ವಿಳಂಬವಾಗಲಿದೆ ಜೀಪ್ ಕಂಪಾಸ್ 7 ಸೀಟರ್ ಎಸ್‍‍ಯುವಿ ಬಿಡುಗಡೆ

ಜೀಪ್ ಇಂಡಿಯಾ, ತನ್ನ ಕಂಪಾಸ್ ಎಸ್‌ಯುವಿಯ 7 ಸೀಟರ್ ಆವೃತ್ತಿಯನ್ನು ಶೀಘ್ರದಲ್ಲೇ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸುವ ಕೆಲಸದಲ್ಲಿ ತೊಡಗಿರುವುದಾಗಿ ತಿಳಿಸಿತ್ತು. ಈ ಹಿಂದಿನ ವರದಿಗಳ ಪ್ರಕಾರ, 7 ಸೀಟರ್‍‍ಗಳ ಜೀಪ್ ಕಂಪಾಸ್ ಎಸ್‌ಯುವಿಯನ್ನು 2020ರಲ್ಲಿ ಭಾರತದಲ್ಲಿ ಮಾರಾಟ ಮಾಡಲಾಗುವುದೆಂದು ಹೇಳಲಾಗಿತ್ತು.

ವಿಳಂಬವಾಗಲಿದೆ ಜೀಪ್ ಕಂಪಾಸ್ 7 ಸೀಟರ್ ಎಸ್‍‍ಯುವಿ ಬಿಡುಗಡೆ

ಆದರೆ, ಆಟೋಕಾರ್ ಇಂಡಿಯಾ ವರದಿಗಳ ಪ್ರಕಾರ, ಜೀಪ್ ಕಂಪಾಸ್ 7 ಸೀಟರ್‍‍ಗಳ ಎಸ್‌ಯುವಿಯ ಬಿಡುಗಡೆಯು ಮತ್ತಷ್ಟು ವಿಳಂಬವಾಗಲಿದೆ. 7 ಸೀಟರ್‍‍ಗಳ ಜೀಪ್ ಕಂಪಾಸ್ ಎಸ್‌ಯುವಿಯ ಬಿಡುಗಡೆಯನ್ನು 2021ಕ್ಕೆ ಮುಂದೂಡಲಾಗಿದೆ ಎಂದು ವರದಿಯಾಗಿದೆ.

ವಿಳಂಬವಾಗಲಿದೆ ಜೀಪ್ ಕಂಪಾಸ್ 7 ಸೀಟರ್ ಎಸ್‍‍ಯುವಿ ಬಿಡುಗಡೆ

ಇದರಿಂದಾಗಿ ದೇಶಿಯ ಮಾರುಕಟ್ಟೆಯಲ್ಲಿ ಕಂಪಾಸ್ ಫೇಸ್‌ಲಿಫ್ಟ್ ಆವೃತ್ತಿಯನ್ನು ಬಿಡುಗಡೆಗೊಳಿಸಲು ಕಂಪನಿಗೆ ಆದ್ಯತೆ ನೀಡಿದಂತಾಗುತ್ತದೆ. ಹೊಸ ಜೀಪ್ ಕಂಪಾಸ್ ಫೇಸ್‌ಲಿಫ್ಟ್ ಮಾದರಿಯು 2020ರಲ್ಲಿ ಮಾರಾಟವಾಗಲಿದೆ.

ವಿಳಂಬವಾಗಲಿದೆ ಜೀಪ್ ಕಂಪಾಸ್ 7 ಸೀಟರ್ ಎಸ್‍‍ಯುವಿ ಬಿಡುಗಡೆ

ಹೊಸ ಜೀಪ್ ಕಂಪಾಸ್ ಫೇಸ್‌ಲಿಫ್ಟ್ ಮಾದರಿಯು ಹೊಸ ನವೀಕರಣಗಳೊಂದಿಗೆ ಬಿಡುಗಡೆಯಾಗಲಿದೆ. ಇವುಗಳಲ್ಲಿ ಶೀಟ್ ಮೆಟಲ್, ರಿಫ್ರೆಶ್ ಮಾಡಿದ ಕ್ಯಾಬಿನ್ ಸ್ಪೇಸ್, ​​ಅಪ್‍‍ಡೇಟೆಡ್ ಡ್ಯಾಶ್‌ಬೋರ್ಡ್ ಹಾಗೂ ಹಲವಾರು ಎಕ್ವಿಪ್‍‍ಮೆಂಟ್‍‍ಗಳಿರಲಿವೆ.

