ವಿನೂತನ ಡಿಸೈನ್ ಪ್ರೇರಿತ ಇಸುಝು ಡಿ-ಮ್ಯಾಕ್ಸ್ ವಿ-ಕ್ರಾಸ್ ಫೇಸ್‌ಲಿಫ್ಟ್ ಬಿಡುಗಡೆ

ಜಪಾನ್ ಆಟೋ ಉತ್ಪಾದನಾ ಸಂಸ್ಥೆಯಾದ ಇಸುಝು ಇಂಡಿಯಾ ತನ್ನ ಜನಪ್ರಿಯ ಡಿ-ಮ್ಯಾಕ್ಸ್ ವಿ-ಕ್ರಾಸ್ ಪಿಕ್ ಅಪ್ ಟ್ರಕ್ ಹೊಸ ಆವೃತ್ತಿಯನ್ನು ಭಾರತದಲ್ಲಿ ಬಿಡುಗಡೆ ಮಾಡಿದ್ದು, ಹೊಸ ಆವೃತ್ತಿಯು ಮಹತ್ವದ ಬದಲಾವಣೆಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಿದೆ.

ವಿನೂತನ ಡಿಸೈನ್ ಪ್ರೇರಿತ ಇಸುಝು ಡಿ-ಮ್ಯಾಕ್ಸ್ ವಿ-ಕ್ರಾಸ್ ಫೇಸ್‌ಲಿಫ್ಟ್ ಬಿಡುಗಡೆ

ಇಸುಝು ಸಂಸ್ಥೆಯು ಡಿ-ಮ್ಯಾಕ್ಸ್ ವಿ-ಕ್ರಾಸ್ ಪಿಕ್ ಅಪ್ ಮಾರಾಟದಲ್ಲಿ ಈಗಾಗಲೇ ಸಾಕಷ್ಟು ಜನಪ್ರಿಯತೆ ಗಳಿಸಿದ್ದು, ಹೊಸ ಆವೃತ್ತಿಯ ಮೂಲಕ ಮತ್ತಷ್ಟು ಗ್ರಾಹಕರನ್ನು ಸೆಳೆಯುವ ತವಕದಲ್ಲಿದೆ. ಹೀಗಾಗಿ ಫೇಸ್‌ಲಿಫ್ಟ್ ಆವೃತ್ತಿಯನ್ನು ಮಾರುಕಟ್ಟೆಯ ಬೇಡಿಕೆಗೆ ಅನುಗುಣವಾಗಿ ಹೊಸ ತಂತ್ರಜ್ಞಾನ ಪ್ರೇರಣೆಯೊಂದಿಗೆ ಬಿಡುಗಡೆಗೊಳಿಸಿದೆ.

ವಿನೂತನ ಡಿಸೈನ್ ಪ್ರೇರಿತ ಇಸುಝು ಡಿ-ಮ್ಯಾಕ್ಸ್ ವಿ-ಕ್ರಾಸ್ ಫೇಸ್‌ಲಿಫ್ಟ್ ಬಿಡುಗಡೆ

ಡಿ-ಮ್ಯಾಕ್ ವಿ-ಕ್ರಾಸ್ ಮಾದರಿಯು ಈ ಬಾರಿ ಸ್ಟ್ಯಾಂಡರ್ಡ್ ಮತ್ತು ಹೈ ಗ್ರೇಡ್(ಜೆಡ್) ಎನ್ನುವ ಎರಡು ವೆರಿಯೆಂಟ್‌ಗಳನ್ನು ಪರಿಚಯಿಸಿದ್ದು, ಹೊಸ ವಿನ್ಯಾಸದ ಮುಂಭಾಗದ ಗ್ರಿಲ್ ಸೇರಿದಂತೆ ಒಟ್ಟು 20ಕ್ಕೂ ಹೆಚ್ಚು ಹೊಸ ಫೀಚರ್ಸ್‌ಗಳನ್ನು ಪಡೆದುಕೊಂಡಿದೆ.

