ಲಗ್ಷುರಿ ಫೀಚರ್ಸ್‌ನೊಂದಿಗೆ ಬಿಡುಗಡೆಯಾಗಲಿದೆ ಹ್ಯುಂಡೈ ವೆನ್ಯೂ

ಹ್ಯುಂಡೈ ಸಂಸ್ಥೆಯು ಸಹ ತನ್ನ ಬಹುನೀರಿಕ್ಷಿತ ವೆನ್ಯೂ ಕಂಪ್ಯಾಕ್ಟ್ ಎಸ್‌ಯುವಿ ಕಾರು ಮಾದರಿಯನ್ನು ಮುಂದಿನ ತಿಂಗಳು ಮೇ 17ಕ್ಕೆ ಬಿಡುಗಡೆಗೊಳಿಸುವ ಸುಳಿವು ನೀಡಿದ್ದು, ಕಂಪ್ಯಾಕ್ಟ್ ಎಸ್‌ಯುವಿ ಮಾದರಿಗಳಲ್ಲಿ ಅತಿ ಕಡಿಮೆ ಬೆಲೆಯಲ್ಲಿ ಬಿಡುಗಡೆಯಾಗಲಿರುವ ವೆನ್ಯೂ ಕಾರು ಹಲವು ಲಗ್ಷುರಿ ವೈಶಿಷ್ಟ್ಯತೆಗಳನ್ನು ಹೊತ್ತು ಮಾರುಕಟ್ಟೆ ಪ್ರವೇಶಿಸುತ್ತಿದೆ.

ಲಗ್ಷುರಿ ಫೀಚರ್ಸ್‌ನೊಂದಿಗೆ ಬಿಡುಗಡೆಯಾಗಲಿದೆ ಹ್ಯುಂಡೈ ವೆನ್ಯೂ

ದೇಶಿಯ ಮಾರುಕಟ್ಟೆಯಲ್ಲಿ ಕಂಪ್ಯಾಕ್ಟ್ ಎಸ್‌ಯುವಿ ಕಾರು ಮಾರಾಟವು ಹೊಸ ಸಂಚಲನಕ್ಕೆ ಕಾರಣವಾಗಿದ್ದು, ಈ ಹಿನ್ನೆಲೆ ಹ್ಯುಂಡೈ ಕೂಡಾ ತನ್ನ ತನ್ನ ಕಾರ್ಲಿನೋ ಕಾನೆಪ್ಟ್ ಮಾದರಿಯನ್ನು ವೆನ್ಯೂ ಹೆಸರಿನೊಂದಿಗೆ ಬಿಡುಗಡೆಗಾಗಿ ಸಜ್ಜಾಗಿದೆ. ಇದೇ ತಿಂಗಳು 17ರಂದು ಅಮೆರಿಕದಲ್ಲಿ ನಡೆಯಲಿರುವ ನ್ಯೂಯಾರ್ಕ್ ಆಟೋಮೇಳದಲ್ಲಿ ಅನಾವರಣಗೊಳ್ಳಲಿರುವ ಹೊಸ ಕಾರು ಮುಂದಿನ ತಿಂಗಳು ಮೇ 17ರಂದು ಬಿಡುಗಡೆಯಾಗಲಿದ್ದು, ಹೊಸ ಕಾರಿನಲ್ಲಿ ಅಳವಡಿಸಲಾಗಿರುವ ಕೆಲವು ವಿನೂತನ ತಂತ್ರಜ್ಞಾನ ಸೌಲಭ್ಯಗಳು ಭಾರೀ ಸದ್ದು ಮಾಡುತ್ತಿವೆ.

