ನಂಬರ್ ಪ್ಲೇಟ್‌ನಲ್ಲೂ 'ಚೌಕಿದಾರ್'- ಬಿಜೆಪಿ ಎಂಎಲ್ಎ ಕಾರಿಗೆ ಬಿತ್ತು ದಂಡ..!

ಇತ್ತೀಚೆಗೆ ದೇಶಾದ್ಯಂತ ಅತಿ ಹೆಚ್ಚು ಟ್ರೆಂಡ್ ಹುಟ್ಟುಹಾಕಿರುವ ಮೈ ಭಿ ಚೌಕಿದಾರ್ ಪದ ಬಳಕೆಯು ಎಷ್ಟರ ಮಟ್ಟಿಗೆ ಸದ್ದು ಮಾಡಿದೆ ಅಂದ್ರೆ ಪ್ರಧಾನಿ ಮೋದಿಯವರನ್ನು ಬೆಂಬಲಿಸುವ ಬಹುತೇಕರು ತಮ್ಮ ಹೆಸರಿನ ಮುಂದೆ ಚೌಕಿದಾರ್ ಎಂದು ಬಳಕೆ ಮಾಡುತ್ತಿರುವುದು ಒಂದು ದೊಡ್ಡ ದಾಖಲೆಯನ್ನೇ ಸೃಷ್ಠಿಸಿದೆ. ಆದ್ರೆ ಇಲ್ಲೊಬ್ಬ ಬಿಜೆಪಿ ಎಂಎಲ್ಎ ಚೌಕಿದಾರ್ ಪದವನ್ನು ತನ್ನ ಹೆಸರಿಗೆ ಜೋಡಣೆ ಮಾಡಿಕೊಳ್ಳುವುದಷ್ಟೇ ಅಲ್ಲದೇ ಕಾರಿನ ನಂಬರ್ ಪ್ಲೇಟ್‌ನಲ್ಲೂ ಚೌಕಿದಾರ್ ಎಂದು ಬರೆಯಿಸಿಕೊಳ್ಳುವ ಮೂಲಕ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಹಸಿರು ಬಣ್ಣದಿಂದ ಕೂಡಿರುವ ವಾಹನಗಳ ನಂಬರ್‌ಪ್ಲೇಟ್‌ಗಳನ್ನು ವಶಕ್ಕೆ ಪಡೆದು ದಂಡವಿಧಿಸುತ್ತಿರುವ ಟ್ರಾಫಿಕ್ ಪೊಲೀಸರು, ಚೌಕಿದಾರ್ ಎಂದು ದೊಡ್ಡದಾದ ನಂಬರ್ ಪ್ಲೇಟ್ ಹಾಕಿಸಿಕೊಂಡಿದ್ದ ಬಿಜೆಪಿ ಶಾಸಕನಿಗೆ ಶಾಕ್ ಕೊಟ್ಟಿದ್ದಾರೆ.

ನಂಬರ್ ಪ್ಲೇಟ್‌ನಲ್ಲೂ 'ಚೌಕಿದಾರ್'- ಬಿಜೆಪಿ ಎಂಎಲ್ಎ ಕಾರಿಗೆ ಬಿತ್ತು ದಂಡ..!

ಚುನಾವಣೆಯ ಆಯೋಗದ ಪ್ರಕಾರ, ಕೆಲವು ಸರ್ಕಾರಿ ಅಧಿಕಾರಿಗಳು, ರಾಷ್ಟ್ರಪತಿ, ಪ್ರಧಾನಮಂತ್ರಿ, ಮುಖ್ಯಮಂತ್ರಿ, ರಾಜ್ಯಪಾಲರನ್ನು ಹೊರತುಪಡಿಸಿ ಇನ್ಯಾವುದೇ ಜನಪ್ರತಿನಿಧಿಗಳಾಗಲಿ ಅಥವಾ ಸಂಘ-ಸಂಸ್ಥೆಗಳಾಗಲಿ ತಾವು ಪ್ರತಿನಿಧಿಸುವ ಹುದ್ದೆಯ ಕುರಿತಾದ ಮಾಹಿತಿಯುಳ್ಳ ನಂಬರ್ ಪ್ಲೇಟ್‌ಗಳನ್ನು ಬಳಕೆ ಮಾಡುವಂತಿಲ್ಲ ಎಂದು ಸ್ಪಪ್ಟಪಡಿಸಿದೆ.