ವಿಳಂಬವಾಗಲಿದೆ ಜೀಪ್ ಕಂಪಾಸ್ 7 ಸೀಟರ್ ಎಸ್‍‍ಯುವಿ ಬಿಡುಗಡೆ

ವಿನ್ಯಾಸದಲ್ಲಿನ ಅಪ್‍‍ಡೇಟ್‍‍ಗಳ ಹೊರತಾಗಿ, ಕಂಪಾಸ್ ಎಸ್‌ಯುವಿಯಲ್ಲಿ ಬಿಎಸ್ 6 ಎಂಜಿನ್ ಅನ್ನು ಜೀಪ್ ಕಂಪನಿಯು ಅಳವಡಿಸಲಿದೆ. ಸದ್ಯಕ್ಕೆ, ಟಾಪ್ ಮಾದರಿಯಾದ ಕಂಪಾಸ್ ಟ್ರೈಲ್ ಹಾಕ್ ಮಾತ್ರ ಈ ಸರಣಿಯಲ್ಲಿ ಬಿಎಸ್ 6 ಎಂಜಿನ್ ಹೊಂದಿರುವ ಏಕೈಕ ಮಾದರಿಯಾಗಿದೆ. ಈ ಎಂಜಿನ್ ಅನ್ನು ಕೆಳಗಿನ ಸರಣಿಯ ಮಾದರಿಗಳಲ್ಲೂ ಅಳವಡಿಸಲಾಗುವುದು.

ವಿಳಂಬವಾಗಲಿದೆ ಜೀಪ್ ಕಂಪಾಸ್ 7 ಸೀಟರ್ ಎಸ್‍‍ಯುವಿ ಬಿಡುಗಡೆ

ಜೀಪ್ ಕಂಪಾಸ್ ಟ್ರೈಲ್‌ಹಾಕ್‌ನಲ್ಲಿನ ಬಿಎಸ್ 6 ಎಂಜಿನ್ 2.0 ಲೀಟರಿನ ಡೀಸೆಲ್ ಯುನಿಟ್ ಆಗಿದೆ. ಈಗಿರುವ ಎಂಜಿನ್‌ನಂತೆಯೇ 173 ಬಿಹೆಚ್‌ಪಿ ಪವರ್ ಹಾಗೂ 350 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್‍‍ನಲ್ಲಿ ಡಿಸಿಟಿ ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್‍ ಅಳವಡಿಸಲಾಗಿದೆ.

ವಿಳಂಬವಾಗಲಿದೆ ಜೀಪ್ ಕಂಪಾಸ್ 7 ಸೀಟರ್ ಎಸ್‍‍ಯುವಿ ಬಿಡುಗಡೆ

ಜೀಪ್ ಕಂಪಾಸ್ ಡೀಸೆಲ್‌ನ ಕೆಳ ಸರಣಿಯ ಮಾದರಿಗಳಲ್ಲಿ 6 ಸ್ಪೀಡಿನ ಮ್ಯಾನುವಲ್ ಗೇರ್‍‍ಬಾಕ್ಸ್‌ ಗಳನ್ನು ಸ್ಟಾಂಡರ್ಡ್ ಆಗಿ ಅಳವಡಿಸಲಾಗಿದೆ. ಜೀಪ್, 1.4 ಲೀಟರಿನ ಪೆಟ್ರೋಲ್ ಎಂಜಿನ್ ಹೊಂದಿರುವ ಕಂಪಾಸ್ ಎಸ್‌ಯುವಿಯನ್ನು ಸಹ ಮಾರಾಟ ಮಾಡುತ್ತದೆ.

MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ವಿಳಂಬವಾಗಲಿದೆ ಜೀಪ್ ಕಂಪಾಸ್ 7 ಸೀಟರ್ ಎಸ್‍‍ಯುವಿ ಬಿಡುಗಡೆ

ಈ ಎಂಜಿನ್ 140 ಬಿ‍‍ಹೆಚ್‍‍ಪಿ ಪವರ್ ಹಾಗೂ 250 ಎನ್‍ಎಂ ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್‍‍ನಲ್ಲಿ 6 ಸ್ಪೀಡಿನ ಮ್ಯಾನುವಲ್ ಅಥವಾ 7 ಸ್ಪೀಡಿನ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಅನ್ನು ಹೆಚ್ಚುವರಿ ಆಯ್ಕೆಯಾಗಿ ನೀಡಲಾಗುತ್ತದೆ.

MOST READ: ವಿಭಿನ್ನವಾಗಿ ಸ್ಕೂಟರ್ ಖರೀದಿಸಿದ ಗ್ರಾಹಕ - ಶೋರೂಂ ಸಿಬ್ಬಂದಿಗೆ ಸುಸ್ತೋ ಸುಸ್ತು..!

ವಿಳಂಬವಾಗಲಿದೆ ಜೀಪ್ ಕಂಪಾಸ್ 7 ಸೀಟರ್ ಎಸ್‍‍ಯುವಿ ಬಿಡುಗಡೆ

2021ರಲ್ಲಿ ಬಿಡುಗಡೆಯಾಗಲಿರುವ 7 ಸೀಟರ್‍‍ಗಳ ಜೀಪ್ ಕಂಪಾಸ್, ನವೀಕರಿಸಿದ ಜೀಪ್ ಕಂಪಾಸ್ ಫೇಸ್‌ಲಿಫ್ಟ್ ನ ಆಧಾರದ ಮೇಲೆ ತಯಾರಾಗಿದೆ. 7 ಸೀಟರ್‍‍ಗಳ ಜೀಪ್ ಕಂಪಾಸ್ ಎಸ್‍‍ಯುವಿಗೆ ಲೋ-ಡಿ ಎಂಬ ಕೋಡ್‍‍ನೇಮ್ ಇಡಲಾಗಿದೆ.

