ಇನ್ಮುಂದೆ ಹೀಗೆಲ್ಲಾ ಮಾಡಿದ್ರೆ ನಿಮ್ಮ ವಾಹನ ನೋಂದಣಿ ರದ್ದಾಗುತ್ತೆ..!

ದೇಶಾದ್ಯಂತ ದಿನಂಪ್ರತಿ ಸಾವಿರಾರು ಹೊಸ ವಾಹನಗಳು ರಸ್ತೆಗಿಳಿಯುತ್ತಿದ್ದು, ಅಷ್ಟೇ ಪ್ರಮಾಣದಲ್ಲಿ ಸಂಚಾರಿ ನಿಯಮಗಳ ಉಲ್ಲಂಘನೆ ಪ್ರಕರಣಗಳು ಕೂಡಾ ಹೆಚ್ಚುತ್ತಲೇ ಇವೆ. ಅದರಲ್ಲೂ ಸರಿಯಾದ ಸಮಯಕ್ಕೆ ವಾಹನ ವಿಮೆ ಪಾವತಿಯಲ್ಲಿ ಮಾಡುವ ವಿಳಂಬದಿಂದಾಗಿ ಸಾಕಷ್ಟು ಸಮಸ್ಯೆಗಳಾಗುತ್ತಿದ್ದು, ಇನ್ಮುಂದೆ ಹೀಗೆಲ್ಲಾ ಮಾಡಿದ್ರೆ ನಿಮ್ಮ ವಾಹನ ನೋಂದಣಿ ರದ್ದಾಗುವುದು ಖಚಿತ.

ಇನ್ಮುಂದೆ ಹೀಗೆಲ್ಲಾ ಮಾಡಿದ್ರೆ ನಿಮ್ಮ ವಾಹನ ನೋಂದಣಿ ರದ್ದಾಗುತ್ತೆ..!

ಹೌದು, ಭಾರತೀಯ ಮೋಟಾರು ವಾಹನ ಕಾಯ್ದೆ 1988 ಪ್ರಕಾರ ಎಲ್ಲಾ ವಾಹನಗಳ ಮಾಲಿಕರು ಕೂಡಾ ಥರ್ಡ್ ವಿಮೆಯನ್ನು ಮಾಡಿಸಲೇಬೇಕು. ಇದು ಅಪಘಾತ ಸಂದರ್ಭದಲ್ಲಿ ವ್ಯಕ್ತಿಯ ಸುರಕ್ಷತೆಗೆ ಹಾಗೂ ಹಾನಿಯಾದ ವಾಹನಕ್ಕೆ ಪರಿಹಾರ ಒದಗಿಸುವುದು ನೇರವಾಗಲಿದ್ದು, ಬಹುತೇಕ ವಾಹನ ಸವಾರರು ಸರಿಯಾದ ಸಮಯಕ್ಕೆ ವಿಮೆ ಪಾವತಿಸದಿರುವುದು ಹಲವು ಸಮಸ್ಯೆಗಳಿಗೆ ಕಾರಣವಾಗುತ್ತಿದೆ.

ಇನ್ಮುಂದೆ ಹೀಗೆಲ್ಲಾ ಮಾಡಿದ್ರೆ ನಿಮ್ಮ ವಾಹನ ನೋಂದಣಿ ರದ್ದಾಗುತ್ತೆ..!

ಇದರಿಂದ ಮಹತ್ವದ ನಿರ್ಧಾರಕ್ಕೆ ಬಂದಿರುವ ಮಧ್ಯಪ್ರದೇಶ ಸರ್ಕಾರವು ವಿಮಾ ಅವಧಿ ಮುಗಿದರೂ ರಸ್ತೆಯಲ್ಲಿ ರಾಜಾರೋಷವಾಗಿ ಸಂಚರಿಸುವ ವಾಹನ ಮಾಲೀಕರಿಗೆ ಶಾಕಿಂಗ್ ಸುದ್ದಿ ನೀಡಿದ್ದು, ನಿಗದಿತ ಅವಧಿಯಲ್ಲಿ ವಿಮೆ ಹೊಂದಿರದ ವಾಹನಗಳ ನೋಂದಣಿಯನ್ನು ರದ್ದುಗೊಳಿಸುವ ನಿರ್ಧಾರಕ್ಕೆ ಬರಲಾಗಿದೆ.