ನಂಬರ್ ಪ್ಲೇಟ್‌ನಲ್ಲೂ 'ಚೌಕಿದಾರ್'- ಬಿಜೆಪಿ ಎಂಎಲ್ಎ ಕಾರಿಗೆ ಬಿತ್ತು ದಂಡ..!

ಹೀಗಿದ್ದರೂ ಕೂಡಾ ಕೆಲವು ಜನಪ್ರತಿನಿಧಿಗಳು ಚುನಾವಣಾ ಆಯೋಗದ ಸೂಚನೆಗೆ ವಿರುದ್ದವಾಗಿ ನಂಬರ್ ಪ್ಲೇಟ್‌ಗಳನ್ನು ಬಳಕೆ ಮಾಡುತ್ತಿದ್ದು, ಚೌಕಿದಾರ್ ಎಂದು ನಮೂದಿಸಿದ್ದ ಬಿಜೆಪಿ ಶಾಸಕನನ್ನು ತಡೆದ ಪೊಲೀಸರು ದಂಡ ವಸೂಲಿ ಮಾಡಿರುವುದಲ್ಲದೆ ಚೌಕಿದಾರ್ ನಂಬರ್ ಪ್ಲೇಟ್‌ ಅನ್ನು ಸ್ಥಳದಲ್ಲೇ ಕಿತ್ತುಹಾಕಿದ್ದಾರೆ.

ನಂಬರ್ ಪ್ಲೇಟ್‌ನಲ್ಲೂ 'ಚೌಕಿದಾರ್'- ಬಿಜೆಪಿ ಎಂಎಲ್ಎ ಕಾರಿಗೆ ಬಿತ್ತು ದಂಡ..!

ಮಧ್ಯಪ್ರದೇಶದ ಕಾಂಡ್ವಾದಲ್ಲಿ ಈ ಘಟನೆ ನಡೆದಿದ್ದು, ಘಟನೆಯ ಕುರಿತಂತೆ ಸ್ಪಷ್ಟನೆ ನೀಡಿರುವ ಕಾಂಡ್ವಾ ಎಸ್‌ಪಿ ಸಿದ್ದಾರ್ಥ ಬಹುಗುಣ್ ಅವರು, ಬಿಜೆಪಿ ಶಾಸಕರಾದ ರಾಮ್ ದಂಗೊರೆ ಅವರ ಕಾರಿನ ನಂಬರ್ ಪ್ಲೇಟ್ ಸಾರಿಗೆ ನಿಯಮಗಳಿಗೆ ವಿರುದ್ದವಾಗಿರುವುದರಿಂದ ಮೋಟಾರ್ ಕಾಯ್ದೆಯ ಕಲಂ 51ರ ಅಡಿ ಕ್ರಮಜರಗಿಸಲಾಗಿದೆ ಎಂದಿದ್ದಾರೆ.

ನಂಬರ್ ಪ್ಲೇಟ್‌ನಲ್ಲೂ 'ಚೌಕಿದಾರ್'- ಬಿಜೆಪಿ ಎಂಎಲ್ಎ ಕಾರಿಗೆ ಬಿತ್ತು ದಂಡ..!

ಆದ್ರೆ ಘಟನೆ ಕುರಿತಂತೆ ತಗಾದೆ ತೆಗೆದಿರುವ ಬಿಜೆಪಿ ಶಾಸಕ ರಾಮ್ ಅವರು, ತಮ್ಮ ಮಹೀಂದ್ರಾ ಟಿಯುವಿ300 ಕಾರು ನಿಯಮಗಳಿಗೆ ಅನುಗುಣವಾಗಿಯೇ ನಂಬರ್ ಪ್ಲೇಟ್ ಹೊಂದಿದೆ. ಹೀಗಿದ್ದರೂ ಕೂಡಾ ಟ್ರಾಫಿಕ್ ಪೊಲೀಸರು ನನ್ನ ಕಾರಿನ ಮೇಲೆ ಪ್ರಕರಣ ದಾಖಲಿಸಿ ಚಲನ್ ನೀಡಿದ್ದಾರೆ ಎಂದಿದ್ದಾರೆ.

MOST READ: ಇನ್ಮುಂದೆ ಹೀಗೆಲ್ಲಾ ಮಾಡಿದ್ರೆ ನಿಮ್ಮ ವಾಹನ ನೋಂದಣಿ ರದ್ದಾಗುತ್ತೆ..!