ವಿನೂತನ ಡಿಸೈನ್ ಪ್ರೇರಿತ ಇಸುಝು ಡಿ-ಮ್ಯಾಕ್ಸ್ ವಿ-ಕ್ರಾಸ್ ಫೇಸ್‌ಲಿಫ್ಟ್ ಬಿಡುಗಡೆ

ಈ ಬಾರಿ ಫೇಸ್‌ಲಿಫ್ಟ್ ಆವೃತ್ತಿಯಲ್ಲಿ ಗ್ರಾಹಕರ ಬೇಡಿಕೆಯೆಂತೆ ಬಿ-ಎಲ್ಇಡಿ ಹೆಡ್‌ಲ್ಯಾಂಪ್ಸ್, 18-ಇಂಚಿನ ಡೈಮಂಡ್ ಕಟ್ ಅಲಾಯ್ ಚಕ್ರಗಳು, ಎರಡನೇ ಸಾಲಿನ ಪ್ರಯಾಣಿಕರ ಅನುಕೂಲಕ್ಕಾಗಿ ಎತ್ತರಿಸಿದ ಬಿ ಪಿಲ್ಲರ್, ಹೊಸ ವಿಸ್ಯಾಸದ ಕ್ರೋಮ್ ಬಂಪರ್ ಮತ್ತು ಎಲ್ಇಡಿ ಟೈಲ್ ಲ್ಯಾಂಪ್ ನೀಡಲಾಗಿದೆ.

ವಿನೂತನ ಡಿಸೈನ್ ಪ್ರೇರಿತ ಇಸುಝು ಡಿ-ಮ್ಯಾಕ್ಸ್ ವಿ-ಕ್ರಾಸ್ ಫೇಸ್‌ಲಿಫ್ಟ್ ಬಿಡುಗಡೆ

ಹಾಗೆಯೇ ಹೈ ಎಂಡ್ ವೆರಿಯೆಂಟ್‌ನಲ್ಲಿ ಸುಧಾರಿತ ಮಾದರಿಯ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, 3ಡಿ ಡಿಸೈನ್ ಪ್ರೇರಿತ ಗೇರ್ ಶಿಫ್ಟ್ ಇಂಡಿಕೇಟರ್, ಪಿಯಾನೋ ಬ್ಲ್ಯಾಕ್ ಗಾರ್ನಿಷ್ ಡ್ಯಾಶ್‌ಬೋರ್ಡ್, ಪ್ಯಾಸಿವ್ ಎಂಟ್ರಿ ಮತ್ತು ಸ್ಟಾರ್ಟ್/ಸ್ಟಾಪ್ ಸಿಸ್ಟಂ ಜೋಡಿಸಲಾಗಿದ್ದು, ಗುಣಮಟ್ಟದ ಲೆದರ್ ಸೀಟುಗಳು, ಏಳು ಇಂಚಿನ ಟಚ್ ಸ್ಕ್ರೀನ್ ಆಡಿಯೋ ಸಿಸ್ಟಂ, ಯುಎಸ್‌ಬಿ ಇನ್‌ಪುಟ್, ಡಿವಿಡಿ, ಆಕ್ಸ್, ಐಪಾಡ್, ಬ್ಲ್ಯೂ‌ಟೂಥ್ ಕನೆಕ್ಟಿವಿಟಿ ಸೌಲಭ್ಯ ಹೊಂದಿದೆ.

