Just In
Don't Miss!
- Lifestyle
"ಸೋಮವಾರದ ರಾಶಿಫಲ: ಮೇಷ-ಮೀನದವರೆಗಿನ ದಿನ ಭವಿಷ್ಯ"
- Finance
Flipkart Big Saving Days: ಆಪಲ್, ಸ್ಯಾಮ್ಸಂಗ್ ಸೇರಿ ಹಲವು ಬ್ರ್ಯಾಂಡ್ ಗಳ ಆಫರ್
- News
ರೈತರು 2024ರವರೆಗೂ ಪ್ರತಿಭಟನೆ ನಡೆಸಲು ಸಿದ್ಧರಿದ್ದಾರೆ:ಭಾರತೀಯ ಕಿಸಾನ್ ಯೂನಿಯನ್
- Sports
ಐಎಸ್ಎಲ್: ಜೆಮ್ಷೆಡ್ಪುರಕ್ಕೆ ಆಘಾತ ನೀಡಿದ ನಾರ್ಥ್ಈಸ್ಟ್
- Movies
ಹರ ಜಾತ್ರೆಯಲ್ಲಿ ಪುನೀತ್ ರಾಜ್ ಕುಮಾರ್; ಅಪ್ಪು ಹಾಡು ಕೇಳಿ ಸಂಭ್ರಮಿಸಿದ ಅಭಿಮಾನಿಗಳು
- Education
BEL Recruitment 2021: 205 ಟೆಕ್ನೀಶಿಯನ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ನವೆಂಬರ್‍ನಲ್ಲಿ ಮಾರಾಟವಾದ ಇಸುಝು ಸಂಖ್ಯೆ ಎಷ್ಟು ಗೊತ್ತ?
ಇಸುಝು ಮೋಟಾರ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಕಾರುಗಳು ಕಳೆದ ನವೆಂಬರ್ ತಿಂಗಳಲ್ಲಿ ಉತ್ತಮವಾಗಿ ಮಾರಾಟವಾಗಿದೆ. ಇಸುಝು ಕಂಪನಿಯ ಎರಡು ಪ್ರಮು ಎಸ್‍ಯುವಿಗಳ ಒಟ್ಟು 100 ಯುನಿಟ್‍ಗಳು ಮಾರಾಟವಾಗಿವೆ.

ಇಸುಝು ಎಂಯು -ಎಕ್ಸ್ ಎಸ್‍ಯುವಿಯ 52 ಯುನಿಟ್‍ಗಳು ಮಾರಾಟವಾಗಿವೆ. ಈ ಎಸ್‍ಯುವಿಯು ದೇಶಿಯ ಮಾರುಕಟ್ಟೆಯಲ್ಲಿ ಟೊಯೊಟಾ ಫಾರ್ಚೂನರ್, ಫೋರ್ಡ್ ಎಂಡೀವರ್ ಮತ್ತು ಮಹೀಂದ್ರಾ ಅಲ್ತುರಾಸ್ ಜಿ 4 ಎಸ್‍ಯುವಿಗಳಿಗೆ ಪೈಪೋಟಿಯನ್ನು ನೀಡುತ್ತದೆ. ಇನ್ನೂ ಕಳೆದ ನವೆಂಬರ್ ತಿಂಗಳಲ್ಲಿ ವಿ-ಕ್ರಾಸ್ ಪಿಕಪ್ ಟ್ರಕ್‍ನ 48 ಯುನಿಟ್‍ಗಳು ಮಾರಟವಾಗಿವೆ.