ಇನ್ಮುಂದೆ ಹೀಗೆಲ್ಲಾ ಮಾಡಿದ್ರೆ ನಿಮ್ಮ ವಾಹನ ನೋಂದಣಿ ರದ್ದಾಗುತ್ತೆ..!

ಸದ್ಯ ಹೊಸ ವಾಹನಗಳಿಗೆ ಕೇಂದ್ರ ಸಾರಿಗೆ ಇಲಾಖೆಯು ಕಾರುಗಳಿಗೆ ಮೂರು ವರ್ಷದ ವಿಮೆ ಮತ್ತು ದ್ವಿಚಕ್ರ ವಾಹನಗಳಿಗೆ ಐದು ವರ್ಷದ ವಿಮೆಯನ್ನು ಕಡ್ಡಾಯಗೊಳಿಸಿದ್ದು, ವಿಮೆ ಮೊತ್ತಗಳು ದುಬಾರಿಯಾಗಿರುವುದರಿಂದ ಕೆಲವು ವಾಹನ ಮಾಲೀಕರು ಪೊಲೀಸರ ಕಣ್ಣುತಪ್ಪಿಸಿ ವಾಹನ ಚಾಲನೆ ಮಾಡುತ್ತಿದ್ದಾರೆ.

ಇನ್ಮುಂದೆ ಹೀಗೆಲ್ಲಾ ಮಾಡಿದ್ರೆ ನಿಮ್ಮ ವಾಹನ ನೋಂದಣಿ ರದ್ದಾಗುತ್ತೆ..!

ಹೀಗಾಗಿ ಮಧ್ಯಪ್ರದೇಶ ಸರ್ಕಾರವು ಥರ್ಡ್ ಪಾರ್ಟಿ ವಿಮೆಯನ್ನು ಸರಿಯಾದ ಸಮಯಕ್ಕೆ ಪಾವತಿ ಮಾಡದ ವಾಹನಗಳ ನೋಂದಣಿಯನ್ನು ರದ್ದುಗೊಳಿಸುತ್ತಿದ್ದು, ಮುಂಬರುವ ದಿನಗಳಲ್ಲಿ ನಮ್ಮ ರಾಜ್ಯದಲ್ಲೂ ಇಂತಹ ಕಠಿಣ ನಿಯಮಗಳು ಜಾರಿಗೆ ಬರಬಹುದಾದ ಸಾಧ್ಯತೆಗಳಿವೆ.

ಇನ್ಮುಂದೆ ಹೀಗೆಲ್ಲಾ ಮಾಡಿದ್ರೆ ನಿಮ್ಮ ವಾಹನ ನೋಂದಣಿ ರದ್ದಾಗುತ್ತೆ..!

ಹಾಗಾದ್ರೆ ಮೋಟಾರು ವಿಮೆ ಎಂದರೇನು?

ಮೋಟಾರು ವಿಮೆ ಎಂಬುದು ವಾಹನ ವಿಮೆ, ಜಿಎಪಿ ವಿಮೆ, ಕಾರು ವಿಮೆ ಎಂಬ ಹೆಸರಿನಿಂದಲೂ ಕರೆಯಲಾಗುತ್ತದೆ. ಇದು ಪ್ರಮುಖವಾಗಿಯೂ ಕಾರು, ಟ್ರಕ್, ಮೋಟಾರ್ ಸೈಕಲ್ ಅಥವಾ ಇತರ ರಸ್ತೆ ಅಪಘಾತಗಳಿಗೆ ಸುರಕ್ಷತೆಯನ್ನು ಒದಗಿಸುತ್ತದೆ.

ಇನ್ಮುಂದೆ ಹೀಗೆಲ್ಲಾ ಮಾಡಿದ್ರೆ ನಿಮ್ಮ ವಾಹನ ನೋಂದಣಿ ರದ್ದಾಗುತ್ತೆ..!

