Just In
Don't Miss!
- News
ರೈತರು 2024ರವರೆಗೂ ಪ್ರತಿಭಟನೆ ನಡೆಸಲು ಸಿದ್ಧರಿದ್ದಾರೆ:ಭಾರತೀಯ ಕಿಸಾನ್ ಯೂನಿಯನ್
- Finance
Gold, Silver Rate: ಪ್ರಮುಖ ನಗರಗಳಲ್ಲಿ ಜ. 17ರ ಚಿನ್ನ, ಬೆಳ್ಳಿ ದರ
- Sports
ಐಎಸ್ಎಲ್: ಜೆಮ್ಷೆಡ್ಪುರಕ್ಕೆ ಆಘಾತ ನೀಡಿದ ನಾರ್ಥ್ಈಸ್ಟ್
- Movies
ಹರ ಜಾತ್ರೆಯಲ್ಲಿ ಪುನೀತ್ ರಾಜ್ ಕುಮಾರ್; ಅಪ್ಪು ಹಾಡು ಕೇಳಿ ಸಂಭ್ರಮಿಸಿದ ಅಭಿಮಾನಿಗಳು
- Lifestyle
ಸಂಜೆ ಸ್ನ್ಯಾಕ್ಸ್ ಗೆ ಹೇಳಿಮಾಡಿಸಿದ್ದು ಈ ತಡ್ಕಾ ಮಸಾಲೆ ಮ್ಯಾಗಿ
- Education
BEL Recruitment 2021: 205 ಟೆಕ್ನೀಶಿಯನ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಬಿಡುಗಡೆಗಾಗಿ ಸಜ್ಜುಗೊಳ್ಳುತ್ತಿರುವ ಜೀಪ್ ಕಂಪಾಸ್ ಟ್ರೈಲ್‍ಹಾವ್ಕ್ ಎಸ್‍ಯುವಿ
ಜೀಪ್ ಕಂಪಾಸ್ ಟ್ರೈಲ್‍ಹಾವ್ಕ್ ಎಸ್‍ಯುವಿ ಕಾರು ಬಿಡುಗಡೆಗಾಗಿ ಇನ್ನು ಎರಡು 2 ತಿಂಗಳು ಬಾಕಿ ಇದ್ದು, ಕೊನೆಯದಾಗಿ ಪುಣೆಯಲ್ಲಿ ತನ್ನ ಎಂಜಿನ್ ಕಾರ್ಯಕ್ಷಮತೆಯನ್ನು ಪರೀಕ್ಷೀಸುವಾಗ ಕಾಣಿಸಿಕೊಂಡಿದೆ. ಈ ಕಾರು ಸಧ್ಯ ಮಾರುಕಟ್ಟೆಯಲ್ಲಿ ನಿರೀಕ್ಷೆಯನ್ನು ಉಂಟು ಮಾಡಿದ್ದು, ಇದೇ ವರ್ಷದ ಜುಲೈನಲ್ಲಿ ಬಿಡುಗಡೆಗೊಳ್ಳಲಿದೆ.

ಜೀಪ್ ಕಂಪಾಸ್ ಟ್ರೈಲ್‍ಹಾವ್ಕ್ ವೇರಿಯಂಟ್ ಇದೇ ವರ್ಷದ ಜುಲೈ ತಿಂಗಳಿನಲ್ಲಿ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳ್ಳುವುದಾಗಿ ವರದಿಗಳು ಹೇಳಲಾಗಿದೆ. ಇದರ ಜೊತೆಗೆ ಜೂನ್ ಮೊದಲ ವಾರದಲ್ಲಿ ಅಧಿಕೇತವಾಗಿ ಬಹಿರಂಗಪಡಿಸಲಿದೆ ಎಂಬ ಮಾಹಿತಿ ಕೂಡಾ ಲಭ್ಯವಾಗಿದೆ. ಸಾಧಾರಣ ಜೀಪ್ ಕಂಪಾಸ್ ಕಾರುಗಳಿಗೆ ಹೋಲಿಸಿದರೆ ವಿನ್ಯಾಸದಲ್ಲಿ ಹೆಚ್ಚು ಬದಲಾವಣೆಗಳನ್ನು ಪಡೆದುಕೊಳ್ಳಲ್ಲಿದೆ. ಈ ಬಾರಿ ಮರುವಿನ್ಯಾಸಗೊಳಿಸಲಾದ ಬಂಪರ್, ಟೋ ಹುಕ್ಸ್, ಹೆಚ್ಚಿನ ಗ್ರೌಂಡ್ ಕ್ಲಿಯರೆನ್ಸ್, 17 ಇಂಚಿನ ವ್ಹೀಲ್ಸ್ ಮತ್ತು ಪ್ಯಾನಾರಮಿಕ್ ಸನ್‍ರೂಫ್ ಅನ್ನು ನೀಡಲಾಗಿದೆ.

