Just In
- 39 min ago ಸಾಮಾನ್ಯರಂತೆ ಹಳ್ಳಿಯಲ್ಲಿರುವ ದೇಶದ 55ನೇ ಶ್ರೀಮಂತ ಶ್ರೀಧರ್ ವೆಂಬು: ಕಚೇರಿಗೆ ಹೋಗಲು ಎಲೆಕ್ಟ್ರಿಕ್ ಆಟೋ ಖರೀದಿ!
- 3 hrs ago ಹ್ಯುಂಡೈ ವೆರ್ನಾ ಕಾರಿಗೆ ಭಾರೀ ಡಿಸ್ಕೌಂಟ್: ರಾಶಿ ಫೀಚರ್ನ ಕಾರಿಗೆ ಇಷ್ಟು ಆಫರ್ ಯಾಕೆಂದ ನೆಟ್ಟಿಗರು!
- 16 hrs ago ಮಾರುಕಟ್ಟೆಯಲ್ಲಿ ಸುನಾಮಿ ಎಬ್ಬಿಸಲು ಹೊಸ ಟೊಯೊಟಾ ಫಾರ್ಚುನರ್ ಲೀಡರ್ ಎಡಿಷನ್ ಅನಾವರಣ
- 18 hrs ago Air Taxi: ಬೆಂಗಳೂರು ಸೇರಿ ಈ ನಗರಗಳಲ್ಲಿ ಏರ್ ಟ್ಯಾಕ್ಸಿ.. ಆಕಾಶದಲ್ಲೇ ಆಫೀಸ್ಗೆ ಹೋಗಬಹುದು, ಕಡಿಮೆ ಖರ್ಚು!
Don't Miss!
- Lifestyle ಮೊಲದ ಜೊತೆ ಓಡಿ ಮತ್ತೊಮ್ಮೆ ರೇಸ್ ಗೆದ್ದ ಆಮೆ..! ಈ ಕಥೆ ನಿಜವಾಗಿದ್ದು ಹೇಗೆ ನೋಡಿ.!
- Finance Bangalore Karaga: ಇಂದು ಈ ರಸ್ತೆಗಳಲ್ಲಿ ಸಂಚಾರ ಬಂದ್, ಬದಲಿ ಮಾರ್ಗ ವಿವರ
- News Mysuru: ಏಪ್ರಿಲ್ 26ಕ್ಕೆ ಮೈಸೂರಿನ ಪ್ರವಾಸಿ ತಾಣಗಳು ಬಂದ್, ಕಾರಣ ಇಲ್ಲಿದೆ
- Movies "ರಾಘವೇಂದ್ರ ಸ್ವಾಮಿಗಳು ನನ್ನ ತಾತ"; ರಾಯರ ನೆನೆದು ಭಾವುಕರಾಗಿದ್ದೇಕೆ ಬೇಬಿ ಇಂದಿರಾ?
- Technology Google Chrome: ಗೂಗಲ್ ಕ್ರೋಮ್ ಬಳಕೆದಾರರು ಹ್ಯಾಕಿಂಗ್ ಅಪಾಯದಲ್ಲಿ! ಸುರಕ್ಷಿತವಾಗಿರೋದು ಹೇಗೆ?
- Sports IPL 2024: ವಿರಾಟ್ ಕೊಹ್ಲಿ ವಿವಾದಾತ್ಮಕ ಔಟ್; ಅಂಪೈರಿಂಗ್ ವಿರುದ್ಧ ಕೆಂಡಕಾರಿದ ಮೊಹಮ್ಮದ್ ಕೈಫ್!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಎಲೆಕ್ಟ್ರಿಕ್ ಕಾರು ಬಿಡುಗಡೆಗಾಗಿ ಜೀಪ್ ಸಂಸ್ಥೆಯಿಂದ ಬೃಹತ್ ಪ್ಲ್ಯಾನ್
2030ರ ವೇಳೆಗೆ ಶೇ.100ರಷ್ಟು ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆ ಮತ್ತು ಮಾರಾಟ ಗುರಿಯೊಂದಿಗೆ ಬಹುತೇಕ ಆಟೋ ಕಂಪನಿಗಳು ಈಗಿನಿಂದಲೇ ಯೋಜನೆ ರೂಪಿಸುತ್ತಿರುವುದಲ್ಲದೇ ಎಲೆಕ್ಟ್ರಿಕ್ ವಾಹನಗಳನ್ನು ಅಭಿವೃದ್ದಿಗೊಳಿಸಿ ಬಿಡುಗಡೆ ಮಾಡುತ್ತಿದ್ದು, ಈ ನಿಟ್ಟಿನಲ್ಲಿ ಅಮೆರಿಕದ ಜನಪ್ರಿಯ ಕಾರು ತಯಾರಕ ಸಂಸ್ಥೆಯಾದ ಜೀಪ್ ಕೂಡಾ ಬೃಹತ್ ಯೋಜನೆ ರೂಪಿಸಿದೆ.
ಅಂತರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಈಗಾಗಲೇ ಎಲೆಕ್ಟ್ರಿಕ್ ಮತ್ತು ಹೈಬ್ರಿಡ್ ಎಸ್ಯುವಿ ಕಾರುಗಳ ಮಾರಾಟಕ್ಕೆ ಚಾಲನೆ ನೀಡಿರುವ ಜೀಪ್ ಸಂಸ್ಥೆಯು ಭಾರತದಲ್ಲಿ 2022ಕ್ಕೆ ತನ್ನ ಮೊದಲ ಎಲೆಕ್ಟ್ರಿಕ್ ಕಾರು ಮಾದರಿಯನ್ನು ಬಿಡುಗಡೆ ಮಾಡಲು ಮುಂದಾಗಿದ್ದು, ಸಂಪೂರ್ಣವಾಗಿ ಸ್ಥಳೀಯ ಸಂಪನ್ಮೂಲಗಳಿಂದ ಹೊಸ ಎಲೆಕ್ಟ್ರಿಕ್ ಕಾರು ಉತ್ಪನ್ನಗಳನ್ನು ಸಿದ್ದಪಡಿಸುವ ಯೋಜನೆ ಹೊಂದಿದೆ.
ಇದಕ್ಕಾಗಿ ಭಾರೀ ಪ್ರಮಾಣದ ಹೂಡಿಕೆ ಮಾಡುತ್ತಿರುವ ಜೀಪ್ ಸಂಸ್ಥೆಯು ವಿವಿಧ ಮಾದರಿಯ ಪೋಟೋಟೈಪ್ ಆವೃತ್ತಿಗಳನ್ನು ಸಿದ್ದಪಡಿಸಿದ್ದು, ಅಗತ್ಯ ಚಾರ್ಜಿಂಗ್ ಸ್ಟೆಷನ್ ಸೌಲಭ್ಯ ಮತ್ತು ಕೈಗೆಟುವ ಬೆಲೆಗಳಲ್ಲಿ ಹೊಸ ಕಾರು ಉತ್ಪನ್ನಗಳನ್ನು ತಯಾರಿಕೆಗೆ ಸ್ಥಳೀಯ ಬ್ಯಾಟರಿ ಸಂಪನ್ಮೂಲ ಲಭ್ಯತೆಗೆ ಎದುರು ನೋಡುತ್ತಿದೆ.
ಸದ್ಯ ಭಾರತದಲ್ಲಿ ಎಲೆಕ್ಟ್ರಿಕ್ ಕಾರು ನಿರ್ಮಾಣ ಮಾಡುತ್ತಿರುವ ಬಹುತೇಕ ಕಾರು ಸಂಸ್ಥೆಗಳು ಬ್ಯಾಟರಿ ತಂತ್ರಜ್ಞಾನಕ್ಕಾಗಿ ಚೀನಿ ಮತ್ತು ತೈವಾನ್ ಮಾರುಕಟ್ಟೆಗಳನ್ನು ಅವಲಂಭಿಸಿದ್ದು, ಇದೇ ಕಾರಣಕ್ಕೆ ಎಲೆಕ್ಟ್ರಿಕ್ ಕಾರುಗಳು ದುಬಾರಿ ಬೆಲೆ ಹೊಂದಿವೆ.