ವಿನೂತನ ಡಿಸೈನ್ ಪ್ರೇರಿತ ಇಸುಝು ಡಿ-ಮ್ಯಾಕ್ಸ್ ವಿ-ಕ್ರಾಸ್ ಫೇಸ್‌ಲಿಫ್ಟ್ ಬಿಡುಗಡೆ

ಇದಲ್ಲದೇ ಹೊಸ ಸುರಕ್ಷಾ ನಿಯಮಾವಳಿಗೆ ಅನುಗುಣವಾಗಿ ಹೊಸ ಡಿ-ಮ್ಯಾಕ್ಸ್ ವಿ-ಕ್ರಾಸ್‌ನಲ್ಲಿ ಡ್ರೈವರ್ ಸೀಟ್ ಬೆಲ್ಟ್ ರಿಮೆಂಡರ್, ಸ್ಪೀಡ್ ಅಲರ್ಟ್, ಲೋಡ್ ಲಿಮಿಟ್ ಅಲರ್ಟ್, ಆಟೋ ಡೋರ್ ಲಾಕ್, ಹಿಲ್ ಸ್ಟಾರ್ಟ್ ಅಸಿಸ್ಟ್ ಮತ್ತು ಹಿಲ್ ಡಿಸೆಂಟ್ ಕಂಟ್ರೋಲ್ ಸೌಲಭ್ಯವು ಇದರಲ್ಲಿದೆ.

ವಿನೂತನ ಡಿಸೈನ್ ಪ್ರೇರಿತ ಇಸುಝು ಡಿ-ಮ್ಯಾಕ್ಸ್ ವಿ-ಕ್ರಾಸ್ ಫೇಸ್‌ಲಿಫ್ಟ್ ಬಿಡುಗಡೆ

ಎಂಜಿನ್ ಸಾಮರ್ಥ್ಯ

ಈ ಮೊದಲ ಫೇಸ್‌ಲಿಫ್ಟ್ ಆವೃತ್ತಿಯು ಬಿಎಸ್-6 ಎಂಜಿನ್ ಹೊಂದಿರುತ್ತೆ ಎಂದು ಹೇಳಲಾಗಿತ್ತಾದರೂ ಇಸುಝು ಮಾತ್ರ ಈ ಹಿಂದೆನಂತೆಯೇ ಬಿಎಸ್-4 ಎಂಜಿನ್ ಮಾದರಿಯನ್ನೇ ಮುಂದುವರಿಸಿದ್ದು, 2020ರ ಆರಂಭದಲ್ಲಿ ಬಿಎಸ್-6 ಎಂಜಿನ್ ಅನ್ನು ಉನ್ನತಿಕರಿಸಲಿದೆಯೆಂತೆ.

ವಿನೂತನ ಡಿಸೈನ್ ಪ್ರೇರಿತ ಇಸುಝು ಡಿ-ಮ್ಯಾಕ್ಸ್ ವಿ-ಕ್ರಾಸ್ ಫೇಸ್‌ಲಿಫ್ಟ್ ಬಿಡುಗಡೆ

ಹೀಗಾಗಿ ಈ ಹಿಂದಿನಂತೆಯೇ 2.5-ಲೀಟರ್ ಸಾಮರ್ಥ್ಯದ ಹೈ ಪ್ರೆಷರ್ ಕಾಮನ್ ರೈಲ್ ಫ್ಯೂಲ್ ಇಂಜೆಕ್ಷನ್ ಡೀಸೆಲ್ ಎಂಜಿನ್ ಹೊಂದಿದ್ದು, 134-ಬಿಎಚ್‌ಪಿ ಮತ್ತು 320-ಎನ್ಎಂ ಟಾರ್ಕ್ ಉತ್ಪಾದನಾ ಗುರಿಹೊಂದಿದೆ.

ವಿನೂತನ ಡಿಸೈನ್ ಪ್ರೇರಿತ ಇಸುಝು ಡಿ-ಮ್ಯಾಕ್ಸ್ ವಿ-ಕ್ರಾಸ್ ಫೇಸ್‌ಲಿಫ್ಟ್ ಬಿಡುಗಡೆ

ಹೊಸ ಆವೃತ್ತಿ ಗಮನಸೆಳೆಯುವ ವಿಚಾರ ಅಂದ್ರೆ, ಫೇಸ್‌ಲಿಸ್ಟ್ ಡಿ-ಮ್ಯಾಕ್ಸ್ ವಿ-ಕ್ರಾಸ್ ಮಾದರಿಯು ಈ ಬಾರಿ ಆಫ್ ರೋಡ್ ಚಾಲನಾ ಕೌಶಲ್ಯಕ್ಕೆ ಮತ್ತಷ್ಟು ಸಹಕಾರಿಯಾಗುವಂತೆ ಆಲ್ ವೀಲ್ಹ್ ಡ್ರೈವ್(4DW) ಟೆಕ್ನಾಲಜಿಯೊಂದಿಗೆ ಉದ್ದಳತೆ ಮತ್ತು ಗ್ರೌಂಡ್ ಕ್ಲಿಯೆರೆನ್ಸ್ ಹೆಚ್ಚಿಸಲಾಗಿದೆ.

