ಹ್ಯಾಂಡ್ ಬ್ರೇಕ್‍‍ಗಳ ಬಗ್ಗೆ ನಿಮಗೆಷ್ಟು ಗೊತ್ತು?

ಹಲವಾರು ಸಂದರ್ಭಗಳಲ್ಲಿ ಚಾಲಕನಿಲ್ಲದೇ ಮುಂದೆ ಚಲಿಸಿದ ವಾಹನ, ಚಾಲಕನಿಲ್ಲದ ವಾಹನದಿಂದ ಅಪಘಾತ ಎಂಬ ಸುದ್ದಿಗಳನ್ನು ಕೇಳುತ್ತಲೇ ಇರುತ್ತೇವೆ. ಚಾಲಕನಿಲ್ಲದ ಸ್ಕೂಲ್ ವ್ಯಾನ್ ಚಲಿಸಿ ಮೂವರು ವಿದ್ಯಾರ್ಥಿಗಳು ಗಾಯಗೊಂಡಿರುವ ಘಟನೆ ಬೆಂಗಳೂರಿನಲ್ಲಿ ನಿನ್ನೆಯಷ್ಟೇ ನಡೆದಿದೆ.

ಹ್ಯಾಂಡ್ ಬ್ರೇಕ್‍‍ಗಳ ಬಗ್ಗೆ ನಿಮಗೆಷ್ಟು ಗೊತ್ತು?

ಈ ಘಟನೆ ಬೆಂಗಳೂರಿನ ಹೊಸಕೆರೆಹಳ್ಳಿಯ ಸೀತಾ ಸರ್ಕಲ್‍‍ನಲ್ಲಿ ನಿನ್ನೆ ಬೆಳಗ್ಗೆ ನಡೆದಿದೆ. ಸಂಚಾರಿ ಪೊಲೀಸರ ಪ್ರಕಾರ ಕೆ‍ಎ 05 ಎ‍‍ಡಿ 5411 ನಂಬರಿನ ಸ್ಕೂಲ್ ವ್ಯಾನ್ ಲಿಟಲ್ ಏಂಜೆಲ್ಸ್ ಇಂಗ್ಲೀಷ್ ಸ್ಕೂಲಿಗೆ ಸೇರಿದೆ. ಈ ಸ್ಕೂಲಿನ ಮೂವರು ವಿದ್ಯಾರ್ಥಿಗಳು ಈ ಘಟನೆಯಲ್ಲಿ ಗಾಯಗೊಂಡಿದ್ದಾರೆ.

ಹ್ಯಾಂಡ್ ಬ್ರೇಕ್‍‍ಗಳ ಬಗ್ಗೆ ನಿಮಗೆಷ್ಟು ಗೊತ್ತು?

ವ್ಯಾನ್‍ ಚಾಲಕ ವ್ಯಾನ್‍‍ನಿಂದ ಹೊರಗೆ ಹೋಗುವಾಗ ಹ್ಯಾಂಡ್ ಬ್ರೇಕ್ ಹಾಕದೇ ಇರುವುದೇ ಈ ಘಟನೆಗೆ ಮುಖ್ಯ ಕಾರಣವೆಂದು ತಿಳಿದು ಬಂದಿದೆ. ಚಾಲಕನು ಇಳಿಜಾರಾದ ರಸ್ತೆಯಲ್ಲಿ ವ್ಯಾನ್ ಅನ್ನು ಪಾರ್ಕಿಂಗ್ ಮಾಡಿ, ಶಾಲಾ ಆವರಣದೊಳಗೆ ಹೋಗಿದ್ದಾನೆ.

ಹ್ಯಾಂಡ್ ಬ್ರೇಕ್‍‍ಗಳ ಬಗ್ಗೆ ನಿಮಗೆಷ್ಟು ಗೊತ್ತು?

