ವೆನ್ಯೂ ಹೆಸರಿನಲ್ಲಿ ಬಿಡುಗಡೆಯಾಗಲಿದೆ ಹ್ಯುಂಡೈ ಕಂಪ್ಯಾಕ್ಟ್ ಎಸ್‌ಯುವಿ..!
ಕಂಪ್ಯಾಕ್ಟ್ ಎಸ್ಯುವಿ ಕಾರು ಮಾರಾಟ ವಿಭಾಗದಲ್ಲಿ ಮಾರುತಿ ಸುಜುಕಿ ಬ್ರೆಝಾ, ಮಹೀಂದ್ರಾ ಎಕ್ಸ್‌ಯುವಿ300, ನಿಸ್ಸಾನ್ ಕಿಕ್ಸ್ ಸೇರಿದಂತೆ ಹಲವು ಹೊಸ ಕಾರುಗಳಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಹ್ಯುಂಡೈ ಸಂಸ್ಥೆಯು ಸಹ ತನ್ನ ಬಹುನೀರಿಕ್ಷಿತ ಕಾರ್ಲಿನೋ ಕಾನ್ಸೆಪ್ಟ್ ಕಂಪ್ಯಾಕ್ಟ್ ಎಸ್‌ಯುವಿ ಕಾರನ್ನು ಮುಂದಿನ ತಿಂಗಳು 17ರಂದು ಅನಾವರಣಗೊಳಿಸಲು ಸಜ್ಜಾಗುತ್ತಿದೆ.

ಕಾರ್ಲಿನೋ ಕಾನ್ಸೆಪ್ಟ್ ಕಾರು ಈಗಾಗಲೇ ಎಂಜಿನ್ ಕಾರ್ಯಕ್ಷಮತೆಯನ್ನು ಕುರಿತು ಸ್ಪಾಟ್ ಟೆಸ್ಟಿಂಗ್ ನಡೆಸುವಾಗ ಹಲವು ಬಾರಿ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದು, ಹ್ಯುಂಡೈ ಬಿಡುಗಡೆ ಮಾಡಲಾಗಿರುವ ಹೊಸ ಕಾರಿನ ಅಧಿಕೃತ ಹೆಸರು ವೆನ್ಯೂ ಎಂದು ಹೇಳಲಾಗುತ್ತಿದೆ. ಜೊತೆಗೆ ಟೀಸರ್‌ನಲ್ಲಿ ಹೊಸ ಕಾರು ಡ್ಯುಯಲ್ ಟೋನ್ ಬಣ್ಣ ಮತ್ತು ಸನ್‍ರೂಫ್ ಹೊಂದಿರುವುದು ಗ್ರಾಹಕರಲ್ಲಿ ಮತ್ತಷ್ಟು ಕುತೂಹಲ ಹುಟ್ಟುಹಾಕಿದ್ದು, ಮಹೀಂದ್ರಾ ಎಕ್ಸ್‌ಯುವಿ300 ಮತ್ತು ಮಾರುತಿ ಸುಜುಕಿ ಬ್ರೆಝಾ ಕಾರಿನ ಪ್ರಬಲ ಪೈಪೋಟಿ ನೀಡುವ ನಿರೀಕ್ಷೆಯಲ್ಲಿದೆ.

ಹ್ಯುಂಡೈ ಸಂಸ್ಥೆಯು ಕ್ರೆಟಾ ಕಾರಿನ ಮಾರಾಟದಲ್ಲಿ ಯಶಸ್ವಿಯಾದ ನಂತರ ಕಾರ್ಲಿನೋ ಕಾನ್ಸೆಪ್ಟ್(ವೆನ್ಯೂ) ಕಾರುಗಳ ಬಿಡುಗಡೆಗಾಗಿ ಯೋಜನೆ ರೂಪಿಸುತ್ತಿದ್ದು, ಹಲವು ವಿಶೇಷತೆಗಳಿಗಳಿಗೆ ಕಾರಣವಾಗಿರುವ ಹೊಸ ಕಾರು ಮಾರುಕಟ್ಟೆಗೆ ಲಗ್ಗೆಯಿಡುತ್ತಿರುವುದು ಮಧ್ಯಮ ವರ್ಗದ ಕಾರು ಪ್ರಿಯರನ್ನು ಸೆಳೆಯುವ ತವಕದಲ್ಲಿದೆ.