ವಿನೂತನ ಡಿಸೈನ್ ಪ್ರೇರಿತ ಇಸುಝು ಡಿ-ಮ್ಯಾಕ್ಸ್ ವಿ-ಕ್ರಾಸ್ ಫೇಸ್‌ಲಿಫ್ಟ್ ಬಿಡುಗಡೆ

ಇಸುಝು ಸಂಸ್ಥೆಯು ಇದೇ ಮೊದಲ ಬಾರಿಗೆ ಫೇಸ್‌ಲಿಸ್ಟ್ ಡಿ-ಮ್ಯಾಕ್ಸ್ ವಿ-ಕ್ರಾಸ್ ಮಾದರಿಯಲ್ಲಿ ಐಜಿಆರ್‌ಐಪಿ(ಇಸುಝು ಗ್ರ್ಯಾವಿಟಿ ರೆಸ್ಪಾನ್ಸ್ ಇಂಟಲಿಜೆಂಟ್ ಪ್ಲ್ಯಾಟ್‌ಫಾರ್ಮ್) ಚಾರ್ಸಿಸ್ ಮೇಲೆ ನಿರ್ಮಾಣ ಮಾಡಲಾಗಿದ್ದು, ಇದು ಹೈ ಸ್ಪೀಡ್ ಜೊತೆ ಕಡಿದಾದ ತಿರುವುಗಳಲ್ಲೂ ಸಹ ಒಂದೇ ಸಮನಾದ ಸಮತೋಲನ ಕಾಯ್ದುಕೊಳ್ಳಬಹುದು.

MOST READ: ನಿಮ್ಮ ವಾಹನಗಳ ಮೈಲೇಜ್ ಕಡಿತವಾಗುತ್ತಿರುವುದಕ್ಕೆ ಅಸಲಿ ಕಾರಣ ಏನು ಗೊತ್ತಾ?

ವಿನೂತನ ಡಿಸೈನ್ ಪ್ರೇರಿತ ಇಸುಝು ಡಿ-ಮ್ಯಾಕ್ಸ್ ವಿ-ಕ್ರಾಸ್ ಫೇಸ್‌ಲಿಫ್ಟ್ ಬಿಡುಗಡೆ

ಕಾರಿನ ಬೆಲೆ(ಎಕ್ಸ್‌ಶೋರೂಂ ಪ್ರಕಾರ)

ಡಿ-ಮ್ಯಾಕ್ಸ್ ವಿ-ಕ್ರಾಸ್ ಹೊಸ ಮಾದರಿಯು ಈ ಬಾರಿ ವಿನೂತನ ಫೀಚರ್ಸ್‌ಗಳ ಜೊತೆಗೆ ದುಬಾರಿ ಬೆಲೆ ಪಡೆದುಕೊಂಡಿದ್ದು, ದೆಹಲಿ ಎಕ್ಸ್‌ಶೋರೂಂ ಸ್ಟ್ಯಾಂಡರ್ಡ್ ಆವೃತ್ತಿಯು ರೂ. 15.51 ಲಕ್ಷಕ್ಕೆ ಮತ್ತು ಹೈ ಗ್ರೇಡ್(ಜೆಡ್) ಮಾದರಿಯು ರೂ.17.03 ಲಕ್ಷ ಬೆಲೆ ಹೊಂದಲಿದೆ.

More from DriveSpark

Article Published On: Thursday, June 20, 2019, 18:01 [IST]
English summary
Isuzu D-Max V-Cross Facelift Launched in India. Read in Kannada.
Read more on ಇಸುಝು isuzu
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+