ಆತ ವ್ಯಾನ್ ನಿಲ್ಲಿಸಿ ಒಳ ಹೋದ ಕೆಲವೇ ನಿಮಿಷಗಳಲ್ಲಿ ಈ ವ್ಯಾನ್ ನಿಧಾನಕ್ಕೆ ಚಲಿಸಲು ಆರಂಭಿಸಿದೆ. ಸ್ಥಳದಲ್ಲಿದ್ದ ಇಬ್ಬರು 7 ವರ್ಷ ವಯಸ್ಸಿನ ಬಾಲಕರಿಗೆ ಹಾಗೂ 8 ವರ್ಷದ ಬಾಲಕಿಗೆ ಗುದ್ದಿದೆ. ಈ ಮೂವರಿಗೂ ಗುದ್ದಿದ ನಂತರ ವ್ಯಾನ್ ನಿಂತಿದೆ ಎಂದು ತಿಳಿದು ಬಂದಿದೆ. ಹ್ಯಾಂಡ್ ಬ್ರೇಕ್ ಹಾಕದೇ ಇದ್ದರೆ ವಾಹನಗಳೇಕೆ ಮುಂದೆ ಚಲಿಸುತ್ತವೆ ಎಂದು ಈ ಲೇಖನದಲ್ಲಿ ನೋಡೋಣ.

ಹ್ಯಾಂಡ್ ಬ್ರೇಕ್‍‍ಗಳ ಬಗ್ಗೆ ನಿಮಗೆಷ್ಟು ಗೊತ್ತು?

ಹ್ಯಾಂಡ್ ಬ್ರೇಕ್‍‍ಗಳ ಬಗ್ಗೆ

ಪಾರ್ಕಿಂಗ್‍ ಬ್ರೇಕ್‍‍ಗಳನ್ನು ಸಾಮಾನ್ಯವಾಗಿ ಹ್ಯಾಂಡ್ ಬ್ರೇಕ್ ಅಥವಾ ಎಮರ್ಜೆನ್ಸಿ ಬ್ರೇಕ್ ಎಂದು ಕರೆಯಲಾಗುತ್ತದೆ. ಈ ಬ್ರೇಕ್‍‍ಗಳನ್ನು ಹಾಕಿ ವಾಹನಗಳನ್ನು ನಿಲ್ಲಿಸಿದರೆ, ವಾಹನಗಳು ಮುಂದೆ ಚಲಿಸದೇ ಚಲನರಹಿತವಾಗಿರುತ್ತವೆ.

ಹ್ಯಾಂಡ್ ಬ್ರೇಕ್‍‍ಗಳ ಬಗ್ಗೆ ನಿಮಗೆಷ್ಟು ಗೊತ್ತು?

ಮೊದಲು ಮುಖ್ಯವಾದ ಬ್ರೇಕ್‍‍ಗಳು ವಿಫಲವಾದ ಸಂದರ್ಭಗಳಲ್ಲಿ, ಈ ಬ್ರೇಕ್‍‍ಗಳ ಸಹಾಯದಿಂದ ವಾಹನಗಳನ್ನು ನಿಲ್ಲಿಸಲಾಗುತ್ತಿತ್ತು. ಪಾರ್ಕಿಂಗ್ ಬ್ರೇಕ್‌ಗಳು ಸಾಮಾನ್ಯವಾಗಿ ಎರಡು ಚಕ್ರಗಳ ಬ್ರೇಕ್‌ಗಳಿಗೆ ಸಂಪರ್ಕ ಹೊಂದಿದ ಕೇಬಲ್ ಅನ್ನು ಹೊಂದಿರುತ್ತವೆ.

MOST READ: ಬೈಕ್ ಸವಾರನ ಪ್ರಾಣ ಉಳಿಸಿದ ಆಪಲ್ ವಾಚ್..!

ಹ್ಯಾಂಡ್ ಬ್ರೇಕ್‍‍ಗಳ ಬಗ್ಗೆ ನಿಮಗೆಷ್ಟು ಗೊತ್ತು?