ಹ್ಯುಂಡೈ ಹೊಸ ಕಂಪ್ಯಾಕ್ಟ್ ಎಸ್ಯುವಿ ಕಾರು ಅರ್ಬನ್ ಕಮ್ಯೂಟರ್ ವಿಭಾಗಕ್ಕಾಗಿಯೇ ವಿಶೇಷವಾಗಿ ವಿನ್ಯಾಸ ಮಾಡಲಾಗಿದ್ದು, ಕ್ರಾಸ್ ಓವರ್ ವಿನ್ಯಾಸದೊಂದಿಗೆ ಕ್ರೆಟಾ ಮತ್ತು ಕೊನಾ ಕಾರುಗಳ ಮಧ್ಯದ ಕಾರು ಮಾದರಿಯಾಗಿ ಮಾರಾಟಗೊಳ್ಳಲಿದೆ.

ಹೊಸ ವೆನ್ಯೂ ಕಾರು ಉತ್ಪಾದನೆಗಾಗಿಯೇ ಈಗಾಗಲೇ ಪ್ರತ್ಯೇಕವಾದ ಪ್ಲ್ಯಾಟ್‍ಫಾರ್ಮ್ ಅನ್ನೇ ಸಿದ್ದಪಡಿಸಲಾಗಿದ್ದು, ಈ ಮೂಲಕ ಭಾರೀ ಪ್ರಮಾಣದ ಬೇಡಿಕೆ ಪಡೆದುಕೊಳ್ಳುವ ವಿಶ್ವಾಸದಲ್ಲಿರುವ ಈ ಹೊಸ ಕಾರು ಮಾರುತಿ ಸುಜುಕಿ ಬ್ರೆಝಾ, ಮಹೀಂದ್ರಾ ಎಕ್ಸ್‌ಯುವಿ300, ಟಾಟಾ ನೆಕ್ಸಾನ್ ಮತ್ತು ಫೋರ್ಡ್ ಇಕೊಸ್ಪೋರ್ಟ್ ಕಾರಿಗಳಿಗೆ ನೇರ ಪ್ರತಿಸ್ಪರ್ಧಿಸಲಾಗಲಿದೆ.

ಪ್ರಸ್ತುತ ಮಾಹಿತಿಗಳ ಪ್ರಕಾರ, ಈ ಹೊಸ ಕಾರು ಇದೇ ತಿಂಗಳು ಅಥವಾ ಏಪ್ರಿಲ್ ಆರಂಭದಲ್ಲಿ ಯುಎಸ್ಎ ಮಾರುಕಟ್ಟೆಯಲ್ಲಿ ಮೊದಲು ಬಿಡುಗಡೆಗೊಳ್ಳಲಿದ್ದು, ತದನಂತರವಷ್ಟೇ ಭಾರತ ಸೇರಿದಂತೆ ಪ್ರಮುಖ ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲೂ ಇದು ಬಿಡುಗಡೆಗೊಳ್ಳಲಿದೆಯೆಂತೆ.
ಕಂಪ್ಯಾಕ್ಟ್ ಎಸ್‍ಯುವಿ ವಿನ್ಯಾಸ ಆಧಾರಿತ ಕಾರ್ಲಿನೊ ಪರಿಕಲ್ಪನೆಯ ಕಾರನ್ನು ಮೊದಲು ಹ್ಯುಂಡೈ ಸಂಸ್ಥೆಯು 2016ರ ದೆಹಲಿ ಆಟೋ ಎಕ್ಸ್ ಪೋ ಮೇಳದಲ್ಲಿ ಪ್ರದರ್ಶನ ಮಾಡಿತ್ತು. ಆದ್ರೆ ಕಾರಣಾಂತರಗಳಿಂದ ಹೊಸ ಕಾರಿನ ಉತ್ಪಾದನಾ ಪ್ರಕ್ರಿಯೆಯನ್ನು ಮೂಂದೂಡಿಕೆ ಮಾಡುತ್ತಾ ಬಂದಿದ್ದ ಹ್ಯುಂಡೈ ಇದೀಗ ವೆನ್ಯೂ ಹೆಸರಿನೊಂದಿಗೆ ಬಿಡುಗಡೆ ಮಾಡುವ ಇರಾದೆಯಲ್ಲಿದೆ.
MOST READ: ನಂಬರ್ ಪ್ಲೇಟ್‌ನಲ್ಲೂ 'ಚೌಕಿದಾರ್'- ಬಿಜೆಪಿ ಎಂಎಲ್ಎ ಕಾರಿಗೆ ಬಿತ್ತು ದಂಡ..!