ಹೀಗಾಗಿ 2021ರ ಹೊತ್ತಿಗೆ ಭಾರತದಲ್ಲೇ ಹಲವಾರು ಸಂಸ್ಥೆಗಳು ಲೀಥಿಯಂ ಅಯಾನ್ ಬ್ಯಾಟರಿ ನಿರ್ಮಾಣಕ್ಕಾಗಿ ಸಿದ್ದಗೊಳ್ಳುತ್ತಿದ್ದು, ಸ್ಥಳೀಯವಾಗಿಯೇ ಬ್ಯಾಟರಿ ತಂತ್ರಜ್ಞಾನ ಲಭ್ಯವಾದಲ್ಲಿ ಎಲೆಕ್ಟ್ರಿಕ್ ಕಾರುಗಳ ಬೆಲೆಯಲ್ಲಿ ಗಣನೀಯವಾಗಿ ಇಳಿಕೆಯಾಗಲಿದೆ. ಈ ಹಿನ್ನಲೆಯಲ್ಲಿ ಎಲೆಕ್ಟ್ರಿಕ್ ಕಾರುಗಳ ಬಿಡುಗಡೆ ಯೋಜನೆಯನ್ನು ಮುಂದೂಡುತ್ತಿರುವ ಜೀಪ್ ಸಂಸ್ಥೆಯು ಸದ್ಯಕ್ಕೆ ಮಾರುಕಟ್ಟೆಯಲ್ಲಿರುವ ಕಾರು ಮಾದರಿಗಳ ಉನ್ನತೀಕರಣ ಜೊತೆಗೆ ಎರಡು ಸಾಮಾನ್ಯ ಹೊಸ ಕಾರು ಮಾದರಿಗಳನ್ನು ಬಿಡುಗಡೆಗೊಳಿಸುವ ಯೋಜನೆಯಲ್ಲಿದೆ.
ಕಂಪಾಸ್ ಎಸ್ಯುವಿ ಕಾರಿನ ಯಶಸ್ವಿ ನಂತರ ಶೀಘ್ರದಲ್ಲೇ ಮತ್ತೆರಡು ಹೊಸ ಕಾರುಗಳನ್ನು ಬಿಡುಗಡೆ ಮಾಡುವ ಸುಳಿವು ನೀಡಿರುವ ಜೀಪ್, ಭಾರತೀಯ ಗ್ರಾಹಕರ ಬೇಡಿಕೆಯೆಂತೆ ಸಣ್ಣ ಗಾತ್ರದ ಕಂಪ್ಯಾಕ್ಟ್ ಎಸ್ಯುವಿ ಜೊತೆಗೆ ಬಿ ಸೆಗ್ಮೆಂಟ್ನಲ್ಲೂ ಹೊಸ ಮಾದರಿಯ ಎಸ್ಯುವಿಯೊಂದನ್ನು ಭಾರತದಲ್ಲಿ ಬಿಡುಗಡೆ ಮಾಡುವುದಾಗಿ ಹೇಳಿಕೊಂಡಿದೆ.
ಜೀಪ್ ಸಂಸ್ಥೆಯು ರೂ.10 ಲಕ್ಷದೊಳಗೆ ಒಂದು ಕಂಪ್ಯಾಕ್ಟ್ ಎಸ್ಯುವಿ ಮಾದರಿಯನ್ನು ಮತ್ತು ಬಿ ಸೆಗ್ಮೆಂಟ್ನಲ್ಲಿ ಜನಪ್ರಿಯವಾಗಿರುವ ಟೊಯೊಟಾ ಫಾರ್ಚೂನರ್ ಮತ್ತು ಫೋರ್ಡ್ ಎಂಡೀವರ್ ಕಾರುಗಳಿಗೆ ಪ್ರತಿಸ್ಪರ್ಧಿಯಾಗಿ ಐಷಾರಾಮಿ 7 ಸೀಟರ್ ಎಸ್ಯುವಿ ಮಾದರಿಯೊಂದನ್ನು ಬಿಡುಗಡೆ ಮಾಡಲಿದೆ.
MOST READ: ಪಾರ್ಕಿಂಗ್ ವೇಳೆ ಸಿಬ್ಬಂದಿ ಎಡವಟ್ಟು- ಮೊದಲ ಮಹಡಿಯಿಂದ ಜಿಗಿದ ಕಿಯಾ ಸೆಲ್ಟೊಸ್
ರೂ.10 ಲಕ್ಷ ಬೆಲೆಯ ಅಂತರದಲ್ಲಿ ರೆನೆಗೆಡ್ ಕಂಪ್ಯಾಕ್ಟ್ ಎಸ್ಯುವಿ ಕಾರುನ್ನು ಬಿಡುಗಡೆಯಾಗಲಿದ್ದರೆ ಟೊಯೊಟಾ ಫಾರ್ಚೂನರ್ ಕಾರಿಗೆ ಪ್ರತಿಸ್ಪರ್ಧಿಯಾಗಿ ಗ್ರ್ಯಾಂಡ್ ಕಮಾಂಡರ್ ಅಥವಾ ಗ್ರ್ಯಾಂಡ್ ಕಮಾಂಡರ್ ಹೋಲಿಕೆ ಇರುವ ಮತ್ತೊಂದು ಹೊಸ ಕಾರು ಉತ್ಪನ್ನವನ್ನು ಬಿಡುಗಡೆಗೊಳಿಸುವ ಬಗ್ಗೆ ಮುಂದಿನ ಕೆಲವೇ ದಿನಗಳಲ್ಲಿ ಮಾಹಿತಿ ಹಂಚಿಕೊಳ್ಳುವುದಾಗಿ ಮಾಹಿತಿ ನೀಡಿದೆ.