ಈ ಬ್ರೇಕ್ ಅನ್ನು ಪುಲ್ಲಿಂಗ್ ಮೆಕಾನಿಸಂ ಆಗಿ ಸಂಪರ್ಕಿಸಲಾಗುತ್ತದೆ. ಅನೇಕ ಕಾರುಗಳಲ್ಲಿ ಪಾರ್ಕಿಂಗ್ ಬ್ರೇಕ್‍‍ಗಳು ಹಿಂಬದಿಯ ವ್ಹೀಲ್‍‍ಗಳಲ್ಲಿ ಕಾರ್ಯನಿರ್ವಹಿಸುತ್ತವೆ. ಇದರಿಂದಾಗಿ ಬ್ರೇಕ್ ಹಾಕುವಾಗ ಟ್ರಾಕ್ಷನ್ ಅಥವಾ ಎಳೆಯುವಿಕೆ ಕಡಿಮೆಯಾಗುತ್ತದೆ.

MOST READ: ವಾಹನ ಸವಾರರಿಗೆ ಸಿಹಿ ಸುದ್ದಿ ನೀಡಿದ ಸಚಿವ ನಿತಿನ್ ಗಡ್ಕರಿ ..!

ಹ್ಯಾಂಡ್ ಬ್ರೇಕ್‍‍ಗಳ ಬಗ್ಗೆ ನಿಮಗೆಷ್ಟು ಗೊತ್ತು?

ಸಾಮಾನ್ಯವಾಗಿ ಪಾರ್ಕಿಂಗ್ ಬ್ರೇಕ್‍‍ಗಳು ಕೈಯಿಂದ ಆಪರೇಟ್ ಮಾಡಬಹುದಾದ ಲೀವರ್ ಹೊಂದಿರುತ್ತವೆ. ಈ ಮೊದಲು ಪಾರ್ಕಿಂಗ್ ಬ್ರೇಕ್‍‍ಗಳು ಪೆಡಲ್‍‍ಗಳ ರೀತಿಯಲ್ಲಿದ್ದವು. ಈ ಹ್ಯಾಂಡ್ ಬ್ರೇಕ್‍‍ಗಳನ್ನು ಹಾಕದೇ ವಾಹನಗಳನ್ನು ಪಾರ್ಕಿಂಗ್ ಮಾಡಿದರೆ ವಾಹನಗಳು ಮುಂದೆ ಚಲಿಸಿ ಅಪಘಾತವಾಗುವುದು ಖಚಿತ.

MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಹ್ಯಾಂಡ್ ಬ್ರೇಕ್‍‍ಗಳ ಬಗ್ಗೆ ನಿಮಗೆಷ್ಟು ಗೊತ್ತು?

ಹೊಸ ತಲೆಮಾರಿನ ಕಾರುಗಳಲ್ಲಿ ಲೀವರ್ ಹ್ಯಾಂಡ್ ಬ್ರೇಕ್‍‍ಗಳ ಬದಲಿಗೆ, ಬಟನ್‍‍ನಿಂದ ಆಪರೇಟ್ ಮಾಡಬಹುದಾದ ಎಮರ್ಜೆನ್ಸಿ ಬ್ರೇಕ್‍‍ಗಳನ್ನು ಪರಿಚಯಿಸಲಾಗಿದೆ. ಎಷ್ಟೇ ಅವಸರದಲ್ಲಿದ್ದರೂ ವಾಹನದಿಂದ ಇಳಿಯುವ ಮುನ್ನ ಎಮರ್ಜೆನ್ಸಿ ಬ್ರೇಕುಗಳನ್ನು ಹಾಕುವುದು ಒಳ್ಳೆಯದು. ಇಲ್ಲದಿದ್ದರೇ ಅಪಘಾತಗಳು ಸಂಭವಿಸುವುದು ನಿಶ್ಚಿತ.

Article Published On: Saturday, September 28, 2019, 14:13 [IST]
English summary
Importance of hand brakes in vehicles - Read in Kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+