ಡಿ-ಮ್ಯಾಕ್ಸ್ ವಿ-ಕ್ರಾಸ್ ಮಾರಾಟದಲ್ಲಿ ಈಗಾಗಲೇ ಸಾಕಷ್ಟು ಜನಪ್ರಿಯತೆ ಗಳಿಸಿದ್ದು, ಹೊಸ ಆವೃತ್ತಿಯ ಮೂಲಕ ಮತ್ತಷ್ಟು ಗ್ರಾಹಕರನ್ನು ಸೆಳೆಯುವ ತವಕದಲ್ಲಿದೆ. ಮಾಹಿತಿಗಳ ಪ್ರಕಾರ, ಪಿಕ್ ಅಪ್ ಟ್ರಕ್ ಮಾದರಿಯು ಗ್ರಾಹಕರ ಬೇಡಿಕೆಗೆ ಅನುಗುಣವಾಗಿ 2.5-ಲೀಟರ್ ಡೀಸೆಲ್ ಎಂಜಿನ್ ಜೊತೆಗೆ 1.9-ಲೀಟರ್ ಡೀಸೆಲ್ ಎಂಜಿನ್ ಇತ್ತೀಚಿಗೆ ಅಭಿವೃದ್ಧಿಗೊಳಿಸಿದೆ.

ಡಿ-ಮ್ಯಾಕ್ಸ್ ವಿ-ಕ್ರಾಸ್ 2.5-ಲೀಟರ್ ಡೀಸೆಲ್ ವರ್ಷನ್‌ನಲ್ಲಿ ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಆವೃತ್ತಿಯನ್ನು ಮಾತ್ರವೇ ಮಾರಾಟ ಮಾಡುತ್ತಿದ್ದ ಇಸುಝು ಸಂಸ್ಥೆಯು ಇದೀಗ 1.9-ಲೀಟರ್ ಡೀಸೆಲ್ ಎಂಜಿನ್ ಮೂಲಕ ಮತ್ತಷ್ಟು ಆಫ್-ರೋಡ್ ಪ್ರಿಯರನ್ನು ಸೆಳೆಯುವ ನೀರಿಕ್ಷೆಯಲ್ಲಿದೆ.

ಹಾಗೆಯೇ 2.5-ಲೀಟರ್ ಡಿ-ಮ್ಯಾಕ್ಸ್ ವಿ-ಕ್ರಾಸ್ ಹೈ ಎಂಡ್ ಮಾದರಿಯಲ್ಲಿ ಈ ಬಾರಿ 4X4 ಡ್ರೈವ್ ಸೌಲಭ್ಯವನ್ನು ಪರಿಚಯಿಸಲಾಗುತ್ತಿದ್ದು, ನವೀಕರಿಸಲಾದ ಬ್ಲ್ಯಾಕ್ ಡ್ಯುಯಲ್ ಟೋನ್ ಇಂಟಿರಿಯರ್, ಸೆಂಟರ್ ಕನ್ಸೊಲ್, ಡ್ಯಾಶ್‌ಬೋರ್ಡ್, ಪ್ರೋಜೆಕ್ಟರ್ ಹೆಡ್‌ಲ್ಯಾಂಪ್, ಮರುವಿನ್ಯಾಸಗೊಳಿಸಲಾದ ಫ್ರಂಟ್ ಗ್ರಿಲ್, ಸ್ಪೋರ್ಟಿ ಮಾದರಿಯ ರಿಯರ್ ಬಂಪರ್ ಮತ್ತು ಟೈಲ್ ಲೈಟ್ ಪಡೆದುಕೊಳ್ಳಲಿದೆ.

ಪ್ರಯಾಣಿಕ ಸುರಕ್ಷತೆಗಾಗಿ ಎಬಿಎಸ್, ಇಬಿಡಿ, ಆಲ್ ವೀಲ್ಹ್ ಡಿಸ್ಕ್ ಬ್ರೇಕ್, 6 ಏರ್‌ಬ್ಯಾಗ್ ಸೇರಿದಂತೆ ಹಲವು ಹೊಸ ಫೀಚರ್ಸ್‌ಗಳನ್ನು ಒಳಗೊಂಡಿದೆ.