ಲಗ್ಷುರಿ ಫೀಚರ್ಸ್‌ನೊಂದಿಗೆ ಬಿಡುಗಡೆಯಾಗಲಿದೆ ಹ್ಯುಂಡೈ ವೆನ್ಯೂ

ವೆನ್ಯೂ ಕಾರು ಸದ್ಯ ಮಾರುಕಟ್ಟೆಯಲ್ಲಿ ಮುನ್ನಡೆ ಸಾಧಿಸುತ್ತಿರುವ ಮಹೀಂದ್ರಾ ಎಕ್ಸ್‌ಯುವಿ300 ಮತ್ತು ಮಾರುತಿ ಸುಜುಕಿ ಬ್ರೆಝಾ ಕಾರುಗಳಿಗೆ ಪ್ರಬಲ ಪೈಪೋಟಿ ನೀಡುವ ನಿರೀಕ್ಷೆಯಲ್ಲಿದ್ದು, ಹಲವು ವಿಶೇಷತೆಗಳಿಗಳಿಗೆ ಕಾರಣವಾಗಿರುವ ಹೊಸ ಕಾರು ಮಾರುಕಟ್ಟೆಗೆ ಲಗ್ಗೆಯಿಡುತ್ತಿರುವುದು ಮಧ್ಯಮ ವರ್ಗದ ಕಾರು ಪ್ರಿಯರ ಆಕರ್ಷಣೆಗೆ ಕಾರಣವಾಗಿದೆ.

ಲಗ್ಷುರಿ ಫೀಚರ್ಸ್‌ನೊಂದಿಗೆ ಬಿಡುಗಡೆಯಾಗಲಿದೆ ಹ್ಯುಂಡೈ ವೆನ್ಯೂ

ಹ್ಯುಂಡೈ ಸಂಸ್ಥೆಯು ಕ್ರೆಟಾ ಕಾರಿನ ಮಾರಾಟದಲ್ಲಿ ಯಶಸ್ವಿಯಾದ ನಂತರ ವೆನ್ಯೂ ಕಾರು ಬಿಡುಗಡೆಗಾಗಿ ಯೋಜನೆ ರೂಪಿಸುತ್ತಿದ್ದು, ಕ್ರಾಸ್‍ ಓವರ್ ವಿನ್ಯಾಸ ಹೊಂದಿರುವ ವೆನ್ಯೂ ಕಾರು ಕ್ರೆಟಾ ಮತ್ತು ಕೊನಾ ಕಾರುಗಳ ಮಧ್ಯದ ಕಾರು ಆವೃತ್ತಿಯಾಗಿ ಮಾರಾಟಗೊಳ್ಳಲಿದೆ.

ಲಗ್ಷುರಿ ಫೀಚರ್ಸ್‌ನೊಂದಿಗೆ ಬಿಡುಗಡೆಯಾಗಲಿದೆ ಹ್ಯುಂಡೈ ವೆನ್ಯೂ

ಹೊಸ ವೆನ್ಯೂ ಕಾರು ಉತ್ಪಾದನೆಗಾಗಿ ಈಗಾಗಲೇ ಪ್ರತ್ಯೇಕ ಪ್ಲ್ಯಾಟ್‌ಫಾರ್ಮ್ ಸಿದ್ದಗೊಳಿಸಿರುವ ಹ್ಯುಂಡೈ, ಹೊಸ ಕಾರಿನಲ್ಲಿ ಐಷಾರಾಮಿ ಕಾರುಗಳಲ್ಲಿ ಮಾತ್ರವೇ ಲಭ್ಯವಿರುವ ಬ್ಲ್ಯೂ ಲಿಂಕ್ ಪ್ಯಾಕೆಜ್ ಸೌಲಭ್ಯವನ್ನು ಘೋಷಣೆ ಮಾಡಿರುವುದು ಕಾರು ಮಾರಾಟ ಹೊಸ ಮೈಲಿಗಲ್ಲಿ ಸಾಧಿಸುವ ಮೊದಲ ಸುಳಿವು ನೀಡಿದೆ.