ಜೀಪ್ ಸಂಸ್ಥೆಯು ಇತ್ತೀಚೆಗೆ ತಮ್ಮ ಹೊಸ ಕಂಪಾಸ್ ಲಿಮಿಟೆಡ್ ಎಡಿಷನ್ ಕಾರನ್ನು ಬಿಡುಗಡೆಗೊಳಿಸಿದ್ದು, ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ. 21.07 ಲಕ್ಷದ ಮಾರಾಟದ ಬೆಲೆಯನ್ನು ಪಡೆದುಕೊಂಡಿದೆ. ದೇಶದಲ್ಲಿನ ಜೀಪ್ ಅಭಿಮಾನಿಗಳು ಇದೀಗ ಟ್ರೈಲ್‍ಹಾವ್ಕ್ ಕಾರಿನ ಬಿಡುಗಡೆಗಾಗಿ ಕಾತುರದಲ್ಲಿದ್ದಾರೆ.

ಟ್ರೈಲ್‍ಹಾವ್ಕ್ ಕಾರಿನಲ್ಲಿ ಹೈಲೈಟ್ ಎಂದರೆ, ಕಾರಿಗೆ ನೀಡಲಾದ 'ಟ್ರೈಲ್‍ಹಾವ್ಕ್' ಬ್ಯಾಡ್ಜಿಂಗ್, ಹೊಸ 8.4 ಇಂಚಿನ ಅನ್-ಕನೆಕ್ಟ್ ಟಚ್‍ಸ್ಕ್ರೀನ್ ಇನ್ಫೋಟೈನೆಂಟ್ ಸಿಸ್ಟಂ ಮತ್ತು ಕಾರಿನ ಲಿಮಿಟೆಡ್ ಪ್ಲಸ್ಸ್ ಕಾರಿನಲ್ಲಿ ಹಲವಾರು ಸುರಕ್ಷಾ ಸೌಲಭ್ಯಗಳನ್ನು ನೀಡಲಾಗಿದ್ದು, ಮಾರುಕಟ್ಟೆಗೆ ಒಮ್ಮೆ ಲಗ್ಗೆ ಇಟ್ಟಲ್ಲಿ ಜೀಪ್ ಕಂಪಾಸ್ ಕಾರಿನಲ್ಲಿ ಪ್ರೀಮಿಯಂ ವೈಶಿಷ್ಟ್ಯತೆಗಳನ್ನು ಪಡೆದುಕೊಂಡಿರುವ ಕಾರೆಂಬ ಖ್ಯಾತಿ ಪಡೆಯಲಿದೆ.

ಇನ್ನು ಕಾರಿನ ಸ್ಪೈ ಚಿತ್ರಗಳನ್ನು ಗಮನಿಸಿದಲ್ಲಿ ಕಪ್ಪು ಡೆಕಲ್ಸ್, ರೆಡ್ ಹುಕ್ಸ್, ಅಪ್ಪರ್ ಗ್ರಿಲ್, ಫಾಗ್ ಲ್ಯಾಂಪ್ ಬೆಸೆಲ್ಸ್, ರೂಫ್ ರೈಲ್ಸ್, 17 ಇಂಚಿನ ಡ್ಯುಯಲ್ ಟೋನ್ ಆಫ್ ರೋಡ್ ಅಲಾಯ್ ವ್ಹೀಲ್ಸ್, ಕಪ್ಪನೆಯ ಜೀಪ್ ಬ್ಯಾಡ್ಜೆಸ್, ಟ್ರೈಲ್ ರೇಟೆಡ್ ಫೆಂಡರ್ ಮತ್ತು ಟ್ರೈಲ್ ಹ್ವಾಕ್ ಟೈಲ್‍ಗೇಟ್ ಬ್ಯಾಡ್ಜಿಂಗ್ ಅನ್ನು ಅಳವಡಿಸಲಾಗಿದೆ.

