ಡಿಸೆಂಬರ್‍ನಲ್ಲಿ ಬಿಡುಗಡೆಯಾಗಲಿದೆ 2020 ಜಾಗ್ವಾರ್ ಎಕ್ಸ್‌ಇ ಫೇಸ್‍ಲಿಫ್ಟ್
2020ರ ಹೊಸ ಜಾಗ್ಬಾರ್ ಎಕ್ಸ್‌ಇ ಫೇಸ್‍ಲಿಫ್ಟ್ ಅನ್ನು ಈ ವರ್ಷದ ಡಿಸೆಂಬರ್ 4ರಂದು ಬಿಡುಗಡೆಗೊಳಿಸಲಾಗುವುದೆಂದು ಬ್ರಿಟಿಷ್ ಐಷಾರಾಮಿ ಕಾರು ತಯಾರಕ ಕಂಪನಿಯಾದ ಜಾಗ್ವಾರ್ ತಿಳಿಸಿದೆ. ಹೊಸ ಎಕ್ಸ್‌ಇ ಫೇಸ್‍ಲಿಫ್ಟ್ ಅನ್ನು ಹಲವಾರು ಬದಲಾವಣೆಗಳೊಂದಿಗೆ ನವೀಕರಿಸಲಾಗಿದೆ.

2020ರ ಜಾಗ್ವಾರ್ ಎಕ್ಸ್‌ಇ ಫೇಸ್‍ಲಿಫ್ಟ್ ಪ್ರಸ್ತುತ ಮಾರುಕಟ್ಟೆಯ ಮಾದರಿಗಿಂತ ಕಡಿಮೆ ಅಗಲವನ್ನು ಹೊಂದಿದೆ. ಕಾರಿನ ಕಾರ್ಯಕ್ಷಮತೆಯನ್ನು ಹೆಚ್ಚಿಸಲಾಗಿದ್ದು, ಆಕರ್ಷಕ ಲುಕ್ ಅನ್ನು ಹೊಂದಿದೆ. ಜಾಗ್ವಾರ್ ಎಕ್ಸ್‌ಇ ಫೇಸ್‍ಲಿಫ್ಟ್ ವಿನ್ಯಾಸದಲ್ಲಿ ಬದಲಾವಣೆಯನ್ನು ಮಾಡಲಾಗಿದೆ. ಹೊಸ ವಿನ್ಯಾಸವು ಎಫ್-ಟೈಪ್ ಮತ್ತು ಇ-ಪೇಸ್ ಮಾದರಿಯ ವಿನ್ಯಾಸವನ್ನು ಹೊಂದಿದೆ.

ಎಕ್ಸ್‌ಇ ಫೇಸ್‍ಲಿಫ್ಟ್ ಮುಂಭಾಗದಲ್ಲಿ ನವೀಕರಿಸಿದ ಗ್ರಿಲ್ ಮತ್ತು ಹೊಸ ಹೆಡ್‍ಲ್ಯಾಂಪ್ ಅನ್ನು ಹೊಂದಿದೆ. ಸಿಲ್ಕ್ ಹೆಡ್‍ಲ್ಯಾಂಪ್ 12 ಎಂಎಂ ಸ್ಲಿಮ್ಮರ್ ಆಗಿದ್ದು, ಜೆ-ಬ್ಲೇಡ್ ಎಲ್‍ಇಡಿ ಡೇಟೈಮ್ ರನ್ನಿಂಗ್ ಲೈಟ್‍ಗಳನ್ನು ಸಹ ಒಳಗೊಂಡಿದೆ. ವಾಹನದ ಬಂಪರ್‍ನಲ್ಲಿ ದೊಡ್ಡ ಏರ್‍ಡ್ಯಾಮ್‍ಗಳನ್ನು ಅಳವಡಿಸಲಾಗಿದೆ.

ಎಕ್ಸ್‌ಇ ಫೇಸ್‍ಲಿಫ್ಟ್ ಆರ್-ಡೈನಾಮಿಕ್ ರೂಪಾಂತರವು ಬ್ಲ್ಯಾಕ್ ಏರ್ ಡ್ಯಾಮ್, ಬಂಪರ್ ಮತ್ತು ಅಂಡರ್‍ಬಾಡಿ ಡಿಫ್ಯೂಸರ್ ಅನ್ನು ಹೊಂದಿದೆ. ಈ ಕಾರು ಅಲಾಯ್ ವ್ಹೀಲ್‍ಗಳನ್ನು ಹೊಂದಿದೆ. ಹಿಂಭಾಗದಲ್ಲಿ ಟೇಲ್‍ಲೈಟ್‍ಗಳನ್ನು ಅಳವಡಿಸಲಾಗಿದೆ.