MOST READ: ಐಷಾರಾಮಿ ಕಾರ್ ಡೀಲರ್ ಆದ ಟೀ ಮಾರುತ್ತಿದ್ದ ಕನ್ನಡಿಗನ ರೋಚಕ ಕಥೆ
ಒಟ್ಟಿನಲ್ಲಿ ಭಾರತದಲ್ಲಿ ಜೀಪ್ ಸಂಸ್ಥೆಯು ಹೊಸದಾಗಿ ಎರಡು ಕಾರುಗಳು ಬಿಡುಗಡೆಯಾಗುವುದು ಖಚಿತವಾಗಿದ್ದು, ಹೊಸ ಯೋಜನೆಯ ಭಾಗವಾಗಿ ಕಾರುಗಳ ಉತ್ಪಾದನಾ ಸಾಮಾರ್ಥ್ಯವನ್ನು ಸಹ ಹೆಚ್ಚಿಸುವತ್ತ ಜೀಪ್ ಸಂಸ್ಥೆಯು ಮಹತ್ವದ ನಿರ್ಧಾರ ತೆಗೆದುಕೊಳ್ಳುತ್ತಿದೆ.
MOST READ: ಕಾರು ಖರೀದಿದಾರರ ನೆಚ್ಚಿನ ಬಣ್ಣ ಯಾವುದು ಗೊತ್ತಾ?
ಪುಣೆಯ ಬಳಿಯಿರುವ ರಂಜನ್ಗಾಂವ್ನಲ್ಲಿ ಜೀಪ್ ಕಾರು ಉತ್ಪಾದನಾ ಘಟಕವನ್ನು ವಿಸ್ತರಣೆ ಮಾಡಲಾಗುತ್ತಿದ್ದು, ಇಷ್ಟು ದಿನಗಳ ಕಾಲ ಕಂಪಾಸ್ ಆವೃತ್ತಿ ಹೊರತುಪಡಿಸಿ ಇನ್ನುಳಿದ ಐಷಾರಾಮಿ ಕಾರುಗಳನ್ನು ವಿದೇಶಿ ಮಾರುಕಟ್ಟೆಗಳಿಂದ ಆಮದು ಮಾಡುತ್ತಿದ್ದ ಜೀಪ್ ಸಂಸ್ಥೆಯು ಇನ್ಮುಂದೆ ಭಾರತದಲ್ಲೇ ಪೂರ್ಣ ಪ್ರಮಾಣದಲ್ಲಿ ಹೊಸ ಕಾರುಗಳನ್ನು ಅಭಿವೃದ್ಧಿಪಡಿಸಲಿದೆ.
2020 ಕೊನೆಯಲ್ಲಿ ಅಥವಾ 2021ರ ಆರಂಭದಲ್ಲಿ ಹೊಸ ಕಾರುನ್ನು ಬಿಡುಗಡೆಗೊಳಿಸುವ ಯೋಜನೆ ರೂಪಿಸಿರುವ ಜೀಪ್ ಸಂಸ್ಥೆಯು ಫಾರ್ಚೂನರ್ ಪ್ರತಿಸ್ಪರ್ಧಿ ಕಾರಿನಲ್ಲಿ 2.7-ಲೀಟರ್ ಡೀಸೆಲ್ ಎಂಜಿನ್ ಮತ್ತು 2.5-ಲೀಟರ್ ಪೆಟ್ರೋಲ್ ಎಂಜಿನ್ ಒದಗಿಸಲಿದ್ದರೆ, ಕಂಪ್ಯಾಕ್ಟ್ ಎಸ್ಯುವಿ ಮಾದರಿಯಾದ ರೆನೆಗೆಡ್ನಲ್ಲಿ 1.2-ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಮತ್ತು 1.5-ಲೀಟರ್ ಡೀಸೆಲ್ ಎಂಜಿನ್ ಅಳವಡಿಸುವ ಸಾಧ್ಯತೆಗಳಿವೆ.