2020ರ ಡಿ ಮ್ಯಾಕ್ಸ್ ವಾಹನದ ಹೊರಭಾಗವು ಇಸುಝು ಕಂಪನಿಯ ಇನ್‍ಫೈನೇಟ್ ಪೊಟೆಂಶಿಯಲ್ ಥೀಮ್ ಅನ್ನು ಹೊಂದಿದೆ. ಹೊಸ ವಾಹನದ ಹೊರಭಾಗವು ಮಸ್ಕ್ಯುಲರ್ ಹಾಗೂ ಅಗ್ರೇಸಿವ್ ಲುಕ್ ಜೊತೆಗೆ ಪ್ರೀಮಿಯಂ ಅಂಶಗಳನ್ನು ಹೊಂದಿದೆ.
MOST READ: ಬೈಕ್ ಚಲಾಯಿಸಿದ್ದು ಮಗ, ದಂಡ ಬಿದ್ದಿದ್ದು ಅಪ್ಪನಿಗೆ..!

ಮುಂಭಾಗದಲ್ಲಿ ಟ್ವಿನ್ ಕ್ರೋಮ್ ಸ್ಲಾಟ್ ಫ್ರಂಟ್ ಗ್ರಿಲ್, ಪ್ರೊಜೆಕ್ಟರ್ ಹೊಂದಿರುವ ಎಲ್‍ಇಡಿ ಹೆಡ್‍ಲ್ಯಾಂಪ್ ಹಾಗೂ ಡಿಆರ್‍ಎಲ್‍ಗಳಿವೆ. ಇದರ ಜೊತೆಗೆ ವರ್ಟಿಕಲ್ ಸ್ಟಾಕ್‍ನ ಡ್ಯುಯಲ್ ಫಾಗ್ ಲ್ಯಾಂಪ್ ಹೊಂದಿರುವ ಹೊಸ ಬಂಪರ್ ಹಾಗೂ ಹೊಸ ಸ್ಕಿಡ್ ಪ್ಲೇಟ್‍ಗಳಿದ್ದು, ಡಿ ಮ್ಯಾಕ್ಸ್ ವಾಹನಕ್ಕೆ ಮೊದಲಿಗಿಂತ ಹೆಚ್ಚಿನ ರಗಡ್ ಲುಕ್ ನೀಡುತ್ತವೆ.
MOST READ: ಪ್ರತಿ ಲೀಟರ್ ನೀರಿಗೆ 35 ಕಿ.ಮಿ ಮೈಲೇಜ್ ನೀಡುವ ಕಾರ್ ಎಂಜಿನ್ ಸಿದ್ದಪಡಿಸಿದ 21 ವರ್ಷದ ಯುವಕ

2020ರ ಡಿ ಮ್ಯಾಕ್ಸ್ ಕ್ಯಾಬಿನ್‍ನಲ್ಲಿ ಹೊಸ ಡ್ಯಾಶ್‍ಬೋರ್ಡ್ ವಿನ್ಯಾಸದ ಆಪಲ್ ಕಾರ್ ಪ್ಲೇ ಹಾಗೂ ಆಂಡ್ರಾಯಿಡ್ ಆಟೋ ಹೊಂದಿರುವ 9 ಇಂಚಿನ ಟಚ್‍ಸ್ಕ್ರೀನ್ ಇನ್ಫೋಟೇನ್‍ಮೆಂಟ್ ಸಿಸ್ಟಂ ಹಾಗೂ ಟ್ರೈಗ್ಯುಲರ್ ಎಸಿ ವೆಂಟ್ಸ್ ಗಳನ್ನು ಅಳವಡಿಸಲಾಗಿದೆ.
MOST READ: ಖರೀದಿಸಿದ ಬೈಕ್ ಪಡೆಯಲು ಕಾನೂನು ಹೋರಾಟ ಮಾಡಿದ ಉದ್ಯಮಿ

ಇಸುಝು ಎಸ್‍ಯುವಿಗಳು ಜನಪ್ರಿಯ ಕಂಪನಿಗಳ ಎಸ್‍ಯುವಿಗಳಿಗೆ ಉತ್ತಮ ಪೈಪೋಟಿಯನ್ನು ನೀಡುತ್ತಿದೆ. ಇದರಿಂದಾಗಿ ಕಳೆದ ನವೆಂಬರ್ ತಿಂಗಳಲ್ಲಿ ಇಸುಝು ಎಸ್‍ಯುವಿಗಳು ಉತ್ತಮವಾಗಿ ಮಾರಾಟವಾಗಿವೆ.