ವಾಹನ ಅಪಘಾತ ಸಂಭವಿಸಿದಂತಹ ಪರಿಸ್ಥಿತಿಯಲ್ಲಿ ದೈಹಿಕವಾದ ಗಾಯ ಅಥವಾ ವಾಹನಗಳಿಗೆ ಹಾನಿಯಂಟಾದ ಸಂದರ್ಭದಲ್ಲಿ ಹಣಕಾಸಿನ ರಕ್ಷಣೆ ಒದಗಿಸುವುದು ಇದರ ಪ್ರಾಥಮಿಕ ಉದ್ದೇಶವಾಗಿದ್ದು, ವಾಹನ ವಿಮೆ ನೆರವಿನಿಂದ ವಾಹನಗಳಿಗೆ ಹಾನಿ ಸಂಭವಿಸಿದ್ದಲ್ಲಿ ಅದರ ದುರಸ್ತಿಗೆ ಸಂಭವಿಸಬಹುದಾದ ವೆಚ್ಚವನ್ನು ಹಾಗೆಯೇ ವ್ಯಕ್ತಿಯ ಚಿಕಿತ್ಸೆಗೆ ಬೇಕಾಗಿರುವ ಆರ್ಥಿಕ ರಕ್ಷಣೆಯನ್ನು ಒದಗಿಸುತ್ತದೆ.

ಇನ್ಮುಂದೆ ಹೀಗೆಲ್ಲಾ ಮಾಡಿದ್ರೆ ನಿಮ್ಮ ವಾಹನ ನೋಂದಣಿ ರದ್ದಾಗುತ್ತೆ..!

ಮೋಟಾರು ವಿಮೆಯ ಅಗತ್ಯವೇನು?

ಭಾರತೀಯ ಮೋಟಾರು ವಾಹನ ಕಾಯ್ದೆ 1988 ಪ್ರಕಾರ ಎಲ್ಲ ವಾಹನಗಳ ಮಾಲಿಕರು ಕಾರು ವಿಮೆ ಮಾಡಿಸತಕ್ಕದ್ದು. ಒಂದು ವೇಳೆ ಅಪಘಾತ ಸಂದರ್ಭದಲ್ಲಿ ವ್ಯಕ್ತಿಯ ಸುರಕ್ಷತೆ ಹಾಗೂ ಪರಿಹಾರ ಒದಗಿಸುವುದು ಮುಖ್ಯ. ಬಹುಶಃ ನಿಮ್ಮ ವಾಹನ ನೀವು ಖರೀದಿಸುವ ವಸ್ತುಗಳಲ್ಲಿ ಅತ್ಯಂತ ದುಬಾರಿಯಾಗಿರಬಹುದು. ವಿಮೆಯು ಈ ಸ್ವತ್ತಿಗೆ ರಕ್ಷಣೆ ಒದಗಿಸುವುದಲ್ಲದೆ ಅಪಘಾತ, ಹಾನಿ ಅಥವಾ ಕಳ್ಳತನ ಸಂಭವಿಸಿದ ಸಂದರ್ಭದಲ್ಲಿ ಆರ್ಥಿಕ ನಷ್ಟವನ್ನು ನಿಭಾಯಿಸಲು ಸಹಕಾರಿಯಾಗುತ್ತದೆ.

MOST READ: ಬೇರೆಯವರ ಕೈಗೆ ನಿಮ್ಮ ವಾಹನಗಳನ್ನು ನೀಡುವುದಕ್ಕೂ ಮುನ್ನ ಹತ್ತು ಬಾರಿ ಯೋಚಿಸಿ..!

ಇನ್ಮುಂದೆ ಹೀಗೆಲ್ಲಾ ಮಾಡಿದ್ರೆ ನಿಮ್ಮ ವಾಹನ ನೋಂದಣಿ ರದ್ದಾಗುತ್ತೆ..!

ಮತ್ತೊಂದು ಕಾರಣವೆಂದರೆ ಚಾಲನೆ ಮಾಡುವಾಗ, ಈ ಕೆಳಕಂಡವರ ಸುರಕ್ಷತೆ ನೋಡುವುದು ಸಹ ನಿಮ್ಮ ಜವಾಬ್ದಾರಿಯಾಗಿರುತ್ತದೆ.