ಲಗ್ಷುರಿ ಫೀಚರ್ಸ್‌ನೊಂದಿಗೆ ಬಿಡುಗಡೆಯಾಗಲಿದೆ ಹ್ಯುಂಡೈ ವೆನ್ಯೂ

ಜಾಗತಿಕ ಮಟ್ಟದಲ್ಲಿ ಕಾರುಗಳ ಕಳ್ಳತನ ತಡೆಯಲು ವಿನೂತನ ತಂತ್ರಜ್ಞಾನಗಳನ್ನು ಪರಿಚಯಿಸಲಾಗಿತ್ತಿದ್ದು, ಇದರಲ್ಲಿ ಬ್ಯೂ ಲಿಂಕ್ ಕೂಡಾ ಸಾಕಷ್ಟು ಸದ್ದು ಮಾಡುತ್ತಿದೆ. ಇದೀಗ ಇದೇ ಸೌಲಭ್ಯವು ಹ್ಯುಂಡೈ ವೆನ್ಯೂ ಕಾರಿನಲ್ಲೂ ನೀಡಲಾಗುತ್ತಿದ್ದು, ಕಾರಿನ ಸುರಕ್ಷತೆಗೆ ಹೆಚ್ಚಿನ ಭದ್ರತೆ ಸಿಗಲಿದೆ.

ಲಗ್ಷುರಿ ಫೀಚರ್ಸ್‌ನೊಂದಿಗೆ ಬಿಡುಗಡೆಯಾಗಲಿದೆ ಹ್ಯುಂಡೈ ವೆನ್ಯೂ

ಬ್ಯೂ ಲಿಂಕ್‌ ಆಪ್ ಮೂಲಕ ಕಾರಿನ ಇನ್ಪೋಟೈನ್‍‌ಮೆಂಟ್ ಸೌಲಭ್ಯವನ್ನು ಸಂಪೂರ್ಣವಾಗಿ ಮೊಬೈಲ್‌ನಲ್ಲಿಯೇ ನಿಯಂತ್ರಿಸಬಹುದಾಗಿದ್ದು, ಥೆಫ್ಟ್ ನೋಟಿಫಿಕೇಷನ್, ಆಟೋ ಕ್ರ್ಯಾಶ್ ನೋಟಿಫಿಕೇಷನ್ ಮತ್ತು ಅಸಿಸ್ಟ್, ರೋಡ್ ಸೈಡ್ ಅಸಿಸ್ಟ್, ಪ್ಯಾನಿಕ್ ನೋಟಿಫಿಕೇಷನ್ ಪಡೆದುಕೊಳ್ಳಬಹುದಾಗಿದೆ.

ಲಗ್ಷುರಿ ಫೀಚರ್ಸ್‌ನೊಂದಿಗೆ ಬಿಡುಗಡೆಯಾಗಲಿದೆ ಹ್ಯುಂಡೈ ವೆನ್ಯೂ

ಸುರಕ್ಷತೆ, ಭದ್ರತೆ, ರಿಮೋಟ್, ವಾಹನ ತಾಂತ್ರಿಕ ನಿರ್ವಹಣೆ (VRM), ಸ್ಥಳ ಆಧಾರಿತ ಸೇವೆಗಳು (LBS),ಅಲರ್ಟ್ ಸರ್ವೀಸ್ ಮತ್ತು ಸರ್ವರ್ ಧ್ವನಿ ಗುರುತಿಸುವಿಕೆ ಎಂಬ ಪ್ರಮುಖ ವಿಭಾಗಗಳಲ್ಲಿ ಬ್ಯೂ ಲಿಂಕ್ ಕಾರು ಮಾಲೀಕರಿಗೆ ಸೇವೆಗಳನ್ನು ನೀಡಲಿದ್ದು, ಯಾವುದೇ ಕ್ಷಣದಲ್ಲಾದರೂ ನಿಮ್ಮ ಕಾರಿಗೆ ಸಂಪೂರ್ಣ ಸುರಕ್ಷತೆ ನೀಡಬಲ್ಲದು.

