ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಹ್ಯುಂಡೈ ಎಕ್ಸೆಂಟ್ ಸಿಎನ್‍ಜಿ

ಕೊರಿಯಾ ಮೂಲದ ಕಾರು ತಯಾರಕ ಕಂಪನಿಯಾದ ಹ್ಯುಂಡೈ ತನ್ನ ಎಕ್ಸೆಂಟ್ ಕಾಂಪ್ಯಾಕ್ಟ್ ಸೆಡಾನ್‍‍ನ ಸಿಎನ್‍‍ಜಿ ಆವೃತ್ತಿಯನ್ನು ಬಿಡುಗಡೆಗೊಳಿಸಲಿದೆ. ಶೀಘ್ರದಲ್ಲೇ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿರುವ ಎಕ್ಸೆಂಟ್ ಸಿಎನ್‍‍ಜಿ ಮಾಹಿತಿಗಳು ಬಹಿರಂಗವಾಗಿವೆ.

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಹ್ಯುಂಡೈ ಎಕ್ಸೆಂಟ್ ಸಿಎನ್‍ಜಿ

ಹ್ಯುಂಡೈ ಎಕ್ಸೆಂಟ್ ಸಿಎನ್‍‍ಜಿ ಮಾದರಿಯ ಕೆಲವು ಪ್ರಮುಖ ಮಾಹಿತಿಗಳನ್ನು ರಶ್ಲೇನ್ ಬಹಿರಂಗಪಡಿಸಿದೆ. ಹ್ಯುಂಡೈ ಎಕ್ಸೆಂಟ್ ಪ್ರಸ್ತುತ ದೇಶಿಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಗಳಲ್ಲಿ ಮಾತ್ರ ಮಾರಾಟವಾಗುತ್ತಿದೆ.

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಹ್ಯುಂಡೈ ಎಕ್ಸೆಂಟ್ ಸಿಎನ್‍ಜಿ

ಹೊಸ ಎಕ್ಸೆಂಟ್ ಕಾಂಪ್ಯಾಕ್ಟ್ ಎಸ್‍‍ಯುವಿಯ ಎಸ್ ರೂಪಾಂತರದಲ್ಲಿ ಮಾತ್ರ ಸಿಎ‍‍ನ್‍ಜಿ ಆವೃತ್ತಿಯನ್ನು ಮಾರಾಟ ಮಾಡಲಾಗುವುದು. ದೇಶದ ಖಾಸಗಿ ಮಾಲೀಕರು ಮತ್ತು ಟ್ಯಾಕ್ಸಿ ಆಪರೇ‍‍ಟರ್‍‍ಗಳಿಗೆ ಮಾರಾಟ ಮಾಡಲಾಗುವುದು. ಹೊಸ ಎಕ್ಸೆಂಟ್ ಸಿ‍ಎನ್‍‍ಜಿ ಆವೃತ್ತಿಯಲ್ಲಿ ಬಿಎಸ್-6, 1.2 ಲೀಟರ್ ಕಪ್ಪಾ ಎಂಜಿನ್ ಅನ್ನು ಹೊಂದಿದೆ. ಹ್ಯುಂಡೈ ಕಂಪನಿಯು ಬಿಡುಗಡೆಗೊಳಿಸಲಿರುವ ಎಕ್ಸೆಂಟ್ ಸಿಎನ್‍‍ಜಿ ಆವೃತ್ತಿಯು ಬಿಎಸ್-4 ಪೆಟ್ರೋಲ್ ಎಂಜಿನ್ ಆಗಿರಲಿದೆ.

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಹ್ಯುಂಡೈ ಎಕ್ಸೆಂಟ್ ಸಿಎನ್‍ಜಿ

ಬಿಎಸ್-4 ಪೆಟ್ರೋಲ್ 1.2 ಲೀಟರ್ ಎಂಜಿನ್ 6,000 ಆರ್‍‍ಪಿಎಂನಲ್ಲಿ 81 ಬಿ‍‍ಹೆಚ್‍‍ಪಿ ಪವರ್ ಉತ್ಪಾದಿಸಿದರೆ, ಸಿಎನ್‍ಜಿ 5600 ಆರ್‍‍ಪಿಎಂನಲ್ಲಿ ಕೇವಲ 66 ಬಿ‍‍ಹೆಚ್‍ಪಿ ಪವರ್ ಉತ್ಪಾದಿಸುತ್ತದೆ. ಸಿಎನ್‍ಜಿ ಎಂಜಿನ್‍‍ನೊಂದಿಗೆ 5 ಸ್ಪೀಡ್ ಮ್ಯಾನುವಲ್ ಗೇರ್‍‍ಬಾಕ್ಸ್ ಅನ್ನು ಅಳವಡಿಸಲಾಗಿದೆ.