*ಸಹ ಪ್ರಯಾಣಿಕರು

*ನಿಮ್ಮ ಸಹ ಚಾಲಕರು

*ಇತರ ಜನರ ಆಸ್ತಿ

*ಪಾದಚಾರಿಗಳು,

*ಸ್ವತ: ನೀವೇ

ಇನ್ಮುಂದೆ ಹೀಗೆಲ್ಲಾ ಮಾಡಿದ್ರೆ ನಿಮ್ಮ ವಾಹನ ನೋಂದಣಿ ರದ್ದಾಗುತ್ತೆ..!

ಮೂರನೇ ವ್ಯಕ್ತಿ ವಿಮೆಯು ಕೆಳಗಿನ ನಷ್ಟಗಳನ್ನು ಒಳಗೊಳ್ಳುತ್ತದೆ.!

ನಿಮ್ಮ ವಿಮಾ ವಾಹನದಿಂದಾಗಿ ಮೂರನೇ ವ್ಯಕ್ತಿಗೆ ಯಾವುದೇ ಶಾಶ್ವತ ಗಾಯ ಅಥವಾ ಮರಣ ಸಂಭವಿಸಿದ್ದಲ್ಲಿ ಹಾಗೆಯೇ ನಿಮ್ಮ ವಿಮಾ ವಾಹನದಿಂದಾಗಿ ಯಾವುದೇ ಹಾನಿ ಸಂಭವಿಸಿದ್ದಲ್ಲಿ (ವಾಹನ ಹೊರತುಪಡಿಸಿ) ಇದು ರಕ್ಷಣೆಯನ್ನು ಒದಗಿಸುತ್ತದೆ. ಈ ಪಾಲಿಸಿಯಲ್ಲಿ ವಿಮೆಯೂ ಮೂರನೇ ವ್ಯಕ್ತಿಯ ಆಸ್ತಿಯ ಯಾವುದೇ ನಷ್ಟ ಸಂಭವಿಸಿದ್ದಲ್ಲಿ ಹಣಕಾಸು ಪರಿಹಾರ ಒದಗಿಸುತ್ತದೆ.

MOST READ: ಮಾಡಿಫೈ ಬೈಕ್ ಸವಾರರಿಗೆ ಭಿಕ್ಷುಕರ ವೇಷದಲ್ಲಿ ಬಂದು ಶಾಕ್ ಕೊಟ್ಟ ಪೊಲೀಸರು..

ಇನ್ಮುಂದೆ ಹೀಗೆಲ್ಲಾ ಮಾಡಿದ್ರೆ ನಿಮ್ಮ ವಾಹನ ನೋಂದಣಿ ರದ್ದಾಗುತ್ತೆ..!

ಸಮಗ್ರ ಮೋಟಾರ್ ವಿಮಾ ನೀತಿ ಎಂದರೇನು?

ಸಮಗ್ರ ವಾಹನ ವಿಮೆಯು ಮೂರನೇ ವ್ಯಕ್ತಿ ಪಾಲಿಸಿಗಿಂತ ತುಂಬಾ ವಿಭಿನ್ನವಾಗಿದ್ದು, ವಾಹನಕ್ಕಾಗುವ ಎಲ್ಲ ನಷ್ಟವನ್ನು ಭರಿಸುತ್ತದೆ. ಇದರಂತೆ ಪಾಲಿಸಿ ಆಧಾರದಲ್ಲಿ ನಷ್ಟ ಪರಿಹಾರ ದೊರಕುತ್ತದೆ. ಇದರಲ್ಲಿ ಥರ್ಡ್ ಪಾರ್ಟಿ ಜತೆಗೆ ಬೆಂಕಿ, ಅಪಘಾತ, ಕಳವು, ಪ್ರವಾಹ, ಭೂಕಂಪ, ಗಲಭೆ ಇತ್ಯಾದಿ ಅನಿಷ್ಟಗಳಿಂದಾಗಿ ವಾಹನಕ್ಕಾಗುವ ನಷ್ಟಗಳ ಜತೆಗೆ ಸಹ ಪ್ರಯಾಣಿಕ ಸೇರಿದಂತೆ ಮಾಲಿಕರಿಗಾಗುವ ನಷ್ಟವನ್ನು ಭರಿಸುತ್ತದೆ.

Most Read Articles

Kannada
English summary
Renew Your Vehicle Insurance Before Expiry Or You May Lose Registration. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X