ಇನ್ನು ವೆನ್ಯೂ ಕಾರುಗಳಲ್ಲಿ ಮೂರು ಎಂಜಿನ್ ಆಯ್ಕೆಗಳಲ್ಲಿದ್ದು, ಪೆಟ್ರೋಲ್ ಎಂಜಿನ್‌ನಲ್ಲಿ 1.0 ಲೀಟರ್ ತ್ರಿ ಸಿಲಿಂಡರ್ ಎಂಜಿನ್ ಮತ್ತು 1.4 ಲೀಟರ್ ಎಂಜಿನ್ ಹೊಂದಿರಲಿದೆ. ಹಾಗೆಯೇ 1.4-ಲೀಟರ್ ಡೀಸೆಲ್ ಎಂಜಿನ್ ಆಯ್ಕೆಯನ್ನು ಸಹ ಹೊಂದಿರಲಿದೆ.

1.4-ಲೀಟರ್ ಪೆಟ್ರೋಲ್ ಎಂಜಿನ್ ಮಾದರಿಯು ಸದ್ಯ ಮಾರುಕಟ್ಟೆಯಲ್ಲಿರುವ ವೆರ್ನಾ ಸೆಡಾನ್ ಮಾದರಿಯಿಂದ ಎರವಲು ಪಡೆಯಲಾಗಿದ್ದು, ಎಲ್‌ಇಡಿ ಹೆಡ್‌ಲ್ಯಾಂಪ್, ಎಲ್ಇಡಿ ಟೈಲ್ ಲೈಟ್, 7 ಸ್ಪೀಡ್ ಡ್ಯುಯಲ್ ಕ್ಲಚ್ ಗೇರ್‌ಬಾಕ್ಸ್, ಆಲ್ ವೀಲ್ಹ್ ಡಿಸ್ಕ್ ಬ್ರೇಕ್, ಎಬಿಎಸ್, 4 ಏರ್‌ಬ್ಯಾಗ್ ಮತ್ತು ಲಾರ್ಜ್ ಟಚ್‌ಸ್ಕ್ರೀನ್ ಡಿಸ್‌ಪ್ಲೇಯೊಂದಿಗೆ ಹಲವು ಮಾದರಿಯ ಪ್ರೀಮಿಯಂ ಸೌಲಭ್ಯಗಳನ್ನು ಪಡೆದುಕೊಂಡಿರಲಿದೆ.
MOST READ: ಅಪಘಾತದಲ್ಲಿ ಹ್ಯಾರಿಯರ್ ಕಾರು ಪುಡಿಪುಡಿಯಾದ್ರು ಪ್ರಯಾಣಿಕರಿಗೆ ಏನೂ ಆಗಲಿಲ್ಲ..!

ಬಿಡುಗಡೆಯ ಅವಧಿ ಮತ್ತು ಕಾರಿನ ಬೆಲೆಗಳು(ಅಂದಾಜು)
ಮುಂದಿನ ತಿಂಗಳು 17ರಂದು ಅನಾವರಣಗೊಳ್ಳಲಿರುವ ಹೊಸ ಕಾರು ಮೇ ಅಥವಾ ಜೂನ್ ಆರಂಭದಲ್ಲಿ ಬಿಡುಗಡೆಯಾಗಲಿದ್ದು, ಕಾರಿನ ಬೆಲೆಯು ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 8 ಲಕ್ಷದಿಂದ ಟಾಪ್ ಎಂಡ್ ಮಾದರಿಗೆ ರೂ.12 ಲಕ್ಷ ಇರಬಹುದೆಂದು ಅಂದಾಜಿಸಲಾಗಿದೆ.


Click it and Unblock the Notifications