ಈಗಾಗಲೆ ಈ ಕಾರು ಭಾರತೀಯ ರಸ್ತೆಗಳಲ್ಲಿ ತನ್ನ ಎಂಜಿನ್ ಕಾರ್ಯಕ್ಷಮತೆಯನ್ನು ಪರೀಶೀಲಿಸಲಾಗುತ್ತಿದೆ. ಸ್ಪಾಟ್ ಟೆಸ್ಟಿಂಗ್ ವೇಳೆ ಕಾರಿನ ಇಂಟೀರಿಯರ್ ವಿನ್ಯಾಸಗಳು ಕೂಡಾ ಬಹಿರಂಗವಾಗಿದ್ದು, ಸಂಪೂರ್ಣ ಕಪ್ಪು ಮತ್ತು ಕೆಂಪು ಬಣ್ಣವನ್ನು ಹೈಲೈಟ್ ಮಾಡಿರಬಹುದೆಂದು ಹೇಳಲಾಗಿದೆ. ಡ್ರೈವರ್ ಮತ್ತು ಪ್ಯಾಸೆಂಜರ್ ಸೀಟ್ ಗಳು ಲೆದರ್‍ನಿಂದ ಸುತ್ತುವರೆದಿದೆ.

ಎಂಜಿನ್ ಸಾಮರ್ಥ್ಯ
ಭಾರತಕ್ಕೆ ಬರಲಿರುವ ಜೀಪ್ ಕಂಪಾಸ್ ಟ್ರೈಲ್‍ಹ್ವಾಕ್ ಕಾರು ಪೆಟ್ರೋಲ್ ಹಾಗು ಡೀಸೆಲ್ ಎಂಜಿನ್ ಆಯ್ಕೆಗಳಲ್ಲಿ ಲಭ್ಯವಿದಲಿದ್ದು, ಪೆಟ್ರೋಲ್ ಆಧಾರಿತ ಕಾರುಗಳು 1.4 ಲೀಟರ್ ಮಲ್ಟಿಏರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಸಹಾಯದಿಂದ 160 ಬಿಹೆಚ್‍ಪಿ ಮತ್ತು 250ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿದೆ.

ಇನ್ನು ಡೀಸೆಲ್ ಆಧಾರಿತ ಜೀಪ್ ಕಂಪಾಸ್ ಟ್ರೈಲ್‍ಹಾವ್ಕ್ ಕಾರುಗಳು 2.0 ಲೀಟರ್ ಮಲ್ಟಿಜೆಟ್ ಡೀಸೆಲ್ ಎಂಜಿನ್ ಸಹಾಯದಿಂದ 170ಬಿಹೆಚ್‍ಪಿ ಮತ್ತು 350ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿದೆ. ಪೆಟ್ರೋಲ್ ಎಂಜಿನ್ ಅನ್ನು 6 ಸ್ಪೀಡ್ ಆಟೋಮ್ಯಾಟಿಕ್ ಗೇರ್‍ಬಾಕ್ಸ್ ಹಾಗು ಡೀಸೆಲ್ ಎಂಜಿನ್ ಅನ್ನು 6 ಸ್ಪೀಡ್ ಮ್ಯಾನುವಲ್ ಗೇರ್‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಜೀಪ್ ಕಂಪಾಸ್ ಟ್ರೈಲ್‍ಹಾವ್ಕ್ ಕಾರು ಒಮ್ಮೆ ಬಿಡುಗಡೆಗೊಂಡಲ್ಲಿ ಸಮರು 23ಲಕ್ಷದ (ಅಂದಾಜು) ಮಾರಾಟದ ಬೆಲೆಯನ್ನು ಪಡೆದುಕೊಳ್ಳಲಿದ್ದು, ಮಾರುಕಟ್ತೆಯಲ್ಲಿರುವ ಮಹೀಂದ್ರಾ ಎಕ್ಸ್ಯುವಿ 500 ಮತ್ತು ಬಿಡುಗಡೆಗೊಂಡ ಟಾಟಾ ಸಂಸ್ಥೆಯ ಹ್ಯಾರಿಯರ್ ಕಾರುಗಳಿಗೆ ಪೈಪೋಟಿ ನೀಡಲಿದೆ.
Source: Zigwheels