ಹೊಸ ಜಾಗ್ವರ್ ಎಕ್ಸ್‌ಇ ಫೇಸ್‍ಲಿಫ್ಟ್ ಇಂಟಿರಿಯರ್‍ನಲ್ಲಿ ಸೆಂಟರ್ ಕನ್ಸೋಲ್‍ಗಾಗಿ ಡ್ಯುಯಲ್ ಟಚ್‍ಸ್ಕ್ರೀನ್‍ಗಳನ್ನು ಹೊಂದಿದೆ. ಜಾಗ್ವರ್‍ನ ಟಚ್ ಪ್ರೊ ಡ್ಯುವೋ ಇನ್ಫೋಟೇನ್‍ಮೆಂಟ್ ಸಿಸ್ಟಂ ಕ್ಯಾಬಿನ್‍ಗೆ ಅವಂತ್ ಗಾರ್ಡೆ ಟಚ್ ನೀಡಿದೆ. 10.2 ಇಂಚಿನ ಟಾಪ್ ಡಿಸ್‍ಪ್ಲೇ ಹಲವಾರು ಸಂಪರ್ಕ ಆಯ್ಕೆಗಳನ್ನು ಮತ್ತು ನ್ಯಾವಿಗೇಷನ್ ಅನ್ನು ಹೊಂದಿದೆ.

ಇದರೊಂದಿಗೆ ಸ್ಕ್ರೀನ್ ಮೇಲೆ ಪುಲ್-ಪುಶ್ ನಾಬ್ ಮತ್ತು ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್ ಸಿಸ್ಟಂ ಅನ್ನು ಹೊಂದಿದೆ. ಕ್ಯಾಬಿನ್ ಎಫ್-ಟೈಪ್ ಮತ್ತು ಇ-ಪೇಸ್ ಮಾದರಿಗಳಲ್ಲಿ ಕಂಡುಬರುವ ಪಿಸ್ತೂಲ್ ಗ್ರಿಪ್ ಗೇರ್ ಸೆಲೆಕ್ಟರ್ ಅನ್ನು ಹೊಂದಿದೆ. ಹಿಡನ್-ಅನ್‍ಟಿಲ್-ಲಿಟ್ ಬಟನ್ಸ್ ಜೊತೆಯಲ್ಲಿ ಮಲ್ಟಿ ಫಂಕ್ಷನಲ್ ಸ್ಟೀಯರಿಂಗ್ ಅನ್ನು ಹೊಂದಿದೆ.

2020ರ ಹೊಸ ಜಾಗ್ವಾರ್ ಎಕ್ಸ್‌ಇ ಫೇಸ್‌ಲಿಫ್ಟ್ 2.0 ಲೀಟರಿನ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್‍ಗಳನ್ನು ಹೊಂದಿವೆ. ಡೀಸೆಲ್ ಎಂಜಿನ್ 247 ಬಿಹೆಚ್‍ಪಿ ಪವರ್ ಉತ್ಪಾದಿಸಿದರೆ, ಪೆಟ್ರೋಲ್ ಎಂಜಿನ್ 296 ಬಿಹೆಚ್‍ಪಿ ಪವರ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್‍ಗಳೊಂದಿಗೆ 8 ಸ್ಪೀಡ್ ಆಟೋಮ್ಯಾಟಿಕ್ ಗೇರ್‍ಬಾಕ್ಸ್ ಅನ್ನು ಅಳವಡಿಸಲಾಗಿದೆ.
MOST READ: ಬೈಕ್ ಚಲಾಯಿಸಿದ್ದು ಮಗ, ದಂಡ ಬಿದ್ದಿದ್ದು ಅಪ್ಪನಿಗೆ..!

ಭಾರತದ ಎಕ್ಸ್ ಶೋರೂಂ ಪ್ರಕಾರ ಪ್ರಸ್ತುತ ಜಾಗ್ವಾರ್ ಎಕ್ಸ್‌ಇ ಮಾದರಿಗಳ ಬೆಲೆಯು ರೂ.40.6 ಲಕ್ಷದಿಂದ ರೂ.47 ಲಕ್ಷಗಳಾಗಿದೆ. ಹೊಸ ಜಾಗ್ವಾರ್ ಎಕ್ಸ್‌ಇ ಫೇಸ್‍ಲಿಫ್ಟ್ ಮಾದರಿಗೆ ರೂ.46 ಲಕ್ಷದಿಂದ ರೂ.55 ಲಕ್ಷಗಳವರಿಗೆ ಬೆಲೆಯನ್ನು ಹೊಂದಿರಲಿದೆ.
MOST READ: ಬೈಕ್ ಸವಾರನ ಪ್ರಾಣ ಉಳಿಸಿದ ಆಪಲ್ ವಾಚ್..!

2020ರ ಹೊಸ ಜಾಗ್ವಾರ್ ಎಕ್ಸ್‌ಇ ಫೇಸ್‍ಲಿಫ್ಟ್ ಅನ್ನು ಈ ವರ್ಷದ ಡಿಸೆಂಬರ್ 4ರಂದು ಬಿಡುಗಡೆಗೊಳಿಸಲಾಗುವುದು. ಹೊಸ ವಿನ್ಯಾಸದ ಜೊತೆಗೆ ಆಕರ್ಷಕ ಲುಕ್ ಅನ್ನು ಹೊಂದಿದೆ. ಹೊಸ ಜಾಗ್ವಾರ್ ಎಕ್ಸ್‌ಇ ಫೇಸ್‍ಲಿಫ್ಟ್ ಹೆಚ್ಚಿನ ಪವರ್ ಹಾಗೂ ಆಕರ್ಷಕ ಲುಕ್ ಹೊಂದಿರುವುದರಿಂದ ಹೆಚ್ಚಿನ ಗ್ರಾಹಕರನ್ನು ಸೆಳೆಯಬಹುದು.


Click it and Unblock the Notifications