MOST READ: ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಖರೀದಿಸಿದ ಬೆಂಝ್ ದುಬಾರಿ ಕಾರಿನ ವಿಶೇಷತೆ ಏನು ಗೊತ್ತಾ?

ಲಗ್ಷುರಿ ಫೀಚರ್ಸ್‌ನೊಂದಿಗೆ ಬಿಡುಗಡೆಯಾಗಲಿದೆ ಹ್ಯುಂಡೈ ವೆನ್ಯೂ

ಮತ್ತೊಂದು ಪ್ರಮುಖ ವಿಚಾರ ಅಂದ್ರೆ ವೆನ್ಯೂ ಕಾರಿನ ನೀಡಲಾಗಿರುವ ಜಿಯೋ ಫೆನ್ಸ್ ಸೌಲಭ್ಯವು ನಿಮ್ಮ ಕಾರಿಗೆ ಎಷ್ಟು ಭದ್ರತೆ ನೀಡಲಿದೆ ಅಂದ್ರೆ, ನೀವು ಒಂದು ನೀರ್ದಿಷ್ಟ ಪ್ರದೇಶವನ್ನು ಬ್ಯೂ ಲಿಂಕ್ ಮೂಲಕ ಗುರುತು ಮಾಡಿಟ್ಟಲ್ಲಿ ಆ ಪ್ರದೇಶವನ್ನು ದಾಟಿ ನಿಮ್ಮ ಕಾರು ಹೊರಹೊದಲ್ಲಿ ನಿಮ್ಮನ್ನ ತಕ್ಷಣವೇ ಎಚ್ಚರಿಸುತ್ತೆ.

ಲಗ್ಷುರಿ ಫೀಚರ್ಸ್‌ನೊಂದಿಗೆ ಬಿಡುಗಡೆಯಾಗಲಿದೆ ಹ್ಯುಂಡೈ ವೆನ್ಯೂ

ಜೊತೆಗೆ ರಿಯರ್ ಟೈಮ್ ವೆಹಿಕಲ್ ಟ್ರ್ಯಾಕಿಂಗ್ ಮೂಲಕ ಕಳ್ಳತನವಾದ ಕಾರನ್ನು ಕೆಲವೇ ನಿಮಿಷಗಳಲ್ಲಿ ಪತ್ತೆ ಮಾಡಬಹುದಾಗಿದೆ. ಹಾಗೆಯೇ ರಿಮೋಟ್ ಮೂಲಕವೇ ಎಂಜಿನ್ ಸ್ಟಾರ್ಟ್/ಸ್ಟಾಪ್, ಲಾಕ್/ಅನ್‌ಲಾಕ್, ಹಾರ್ನ್ ಮತ್ತು ಲೈಟ್ ಕಂಟ್ರೋಲ್, ಫೈಂಡ್ ಮೈ ಕಾರ್ ಲೋಕೇಷನ್, ಶೇರ್ ಮೈ ಕಾರ್ ಮತ್ತು ರಿಯರ್ ಟೈಮ್ ಮೂಲಕ ಟ್ರಾಫಿಕ್ ಇನ್‌ಫಾರ್ಮೆಷನ್ ಪಡೆದುಕೊಳ್ಳಬಹುದಾದ ಸೌಲಭ್ಯ ಈ ಕಾರಿನಲ್ಲಿದೆ.

MOST READ: ಅಪಘಾತದಲ್ಲಿ ಹ್ಯಾರಿಯರ್ ಕಾರು ಪುಡಿಪುಡಿಯಾದ್ರು ಪ್ರಯಾಣಿಕರಿಗೆ ಏನೂ ಆಗಲಿಲ್ಲ..!