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಹ್ಯುಂಡೈ ಎಕ್ಸೆಂಟ್ ಸಿಎನ್‍ಜಿ

ಹ್ಯುಂಡೈ ಎಕ್ಸೆಂಟ್ ಸಿ‍ಎನ್‍‍ಜಿ ಆವೃತ್ತಿಯಲ್ಲಿ ಬ್ಲೂಟೂತ್ ಕನೆಕ್ಟಿವಿಟಿ, ಟಿಲ್ಟ್ ಸ್ಟೀಯರಿಂಗ್, ರೇರ್ ಎಸಿ ವೆಂಟ್ಸ್, ಯುಎಸ್‍ಬಿಯೊಂದಿಗೆ 2 ಡಿಐಎನ್ ಆಡಿಯೋ ಸಿಸ್ಟಂ ಮತ್ತು ಸ್ಟೀಯರಿಂಗ್ ಮೌಂಟಡ್ ಕಂಟ್ರೋಲ್‍ ರೀತಿಯ ಫೀಚರ್ಸ್‍‍ಗಳನ್ನು ಹೊಂದಿದೆ.

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಹ್ಯುಂಡೈ ಎಕ್ಸೆಂಟ್ ಸಿಎನ್‍ಜಿ

ಹ್ಯುಂಡೈ ಎಕ್ಸೆಂಟ್ ಸಿಎನ್‍ಜಿ ಆವೃತ್ತಿಯಲ್ಲಿ ಸುರಕ್ಷತೆಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲಾಗಿದೆ. ಸುರಕ್ಷತೆಗಾಗಿ ಏರ್‍‍ಬ್ಯಾಗ್, ಸೆಂಟ್ರಲ್ ಲಾಕ್, ರೇರ್ ಪಾರ್ಕಿಂಗ್ ಸೆನ್ಸಾರ್, ಪ್ಯಾಸೆಂಜರ್ ಮತ್ತು ಡ್ರೈವರ್ ಸೀಟ್ ಬೆಲ್ಟ್ ರಿಮೈಂಡರ್ ಮತ್ತು ಸ್ಪೀಡ್ ಸಿಸ್ಟಂ ಅನ್ನು ಹೊಂದಿದೆ. ಸ್ಟ್ಯಾಂಡರ್ಡ್ ಎಬಿಎಸ್ ಮತ್ತು ಇಬಿ‍ಡಿ ಅನ್ನು ನೀಡಲಾಗಿದೆ.

MOST READ: ಬೈಕ್ ಚಲಾಯಿಸಿದ್ದು ಮಗ, ದಂಡ ಬಿದ್ದಿದ್ದು ಅಪ್ಪನಿಗೆ..!

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಹ್ಯುಂಡೈ ಎಕ್ಸೆಂಟ್ ಸಿಎನ್‍ಜಿ

ಹ್ಯುಂಡೈ ಐ10 ನಿಯೋಸ್ ಮಾದರಿಯ ಹೊಸ ಜನರೇಷನ್ ಎಕ್ಸೆಂಟ್ ಕಾಂಪ್ಯಾಕ್ಟ್ ಸೆಡಾನ್ ಅನ್ನು ಸ್ಪಾಟ್ ಟೆಸ್ಟ್ ನಡೆಸಲಾಗಿದೆ. ಮುಂದಿನ ವರ್ಷದ ಫೆಬ್ರವರಿ ತಿಂಗಳಿನಲ್ಲಿ ನಡೆಯುವ 2020ರ ಆಟೋ ಎಕ್ಸ್ ಪೋದಲ್ಲಿ ಈ ಕಾರ್ ಅನ್ನು ಅನಾವರಣಗೊಳಿಸಲಾಗುವುದು. ಹೊಸ ಜನರೇಷನ್ ಹ್ಯುಂಡೈ ಐ10 ಅನ್ನು ನಿಯೋಸ್ ಎಂದು, ಹೊಸ ಜನರೇಷನ್ ಎಕ್ಸೆಂಟ್ ಅನ್ನು ಹುಂಡೈ ಎಕ್ಸೆಂಟ್ ಒರಾ ಎಂದು ಹೆಸರು ಬದಲಿಸಿದೆ.