MOST READ: ಬೈಕುಗಳಲ್ಲಿ ಡೀಸೆಲ್ ಎಂಜಿನ್ ಏಕೆ ಬಳಸಲ್ಲ ಗೊತ್ತಾ?

ವಿಳಂಬವಾಗಲಿದೆ ಜೀಪ್ ಕಂಪಾಸ್ 7 ಸೀಟರ್ ಎಸ್‍‍ಯುವಿ ಬಿಡುಗಡೆ

5 ಸೀಟರ್‍‍ಗಳ ಜೀಪ್ ಕಂಪಾಸ್‍‍ಗೆ ಹೋಲಿಸಿದರೆ, ಈ 7 ಸೀಟರ್‍‍ಗಳ ಜೀಪ್ ಕಂಪಾಸ್‍‍ನಲ್ಲಿ ಹಲವಾರು ಹೆಚ್ಚುವರಿ ಎಕ್ವಿಪ್‍‍ಮೆಂಟ್‍‍ಗಳಿರಲಿದ್ದು, ಹೆಚ್ಚು ಪ್ರೀಮಿಯಂ ಆಗಿರಲಿದೆ. 7 ಸೀಟರ್‍‍ಗಳ ಜೀಪ್ ಕಂಪಾಸ್ ಎಸ್‌ಯುವಿಯ ಬೆಲೆ ಹೆಚ್ಚಿರಲಿದೆ.

ವಿಳಂಬವಾಗಲಿದೆ ಜೀಪ್ ಕಂಪಾಸ್ 7 ಸೀಟರ್ ಎಸ್‍‍ಯುವಿ ಬಿಡುಗಡೆ

5 ಸೀಟರ್‍‍ನಲ್ಲಿ ಟಾಪ್ ಮಾದರಿಯೆನಿಸಿರುವ ಟ್ರೈಲ್ ಹಾಕ್ ಮಾದರಿಯ ಬೆಲೆಯು ರೂ.26 ಲಕ್ಷಗಳಾಗಿದೆ. 7 ಸೀಟರ್‍‍ಗಳ ಜೀಪ್ ಕಂಪಾಸ್‍ನ ಆರಂಭಿಕ ಬೆಲೆಯು ಎಕ್ಸ್ ಶೋರೂಂ ದರದಂತೆ ರೂ.30 ಲಕ್ಷಗಳಾಗುವ ಸಾಧ್ಯತೆಗಳಿವೆ.

ವಿಳಂಬವಾಗಲಿದೆ ಜೀಪ್ ಕಂಪಾಸ್ 7 ಸೀಟರ್ ಎಸ್‍‍ಯುವಿ ಬಿಡುಗಡೆ

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

7 ಸೀಟರ್‍‍ಗಳ ಜೀಪ್ ಕಂಪಾಸ್ ಎಸ್‌ಯುವಿಯು, 5 ಸೀಟರ್‍‍ಗಳ ಜೀಪ್ ಕಂಪಾಸ್‍‍ನಂತೆಯೇ ಯಶಸ್ವಿಯಾಗುವ ಸಾಧ್ಯತೆಗಳಿವೆ. ಬಿಡುಗಡೆಯಾದ ನಂತರ 7 ಸೀಟರ್‍‍ಗಳ ಜೀಪ್ ಕಂಪಾಸ್ ಎಸ್‍‍ಯುವಿಯು ಮಹೀಂದ್ರಾ ಆಲ್ಟುರಾಸ್ ಜಿ 4, ಫೋರ್ಡ್ ಎಂಡೀವರ್, ಟೊಯೊಟಾ ಫಾರ್ಚೂನರ್, ಸ್ಕೋಡಾ ಕೊಡಿಯಾಕ್ ಹಾಗೂ ಮುಂಬರುವ ದಿನಗಳಲ್ಲಿ ಬಿಡುಗಡೆಯಾಗಲಿರುವ ಫೋಕ್ಸ್‌ವ್ಯಾಗನ್ ಟಿಗುವಾನ್ ಆಲ್‌ಸ್ಪೇಸ್‍‍ಗಳಿಗೆ ಪೈಪೋಟಿ ನೀಡುತ್ತದೆ.

Most Read Articles

Kannada
Read more on ಜೀಪ್ jeep
English summary
Jeep compass 7 seater launch postponed to 2021 - Read in Kannada
Story first published: Tuesday, November 12, 2019, 13:31 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X