ಲಗ್ಷುರಿ ಫೀಚರ್ಸ್‌ನೊಂದಿಗೆ ಬಿಡುಗಡೆಯಾಗಲಿದೆ ಹ್ಯುಂಡೈ ವೆನ್ಯೂ

ವೆನ್ಯೂ ಕಾರುಗಳು ಒಟ್ಟು ಮೂರು ಎಂಜಿನ್ ಆಯ್ಕೆಯೊಂದಿಗೆ ಖರೀದಿಗೆ ಲಭ್ಯವಾಗುತ್ತಿದ್ದು, ಪೆಟ್ರೋಲ್ ಎಂಜಿನ್‌ನಲ್ಲಿ 1.0 ಲೀಟರ್ ತ್ರಿ ಸಿಲಿಂಡರ್ ಎಂಜಿನ್ ಮತ್ತು 1.4 ಲೀಟರ್ ಎಂಜಿನ್ ಹೊಂದಿರಲಿದೆ. ಹಾಗೆಯೇ 1.4-ಲೀಟರ್ ಡೀಸೆಲ್ ಎಂಜಿನ್ ಆಯ್ಕೆಯನ್ನು ಸಹ ಹೊಂದಿರಲಿದೆ.

ಲಗ್ಷುರಿ ಫೀಚರ್ಸ್‌ನೊಂದಿಗೆ ಬಿಡುಗಡೆಯಾಗಲಿದೆ ಹ್ಯುಂಡೈ ವೆನ್ಯೂ

ಇನ್ನು ಹೊಸ ಕಾರಿನಲ್ಲಿ ಎಲ್‌ಇಡಿ ಹೆಡ್‌ಲ್ಯಾಂಪ್, ಎಲ್ಇಡಿ ಟೈಲ್ ಲೈಟ್, 6 ಸ್ಪೀಡ್ ಡ್ಯುಯಲ್ ಕ್ಲಚ್ ಗೇರ್‌ಬಾಕ್ಸ್, ಆಲ್ ವೀಲ್ಹ್ ಡಿಸ್ಕ್ ಬ್ರೇಕ್, ಎಬಿಎಸ್, 4 ಏರ್‌ಬ್ಯಾಗ್, ಸನ್‌ರೂಫ್, ಡ್ಯುಯಲ್ ಟೋನ್ ಬಾಡಿ ಕಲರ್, ಡ್ಯುಯಲ್ ಟೋನ್ ಇಂಟಿರಿಯರ್, ರಿಯರ್ ವ್ಯೂ ಕ್ಯಾಮೆರಾ, ಪಾರ್ಕಿಂಗ್ ಸೆನ್ಸಾರ್, ಸ್ಮಾರ್ಟ್ ಕೆನೆಕ್ಟಿವಿಟಿ ಮತ್ತು ಲಾರ್ಜ್ ಟಚ್‌ಸ್ಕ್ರೀನ್ ಡಿಸ್‌ಪ್ಲೇಯೊಂದಿಗೆ ಹಲವು ಮಾದರಿಯ ಪ್ರೀಮಿಯಂ ಸೌಲಭ್ಯಗಳನ್ನು ಪಡೆದುಕೊಂಡಿರಲಿದೆ.

ಲಗ್ಷುರಿ ಫೀಚರ್ಸ್‌ನೊಂದಿಗೆ ಬಿಡುಗಡೆಯಾಗಲಿದೆ ಹ್ಯುಂಡೈ ವೆನ್ಯೂ

ಕಾರಿನ ಬೆಲೆಗಳು(ಅಂದಾಜು)

ಹೊಸ ವೆನ್ಯೂ ಕಾರು ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಒಟ್ಟು ಆರು ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿರಲಿದ್ದು, ಹೊಸ ಕಾರಿನ ಬೆಲೆಯು ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 7.40 ಲಕ್ಷದಿಂದ ಟಾಪ್ ಎಂಡ್ ಮಾದರಿಗೆ ರೂ.11 ಲಕ್ಷ ಇರಬಹುದೆಂದು ಅಂದಾಜಿಸಲಾಗಿದೆ.

Most Read Articles

Kannada
English summary
Hyundai Venue Blue Link Connected Car Technology Suite Revealed. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X