MOST READ: ಬೈಕ್ ಸವಾರನ ಪ್ರಾಣ ಉಳಿಸಿದ ಆಪಲ್ ವಾಚ್..!

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಹ್ಯುಂಡೈ ಎಕ್ಸೆಂಟ್ ಸಿಎನ್‍ಜಿ

ಹೊಸ ಎಕ್ಸೆಂಟ್ ಸಿಎನ್‍ಜಿ ಮಾದರಿಯಲ್ಲಿ ಹೊಸ ಐ10 ನಿಯೋಸ್ ಮಾದರಿಯ ಬೂಮರಾಂಗ್ ಆಕಾರದ ಎಲ್‍ಇಡಿ ಡಿಆರ್‍ಎಲ್, ಫ್ರಂಟ್ ಗ್ರಿಲ್, ಕ್ರೋಮ್ ಡೋರ್ ಹ್ಯಾಂಡಲ್, ಎಲ್‍ಇಡಿಗಳೊಂದಿಗೆ ಸಿ ಆಕಾರದ ಟೇಲ್ ಲ್ಯಾಂಪ್‍ಗಳನ್ನು ಹೊಂದಿರಲಿದೆ. ಹೊಸ ಕಾರಿನಲ್ಲಿ 15 ಇಂಚಿನ ಅಲಾಯ್ ವ್ಹೀಲ್, ಡ್ಯುಯಲ್ ಟೋನ್ ಬಣ್ಣಗಳ ಆಯ್ಕೆ, ಒಆ‍ರ್‍‍ವಿಎಂ ಜೊತೆಗೆ ಟರ್ನ್ ಇಂಡಿಕೇಟರ್‍‍ಗಳನ್ನು ಹೊಂದಿರಲಿದೆ.

MOST READ: ವಾಹನ ಸವಾರರಿಗೆ ಸಿಹಿ ಸುದ್ದಿ ನೀಡಿದ ಸಚಿವ ನಿತಿನ್ ಗಡ್ಕರಿ ..!

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಹ್ಯುಂಡೈ ಎಕ್ಸೆಂಟ್ ಸಿಎನ್‍ಜಿ

ಹೊಸ ಎಕ್ಸೆಂಟ್ ಸಿಎನ್‍‍ಜಿ ಶೀಘ್ರದಲ್ಲಿ ಬಿಡುಗಡೆಯಾಗುವ ನಿರೀಕ್ಷೆಗಳಿದೆ. ಹ್ಯುಂಡೈ ಎಕ್ಸೆಂಟ್ ಎಸ್ ಪೆಟ್ರೋಲ್ ಆವೃತ್ತಿಯ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.6.47 ಲಕ್ಷಗಳಾಗಿದೆ. ಎಕ್ಸೆಂಟ್ ಸಿ‍ಎನ್‍ಜಿ ರೂಪಾಂತರದ ಬೆಲೆಯು 6.87 ಲಕ್ಷಗಳಾಗಿರಬಹುದು ಎಂಬ ನಿರೀಕ್ಷೆಗಳಿದೆ. ಹ್ಯುಂಡೈ ಎಕ್ಸೆಂಟ್ ಸಿಎನ್‍‍ಜಿ ಬಿಡುಗಡೆಯಾದ ಬಳಿಕ ಮಾರುತಿ ಸುಜುಕಿ ಡಿಜೈರ್ ಮತ್ತು ಟಾಟಾ ಝೆಸ್ಟ್ ಕಾರುಗಳಿಗೆ ಪೈಪೋಟಿಯನ್ನು ನೀಡಲಿದೆ.

Article Published On: Wednesday, November 20, 2019, 12:23 [IST]
English summary
Hyundai Xcent CNG 1.2 liter petrol launch soon – Specs leak - Read in Kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+