ನಂಬರ್ ಪ್ಲೇಟ್‌ನಲ್ಲೂ 'ಚೌಕಿದಾರ್'- ಬಿಜೆಪಿ ಎಂಎಲ್ಎ ಕಾರಿಗೆ ಬಿತ್ತು ದಂಡ..!

ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಿಯಲ್ಲಿರುವುದರಿಂದ ಪೊಲೀಸ್ ಇಲಾಖೆಯು ಇದೀಗ ಸರ್ಕಾರದ ಒತ್ತಡ ಮೇರೆಗೆ ಬಿಜೆಪಿ ನಾಯಕರ ವಿರುದ್ದ ಸುಳ್ಳು ಕೇಸ್‌ಗಳನ್ನು ದಾಖಲಿಸುತ್ತಿದ್ದು, ಚೌಕಿದಾರ್ ಹೆಸರು ಬಳಕೆ ಮಾಡಿರುವುದರ ವಿರುದ್ಧ ಕೈಗೊಳ್ಳಲಾದ ಕ್ರಮದ ಬಗ್ಗೆ ಕೋರ್ಟ್ ಮೊರೆ ಹೋಗುವುದಾಗಿ ಹೇಳಿದ್ದಾರೆ.

ನಂಬರ್ ಪ್ಲೇಟ್‌ನಲ್ಲೂ 'ಚೌಕಿದಾರ್'- ಬಿಜೆಪಿ ಎಂಎಲ್ಎ ಕಾರಿಗೆ ಬಿತ್ತು ದಂಡ..!

ಇದಷ್ಟೇ ಅಲ್ಲದೇ ಮಧ್ಯಪ್ರದೇಶದ ಇಂಧೋರ್‌ನಲ್ಲೂ ಸಹ ಟ್ರಾಫಿಕ್ ಪೊಲೀಸರು ತಮ್ಮ ಕಾರ್ಯಾಚರಣೆ ವೇಳೆ ಕಾಂಗ್ರೆಸ್ ನಾಯಕರೊಬ್ಬರ ಮಿಟ್ಸುಬಿಷಿ ಪೆಜೆರೋ ಕಾರಿನ ನಂಬರ್ ಪ್ಲೇಟ್ ಅನ್ನು ತೆರವುಗೊಳಿಸಿದ್ದು, ಡಿಸಿಗ್ನೇಶನ್ ಪ್ಲೇಟ್ ಕಿತ್ತುಹಾಕಿ ದಂಡ ವಿಧಿಸಿದ್ದರು.

MOST READ: ರಾಂಗ್ ಸೈಡ್‌ನಲ್ಲಿ ಬಂದ ಕಾರು ಚಾಲಕನಿಗೆ ಬೆವರಿಳಿಸಿದ ಬೈಕ್ ರೈಡರ್..!

ನಂಬರ್ ಪ್ಲೇಟ್‌ನಲ್ಲೂ 'ಚೌಕಿದಾರ್'- ಬಿಜೆಪಿ ಎಂಎಲ್ಎ ಕಾರಿಗೆ ಬಿತ್ತು ದಂಡ..!

ಹೀಗಾಗಿ ಮುಂದಿನ 15 ದಿನಗಳ ಒಳಗಾಗಿ ಬೆಂಗಳೂರು ಸೇರಿಂದಂತೆ ದೇಶಾದ್ಯಂತ ಟ್ರಾಫಿಕ್ ಪೊಲೀಸರಿಂದ ವಿಶೇಷ ಕಾರ್ಯಾಚರಣೆಯು ಆರಂಭವಾಗಲಿದ್ದು, ರಾಜಕೀಯ ಪಕ್ಷಗಳು ಮತ್ತು ಚಿಹ್ನೆಗಳನ್ನು ಪ್ರತಿನಿಧಿಸುವ ಕಾರುಗಳಿಗೆ ಸಂಕಷ್ಟ ತಪ್ಪಿದ್ದಲ್ಲ ಎನ್ನಬಹುದು.

Source:hindustantimes

More from DriveSpark

Article Published On: Thursday, March 28, 2019, 17:05 [IST]
English summary
BJP legislator puts plate saying ‘chowkidar’ on car in Cong-ruled MP, fined. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+